ಮಕ್ಕಳಲ್ಲಿ ಅಸ್ತಮಾವು ಹೇಗೆ ಭಿನ್ನವಾಗಿರುತ್ತದೆ?
ಒಂದು ಮಗುವಿನಲ್ಲಿ ಅಸ್ತಮಾ ರೋಗನಿದಾನವಾದಾಗ, ಹೆತ್ತವರಿಗೆ ಪ್ರಶ್ನೆಗಳ ಒಂದು ಸರಣಿಯೇ ಎದುರಾಗುತ್ತದೆ - ಏಕೆ ನನ್ನ ಮಗುವಿಗೆ? ನನ್ನ ಮಗುವು ಯಥಾಪ್ರಕಾರ ಬೆಳೆಯುವುದೇ? ನನ್ನ ಮಗುವಿಗೆ ತನ್ನ ಎಲ್ಲಾ ಅಚ್ಚುಮೆಚ್ಚಿನ ಆಟಗಳನ್ನು ಆಡಲು ಸಾಧ್ಯವಾಗುವುದೇ?
ಆದರೆ ಅಸ್ತಮಾ ಬಗ್ಗೆ ಚಿಂತೆ ಪಡುವ ಅಗತ್ಯವಿಲ್ಲ. ಸಮಸ್ಯೆ, ಲಕ್ಷಣಗಳು, ಪ್ರಚೋದಕಗಳು ಮತ್ತು ಚಿಕಿತ್ಸೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವುದರಿಂದ, ನಿಮ್ಮ ಮಗುವಿನ ಆಸ್ತಮಾವನ್ನು ನಿಯಂತ್ರಣದಡಿಯಲ್ಲಿಟ್ಟುಕೊಳ್ಳುವುದು ಅತ್ಯಂತ ಸುಲಭ, ಹಾಗಾಗಿ ನಿಮ್ಮ ಮಗುವು ಒಂದು ಆರೋಗ್ಯಕರ ಮತ್ತು ಸಾಮಾನ್ಯ ಜೀವನವನ್ನು ಹೊಂದಬಹುದು.
ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಪ್ರಕಾರ, ಅಸ್ತಮಾವು ವಿಶ್ವದಾದ್ಯಂತ ಮಕ್ಕಳಲ್ಲಿ ಅತ್ಯಂತ ಸಾಮಾನ್ಯ ಉಸಿರಾಟದ ಸಮಸ್ಯೆಯಾಗಿದೆ. ಮಿಲಿಯಗಟ್ಟಲೆ ಮಕ್ಕಳು ಅಸ್ತಮಾ ಹೊಂದಿದ್ದಾರೆ ಮತ್ತು ಅದನ್ನು ಚೆನ್ನಾಗಿ ನಿರ್ವಹಿಸುತ್ತಾರೆ. ಹಾಗಾಗಿ, ನೀವು ಒಂಟಿಯಲ್ಲ!
ಜನಸಾಮಾನ್ಯರ ನಂಬಿಕೆಗೆ ವಿರುದ್ಧವಾಗಿ, ಮಕ್ಕಳಲ್ಲಿನ ಅಸ್ತಮಾವು ವಯಸ್ಕರಲ್ಲಿರುವ ಅಸ್ತಮಾದಂತೆಯೇ ಇರುವುದಿಲ್ಲ. ವಯಸ್ಕರು ಉಸಿರುಗಟ್ಟುವಿಕೆ, ಉಬ್ಬಸ, ಕೆಮ್ಮುವುದು ಮತ್ತು ಎದೆ ಬಿಗಿತಗಳಂತಹ ಕೆಲವು ವಿಶಿಷ್ಟ ಲಕ್ಷಣಗಳನ್ನು ತೋರಿಸುತ್ತಾರೆಯಾದರೂ, ಮಕ್ಕಳು ಅದೇ ರೀತಿಯ ಲಕ್ಷಣಗಳನ್ನು ತೋರಿಸದಿರಬಹುದು. ಅಸ್ತಮಾ ಹೊಂದಿರುವ ಬಹುತೇಕ ಮಕ್ಕಳು ಪ್ರಮುಖ ಲಕ್ಷಣವಾಗಿ ಕೆಮ್ಮನ್ನು ಹೊಂದಿರುತ್ತಾರೆ. ಸತತ ಕೆಮ್ಮು (3-4 ವಾರಗಳಿಗಿಂತ ಹೆಚ್ಚಿನ ಕಾಲ ಇರುವ) ಮಕ್ಕಳಲ್ಲಿ ಆಸ್ತಮಾದ ಒಂದು ಸೂಚಕವಾಗಿರಬಹುದು.
