ಬಳಕೆಯ ನಿಯಮಗಳು

ಸಿಪ್ಲಾ ಲಿಮಿಟೆಡ್‌ ಬ್ರೀಥ್ಫ್ರೀ ವೆಬ್ಸೈಟ್www.breathefree.com” (“ಸೈಟ್)ಗೆ ಸ್ವಾಗತ. ಬಳಕೆಯ ಷರತ್ತುಗಳು ಯಾವುದೇ ವ್ಯಕ್ತಿಯಿಂದ (“ಬಳಕೆದಾರ) ಸೈಟ್ ಬಳಕೆ ಅಥವಾ ಪ್ರವೇಶಾವಕಾಶಕ್ಕೆ ನಿಯಮಗಳು ಮತ್ತು ಷರತ್ತುಗಳನ್ನು ನಿಗದಿಪಡಿಸುತ್ತವೆ (“ನಿಯಮಗಳು ಮತ್ತು ಷರತ್ತುಗಳು) . ಸಿಪ್ಲಾ ಲಿಮಿಟೆಡ್ ನಿಯಮಗಳು ಮತ್ತು ಷರತ್ತುಗಳನ್ನು ಮಾರ್ಪಡಿಸಬಹುದು ಅಥವಾ ಯಾವುದೇ ಮುಂಚಿನ ಲಿಖಿತ ಸೂಚನೆಯಿಲ್ಲದೆ ಯಾವುದೇ ಸಮಯದಲ್ಲಿ ಸೈಟ್ ಅನ್ನು ಸ್ಥಗಿತಗೊಳಿಸಬಹುದು. ನಿಯಮಗಳು ಮತ್ತು ಷರತ್ತುಗಳ ಕುರಿತು ಯಾವುದೇ ಉಲ್ಲೇಖವು ತಿದ್ದುಪಡಿ ಅಥವಾ ಮಾರ್ಪಡಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲೇಖಿಸುತ್ತದೆಸೈಟ್ ಮತ್ತು ಅದರ ವಿಷಯಗಳನ್ನು ಭಾರತದ ಕಾನೂನು ಮತ್ತು ನಿಬಂಧನೆಗಳನ್ನು ಅನುಸರಿಸುವಂತೆ ವಿನ್ಯಾಸಗೊಳಿಸಲಾಗಿದೆ. ಪ್ರಪಂಚದ ಇತರ ಭಾಗಗಳಲ್ಲಿ ಪ್ರವೇಶಾವಕಾಶ ಪಡೆಯಬಹುದಾದರೂ, ಸೈಟ್ ಮತ್ತು ಅದರ ವಿಷಯಗಳನ್ನು ಭಾರತೀಯ ನಿವಾಸಿಗಳ ಪ್ರವೇಶಾವಕಾಶಕ್ಕೆ ಮತ್ತು ಬಳಕೆಗಾಗಿ ಮಾತ್ರ ಉದ್ದೇಶಿಸಲಾಗಿದೆ.

ಸೈಟ್ ವೈದ್ಯ-ರೋಗಿ ಸಂಬಂಧವನ್ನು ಸ್ಥಾಪಿಸುವ ಉದ್ದೇಶ ಹೊಂದಿಲ್ಲ. ಸಿಪ್ಲಾ ಲಿಮಿಟೆಡ್ ( ಪದವು ಅದರ ಅಂಗಸಂಸ್ಥೆಗಳು, ಉತ್ತರಾಧಿಕಾರಿಗಳು ಮತ್ತು ಅನುಮತಿಸಲಾದ ನಿಯೋಜನೆಗಳನ್ನು ಒಳಗೊಂಡಿರುತ್ತದೆ) ಯಾವುದೇ ಔಷಧಗಳ / ಚಿಕಿತ್ಸೆಯ ಪ್ರಿಸ್ಕ್ರಿಪ್ಷನ್ ಬಗ್ಗೆ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಅಥವಾ ಖಾತರಿಯನ್ನು ನೀಡುವುದಿಲ್ಲ. ಸೈಟ್ನಲ್ಲಿ ಹೆಸರುಗಳನ್ನು ಪ್ರದರ್ಶಿಸಲಾಗುವ ಆರೋಗ್ಯ ರೈಕೆ ವೃತ್ತಿಪರರು ಸ್ವತಂತ್ರರು ಮತ್ತು ಖಾಸಗಿ ಪ್ರಾಕ್ಟೀಸ್ಗಳಲ್ಲಿದ್ದಾರೆ ಮತ್ತುಅವರು ಸಿಪ್ಲಾ ಲಿಮಿಟೆಡ್ ನೌಕರರಲ್ಲ ಅಥವಾ ಏಜೆಂಟ್ ಅಲ್ಲ. ಆರೋಗ್ಯ ವೃತ್ತಿಪರರ ಅರ್ಹತೆಗಳು ಅಥವಾ ವಿಶ್ವಾಸಾರ್ಹತೆಯ ಅಥವಾ ಅವರು ಒದಗಿಸುವ ವೈದ್ಯಕೀಯ ಸಲಹೆಯು ಸರಿಯಾಗಿರುತ್ತದೆಂಬುದರ ಬಗ್ಗೆ ಸಿಪ್ಲಾ ಲಿಮಿಟೆಡ್ ಅವರು ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ಸೈಟಿನಲ್ಲಿರುವ ಯಾವುದೇ ಆರೋಗ್ಯ ರೈಕೆ ವೃತ್ತಿಪರರ ಹೆಸರು, ವಿಳಾಸ, ವಿಷಯ, ವಸ್ತುಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿಯು ಸಿಪ್ಲಾ ಲಿಮಿಟೆಡ್‌ನ ಯಾವುದೇ ಅನುಮೋದನೆ ಅಥವಾ ಶಿಫಾರಸ್ಸುಗಳು ಅಥವಾ ಸಲಹೆಗಳನ್ನು ಒಳಗೊಂಡಿರುವುದಿಲ್ಲ ಮತ್ತು ಮಾಹಿತಿಯ ದೃಢೀಕರಣ ಮತ್ತು ವಿಶ್ವಾಸಾರ್ಹತೆಯನ್ನು ಬಳಕೆದಾರರು ಪರಿಶೀಲಿಸಬೇಕಾಗುತ್ತದೆ.

