ಸಿಒಪಿಡಿಯೊಂದಿಗೆ ಜೀವಿಸುವುದು
ಸಿಒಪಿಡಿಗೆ ಸೂಕ್ತವಾದ ಚಿಕಿತ್ಸೆ ಮತ್ತುನಿರ್ವಹಣೆ ಅವಶ್ಯಕವಾಗಿದೆ. ಅದನ್ನು ನಿಯಂತ್ರಣದಡಿಯಲ್ಲಿಟ್ಟುಕೊಳ್ಳಲು ಮತ್ತು ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು, ನಿಮ್ಮ ವೈದ್ಯರ ಸಲಹೆಯನ್ನು ನೀವು ಸಂಪೂರ್ಣವಾಗಿ ಅನುಸರಿಸಬೇಕು.
ಓರ್ವ ವ್ಯಕ್ತಿಯು ಧೂಮಪಾನವನ್ನು ನಿಲ್ಲಿಸಿದ ಮತ್ತು ಔಷಧವನ್ನು ನಿಯಮಿತವಾಗಿ ತೆಗೆದುಕೊಂಡ ನಂತರ ಸಿಒಪಿಡಿಯ ಲಕ್ಷಣಗಳು ಕೆಲವೊಮ್ಮೆ ಸುಧಾರಿಸುತ್ತವೆಯಾದರೂ, ಪಲ್ಮನರಿ ಪುನಶ್ಚೇತನಕ್ಕೆ ಹಾಜರಾದ ನಂತರ ಅದು ಮತ್ತೂ ಸುಧಾರಿಸಬಹುದು. ಲಕ್ಷಣಗಳು ಸಂಪೂರ್ಣವಾಗಿ ಹೊರಟು ಹೋಗದೇ ಇರಬಹುದು, ಆದರೆ, ಸರಿಯಾದ ಚಿಕಿತ್ಸೆ ಮತ್ತು ಜೀವನಶೈಲಿಯ ಬದಲಾವಣೆಗಳೊಂದಿಗೆ ನೀವು ನಿಮ್ಮ ಜೀವನವನ್ನು ಪೂರ್ತಿಯಾಗಿ ಜೀವಿಸುವುದನ್ನು ಮುಂದುವರಿಸಬಹುದು
ಸಕ್ರಿಯ ಜೀವನಶೈಲಿ
ವಾಕಿಂಗ್ ಅಥವಾ ಯೋಗದಂತಹ ಚಟುವಟಿಕೆಗಳು ನಿಮ್ಮ ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡಬಹುದು ಮೂಲತಃ ನೀವು ಉತ್ತಮವಾಗಿ ಉಸಿರಾಡಬಹುದು.
ಸಿಒಪಿಡಿಯನ್ನು ನಿಯಂತ್ರಿಸಲು ನಿರ್ದಿಷ್ಟ ಆಹಾರಕ್ರಮ ನಿರ್ಬಂಧಗಳಿಲ್ಲ, ಆದಾಗ್ಯೂ, ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಆರೋಗ್ಯಕರ ಆಹಾರಕ್ರಮವನ್ನು ಅನುಸರಿಸುವುದು ಮುಖ್ಯವಾಗಿದೆ. ಇದಲ್ಲದೆ, ಒಂದು ಆರೋಗ್ಯಕರ ಆಹಾರ ಮತ್ತು ನಿಯತ ವ್ಯಾಯಾಮದೊಂದಿಗೆ, ನಿಮಗೆ ಸಿಒಪಿಡಿಯಿಂದ ಹೆಚ್ಚು ತೊಂದರೆ ಉಂಟಾಗುವ ಕಾರಣ ಇರುವುದಿಲ್ಲ.
ಪುನಶ್ಚೇತನ ಯೋಜನೆ
ಸಾಮಾನ್ಯವಾಗಿ, ಪಲ್ಮನರಿ ಅಥವಾ ಶ್ವಾಸಕೋಶದ ಪುನಶ್ಚೇತನ ಕಾರ್ಯಕ್ರಮವು, ಸುಲಭವಾಗಿ ಹೇಗೆ ಉಸಿರಾಡುವುದು, ವ್ಯಾಯಾಮ ಮಾಡುವುದು ಮತ್ತು ಚೆನ್ನಾಗಿ ತಿನ್ನುವ ಬಗ್ಗೆ ಸಲಹೆ ನೀಡುವ ಮೂಲಕ, ನಿಮ್ಮ ಸಮಸ್ಯೆಯನ್ನು ನಿರ್ವಹಿಸಲು ನಿಮಗೆ ಮಾರ್ಗದರ್ಶನ ನೀಡಲು ಸಹಾಯ ಮಾಡುತ್ತದೆ.
ಸಿದ್ಧವಾಗಿರಿ
ನೀವು ತುರ್ತು ಸಂಪರ್ಕ ಮಾಹಿತಿಯನ್ನು ಅದು ನಿಮಗೆ ಸಿಗಬಹುದಾದ ಒಂದು ಸ್ಥಳದಲ್ಲಿ ಯಾವಾಗಲೂ ಹೊಂದಿರುವಿರಿ ಎಂದು ಖಚಿತಪಡಿಸಿಕೊಳ್ಳಿ. ರೆಫ್ರಿಜರೇಟರ್ ಮತ್ತು ನಿಮ್ಮ ಫೋನ್‌ನಂತಹ ಪದೇಪದೇ ನೀವು ಹೋಗುಬರುವ ಜಾಗದಲ್ಲಿ ನಿಮ್ಮ ತುರ್ತು ಸಂಖ್ಯೆಗಳು, ಔಷಧಿಗಳು ಮತ್ತು ಡೋಸುಗಳ ಒಂದು ಪ್ರತಿಯನ್ನು ಅಂಟಿಸಿಡುವುದು ಸಹ ವಿವೇಕಯುತವಾಗಿರುತ್ತದೆ.
ಉಸಿರಾಟವು ಕಷ್ಟದಾಯಕವಾಗಿದ್ದರೆ, ಅದು ಒಂದು ತುರ್ತುಸ್ಥಿತಿಯಾಗಿರಬಹುದಾದ ಕಾರಣ, ತಕ್ಷಣ ನಿಮ್ಮ ವೈದ್ಯರಲ್ಲಿಗೆ ಅಥವಾ ಆಸ್ಪತ್ರೆಗೆ ಹೋಗಿರಿ.
ಅರ್ಥಮಾಡಿಕೊಳ್ಳುವ ಇತರರೊಂದಿಗೆ ಮಾತನಾಡುವುದು ಉಪಶಮನವಾಗಿರುತ್ತದೆ - ಬ್ರೀಥ್‌ಫ್ರೀ ಸಮುದಾಯಕ್ಕೆಸೇರಿಕೊಳ್ಳಿ ಮತ್ತು ತಮ್ಮ ಉಸಿರಾಟದ ಸಮಸ್ಯೆಗಳನ್ನು ಜಯಿಸಿರುವ ಸಾವಿರಾರು ಜನರೊಂದಿಗೆ ಮಾತನಾಡಿ.