ಸರಿಯಾದ ಚಿಕಿತ್ಸೆ ಮತ್ತು ನಿರ್ವಹಣೆಯೊಂದಿಗೆ, ಆಸ್ತಮಾವನ್ನು ಸಂಪೂರ್ಣವಾಗಿ ನಿಯಂತ್ರಿಸುವ ಸಾಧ್ಯತೆಯಿದೆ ಎಂದು ನೆನಪಿಟ್ಟುಕೊಳ್ಳುವುದು ಮುಖ್ಯವಾಗಿದೆ, ಇದರರ್ಥ ನಿಮ್ಮ ಮಗುವು ಒಂದು ಮಗುವು ಮಾಡಬಯಸುವ ಪ್ರತಿಯೊಂದನ್ನು ಮಾಡಬಹುದು.
ಅಸ್ತಮಾವನ್ನು ಸಂಪೂರ್ಣವಾಗಿ ಚಿಕಿತ್ಸಿಸಬಹುದು, ಹಾಗಾಗಿ ನಿಮ್ಮ ಮಗುವಿನ ಅಸ್ತಮಾ ಮತ್ತು ಬೆಳವಣಿಗೆಯ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ಆಸ್ತಮಾ ಚಿಕಿತ್ಸೆಗಾಗಿ ಇನ್ಹೇಲರ್‌ಗಳು ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಔಷಧವನ್ನು ಇನ್ಹೇಲರ್ಗಳ ಮೂಲಕ ನೀಡಲಾಗುತ್ತಿದ್ದು, ಹಾಗಾಗಿ ಅದು ಶ್ವಾಸಕೋಶವನ್ನು ನೇರವಾಗಿ ತಲುಪುತ್ತದೆ ಮತ್ತು ಕಡಿಮೆ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ. ಎರಡು ವಿಧಗಳ ಅಸ್ತಮಾ ಔಷಧಗಳಿವೆ - ನಿಯಂತ್ರಕಗಳು ಮತ್ತು ಉಪಶಮಕಗಳು. ಕಾಲಾನಂತರದಲ್ಲಿ ಲಕ್ಷಣಗಳು ಮತ್ತು ದಾಳಿಗಳನ್ನು ತಡೆಯಲು ನಿಯಂತ್ರಕಗಳನ್ನು ಬಳಸಲಾಗುತ್ತದೆ. ನಿಯಂತ್ರಕಗಳು ತಕ್ಷಣ ಉಪಶಮನವನ್ನು ಒದಗಿಸುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯವಾಗಿದೆ. ಉಪಶಮಕಗಳು ತಕ್ಷಣ ಉಪಶಮನವನ್ನು ಒದಗಿಸುತ್ತದೆ ಮತ್ತು ಆಸ್ತಮಾ ದಾಳಿಯ ಸಮಯದಲ್ಲಿ ಬಳಸಲಾಗುತ್ತದೆ. ನಿಯಂತ್ರಕಗಳನ್ನು ನಿಯಮಿತವಾಗಿ ಬಳಸುವುದು ಸಹ ಉಪಶಮಕ ಔಷಧಗಳ ಅಗತ್ಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಿಮ್ಮ ಮಗುವಿಗೆ ಆಸ್ತಮಾ ಇದ್ದರೆ ನೀವು ಗಮನ ನೀಡಬೇಕಾದ ಕೆಲವು ವಿಷಯಗಳಿವೆ:
-
ನಿಮ್ಮ ಮಗುವಿನ ಅಸ್ತಮಾದ ಪ್ರಚೋದಕಗಳನ್ನು ಗುರುತಿಸಿ ಮತ್ತು ಅವುಗಳನ್ನು ತಪ್ಪಿಸಿ
-
ನಿಮ್ಮ ಮಗುವಿನ ಲಕ್ಷಣಗಳನ್ನು ಹೇಗೆ ನಿರ್ವಹಿಸುವುದು ಎಂಬುದರ ಬಗ್ಗೆ ನಿಮ್ಮ ಮಗುವಿನ ಶಿಶು ವೈದ್ಯರೊಂದಿಗೆ ಸಮಾಲೋಚಿಸಿ
-
ನಿಮ್ಮ ಮಗುವಿಗಾಗಿ ರಚಿಸಲಾದ ಅಸ್ತಮಾ ಕ್ರಿಯೆ ಯೋಜನೆಯನ್ನು ಅನುಸರಿಸಿ
-
ಇನ್ಹೇಲರ್‌ಗಳನ್ನು ಮತ್ತು ಇತರ ಔಷಧಗಳನ್ನು ಸರಿಯಾಗಿ ಹೇಗೆ ಉಪಯೋಗಿಸುವುದೆಂದು ಕಲಿತುಕೊಳ್ಳಿ ಮತ್ತು ನಿಮ್ಮ ಮಗುವಿಗೆ ಕಲಿಸಿರಿ.