  1. ನಿಯಮಗಳು ಮತ್ತು ಷರತ್ತುಗಳ ಅಂಗೀಕಾರ: ಸೈಟ್ ಪ್ರವೇಶಾವಕಾಶ ಮತ್ತು ಬಳಕೆಯು ಇಲ್ಲಿ ಮತ್ತು ಎಲ್ಲಾ ಅನ್ವಯಿಸುವ ಕಾನೂನುಗಳಲ್ಲಿ ನಿಗದಿತ ಪಡಿಸಿರುವ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ. ಸೈಟ್ ಅನ್ನು ಪ್ರವೇಶಿಸುವ ಮೂಲಕ ಮತ್ತು ಬ್ರೌಸ್ ಮಾಡುವ ಮೂಲಕ, ಯಾವುದೇ ಮಿತಿ ಅಥವಾ ಅರ್ಹತೆಯಿಲ್ಲದೇ, ಬಳಕೆದಾರರು ಇಲ್ಲಿ ನಮೂದಿಸಿರುವ ನಿಬಂಧನೆಗಳು ಮತ್ತು ಷರತ್ತುಗಳನ್ನು ಓದಿದ್ದಾರೆ, ಅರ್ಥಮಾಡಿಕೊಂಡಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ, ಎಂದು ಪರಿಗಣಿಸಲಾಗುತ್ತದೆ. ಸಿಪ್ಲಾ ಲಿಮಿಟೆಡ್ನೊಂದಿಗಿನ ಯಾವುದೇ ಒಪ್ಪಂದವು, ನಿಯಮಗಳು ಮತ್ತು ಷರತ್ತುಗಳೊಂದಿಗೆ ಅವರು ಘರ್ಷಣೆಯನ್ನು ಉಂಟುಮಾಡುವಷ್ಟರ ಮಟ್ಟಿಗೆ, ರದ್ದಾಗುತ್ತದೆ ಮತ್ತು ಸಿಂಧುವಾಗಿರುವುದಿಲ್ಲ ಅಥವಾ ಪರಿಣಾಮವಿರುವುದಿಲ್ಲ ಎಂದೂ ಸಹ ಬಳಕೆದಾರರು ಒಪ್ಪಿಕೊಳ್ಳುತ್ತಾರೆ. ನೀವು ನಿಯಮಗಳು ಮತ್ತು ಷರತ್ತುಗಳಿಗೆ ಒಪ್ಪದಿದ್ದರೆ, ನೀವು ಸೈಟ್ ಅನ್ನು ಪ್ರವೇಶಿಸಬಾರದು ಅಥವಾ ಬಳಸಬಾರದು. ಆದ್ದರಿಂದ, ಭಾರತದಲ್ಲಿ ಅಥವಾ ಭಾರತದ ಹೊರಗಿನಿಂದ ಸೈಟ್ ಅನ್ನು ಬಳಸುವ ಅಥವಾ ಪ್ರವೇಶಿಸುವ ಯಾವುದೇ ಬಳಕೆದಾರರು ಅಥವಾ ಸೇವಾ ಪೂರೈಕೆದಾರರು ಸಂಪೂರ್ಣವಾಗಿ ಅವನ/ಅವಳ ಸ್ವಂತ ಅಪಾಯದಲ್ಲಿ ಸೈಟ್ ಅನ್ನು ಬಳಸುತ್ತಾರೆ ಅಥವಾ ಪ್ರವೇಶಿಸುತ್ತಾರೆ ಮತ್ತು ಅವನ/ಅವಳ ನ್ಯಾಯವ್ಯಾಪ್ತಿಯ ಕಾನೂನುಗಳನ್ನು ಪಾಲಿಸಲು ಜವಾಬ್ದಾರರಾಗಿರುತ್ತಾರೆ.

