ಉಬ್ಬಸ

ಅಸ್ತಮಾ ರೋಗನಿದಾನ

ಅಸ್ತಮಾ ಮತ್ತು ಮತ್ತೆ ಮತ್ತೆ ಬರುವ ಕೆಮ್ಮು, ಇವೆರಡೂ ಒಂದೇ ರೀತಿಯ ಲಕ್ಷಣಗಳನ್ನು ಹೊಂದಿರುವುದರಿಂದ, ತುಂಬಾ ಸುಲಭವಾಗಿ ಗೊಂದಲಕ್ಕೀಡು ಮಾಡುತ್ತವೆ. ಆದ್ದರಿಂದ, ವಾಸ್ತವಿಕವಾದ ಸಮಸ್ಯೆಯು ಸಾಮಾನ್ಯವಾಗಿ ತಪ್ಪಾಗಿ ಚಿಕಿತ್ಸಿಸಲ್ಪಡುತ್ತದೆ, ಅಥವಾ ಚಿಕಿತ್ಸಿಸಲ್ಪಡುವುದೇ ಇಲ್ಲ. ಆದರೂ, ಚಿಂತೆಪಡಬೇಕಾದ ಅಗತ್ಯವಿಲ್ಲ. ಏಕೆಂದರೆ, ಅಸ್ತಮಾವನ್ನು ಚಿಕ್ಕ ವಯಸ್ಸಿನಲ್ಲೇ ನೀವು ರೋಗನಿಧಾನ ಮಾಡಬಹುದು.

ವೈದ್ಯಕೀಯ ಇತಿಹಾಸ

ನಿಮ್ಮ ವೈದ್ಯರಿಗೆ ನಿಮ್ಮ ಲಕ್ಷಣಗಳು, ಔಷಧೋಪಚಾರ, ಅಲರ್ಜಿಗಳು ಮತ್ತು ನೀವು ಎದುರಿಸುತ್ತಿರುವ ಇತರ ಆರೋಗ್ಯ ಸಂಬಂಧಿತ ಸಮಸ್ಯೆಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಕೊಡುವುದು ಮುಖ್ಯವಾಗಿದೆ. ನಿಮ್ಮ ಸಮಸ್ಯೆಯನ್ನು ತ್ವರಿತವಾಗಿ ಮತ್ತು ಸರಿಯಾಗಿ ರೋಗನಿಧಾನ ಮಾಡಲು ಇದು ನಿಮ್ಮ ವೈದ್ಯರಿಗೆ ಸಹಾಯ ಮಾಡುತ್ತದೆ.

ಕುಟುಂಬ ಇತಿಹಾಸ

ಅಸ್ತಮಾವು ಸಾಮಾನ್ಯವಾಗಿ ಅನುವಂಶಿಕವಾಗಿರುತ್ತದೆ. ಆದ್ದರಿಂದ, ನಿಮ್ಮ ಕುಟುಂಬದ ವೈದ್ಯಕೀಯ ಇತಿಹಾಸವನ್ನು ಅರಿತುಕೊಳ್ಳುವುದು ಮುಖ್ಯವಾಗಿರುತ್ತದೆ, ಏಕೆಂದರೆ ನಿಮ್ಮ ಕುಟುಂಬದಲ್ಲಿ ಯಾರಾದರು ಅದೇ ಸಮಸ್ಯೆಯನ್ನು ಹೊಂದಿದ್ದರಾ ಎಂದು ತಿಳಿದುಕೊಳ್ಳಬಹುದು. ಇದು ನಿಮ್ಮ ವೈದ್ಯರು ನಿಮ್ಮ ಕಷ್ಟವನ್ನು ಸ್ವಲ್ಪ ಆಳವಾಗಿ ನೋಡಲು ಸಹಾಯ ಮಾಡುತ್ತದೆ ಮತ್ತು ಅಸ್ತಮಾಕ್ಕಾಗಿ ನಿಮ್ಮ ಪರೀಕ್ಷೆ ಮಾಡಬೇಕೇ ಅಥವಾ ಇಲ್ಲವೇ ಎಂದು ನಿರ್ಧರಿಸುತ್ತಾರೆ.

