ಸ್ಫೂರ್ತಿ

ಅಸ್ತಮಾವನ್ನು ಒದ್ದೋಡಿಸುವುದು

“ನಾನು ಅವನಿಗೆ ವರುಣ್ ಎಂದು ಹೆಸರಿಟ್ಟೆ”. ಅವನ ತಂದೆಯೂ ಸಹ, ಗಾಳಿಯಂತೆ ಅವನು ವೇಗವಾಗಿ ಚಲಿಸಬೇಕೆಂದು ಬಯಸಿದನು. ಆದರೆ ಅವನು ಕೆಲವೇ ತಿಂಗಳುಗಳ ವಯಸ್ಸಿನವನಾಗಿದ್ದಾಗ, ಏನೋ ಸಂಭವಿಸಿದ್ದು, ಅದು ನಮ್ಮನ್ನು ನಿಜವಾಗಿಯೂ ಆಶ್ಚರ್ಯಚಕಿತರನ್ನಾಗಿ ಮಾಡಿತು.

 

ವರುಣ್ ತನ್ನ ಉಸಿರಾಟದ ತೊಂದರೆಯನ್ನು ಅನುಭವಿಸಲು ಪ್ರಾರಂಭಿಸಿದನು. ನಾವು ಅನೇಕ ವೈದ್ಯರ  ಬಳಿ ಹೋದೆವು. ನಿರಂತರ ಔಷಧೋಪಚಾರ ಮತ್ತು ಚುಚ್ಚುಮದ್ದುಗಳು ಈಗ ನಮ್ಮ ಜೀವನಗಳ ಒಂದು ಅಂಗವಾಗಿದ್ದವು. ನಿದ್ದೆಯಿಲ್ಲದ ರಾತ್ರಿಗಳು ವರ್ಷಗಳ ಕಾಲ ಮುಂದುವರೆದುವು.

 

ಅವನು ಎಷ್ಟು ಚಿಕ್ಕವನು, ಮತ್ತು ಸೂಕ್ಷ್ಮ ನಾನು ನಿಜವಾಗಲೂ ಭಯಭೀತನಾಗಿದ್ದೆ. ಹೇಗೆ, ಎಲ್ಲಿ, ಯಾವಾಗ, ಎಂಬ ಪ್ರಶ್ನೆಗಳು ಈಗ ಅರ್ಥಹೀನವಾಗಿದ್ದವು. ಆದರೆ ಅವನು ನಿರಾಶನಾಗಲಿಲ್ಲ. ಅವನು ಟೇ-ಕ್ವಾನ್-ಡೂ ಅನ್ನು ಆರಂಭಿಸಿದನು. ನಾನೂ ಅವನಿಗೆ ಉತ್ತೇಜನ ನೀಡಿದೆ ಮತ್ತು ಅವನಲಲ್‌ಇ ಏನೋ ಕೊಂಚ ಸರಿಯಿಲ್ಲ ಎಂದು ಅವನು ಯೋಚಿಸುವುದಿಲ್ಲ ಎಂಬುದನ್ನು ಖಾತರಿಪಡಿಸಿಕೊಂಡೆ.

 

ಒಂದು ದಿನ, ವರುಣ್ ಮನೆಗೆ ಸಂಪೂರ್ಣ ತಲ್ಲಣಗೊಂಡವನಾಗಿ ಬಂದನು. ಅವನ ವಯಸ್ಸು 8.  ಮತ್ತು ಅವನು ಟೇ-ಕ್ವಾನ್-ಡೂ ಅಂತಿಮ ಫೈನಲ್ಸ್‌ಗೆ ತಲುಪಿದ್ದನು. ಅದು ಅವನಿಗಾಗಿ ಒಂದು ಅಸಾಧಾರಣವಾದ ಸಾಧನೆ. ಅವನು ಕಣ್ಣೀರು ಸುರಿಸುತ್ತಾ ನನಗೆ ಹೇಳಿದನು ಅವನು ಹೇಗೆ ಪರಾಜಿತನಾದ ಎಂದು, ಹೇಗೆಂದರೆ ಅವನಿಗೆ ಉಸಿರಾಡಲು ಕಷ್ಕಕರವಾಗಿತ್ತಂತೆ.

 

ನಾನು ಅವನ ತಂದೆಯ ಜೊತೆ ಮಾತನಾಡಿದೆ. ನಾವು ವರುಣ್‌ಗೆ ಒಂದು ಸಾಮಾನ್ಯ ಜೀವನವನ್ನು ಕೊಡುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ನಾವು ಪ್ರಪಂಚದಲ್ಲೇ ಅತ್ಯುತ್ತಮವಾದ ಆರೈಕೆಯನ್ನು ಹುಡುಕುತ್ತೇವೆ ಎಂದು ನಾವು ನಿರ್ಧರಿಸಿದೆವು ವರುಣ್‌ಗೆ ಆಸ್ತಮಾ ಎಂದು ನಾವು ಹೇಳಿದ್ದ ತಜ್ಞರಲ್ಲಿಗೆ ನಾವು ಅವನನ್ನು ಕರೆದುಕೊಂಡು ಹೋದೆವು.