  1. ಮಾಹಿತಿಯ ಬಳಕೆ: ಬಳಕೆದಾರರು ಉಲ್ಲೇಖದ ಸಲುವಾಗಿ ಮಾತ್ರ ಮಾಹಿತಿಯನ್ನು ಬಳಸುತ್ತಾರೆ, ಮತ್ತು ಅಂತಹ ಮಾಹಿತಿಯು ವೃತ್ತಿಪರ ತೀರ್ಪಿಗೆ ಪರ್ಯಾಯವಾಗಿರುವ (ಅಥವಾ ಹಾಗೆ ಬಳಸಲು) ಉದ್ದೇಶವಿರುವುದಿಲ್ಲ. ಮಾನವ ದೋಷ ಅಥವಾ ವೈದ್ಯಕೀಯ ವಿಜ್ಞಾನದಲ್ಲಿನ ಬದಲಾವಣೆಗಳ ಸಾಧ್ಯತೆಯ ದೃಷ್ಟಿಯಿಂದ, ಬಳಕೆದಾರನು ಸ್ವತಂತ್ರ ಮೂಲಗಳ ಮೂಲಕ ಮಾಹಿತಿಯನ್ನು ದೃಢೀಕರಿಸಿಕೊಳ್ಳಬೇಕುಬಳಕೆದಾರರು ಸೈಟ್ ಅನ್ನು ಉಚಿತವಾಗಿ ಬ್ರೌಸ್ ಮಾಡಬಹುದು, ಆದರೆ ಸೈಟಿನಿಂದ ಮಾಹಿತಿಯನ್ನು, ಯಾವುದೇ ಪಠ್ಯ, ಧ್ವನಿ, ಚಿತ್ರಗಳು, ಆಡಿಯೋ ಮತ್ತು ವಿಡಿಯೋ (ಒಟ್ಟಾಗಿ: "ಮಾಹಿತಿ") ಸೇರಿದಂತೆ, ಕಟ್ಟುನಿಟ್ಟಾಗಿ ವಾಣಿಜ್ಯೇತರ ಬಳಕೆಗಾಗಿ ಮಾತ್ರ ಪ್ರವೇಶಿಸಬಹುದು, ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಬಳಸಬಹುದು.  ಸಿಪ್ಲಾ ಲಿಮಿಟೆಡ್ ಅವರ ಲಿಖಿತ ಅನುಮತಿಯಿಲ್ಲದೆ, ಬಳಕೆದಾರರು ಮಾಹಿತಿಯನ್ನು ವಿತರಿಸುವುದು, ಮಾರ್ಪಡಿಸುವುದು, ರವಾನಿಸುವುದು, ಮರುಬಳಕೆ ಮಾಡುವುದು, ಮರುಪೋಸ್ಟ್ ಮಾಡುವುದು ಅಥವಾ ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವುದನ್ನು ಮಾಡಬಾರದು. ಸೈಟಿನಲ್ಲಿ ನೀವು ಓದುವ ಅಥವಾ ನೋಡುವ ಎಲ್ಲವನ್ನೂ ಅನ್ಯಥಾ ಗಮನಿಸಲಾಗದಿದ್ದರೆ ಕಾನೂನುಗಳ ಪ್ರಕಾರ ಕೃತಿಸ್ವಾಮ್ಯಗೊಳಿಸಲಾಗಿರುತ್ತದೆ ಎಂದು ನೀವು ಭಾವಿಸಲೇಬೇಕು; ಮತ್ತು ನಿಯಮಗಳು ಮತ್ತು ಷರತ್ತುಗಳಲ್ಲಿ ನಿಗದಿಪಡಿಸಿರುವುದನ್ನು ಹೊರತುಪಡಿಸಿ ಬಳಸಬಾರದು. ಮಾಹಿತಿ ಬಳಕೆಯು ಮೂರನೇ ಪಕ್ಷಗಳ ಯಾವುದೇ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಸಿಪ್ಲಾ ಲಿಮಿಟೆಡ್ ಸಮರ್ಥನೆ ನೀಡುವುದಿಲ್ಲ ಅಥವಾ ಪ್ರತಿನಿಧಿಸುವುದಿಲ್ಲ. ಸೈಟ್ ಬಳಕೆಯು ಮಾಹಿತಿಗೆ ಅಥವಾ ಸಿಪ್ಲಾ ಲಿಮಿಟೆಡ್ ಯಾವುದೇ ಕೃತಿಸ್ವಾಮ್ಯಕ್ಕೆ ಯಾವುದೇ ಪರವಾನಗಿ ಅಥವಾ ಹಕ್ಕನ್ನು ಒದಗಿಸುವುದಿಲ್ಲ. ಸೈಟ್ನಲ್ಲಿ ತೋರಿಸಿರುವ ಟ್ರೇಡ್ಮಾರ್ಕುಗಳು, ಲೋಗೊಗಳು, ಸೇವಾ ಗುರುತುಗಳು (ಒಟ್ಟಾಗಿ "ಟ್ರೇಡ್ಮಾರ್ಕುಗಳು") ಸಿಪ್ಲಾ ಲಿಮಿಟೆಡ್ ಅವರ ನೋಂದಾಯಿತ ಮತ್ತು ನೋಂದಾಯಿಸದ ಟ್ರೇಡ್ಮಾರ್ಕುಗಳಾಗಿವೆ. ಸಿಪ್ಲಾ ಲಿಮಿಟೆಡ್ ಅವರ ಲಿಖಿತ ಪೂರ್ವ-ಅನುಮತಿಯಿಲ್ಲದೆ ಸೈಟ್ನಲ್ಲಿರುವ ಯಾವುದೇ ಟ್ರೇಡ್ಮಾರ್ಕುಗಳು ​​ಅಥವಾ ಮಾಹಿತಿಯನ್ನು ಬಳಸಲು ಯಾವುದೇ ಪರವಾನಗಿಯನ್ನು ಅಥವಾ ಹಕ್ಕನ್ನು ನೀಡುತ್ತದೆಂದು ಅರ್ಥೈಸಬಾರದು.

