ಬ್ರಾಂಕೈಟಿಸ್

ನೀವು ಯಾವಾಗ ಒಬ್ಬ ವೈದ್ಯರನ್ನು ಭೇಟಿ ಮಾಡಬೇಕು?

ಇದು ತೀವ್ರವಾದ ಅಥವಾ ದೀರ್ಘಕಾಲೀನದಾಗಿದ್ದರೂ, ಬ್ರಾಂಕೈಟಿಸ್‌ಗೆ ವೈದ್ಯಕೀಯ ಗಮನದ ಅಗತ್ಯವಿರುತ್ತದೆ,
ಹಾಗಾಗಿ ನೀವು ಸೂಕ್ತವಾದ ಚಿಕಿತ್ಸೆಯನ್ನು ಪಡೆಯಬಹುದು. ನಿಮ್ಮ ಕೆಮ್ಮು ಈ ಕೆಳಗಿನ ಗುಣಲಕ್ಷಣಗಳನ್ನು ಹೊಂದಿದೆ
ಎಂದು ನೀವು ಕಂಡುಕೊಂಡರೆ, ಸಾಧ್ಯವಾದಷ್ಟು ಬೇಗ ನಿಮ್ಮ ವೈದ್ಯರೊಂದಿಗೆ ಸಮಾಲೋಚನೆ ಮಾಡುವುದು
ಮುಖ್ಯವಾಗಿರುತ್ತದೆ.

 ನೀವು ರಕ್ತವನ್ನು ಅಥವಾ ದಪ್ಪ / ಗಾಢ ಲೋಳೆಯನ್ನು (ಶ್ಲೇಷ್ಮ) ಕೆಮ್ಮಿದರೆ

 ನಿಮ್ಮ ಬಾಯಿಯಲ್ಲಿ ನೀವು ಅಸಹ್ಯವಾದ ರುಚಿಯನ್ನು ಹೊಂದಿದ್ದರೆ

 ಅದು ನಿಮ್ಮ ನಿದ್ದೆಗೆ ಅಡಚಣೆ ಉಂಟುಮಾಡಿದರೆ

 3 ವಾರಗಳಿಗಿಂತ ಹೆಚ್ಚು ಕಾಲ ಇದ್ದರೆ

 ಅದು ಎದೆನೋವು ಉಂಟುಮಾಡಿದರೆ

 ಮಾತನಾಡಲು ಕಷ್ಟವನ್ನು ಉಂಟುಮಾಡಿದರೆ

 ಅದು ಉಬ್ಬಸ ಮತ್ತು/ಅಥವಾ ಏದುಸಿರಂತಹ ಇತರ ಲಕ್ಷಣಗಳೊಂದಿಗೆ ಜತೆಗೂಡಿದ್ದರೆ

 ಅದು ವಿವರಿಸಲಾಗದ ತೂಕ ನಷ್ಟದೊಂದಿಗೆ ಜತೆಗೂಡಿದ್ದರೆ

Please Select Your Preferred Language