ಸ್ಫೂರ್ತಿ

ತಾರೆಗಳಿಗಾಗಿ ಗುರಿಯಿಡುವುದು

ಝಹಾನ್‌ಗೆ ಎಂದೂ ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ. ಹಾಗಾಗಿ, ದೊಡ್ಡ ಮತ್ತು ಸಣ್ಣ ಗಾಯಗಳು ಮನೆಯಲ್ಲಿ ವಾರಕ್ಕೊಮ್ಮೆ ಉಂಟಾಗುತ್ತಿದ್ದವು. ತಾನು ಮಾಡಬಯಸಿದ ಕೆಲಸವನ್ನೆಲ್ಲವನ್ನೂ ಮಾಡುವುದರಿಂದ ಅವು ಅವನನ್ನು ತಡೆದವು ಅಂತಲ್ಲ. ನಾನು ಒಪ್ಪಿಕೊಳ್ಳುತ್ತೇನೆ, ನನಗೆ ಕೊಂಚ ಭಯವಾಗಿತ್ತು, ಆದರೆ ಅದು ಪ್ರತಿಯೊಂದು ಮಾತಾಪಿತೃಗಳು ತಮ್ಮ ಮಗುವಿನ ಕುರಿತು ಹಾಗೆನಿಸುವುದು ಸ್ವಾಭಾವಿಕ. ಒಂದು ಎಂದಿನಂತಿನ ವಾಡಿಕೆಯ ದಿನದಂದು ನನ್ನ ಬುದ್ಧಿವಿಕಲ್ಪವು ಸಂಪೂರ್ಣ ಭಯಕ್ಕೆ ತಿರುಗಲಿದೆ ಎಂದು ನನಗೆ ಕೊಂಚವೂ ಗೊತ್ತಿರಲಿಲ್ಲ. 

 

ಝಹಾನ್ 4 ವರ್ಷದವನಾಗಿದ್ದಾಗ ಅವನು ಮನೆಗೆ ಸಂಪೂರ್ಣವಾಗಿ ಏದುಸಿರುಬಿಡುತ್ತ ಮನಗೆ ಬಂದನು. ಅವನು ಮೆಟ್ಟಲುಗಳನ್ನು ಹತ್ತಿ ಓಡಿಬಂದಿದ್ದಾನೆ ಎಂದು ಭಾವಿಸಿ, ನಾವು ಅದರ ಬಗ್ಗೆ ಅಷ್ಟು ಯೋಚನೆ ಮಾಡಲಿಲ್ಲ. ಅವನ ಉಸಿರಾಟವು ಸಾಮಾನ್ಯ ಸ್ಥಿತಿಗೆ ಮರಳದಿದ್ದಾಗ ಮಾತ್ರ ಏನೋ ಸರಿಯಿಲ್ಲವೆಂದು ನಮಗೆ ಮನವರಿಕೆಯಾಯಿತು. ಒಂದು ಸಂಪೂರ್ಣವಾಗಿ ಭಯಭೀತಗೊಂಡ ಸ್ಥಿತಿಯಲ್ಲಿ, ನಾವು ಏನು ಮಾಡಲು ಸಾಧ್ಯವೋ ಅದನ್ನೇ ಮಾಡಿದೆವು; ನಾವು ಅವನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದೆವು.

 

ವೈದ್ಯರಿಗೆ ನಾವು ವಿವರಿಸುವುದಕ್ಕೆ ಮೊದಲೇ, ಝಹಾನ್ ಅನ್ನು ಅವನ ಮೂಗು ಹಾಗೂ ಬಾಯಿಯ ಮೇಲೆ ಒಂದು ಆಮ್ಲಜನಕ ಮಾಸ್ಕ್ ಅನ್ನು ಅಳವಡಿಸಿ ಐಸಿಯುಗೆ ಒಯ್ದರು. ನಮ್ಮಲ್ಲಾದ ವಿಪರೀತ ಭೀತಿಯನ್ನು ಶಬ್ದಗಳಲ್ಲಿ ವರ್ಣಿಸಲಸಾಧ್ಯ. ನಾವು ಅವನನ್ನು ಕಳೆದುಕೊಳ್ಳುತ್ತೇವೆ ಎಂದು ನನಗೆ ಖಚಿತವಾಗಿತ್ತು.