  1. "ನಿಮ್ಮ ಪ್ರಶ್ನೆಗಳು, ಸರಳ ಉತ್ತರಗಳು" ಸೇವೆಗಳ ಬಳಕೆನಿಮ್ಮ ಪ್ರಶ್ನೆಗಳು, ಸೇವೆಗಳ ಸರಳ ಉತ್ತರಗಳ ವೈಶಿಷ್ಟ್ಯಗಳು, ಸಂಪರ್ಕ, ಸಮುದಾಯಗಳು, ಬ್ಲಾಗ್ ಅಥವಾ ಚರ್ಚಾ ಸೇವೆಯನ್ನು ("ನಿಮ್ಮ ಪ್ರಶ್ನೆಗಳು, ಸರಳ ಉತ್ತರಗಳ ಸೇವೆ") ಬಳಕೆದಾರರು ಬಳಸುವಾಗ, ನಿಮ್ಮ ಪ್ರಶ್ನೆಗಳು, ಸರಳ ಉತ್ತರಗಳ ಸೇವೆ ಮೂಲಕ ನೀವು ಅಪ್ಲೋಡ್ ಮಾಡುವ, ಪ್ರಕಟಿಸುವ, ರವಾನಿಸುವ, ಇಮೇಲ್ ಅಥವಾ ಅನ್ಯಥಾ ವಿತರಿಸುವ ಎಲ್ಲಾ ಸಂವಹನಗಳು, ಮಾಹಿತಿ, ದತ್ತಾಂಶ, ಪಠ್ಯ, ಸಂಗೀತ, ಧ್ವನಿ, ಗ್ರಾಫಿಕ್ಸ್, ಸಂದೇಶಗಳು ಮತ್ತು ಇತರ ವಸ್ತುಗಳಿಗೆ ("ವಿಷಯ"), ಬಳಕೆದಾರರು ಜವಾಬ್ದಾರನಾಗಿರುತ್ತಾರೆ. ನಿಮ್ಮ ಪ್ರಶ್ನೆಗಳು, ಸರಳ ಉತ್ತರಗಳ ಸೇವೆ ಮೂಲಕ ನಿಮ್ಮಿಂದ ಅಥವಾ ಯಾವುದೇ ಇತರ ಪಕ್ಷದಿಂದ ಪ್ರಕಟಿಸಲ್ಪಡುವ ವಿಷಯದ ಪರಿಣಾಮಗಳಿಗೆ ಸಿಪ್ಲಾ ಲಿಮಿಟೆಡ್ ಜವಾಬ್ದಾರರಾಗಿರುವುದಿಲ್ಲ, ಮತ್ತು ಹಾಗೆಯೇ, ಅಂತಹ ವಿಷಯದ ನಿಖರತೆ, ಸಮಗ್ರತೆ ಅಥವಾ ಗುಣಮಟ್ಟದ ಖಾತರಿ ನೀಡುವುದಿಲ್ಲ ನಿಮ್ಮ ಪ್ರಶ್ನೆಗಳು, ಸರಳ ಉತ್ತರ ಸೇವೆಯನ್ನು ಬಳಸುವುದರಿಂದ, ಅವಮಾನಪಡಿಸುವ ಅಥವಾ ಆಕ್ಷೇಪಾರ್ಹ ವಿಷಯಕ್ಕೆ ನೀವು ಒಡ್ಡಿಕೊಳ್ಳಬಹುದು ಎಂದು ನೀವು ಅರ್ಥಮಾಡಿಕೊಂಡಿದ್ದೀರಿ. ಸಿಪ್ಲಾ ಲಿಮಿಟೆಡ್ ಯಾವುದೇ ವಿಷಯಕ್ಕೆ ಯಾವುದೇ ರೀತಿಯಲ್ಲೂ ಯಾವುದೇ ಸಂದರ್ಭದಲ್ಲೂ ಅಥವಾ ಅಪ್ಲೋಡ್ ಮಾಡಲ್ಪಟ್ಟ, ಪ್ರಕಟಿಸಲ್ಪಟ್ಟ, ರವಾನಿಸಲ್ಪಟ್ಟ, ಇಮೇಲ್ ಮಾಡಲ್ಪಟ್ಟ, ಅಥವಾ ನಿಮ್ಮ ಪ್ರಶ್ನೆಗಳು, ಸರಳ ಉತ್ತರಗಳ ಸೇವೆ ಮೂಲಕ ಅನ್ಯಥಾ ಲಭ್ಯಗೊಳಿಸಲಾದ ಯಾವುದೇ ವಿಷಯದ ಬಳಕೆಯಿಂದ ಉಂಟಾದ ಯಾವುದೇ ನಷ್ಟ ಅಥವಾ ಯಾವುದೇ ಪ್ರಕಾರದ ಹಾನಿಗೆ ಜವಾಬ್ದಾರಿಯಲ್ಲ. ನಿಮಗೆ ಬೆದರಿಕೆ ಹಾಕಿದರೆ ಅಥವಾ ಬೇರೊಬ್ಬರು ಅಪಾಯದಲ್ಲಿರುವರೆಂದು ನಂಬುವ ಸಂದರ್ಭಗಳಲ್ಲಿ, ನಿಮ್ಮ ಸ್ಥಳೀಯ ಕಾನೂನು ಜಾರಿಮಾಡುವ ಏಜೆನ್ಸಿಯನ್ನು ತಕ್ಷಣವೇ ಸಂಪರ್ಕಿಸಬೇಕು. ಬಳಕೆದಾರರು ನಿಮ್ಮ ಪ್ರಶ್ನೆಗಳು, ಸರಳ ಉತ್ತರಗಳ ಸೇವೆಯನ್ನು ಬಳಸುವಾಗ, ಅವರು ಹೀಗೆ ಮಾಡದಿರಲು ಒಪ್ಪಿಕೊಳ್ಳುತ್ತಾರೆ:.

) ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಅಥವಾ ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸುವುದು;

) ಇತರರ ಬೌದ್ಧಿಕ ಆಸ್ತಿ ಹಕ್ಕುಗಳ ಮೇಲೆ ಅಥವಾ ಇತರರ ಗೌಪ್ಯತೆ ಅಥವಾ ಪ್ರಚಾರ ಹಕ್ಕುಗಳನ್ನು ಉಲ್ಲಂಘಿಸುವ ಯಾವುದೇ ವಿಷಯವನ್ನು ಪ್ರಕಟಿಸುವುದು, ಅಪ್ಲೋಡ್ ಮಾಡುವುದು, ಇಮೇಲ್ ಮಾಡುವುದು, ರವಾನಿಸುವುದು ಅಥವಾ ಅನ್ಯಥಾ ವಿತರಿಸುವುದು;

) ನಮ್ಮ ಸಂಪೂರ್ಣ ವಿವೇಚನೆಯಿಂದ ನಾವು ನಿರ್ಣಯಿಸಬಹುದಾದ ಯಾವುದೇ ಇತರ ವ್ಯಕ್ತಿಗೆ ಅಥವಾ ಅಸ್ತಿತ್ವಕ್ಕೆ ಕಾನೂನು ಬಾಹಿರ, ಹಾನಿಕಾರಕ, ಅಶ್ಲೀಲ, ಮಾನನಷ್ಟ, ಬೆದರಿಕೆ, ಕಿರುಕುಳ, ನಿಂದನೆ, ಮಾನಹಾನಿಕರ, ದ್ವೇಷಪೂರ್ಣ, ಅಥವಾ ಮುಜುಗರದ ಯಾವುದೇ ವಿಷಯವನ್ನು ಪ್ರಕಟಿಸುವುದು, ಅಪ್ಲೋಡ್ ಮಾಡುವುದು, ಇಮೇಲ್ ಮಾಡುವುದು, ರವಾನಿಸುವುದು ಅಥವಾ ಅನ್ಯಥಾ ವಿತರಿಸುವುದು;