 

ಏನು ಮಾಡಬೇಕೆಂದು ನಮಗೆ ಗೊತ್ತಿರಲಿಲ್ಲ. ನಮ್ಮ ಸುತ್ತಮುತ್ತಲಿನ ಎಲ್ಲರೂ ದೊಡ್ಡವರಿಗೆ ಬರಬೇಕಾದ ಒಂದು ಸಮಸ್ಯೆಯು ವರುಣ್‌ಗೆ ಹೇಗೆ ಬಂದಿತು ಎಂದು ಆಶ್ಚರ್ಯಪಡುತ್ತಿದ್ದರು. ಮತ್ತು ನಾವಂತೂ ಇನ್ಹೇಲರ್‌ಗಳ ಬಗ್ಗೆ ಯೋಚಿಸಲೂ ಇಲ್ಲ. ಏಕೆಂದರೆ ಅದರ ಕುರಿತು ನಮ್ಮಲ್ಲಿ ಬಹಳಷ್ಟು ಪ್ರಶ್ನೆಗಳಿದ್ದುವು, ಮತ್ತು ಒಂದು ಪರಿಹಾರವನ್ನು ಪ್ರಯತ್ನಿಸಲು ಹಾಗು ಕಂಡುಹಿಡಿಯಲು ನಾವು ನಾವು ಆಪ್ತರೊಂದಿಗೆ ಮತ್ತು ನೆರೆಹೊರೆಯವರೊಂದಿಗೆ ಮಾತನಡಿದೆವು. ನಾವೆಲ್ಲಿ ಹೋದರೂ, ನಮಗೆ ದೊರೆತದ್ದು ಒಂದೇ ಒಂದು ಉತ್ತರ - ಇನ್ಹೇಲರ್‌ಗಳು ಮಕ್ಕಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ. ವರುಣ್‌ಗೆ ಎಂದಿನಂತೆ ಬೆಳೆಯಲು ಸಾಧ್ಯವಿಲ್ಲ.

 

ನಾವಂತೂ ಸಂಪೂರ್ಣವಾಗಿ ತಲ್ಲಣಗೊಂಡಿದ್ದೆವು. ನಾವು ಭಯಭೀತರಾದೆವು ಮತ್ತು ವರುಣ್‌ನ ಆಸ್ತಮಾ ಚಿಕಿತ್ಸೆಗಾಗಿ ಯಾವುದೇ ಪರ್ಯಾಯ ಚಿಕಿತ್ಸೆ ಇದೆಯೇ ಎಂಬುದನ್ನು ತಿಳಿದುಕೊಳ್ಳಲು ವೈದ್ಯರ ಬಳಿಗೆ ಹೋದೆವು. ಆದರೆ  ಏನೂ ಚಿಂತಿಸುವ ಅಗತ್ಯವಿಲ್ಲ ಎಂದು ವೈದ್ಯರು ನಮಗೆ ಹೇಳಿದರು. ನಾವು  ಇನ್ಹಲೇಷನ್ ಚಿಕಿತ್ಸೆಯನ್ನು ಪ್ರಾರಂಭಿಸಿದೆವು. ಮತ್ತು ನಿಧಾನವಾಗಿ ಆದರೆ ಖಂಡಿತವಾಗಿಯು, ನಾವು ಫಲಿತಾಂಶಗಳನ್ನು ನೋಡಲು ಪ್ರಾರಂಭಿಸಿದೆವು.

ವರುಣ್ ಟೇ-ಕ್ವಾನ್-ಡೂನಲ್ಲಿ ಇನ್ನೂ ಹೆಚ್ಚು ಉತ್ತಮಗೊಳ್ಳುವುದಕ್ಕಾಗಿ ಅಭ್ಯಾಸ ಮಾಡುವುದನ್ನು ಮುಂದುವರೆಸಿದನು. ಪ್ರತಿಯೊಂದು ಹೆಜ್ಜೆಯಲ್ಲೂ ಇನ್ಹೇಲರ್ ಚಿಕಿತ್ಸೆ ಮತ್ತು ಅವನ ಆರೋಗ್ಯಕರ ಪದ್ಧತಿಗಳು ಅವನಿಗೆ ಬೆಂಬಲ ನೀಡಿದವು ಮತ್ತು ಅಸ್ತಮಾದಿಂದ ಅವನಿಗೆ ಅಡಚಣೆಯಾಗುವುದಕ್ಕೆ ಬಿಡಲಿಲ್ಲ.  

ಇಂದು, ವರುಣ್ ಅಸ್ತಮಾಗ್ರಸ್ತನೆಂದು ಯಾರು ನಂಬಲು ಸಾಧ್ಯವಿಲ್ಲ; ಮತ್ತು ಅವನು ತನ್ನ ಅನೇಕ ಪದಕಗಳನ್ನು ಹೆಮ್ಮೆಯಿಂದ ಧರಿಸುತ್ತಾನೆ.

Please Select Your Preferred Language