ಸಿಒಪಿಡಿ

ಲಕ್ಷಣಗಳು-

ಸಿಒಪಿಡಿಯ ಆರಂಭಿಕ ಲಕ್ಷಣಗಳನ್ನು ಗುರುತಿಸುವುದು ಸುಲಭ. ಅತ್ಯಂತ ಸಾಮಾನ್ಯ ಕೆಲವು ಲಕ್ಷಣಗಳಲ್ಲಿ ಕೆಳಗಿನವುಗಳನ್ನು ಒಳಗೊಂಡಿವೆ - 

  • ಸಾಂದರ್ಭಿಕ ಏದುಸಿರು / ಉಸಿರುಗಟ್ಟುವಿಕೆ ವಿಶೇಷವಾಗಿ ವ್ಯಾಯಾಮದ ನಂತರ

  • ದೀರ್ಘ-ಕಾಲೀನ ಅಥವಾ ಮರುಕಳಿಸುವ ಕೆಮ್ಮು

  • ಲೋಳೆಯ (ಶ್ಲೇಷ್ಮ) ಉತ್ಪಾದನೆ 

 ಮೇಲಿನ ಲಕ್ಷಣಗಳು ಸಮಯದೊಂದಿಗೆ ಉಲ್ಬಣಗೊಳ್ಳುತ್ತವೆ. ಬೇಗನೆ ಚಿಕಿತ್ಸೆ ನೀಡದಿದ್ದಲ್ಲಿ, ಉಡುಪನ್ನು ಧರಿಸುವಾಗ, ಆಹಾರ ತಿನ್ನುವಾಗ ಮತ್ತು ಭೋಜನವನ್ನು ಸಿದ್ಧಪಡಿಸುವಂತಹ ಸರಳ ಕಾರ್ಯಗಳನ್ನು ಮಾಡುವಾಗ ಸಹ ಸಿಒಪಿಡಿಯು ಉಸಿರುಗಟ್ಟುವಿಕೆಗೆ ಕಾರಣವಾಗಬಹುದು. ಕೆಲವೊಮ್ಮೆ, ಉಸಿರಾಡಲು ಹೆಚ್ಚಿನ ಪ್ರಯತ್ನವನ್ನು ಮಾಡಬೇಕಾಗುತ್ತದೆ ಮತ್ತು ನೀವು ನಿರಂತರವಾಗಿ ತೂಕ ಕಳೆದುಕೊಳ್ಳುತ್ತಿರುವಿರಿ ಮತ್ತು ದುರ್ಬಲರಾಗುತ್ತಿರುವಿರಿ ಎಂದು ನೀವು ಕಂಡುಕೊಳ್ಳಬಹುದು.

Please Select Your Preferred Language