) ಅಪ್ರಾಪ್ತ ವಯಸ್ಕರಿಗೆ ಯಾವುದೇ ರೀತಿಯಲ್ಲಿ ಹಾನಿಯುಂಟುಮಾಡುವುದು;

) ಜಾಹೀರಾತುಗಳನ್ನು ಅಥವಾ ವ್ಯವಹಾರ ವಿಜ್ಞಾಪನೆಗಳನ್ನು ಪ್ರಕಟಿಸುವುದು;

) ನಿಮ್ಮ ಪ್ರಶ್ನೆಗಳು, ಸರಳ ಉತ್ತರಗಳು ಸೇವೆ ಮೂಲಕ ರವಾನಿಸುವ ಯಾವುದೇ ವಿಷಯದ ಮೂಲವನ್ನು ಮರೆಮಾಚಲು ಹೆಡರ್ಗಳನ್ನು ಸುಳ್ಳಾಗಿ ಸೃಷ್ಟಿ ಮಾಡುವುದು ಅಥವಾ ಅನ್ಯಥಾ ಗುರುತಿಸುವಿಕೆನ್ನು ಬದಲಿಸುವುದು;

) ಸರಣಿ ಪತ್ರಗಳು, ಪಿರಮಿಡ್ ಯೋಜನೆಗಳು, ಬೇಡದ ಅಥವಾ ಅನಧಿಕೃತ ಜಾಹೀರಾತು ಅಥವಾ ಸ್ಪ್ಯಾಮ್ ಅನ್ನು ಪ್ರಕಟಿಸುವುದು, ಅಪ್ಲೋಡ್ ಮಾಡುವುದು, ಇಮೇಲ್ ಮಾಡುವುದು, ರವಾನಿಸುವುದು ಅಥವಾ ಅನ್ಯಥಾ ವಿತರಿಸುವುದು;

) ಮತ್ತೊಂದು ವ್ಯಕ್ತಿಯಂತೆ ಅಥವಾ ವ್ಯವಹಾರ ಇರುವಂತೆ ನಟಿಸುವುದು ಅಥವಾ ಮತ್ತೊಂದು ವ್ಯಕ್ತಿಯನ್ನು ಗುಪ್ತವಾಗಿ ಸುಳಿವು ನೀಡದೆ ಹಿಂಬಾಲಿಸುವುದು ಅಥವಾ ಅನ್ಯಥಾ ಕಿರುಕುಳ ನೀಡುವುದು;

) ಯಾವುದೇ ಕಂಪ್ಯೂಟರ್ ಸಾಫ್ಟ್ವೇರ್ ಅಥವಾ ಹಾರ್ಡ್ವೇರ್ ಬಳಕೆಗೆ ಅಡ್ಡಿಪಡಿಸಲು, ನಾಶಮಾಡಲು ಅಥವಾ ಸೀಮಿತಗೊಳಿಸಲು ವಿನ್ಯಾಸ ಮಾಡಲಾಗಿರುವ ವೈರಸ್ಸುಗಳನ್ನು ಅಥವಾ ಇತರ ಹಾನಿಕಾರಕ ಕಂಪ್ಯೂಟರ್ ಕೋಡನ್ನು ಪ್ರಕಟಿಸುವುದು, ಅಪ್ಲೋಡ್ ಮಾಡುವುದು, ಇಮೇಲ್ ಮಾಡುವುದು, ರವಾನಿಸುವುದು ಅಥವಾ ಅನ್ಯಥಾ ವಿತರಿಸುವುದು;

) ಇಮೇಲ್ ವಿಳಾಸಗಳು ಸೇರಿದಂತೆ ಇತರರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವುದು ಅಥವಾ ಅನ್ಯಥಾ ಸಂಗ್ರಹಿಸುವುದು;

) ಯಾವುದೇ ಅನ್ಯ ವ್ಯಕ್ತಿಗೆ ಅಥವಾ ಸಂಸ್ಥೆಗೆ ನಿಮ್ಮ ಗುರುತನ್ನು ಬಳಸಿ ಅಭಿಪ್ರಾಯಗಳನ್ನು ಪ್ರಕಟಿಸಲು ಅಥವಾ ವೀಕ್ಷಿಸಲು ಅನುಮತಿ ನೀಡುವುದು;

) ನಿಮ್ಮ ಪ್ರಶ್ನೆಗಳು, ಸರಳ ಉತ್ತರಗಳ ಸೇವೆಯಲ್ಲಿ ಅಥವಾ ನಿಮ್ಮ ಪ್ರಶ್ನೆಗಳು, ಸರಳ ಉತ್ತರಗಳು ಸೇವೆಗೆ ಸಂಪರ್ಕಗೊಂಡಿರುವ ಕಂಪ್ಯೂಟರುಗಳು, ನೆಟ್ವರ್ಕುಗಳು ಅಥವಾ ಇತರ ಹಾರ್ಡ್ವೇರ್ಗಳಲ್ಲಿ ಹಸ್ತಕ್ಷೇಪ ಮಾಡುವುದು ಅಥವಾ ತಡೆಒಡ್ಡುವುದು, ಅಥವಾ ನಿಮ್ಮ ಪ್ರಶ್ನೆಗಳು, ಸರಳ ಉತ್ತರಗಳು ಸೇವೆಗೆ ಸಂಪರ್ಕಗೊಂಡಿರುವ ನೆಟ್ವರ್ಕುಗಳ ಯಾವುದೇ ಅವಶ್ಯಕತೆಗಳು ಅಥವಾ ನೀತಿಗಳನ್ನು ನಿರ್ಲಕ್ಷಿಸುವುದು;