 

ಕೆಲವು ಗಂಟೆಗಳ ನಂತರ, ವೈದ್ಯರು ನಮ್ಮ ಮನಸ್ಸಿಗೆ ಸಮಾಧಾನ ಹಾಗೂ ಪುನಃ ಭಯವನ್ನು ತಂದ ಸುದ್ದಿಯನ್ನು ನಮಗೆ ನೀಡಿದರು - ಝಹಾನ್್‌ಗೆ ಯಾವುದೇ ಅಪಾಯವಿಲ್ಲ. ಆದರೆ, ಅವನಿಗೆ ಆಸ್ತಮಾ ಇದೆ. ಅಸ್ತಮಾದ ನಮ್ಮ ಭೀತಿ ಮತ್ತು ಸೀಮಿತ ತಿಳುವಳಿಕೆಯಲ್ಲಿ, ನಾವು ವೈದ್ಯರ ಮೇಲೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದೆವು - 'ಅವನು ಮತ್ತೆ ಸಾಮಾನ್ಯವಾಗುತ್ತಾನೆಯೇ?' ’ಅವನಿಗೆ ಏಕೆ?’ 'ಅವನ ಆಸ್ತಮಾವನ್ನು ಗುಣಪಡಿಸಲು ಯಾವುದೇ ಮಾರ್ಗವಿದೆಯೇ?'  'ಅವನು ಫುಟ್‌ಬಾಲ್ ಆಡುವುದನ್ನು ಮುಂದುವರಿಸಬಹುದೇ?'  ’ಅಸ್ತಮಾ ಬರಲು ಅವನು ತುಂಬಾ ಚಿಕ್ಕವನಲ್ಲವೇ?'

 

ಆಗ ವೈದ್ಯರು ಅಸ್ತಮಾದ ಬಗ್ಗೆ ಎಲ್ಲವನ್ನೂ ಮತ್ತು ಝಹಾನ್‌ಗೆ ಚಿಕಿತ್ಸಿಸಲು ಇನ್ಹೇಲರ್‌ಗಳು ಹೇಗೆ ಅತ್ಯುತ್ತಮ ಮಾರ್ಗವೆಂದು ವಿವರಿಸಿದರು. ಇನ್ಹೇಲರ್‌ಗಳು ಹೇಗೆ ಪ್ರಯೋಜನಕಾರಿ ಎಂದು ನಮಗೆ ಅರ್ಥವಾಗಲಿಲ್ಲ. ನಾವು ಪುನಃ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದೆವು - 'ಅವನಿಗೆ ಇನ್ಹೇಲರ್‌ಗಳು ಏಕೆ ಅವಶ್ಯಕ?' 'ಅವು ಕೇವಲ ವಯಸ್ಕರಿಗೆ ಮಾತ್ರವಲ್ಲವೇ?'  'ಚಿಕಿತ್ಸೆಗಾಗಿ ಅದು ಅಂತಿಮೋಪಾಯವಲ್ಲವೇ?'  ’ಇನ್ಹೇಲರ್‌ಗಳಲ್ಲಿ ಸ್ಟೆರಾಯಿಡ್‌ಗಳು ಇರುವುದಲ್ಲವೇ?'  ’ಸ್ಟೆರಾಯಿಡ್‌ಗಳು ಊಹಾನ್‌ ಬೆಳವಣಿಗೆಯನ್ನು ಕುಂಟಿತಗೊಳಿಸುವುದಿಲ್ಲವೇ?’ 

 

ನಂತರ ವೈದ್ಯರು ಇನ್ಹೇಲರ್‌ಗಳ ಬಗ್ಗೆ ಇರುವ ಮಿಥ್ಯಗಳ ಬಗ್ಗೆ ಹಾಗೂ ಇನ್ಹೇಲರ್‌ಗಳು ವಾಯುಮಾರ್ಗಗಳನ್ನು ತೆರೆದು ಹೆಚ್ಚು ಉತ್ತಮವಾಗಿ ಉಸಿರಾಡಲು ಹೇಗೆ ಜನರಿಗೆ ಸಹಾಯ ಮಾಡುತ್ತವೆ ಎಂದು ವಿವರಿಸಿದರು. ಇನ್ಹೇಲರ್‌ಗಳ ಬಗ್ಗೆ ನಮಗೆ ಇನ್ನೂ ಅಷ್ಟು ಖಚಿತವಿರಲಿಲ್ಲ, ಆದರೆ ಝಹಾನ್‌ಗೆ ಸಹಾಯ ಮಾಡಲು ಇದು ಅತ್ಯುತ್ತಮ ಮಾರ್ಗವೆಂದು ವಿಶ್ವಾಸ ಉಂಟಾಯಿತು. ಅಲ್ಲದೆ, ಇನ್ಹೇಲರ್‌ಗಳನ್ನು ಹೇಗೆ ಸರಿಯಾಗಿ ಬಳಸಬೇಕೆಂದು ನಾವು ಕಲಿತುಕೊಂಡೆವು ಮತ್ತು ಝಹಾನ್‌ಗೂ ಹೇಳಿಕೊಟ್ಟೆವು.

