ಉಪಕ್ರಮ

#ನಿಮ್ಮ ಶ್ವಾಸಕೋಶಗಳನ್ನು ರಕ್ಷಿಸಿಕೊಳ್ಳಿ ಡಿಲ್

ವಿಶ್ವ ಆರೋಗ್ಯ ಸಂಸ್ಥೆ ವರದಿಯ ಪ್ರಕಾರ, ವಿಶ್ವದ ಅತ್ಯಂತ ಹೆಚ್ಚು ಮಾಲಿನ್ಯಗೊಂಡ ನಗರಗಳಲ್ಲಿ 13 ಭಾರತದಲ್ಲಿದ್ದು, ಇದು  ರಾಜಧಾನಿ ನಗರವಾದ ನವ ದೆಹಲಿಯನ್ನು ಒಳಗೊಂಡಿದೆ. ನಾವು ಎದುರಾಗುವ ಪರಿಸರ ಅಲರ್ಜಿಕಗಳಿಗೆ ಮತ್ತು ಮಾಲಿನ್ಯಕಾರಕಗಳಿಗೆ ಹೆಚ್ಚಾಗುತ್ತಿರುವ ಪ್ರಮಾಣದ ಒಡ್ಡಿಕೊಳ್ಳುವಿಕೆಯಿಂದ, ಅಸ್ತಮಾ, ಸಿಒಪಿಡಿ ಮತ್ತು ಬ್ರಾಂಕೈಟಿಸ್‌ಗಳಂತಹ ಹಲವಾರು ಉಸಿರಾಟದ ಸಮಸ್ಯೆಗಳಿಗೆ ದೆಹಲಿಯ  ಬಹುತೇಕ 34% ನಷ್ಟು ಜನಸಂಖ್ಯೆಯು ಒಡ್ಡಿಕೊಳ್ಳುತ್ತಿದೆ ಎಂಬುದು ನಿಜಕ್ಕೂ ಅಚ್ಚರಿಯೇನಲ್ಲ. ಅವುಗಳನ್ನು ಹೊಂದಿರುವ ಜನರ ಸಂಖ್ಯೆ ಇದ್ದರೂ, ಉಸಿರಾಟದ ಸಮಸ್ಯೆಗಳು, ಮತ್ತು ಅಲರ್ಜಿಕಗಳು ಮತ್ತು ಮಾಲಿನ್ಯಕಾರಕಗಳು ಒಬ್ಬರ ಶ್ವಾಸಕೋಶದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಅರಿವು ಇನ್ನೂ ಬಹಳ ಕಡಿಮೆ.

ಬ್ರೀಥ್‌ಫ್ರೀ (ಸಿಪ್ಲಾದ ಸಾರ್ವಜನಿಕ ಸೇವೆ ಉಪಕ್ರಮ)ಯು ಜನರು  ಉಸಿರಾಟದ ಸಮಸ್ಯೆಗಳ ವಿಧಗಳ ಬಗ್ಗೆ ಮತ್ತು ಅವುಗಳ ಚಿಕಿತ್ಸೆಯ ಬಗ್ಗೆ  ಹೆಚ್ಚು ತಿಳಿದುಕೊಳ್ಳು ವ ಮತ್ತು ಅರಿತುಕೊಳ್ಳುವ ಅಗತ್ಯತೆಯನ್ನು ಅರ್ಥಮಾಡಿಕೊಳ್ಳುತ್ತದೆ. ಆದ್ದರಿಂದ, ನಾವು ನಿಮಗೆ ಅಗತ್ಯವಿರುವ ಎಲ್ಲ ಮಾಹಿತಿ ಮತ್ತು ಬೆಂಬಲವನ್ನು ನೀವು ಪಡೆಯಲು ಸಹಾಯ ಮಾಡಲು '#ಸೇವ್‌ಯುವರ್‌ಲಂಗ್ಸ್‌ಡಿಲ್ಲಿ (ದೆಹಲಿ ನಿನ್ನ ಶ್ವಾಸಕೋಶಗಳನ್ನು ರಕ್ಷಿಸಿಕೊ)' ಎಂದು ಕರೆಯಲ್ಪಡುವ ಆಂದೋಲನವನ್ನು ಪ್ರಾರಂಭಿಸಿದ್ದೇವೆ. ಈ ಆಂದೋಲನದ ಜೊತೆಗೆ, ಬ್ರೀಥ್‌ಫ್ರೀಯು ತನ್ನ ಮೊದಲ, ಒಂದು ರೀತಿಯ ಹಲ್ಪ್‌ಲೈನ್‌ ಕೂಡ ಪ್ರಾರಂಭ ಮಾಡಿದ್ದು, ಅದು ನಿಮಗೆ ದಿನಪೂರ್ತಿ ಉಚಿತ ಬೆಂಬಲ ಮತ್ತು ಮಾಹಿತಿಯನ್ನು ನೀಡುತ್ತದೆ.

ನಿಮಗೆ ಉಸಿರಾಟದ ಸಮಸ್ಯೆ ಇದ್ದಲ್ಲಿ ಅಥವಾ ಯಾರಾದರೂ ಹೊಂದಿರುವುದು ಗೊತ್ತಿದ್ದರೆ ಅಥವಾ ನಿಮಗೆ ಉಸಿರಾಟದ ಸಮಸ್ಯೆ ಇರಬಹುದೆಂದು ಭಾವಿಸಿದರೂ ಕೂಡಾ ನೀವು ಕೇವಲ ಹೆಲ್ಪ್‌ಲೈನ್‌ಗೆ ಕರೆ ಮಾಡಿ ಮತ್ತು ನಿಮ್ಮ ನೆರೆಹೊರೆಯಲ್ಲಿ ಉಚಿತ ಶ್ವಾಸಕೋಶ ಪರೀಕ್ಷೆ ಶಿಬಿರವನ್ನು ಸಂಘಟಿಸಲು ಬ್ರೀಥ್‌ಫ್ರೀಯನ್ನು ಕೇಳಬಹುದು.

ಹಾಗಾಗಿ, ಇದು #ಸೇವ್‌ಯುವರ್‌ಲಂಗ್ಸ್‌ಡಿಲ್ಲಿ ಮತ್ತು ಉಚಿತ ಉಸಿರಾಡುವ ಸಮಯ.

FB Live Interview with Dr. Jaideep Gogtay

Read More

ಬ್ರೀಥ್‌ಫ್ರೀ ಉತ್ಸವ

Read More

ವಿಶ್ವ ಅಸ್ತಮಾ ಮಾಸ - ಮೇ 02, 2017

Read More

Please Select Your Preferred Language