) ಬೇರೆ ಯಾವುದೇ ವ್ಯಕ್ತಿಯನ್ನು ನಿಮ್ಮ ಪ್ರಶ್ನೆಗಳು, ಸರಳ ಉತ್ತರಗಳ ಸೇವೆಯನ್ನು ಬಳಸುವುದನ್ನು ಅಥವಾ ಆನಂದಿಸುವುದನ್ನು ನಿರ್ಬಂಧಿಸುವಂಥಹ ಅಥವಾ ಪ್ರತಿಬಂಧಿಸುವಂಥಹ ಯಾವುದೇ ಇತರ ವರ್ತನೆಯಲ್ಲಿ ತೊಡಗುವುದು ಅಥವಾ, ನಮ್ಮ ಕೈ ಅಭಪ್ರಾಯದಲ್ಲಿ, ನಮ್ಮನ್ನು ಅಥವಾ ನಮ್ಮ ಗ್ರಾಹಕರನ್ನು ಅಥವಾ ಪೂರೈಕೆದಾರರನ್ನು ಯಾವುದೇ ರೀತಿಯ ಯಾವುದೇ ಹೊಣೆಗಾರಿಕೆಗೆ ಅಥವಾ ಹಾನಿಗೆ ಒಡ್ಡುವುದು;

) ಅನ್ಯ ಬಳಕೆದಾರರ ಗೌಪ್ಯತೆಯನ್ನು ಗೌರವಿಸಲು ವಿಫಲರಾಗುವುದು. ಇದು ಇನ್ನೊಬ್ಬ ಬಳಕೆದಾರರ ಪಾಸ್ವರ್ಡ್, ದೂರವಾಣಿ ಸಂಖ್ಯೆ, ವಿಳಾಸ, ಇನ್ಸ್ಟಂಟ್ ಮೆಸೆಂಜರ್ . ಡಿ. ಅಥವಾ ವಿಳಾಸ ಅಥವಾ ಯಾವುದೇ ಇತರ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಬಹಿರಂಗಪಡಿಸುವುದನ್ನು ಒಳಗೊಳ್ಳುತ್ತದೆ;

) ಸದಸ್ಯರ ಹೆಸರುಗಳನ್ನು ರಚಿಸುವುದು, ಅಥವಾ ಲೈಂಗಿಕವಾಗಿ ಸ್ಪಷ್ಟವಾಗಿರುವ, ಕಳಂಕ ತರುವ, ಬೆದರಿಕೆಯ, ನಿಂದನೀ ಅಥವಾ ಯಾವುದೇ ರೀತಿಯಲ್ಲಿ ಇತರರಿಗೆ ಹಾನಿಯುಂಟು ಮಾಡುವ ಸಂದೇಶಗಳನ್ನು, ಪಠ್ಯ ಅಥವಾ ಛಾಯಾಚಿತ್ರಗಳನ್ನು ಕೋರಿ ಪ್ರಕಟಿಸುವುದು ಅಥವಾ ಕಳುಹಿಸುವುದು; ಅಥವಾ ಸಿಪ್ಲಾ ಲಿಮಿಟೆಡ್ ಅವರು ಸೂಚನೆ ನೀಡದೆಯೇ ಕೆಳಗಿನವುಗಳಲ್ಲಿ ಯಾವುದೇ ಅಥವಾ ಎಲ್ಲವನ್ನೂ ಮಾಡಬಹುದು (ಆದರೆ ಹಾಗೆ ಮಾಡುವ ಬಾಧ್ಯತೆ ಹೊಂದಿಲ್ಲ):

i) ಒಂದು ಸಾರ್ವಜನಿಕ ಚಾಟ್ ಕೋಣೆಯಲ್ಲಿ ಸಂಭಾಷಣೆಯನ್ನು ರೆಕಾರ್ಡ್ ಮಾಡುವುದು ಅಥವಾ ಪೂರ್ವ-ಪರೀಕ್ಷಣೆಗೆ ಒಳಪಡಿಸುವುದು;

ii) ಒಂದು ಸಂವಹನವು ವಿಭಾಗದ ನಿಯಮಗಳಿಗೆ ಅನುಗುಣವಾಗಿಲ್ಲ ಎಂಬ ಆರೋಪವನ್ನು ತನಿಖೆ ಮಾಡುವುದು ಮತ್ತು ವಿಷಯವನ್ನು ತೆಗೆದುಹಾಕಲು ಅಥವಾ ತೆಗೆದುಹಾಕುವಿಕೆಯನ್ನು ವಿನಂತಿಸಲು ನಮ್ಮ ಕೈ ವಿವೇಚನೆಯಿಂದ ನಿರ್ಧರಿಸುವುದು;

iii) ನಿಂದನೀಯ, ಆಕ್ಷೇಪಾರ್ಹ, ಅಕ್ರಮ , ಅಥವಾ ವಿಚ್ಛಿದ್ರಕಾರಕ ಅಥವಾ ಬಳಕೆಯ ನಿಯಮಗಳನ್ನು ಅನ್ಯಥಾ ಅನುಸರಿಸಲು ವಿಫಲವಾದ ವಿಷಯವನ್ನು ತೆಗೆದುಹಾಕುವುದು;

iv) ನೀವು ಬಳಕೆಯ ನಿಯಮಗಳನ್ನು ಉಲ್ಲಂಘಿಸಿರುವಿರೆಂದು ನಾವು ನಿರ್ಣಯಿಸಿದ ಮೇಲೆ ನಿಮ್ಮ ಯಾವುದೇ ಅಥವಾ ಎಲ್ಲಾ ಪ್ರಶ್ನೆಗಳು, ಸರಳ ಪ್ರಶ್ನೆಗಳು ಸೇವೆಗಳಿಗೆ ನಿಮ್ಮ ಪ್ರವೇಶವನ್ನು ಅಂತ್ಯಗೊಳಿಸುವುದು; ಅಥವಾ