-
ನಿಯಂತ್ರಕ ಮತ್ತು ಉಪಶಮನ ಇನ್ಹೇಲರ್‌ಗಳನ್ನು ಲೇಬಲ್ ಮಾಡಿ, ಹಾಗಾಗಿ ಗೊಂದಲವಿರುವುದಿಲ್ಲ
-
ನಿಮ್ಮ ಮಗು ಅವನು/ಅವಳು ಎಲ್ಲಿಗೆ ಹೋಗುತ್ತಾರೆ ಎಂಬುದನ್ನು ಪರಿಗಣಿಸದೆ - ಶಾಲೆ, ಉದ್ಯಾನವನ ಮತ್ತು ಇತರ ಪ್ರವಾಸಗಳು - ಯಾವಾಗಲೂ ಅವನ/ಅವಳ ಉಪಶಮಕ ಇನ್ಹೇಲರ್ ಅನ್ನು ಒಯ್ಯುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
-
ನಿಮ್ಮ ಮಗುವಿಗೆ ಆಸ್ತಮಾವನ್ನು ಸುಲಭವಾದ ರೀತಿಯಲ್ಲಿ ವಿವರಿಸಿ, ಹಾಗಾಗಿ ಅವನು / ಅವಳು ಅದನ್ನು ಅರ್ಥಮಾಡಿಕೊಳ್ಳಬಹುದು. ಇನ್ಹೇಲರ್‌ಗಳು ಅವನಿಗೆ / ಅವಳಿಗೆ ಹೇಗೆ ಸಹಾಯ ಮಾಡುತ್ತವೆ ಮತ್ತು ಅಸ್ತಮಾಕ್ಕೆ ಸಂಬಂಧಿಸಿದ ತುರ್ತುಸ್ಥಿತಿಗಳನ್ನು ಅವನು / ಅವಳು ಹೇಗೆ ತಪ್ಪಿಸಬಹುದು ಎಂಬುದನ್ನು ನೀವು ವಿವರಿಸುದರೆ ಅದು ಕೂಡ ಸಹಾಯ ಮಾಡುತ್ತದೆ.
-
ಒಂದು ಅಸ್ತಮಾ ದಾಳಿಯ ಸಂದರ್ಭದಲ್ಲಿ , ನೀವು ಮಾಡಬೇಕಾದ ಮೊದಲನೆಯ ಕೆಲಸವೆಂದರೆ ಶಾಂತವಾಗಿರುವುದು ಮತ್ತು ಎಲ್ಲವೂ ಸರಿಯಾಗುತ್ತದೆ ಎಂದು ನಿಮ್ಮ ಮಗುವಿಗೆ ಪುನರಾಶ್ವಾಸನೆ ನೀಡುವುದು. ಹೀಗೆ ಮಾಡುವಾಗ, ದಾಳಿಯ ಸಮಯದಲ್ಲಿ ನಿಮ್ಮ ಮಗುವಿಗೆ ಸಹಾಯ ಮಾಡಲು ಅಸ್ತಮಾದ ತುರ್ತು ಸೂಚನೆಗಳನ್ನು ಅನುಸರಿಸಿ.
-
ನಿಮ್ಮ ಮಗುವಿನ ಅಸ್ತಮಾದ ಬಗ್ಗೆ ಕುಟುಂಬ, ಆರೈಕೆ ಮಾಡುವವರು ಮತ್ತು ಶಾಲೆಗೆ ತಿಳಿಸಿ, ಅಸ್ತಮಾ ಕ್ರಿಯೆಯ ಯೋಜನೆಯನ್ನು ಅವರೊಂದಿಗೆ ಹಂಚಿಕೊಳ್ಳಿ ಮತ್ತು ನಿಮ್ಮ ತುರ್ತು ಸಂಪರ್ಕ ಮಾಹಿತಿಯನ್ನು ಅವರಿಗೆ ನೀಡಲು ಮರೆಯಬೇಡಿ
-
ಆದಾಗ್ಯೂ, ಮಾಡಬೇಕಾದ ಅತ್ಯಂತ ಮುಖ್ಯವಾದ ವಿಷಯವೆಂದರೆ, ನಿಮ್ಮ ಮಗುವು ಮಗುವಿನಂತೆಯೇ ಇರುವುದನ್ನು ತಡೆಗಟ್ಟದಿರುವುದು . ನಿಮ್ಮ ಮಗುವು ನೃತ್ಯ ಮಾಡಲು ಕ್ರೀಡೆಗಳನ್ನು ಆಡಲು, ಈಜಲು ಅಥವಾ ಮಾರ್ಶಲ್ ಆರ್ಟ್‌ಗಳನ್ನು ಅಭ್ಯಾಸ ಮಾಡಲು ಬಯಸಿದರೆ, ಅವರು ಮಾಡಲಿ. ನಿಮ್ಮ ಮಗುವು ಅಸ್ತಮಾವನ್ನು ಹೊಂದಿರುವುದೆಂಬ ಕಾರಣಕ್ಕಾಗಿ, ಅವರು ವಿನೋದ ತುಂಬಿದ ಬಾಲ್ಯವನ್ನು ಹೊಂದಿರಬಾರದೆಂಬ ಅರ್ಥವೇನಲ್ಲ.