ದೈಹಿಕ ಪರೀಕ್ಷೆ ಮತ್ತು ಪರೀಕ್ಷೆಗಳು

ಹೆಚ್ಚು ಮಟ್ಟಿನ ರೋಗನಿಧಾನಗಳು ವೈದ್ಯಕೀಯ ಇತಿಹಾಸದ ಮೇಲೆ ಆಧಾರಿತವಾಗಿರುತ್ತದೆಯಾದರೂ, ಸಮಸ್ಯೆ ಮತ್ತು ನೀಡಬೇಕಾದ ಚಿಕಿತ್ಸೆಯ ಬಗ್ಗೆ ಸಂಪೂರ್ಣವಾಗಿ ಖಚಿತಪಡಿಸಿಕೊಲ್ಲುವ ಸಲುವಾಗಿ, ನಿಮ್ಮ ವೈದ್ಯರು ಒಂದು ಉಸಿರಾಟದ ಪರೀಕ್ಷೆಯನ್ನು ಕೂಡಾ ಶಿಫಾರಸು ಮಾಡಬಹುದು.

ಪೀಕ್-ಫ್ಲೋ ಮೀಟರ್ ಪರೀಕ್ಷೆ

ಪೀಕ್-ಫ್ಲೋ ಮೀಟರ್ ಎಂಬುದು ನಿಮ್ಮ ಶ್ವಾಸಕೋಶದ ಶಕ್ತಿಯನ್ನು ಕಂಡುಹಿಡಿಯಲು ಸಹಾಯ ಮಾಡುವ, ಕೈಯಿಂದ ಹಿಡಿದುಕೊಳ್ಳಬಹುದಾದ, ಒಂದು ಸಣ್ಣ ಸಾಧನವಾಗಿದೆ. ನೀವು ಮಾಡಬೇಕಾಗಿರುವುದೆಂದರೆ ಸಾಧನದೊಳಗೆ ಗಾಳಿ ಊದ ಬೇಕು ಅಷ್ಟೇ, ಮತ್ತು ಇದು ನಿಮ್ಮ ಶ್ವಾಸಕೋಶಗಳು ಎಷ್ಟು ಬಲವಾಗಿವೆಯೆಂದು ತೋರಿಸುತ್ತದೆ.

ಸ್ಪಿರೊಮೆಟ್ರಿ ಪರೀಕ್ಷೆ

ನಿಮ್ಮ ಲಕ್ಷಣಗಳನ್ನು ಮತ್ತು ಪರೀಕ್ಷೆಯನ್ನು ತಿಳಿದುಕೊಂಡ ನಂತರ, ನೀವು ಅಸ್ತಮಾವನ್ನು ಹೊಂದಿದ್ದೀರಿ ಎಂದು ವೈದ್ಯರು ಶಂಕಿಸಿದರೆ, ಅವನು/ಅವಳು ನಿಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ನಿರ್ಧರಿಸಲು ಸ್ಪಿರೊಮೆಟ್ರಿ ಪರೀಕ್ಷೆಯನ್ನು ನಡೆಸಬಹುದು. ಸ್ಪಿರೊಮೀಟರ್ ನಿಮ್ಮ ಶ್ವಾಸಕೋಶವು ಹಿಡಿದಿಟ್ಟುಕೊಳ್ಳಬಹುದಾದ ಗಾಳಿಯ ಪ್ರಮಾಣವನ್ನು, ಹಾಗೂ ಶ್ವಾಸಕೋಶದೊಳಗೆ ಮತ್ತು ಹೊರಗೆ ಗಾಳಿಯು ಎಷ್ಟು ಚೆನ್ನಾಗಿ ಚಲಿಸುತ್ತದೆ ಎಂಬುದನ್ನು ಅಳೆಯುತ್ತದೆ. ಫಲಿತಾಂಶಗಳು ಮೌಲ್ಯಗಳು ಮತ್ತು ಗ್ರಾಫ್ಗಳಾಗಿ ತೋರಿಸಲ್ಪಡುತ್ತವೆ.