v) ವಿಷಯವನ್ನು ತಿದ್ದುಬಳಕೆದಾರರು ಯಾವುದೇ ವಿಷಯದ ಬಳಕೆಯೊಂದಿಗೆ ಸಂಬಂಧಿಸಿದ, ಅಂತಹ ವಿಷಯದ ನಿಖರತೆ, ಸಂಪೂರ್ಣತೆ ಅಥವಾ ಉಪಯುಕ್ತತೆಯ ಮೇಲೆ ಯಾವುದೇ ಅವಲಂಬನೆಯನ್ನು ಒಳಗೊಂಡು, ಎಲ್ಲಾ ಅಪಾಯಗಳನ್ನು ಮೌಲ್ಯಮಾಪನ ಮಾಡಲು ಮತ್ತು ಎದುರಿಸಲು ಒಪ್ಪಿಕೊಳ್ಳುತ್ತಾರೆ. ಸಿಪ್ಲಾ ಲಿಮಿಟೆಡ್ ನಿಮ್ಮ ಪ್ರಶ್ನೆಗಳು, ಸರಳ ಉತ್ತರಗಳ ಸೇವೆಯ ಬಳಕೆಯ ನಿಯಮಗಳ ಉಲ್ಲಂಘನೆಯು ನಡೆದಿದೆಯೇ ಎಂಬುದನ್ನು ನಿರ್ಧರಿಸಲು ಅಥವಾ ಅನ್ವಯವಾಗುವ ಯಾವುದೇ ಕಾನೂನು, ನಿಯಂತ್ರಣ, ಸರ್ಕಾರಿ ವಿನಂತಿಯನ್ನು ಅಥವಾ ಕಾನೂನು ಪ್ರಕ್ರಿಯೆಯನ್ನು ಪಾಲಿಸುವ ಸಲುವಾಗಿ ನಿಮ್ಮ ಬಳಕೆಯ ಬಗ್ಗೆ ಪರಿಶೋಧನೆ ನಡೆಸಬಹುದೆಂಬುದನ್ನು ಬಳಕೆದಾರರು ಸ್ವೀಕರಿಸತ್ತಾರೆ, ಸಮ್ಮತಿಸುತ್ತಾರೆ ಮತ್ತು ಒಪ್ಪಿಕೊಳ್ಳುತ್ತಾರೆ ನಿಮ್ಮ ಪ್ರಶ್ನೆಗಳು, ಸರಳ ಉತ್ತರಗಳ ಸೇವೆಯ, ನಿಮ್ಮ ವಿಷಯವು ಸೇರಿದಂತೆ, ಸಂಸ್ಕರಣೆ ಮತ್ತು ಸಂವಹನವು ವಿವಿಧ ನೆಟ್ವರ್ಕುಗಳು ​​ಮತ್ತು ಸಾಧನಗಳ ಮೂಲಕ ರವಾನಿಸುವಿಕೆಯನ್ನು ಮತ್ತು ಅಂತಹ ಸಂವಹನಗಳಿಗೆ ಅಗತ್ಯವಿರುವ ಅವಶ್ಯಕ ಬದಲಾವಣೆಗಳನ್ನು ಒಳಗೊಂಡಿರಬಹುದು ಎಂಬುದನ್ನು ಬಳಕೆದಾರರು ಒಪ್ಪಿಕೊಳ್ಳುತ್ತಾರೆ ಮತ್ತುಸ್ವೀಕರಿಸತ್ತಾರೆ.

ಬಳಕೆದಾರರ ನ್ಯಾಯಕ್ಷೇತ್ರದಲ್ಲಿ ವೃತ್ತಿಯನ್ನು ನಡೆಸಲು ಅಧಿಕಾರ ಪಡೆದಿರುವ ಪರವಾನಗಿ ಪಡೆದ ಆರೋಗ್ಯ ಆರೈಕೆ ಚಿಕಿತ್ಸಕರಿಂದ ವೈದ್ಯಕೀಯ ಸಲಹೆಯನ್ನು ಪಡೆಯುವುದಕ್ಕೆ ಪರ್ಯಾಯವಾಗಿ ಇಲ್ಲಿನ ವಿಷಯವನ್ನು ಬಳಸಬಾರದು. ಬಳಕೆದಾರರು, ಮೊದಲು ಅವನ/ಅವಳ ಫಿಜೀಶಿಯನ್‌ರ ಜೊತೆ ಅನ್ಯಥಾ ಸಮಾಲೋಚಿಸದೆ, ಅಥವಾ ಸೈಟ್ನಲ್ಲಿ ವಿವರಿಸಿರಬಹುದಾದ ಅಥವಾ ಶಿಫಾರಸು ಮಾಡಬಹುದಾದ ಯಾವುದೇ ಔಷಧೋಪಚಾರ, ಆಹಾರ ಪೂರಕ ಅಥವಾ ಚಿಕಿತ್ಸೆಗಳನ್ನು ತೆಗೆದುಕೊಳ್ಳಬಾರದು ಅಥವಾ ಆರಂಭಿಸಕೂಡದು.

  1. ವೈದ್ಯಕೀಯ ಮಾಹಿತಿಸಿಪ್ಲಾ ಲಿಮಿಟೆಡ್‌‌ನಿಂದ ಸೈಟ್ನಲ್ಲಿ ಯಾವುದೇ ಉತ್ಪನ್ನಗಳು ಅಥವಾ ವೈದ್ಯಕೀಯ ಸಾಧನಗಳಿಗೆ ಸಂಬಂಧಿಸಿದ ಮಾಹಿತಿಯು (ಒಟ್ಟಾರೆಯಾಗಿ "ಉತ್ಪನ್ನಗಳು") ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಒದಗಿಸಲ್ಪಡುತ್ತದೆಎಲ್ಲಾ ಉತ್ಪನ್ನಗಳು ಭಾರತದಲ್ಲಿ ಮಾತ್ರ ಲಭ್ಯವಿರುತ್ತವೆ ಮತ್ತು ಅರ್ಹ ವೈದ್ಯರು ಅಥವಾ ವೈದ್ಯಕೀಯ ವೃತ್ತಿಪರರ ಪ್ರಿಸ್ಕ್ರಿಪ್ಷನ್ ಮೇರೆಗೆ ಮಾತ್ರವೇ ಲಭ್ಯವಿರುತ್ತವೆ. ಉತ್ಪನ್ನಗಳು ಎಲ್ಲಾ ದೇಶಗಳಲ್ಲಿ ಲಭ್ಯವಿಲ್ಲದಿರಬಹುದು ಅಥವಾ ವಿಭಿನ್ನ ಬ್ರಾಂಡ್ ಹೆಸರಿನಲ್ಲಿ, ವಿವಿಧ ಶಕ್ತಿಗಳಲ್ಲಿ, ಅಥವಾ ವಿವಿಧ ಸೂಚನೆಗಳಡಿಯಲ್ಲಿ ಲಭ್ಯವಿರಬಹುದು