 

ಆದರೆ ಇನ್ಹಲೇಷನ್ ಚಿಕಿತ್ಸೆಯೊಂದಿಗೂ ಕೂಡ, ಅವನ ಬಗ್ಗೆ ಬಹಳ ಎಚ್ಚರಿಕೆವಹಿಸಿದ್ದೆವು. ಅವನು ತಿನ್ನುವ ಮತ್ತು ಸೇವಿಸುವ ಪ್ರತಿಯೊಂದರ ಬಗ್ಗೆಯೂ ನಾವು ನಿಕಟವಾದ ಗಮನವನ್ನು ಇಟ್ಟುಕೊಂಡಿದ್ದೆವು. ಝಹಾನ್ ಮನೆಯಿಂದ ಏನಾದರೂ ಹೊರಹೋದರೆ ನಮಗೆ ಆತಂಕ ಉಂಟಾಗುತ್ತಿತ್ತು, ಮತ್ತು ಅವನು ಯಾವುದೇ ಕ್ರೀಡೆ ಆಡುವುದಂತೂ ಅಸಂಭವವಾಗಿತ್ತು. ಸಾಧ್ಯವಾದಷ್ಟು ಅವನನ್ನು ನಮ್ಮ ಹತ್ತಿರವೇ ಇಟ್ಟುಕೊಳ್ಳಲು ನಾವು ಬಯಸಿದ್ದೆವು, ಹಾಗಾಗಿ ಅವನಿಗೆ ಏನೂ ಕೆಟ್ಟದಾಗಬಾರದು. 

 

ಕ್ರಮೇಣ, ನಾವು ಇನ್ಹಲೇಷನ್ ಚಿಕಿತ್ಸೆಯ ಪರಿಣಾಮಗಳನ್ನು ನೋಡಲು ಪ್ರಾರಂಭಿಸಿದೆವು. ಅವನ ಉಸಿರಾಟವು ಉತ್ತಮಗೊಳ್ಳುತ್ತಿರುವುದನ್ನು ಮತ್ತು ಅವನ ವಿಶ್ವಾಸವು ಮರಳಿ ಬರುತ್ತಿರುವುದನ್ನು ನಾವು ಗಮನಿಸಿದೆವು. ತನ್ನ ಪ್ರಚೋದಕಗಳಿಂದ ತಪ್ಪಿಸಿಕೊಳ್ಳುವುದು ಮತ್ತು ನಿಯತವಾದ ವೈದ್ಯರ ಭೇಟಿಗಳೊಂದಿಗೆ ಇನ್ಹೇಲರ್‌ನ ಸರಿಯಾದ ಬಳಕೆಯು ಝಹಾನ್್‌ಗೆ ತನ್ನ ಅಸ್ತಮಾವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯ ಮಾಡಿದವು.

ಈಗ 12 ವರ್ಷ ವಯಸ್ಸಿನಲ್ಲಿ, ಝಹಾನ್ ಪುನಃ ಒಬ್ಬ ಬಹಳ ಚಟುವಟಿಕೆಯ ಹಾಹೂ ಆರೋಗ್ಯವಂತ ಬಾಲಕನಾಗಿದ್ದಾನೆ. ಅವನೊಬ್ಬ ಅತ್ಯುತ್ತಮ ಈಜುಗಾರ ಮತ್ತು ಫುಟ್‌ಬಾಲ್ ಆಟಗಾರ. ಅವನು ತಾನು ಇಷ್ಟಪಡುವದನ್ನು ತಿನ್ನುತ್ತಾನೆ, ಮತ್ತು ಅವನ ವಯಸ್ಸಿಗೆ ಅವನು ಒಂದು ಅದ್ಭುತ ಬಾಣಸಿಗನಾಗುತ್ತಿದ್ದಾನೆ. ಝಹಾನ್‌ಗೆ ನೋಡುವ ಯಾರಿಗೂ ಅವನಿಗೆ ಅಸ್ತಮಾ ಎಂದು ನಂಬಲು ಸಾಧ್ಯವಿಲ್ಲ, ಮತ್ತು ನಿಜ ಹೇಳಬೇಕೆಂದರೆ, ಕೆಲವೊಮ್ಮೆ ನಾವು ನಂಬಲು ಸಾಧ್ಯವಿಲ್ಲ!

Please Select Your Preferred Language