ನೀವು ಅಸ್ತಮಾವನ್ನು ಹೊಂದಿರುವಾಗ ರೋಗನಿರ್ಣಯ ಮತ್ತು ನಿಮ್ಮ ಪ್ರಗತಿಯ ಮೇಲೆ ನಿಗಾ ಇಡಲು ಎರಡೂ ಪರೀಕ್ಷೆಗಳು ಸಹಾಯ ಮಾಡುತ್ತವೆಯಾದರೂ, 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇವುಗಳನ್ನು ಶಿಫಾರಸು ಮಾಡುವುದಿಲ್ಲ. ಆದ್ದರಿಂದ, ನೀವು ನಿಮ್ಮ ಮಗುವಿನ ಅಸ್ತಮಾವನ್ನು ಮುಂಚೆಯೇ ಮತ್ತು ಸರಿಯಾಗಿ ರೋಗನಿಧಾನ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಮಕ್ಕಳ ವೈದ್ಯರ ಜೊತೆ ನಿಕಟವಾಗಿ ಕೆಲಸ ಮಾಡಬೇಕಾದ ಅವಶ್ಯಕತೆಯಿರುತ್ತದೆ. ಚಿಕ್ಕ ವಯಸ್ಸಿನಲ್ಲೇ ಆಸ್ತಮಾವನ್ನು ನಿಯಂತ್ರಿಸುವ ಸಲುವಾಗಿ, ಪ್ರಚೋದಕಗಳನ್ನು ಪತ್ತೆಹಚ್ಚುವುದು, ಲಕ್ಷಣಗಳಿಗಾಗಿ ನಿಗಾ ಇಡುವುದು ಮತ್ತು ಮಗುವಿನ ಪ್ರಗತಿಯ ಮೇಲೆ ನಿಗಾ ಇಡುವುದರ ಕಡೆ ನೀವು ಗಮನ ನೀಡಬೇಕಾದ ಅವಶ್ಯೆಕತೆಯಿದೆ.

 

 

ಬಲಗೈ ಬದಿಯ ಬ್ಯಾನರುಗಳು

 

ಬಲಗೈ ಬದಿಯ ಬ್ಯಾನರು 1 - ನೇಹ ಅಸ್ತಮಾವನ್ನು ಹೇಗೆ ಜಯಿಸಿದಳು ಮತ್ತು ತನ್ನ ಮೊದಲ 4 ಕಿ.ಮೀ. ಓಡಿದಳು ಎಂದು ಓದಿರಿ(ಸ್ಫೂರ್ತಿದಾಯಕ ಕಥೆಗಳು)

ಬಲಗೈ ಬದಿಯ ಬ್ಯಾನರು 2 - ನಾನು ಅಸ್ತಮಾವನ್ನು ಹೊಂದಿದ್ದರೂ ಸಹ ನಾನು ವ್ಯಾಯಾಮ ಮಾಡಬಹುದೇ ಅಥವಾ ಕ್ರೀಡೆಗಳನ್ನು ಆಡಬಹುದೇ? (ಪದೇಪದೇ ಕೇಳುವ ಪ್ರಶ್ನೆಗಳು)

ಬಲಗೈ ಬದಿಯ ಬ್ಯಾನರು 3 - ತಮ್ಮ ಉಸಿರಾಟದ ಸಮಸ್ಯೆಗಳನ್ನು ಯಶಸ್ವಿಯಾಗಿ ಜಯಿಸಿದ ಜನರೊಂದಿಗೆ ಸಂಪರ್ಕ ಸಾಧಿಸಲು ಸಮುದಾಯವನ್ನು (ಬ್ರೀಥ್ಫ್ರೀ ಸಮುದಾಯ) ಸೇರಿ

Please Select Your Preferred Language