  2. ವೀಡಿಯೋ ಅನಂಗೀಕಾರಮಾಹಿತಿಯನ್ನು ವಿದ್ಯುನ್ಮಾನ ಮಾಧ್ಯಮಗಳ (ಮಿತಿಯಿಲ್ಲದೆ, ವೀಡಿಯೊಗಳು, ಫಿಜೀಶಿನ್ಸ್‌ ಮತ್ತು ಆರೋಗ್ಯ ರೈಕೆ ವೃತ್ತಿಪರರ ಸಂದರ್ಶನಗಳು) ಒಳಗೊಂಡು, ಲೇಖನಗಳ ಮೂಲಕ ರವಾನಿಸಬಹುದು. ಅಂತಹ ಮೂಲಗಳ ಮೂಲಕ ಒದಗಿಸಲಾಗುವ ಮಾಹಿತಿಯು ಅವುಗಳನ್ನು ವ್ಯಕ್ತಪಡಿಸುವ ವ್ಯಕ್ತಿಯ ಅಭಿಪ್ರಾಯಗಳಾಗಿರುತ್ತವೆ, ಮತ್ತು ಸಿಪ್ಲಾ ಲಿಮಿಟೆಡ್ ನೇರ ಅಥವಾ ಪರೋಕ್ಷ ನಿಯಂತ್ರಣದಲ್ಲಿರುವುದಿಲ್ಲ. ಯಾವುದೇ ಅಂತಹ ಮಾಹಿತಿ ಸೇರ್ಪಡೆಯು, ಯಾವುದೇ ಎಲೆಕ್ಟ್ರಾನಿಕ್ ವಿಧಾನ ಮೂಲಕ, ಅಲ್ಲಿ ಒದಗಿಸಲಾಗಿರುವ ಮಾಹಿತಿಯನ್ನು ಸಿಪ್ಲಾ ಲಿಮಿಟೆಡ್ ಅನುಮೋದಿಸುತ್ತದೆ ಯೆಂದು ಸೂಚಿಸುವುದಿಲ್ಲ.

  1. ಬಾಧ್ಯತೆ ಅನಂಗೀಕಾರಸೈಟ್ ಮೂಲಕ ಒಳಗೊಂಡಿರುವ ಅಥವಾ ಲಭ್ಯವಿರುವ ಮಾಹಿತಿ, ಸಾಫ್ಟ್ವೇರ್, ಉತ್ಪನ್ನಗಳು ಮತ್ತು ಸೇವೆಗಳು ತಪ್ಪುಗಳನ್ನು ಅಥವಾ ಮುದ್ರಣದ ದೋಷಗಳನ್ನು ಒಳಗೊಂಡಿರಬಹುದು. ಅಂತಹ ಯಾವುದೇ ದೋಷಗಳಿಗೆ ಸಿಪ್ಲಾ ಲಿಮಿಟೆಡ್ ಹೊಣೆಗಾರಿಕೆ ಅಥವಾ ಜವಾಬ್ದಾರಿಯನ್ನು ವಹಿಸುವುದಿಲ್ಲ ಮತ್ತು, ಮೇಲೆ ನಮೂದಿಸಿರುವ ಮಾಹಿತಿ ಕುರಿತು ಎಲ್ಲಾ ಪರೋಕ್ಷವಾಗಿ ವ್ಯಕ್ತವಾಗುವ ವಾರಂಟಿಗಳು ಮತ್ತು ವ್ಯಾಪಾರೀಕರಣದ ಸ್ಥಿತಿ, ಔಚಿತ್ಯ, ಶೀರ್ಷಿಕೆ, ಸಂಪೂರ್ಣತೆ ಮತ್ತು ಉಲ್ಲಂಘನೆಯಿಲ್ಲದಿರುವಿಕೆ ಮುಂತಾದವುಗಳು ಒಳಗೊಂಡು, ಎಲ್ಲಾ ವಾರಂಟಿಗಳು ಮತ್ತು ಷರತ್ತುಗಳಿಗೆ ಸಂಬಂಧಿಸಿದ ಬಾಧ್ಯತೆಗಳನ್ನು ಅನಂಗೀಕರಿಸುತ್ತದೆ. ಷರತ್ತಿನ ಉದ್ದೇಶಗಳಿಗಾಗಿ, ಸಿಪ್ಲಾ ಲಿಮಿಟೆಡ್ಕುರಿತ ಉಲ್ಲೇಖವು ಸಿಪ್ಲಾ ಲಿಮಿಟೆಡ್ ಅಂಗಸಂಸ್ಥೆಗಳು, ನಿರ್ದೇಶಕರು, ಅಧಿಕಾರಿಗಳು, ಉದ್ಯೋಗಿಗಳು ಸಲಹೆಗಾರರ ಬಗ್ಗೆ ಉಲ್ಲೇಖವನ್ನು ಸಹ ಒಳಗೊಳ್ಳುತ್ತದೆ ಎಂದು ಪರಿಗಣಿಸಲಾಗುತ್ತದೆ. ಸೈಟ್ನಲ್ಲಿರುವ ಮಾಹಿತಿಯು ನಿಖರವಾಗಿದೆ, ಪರಿಪೂರ್ಣವಾಗಿದೆ ಅಥವಾ ನವೀಕೃತವಾಗಿದೆ ಎಂದು ಸಿಪ್ಲಾ ಲಿಮಿಟೆಡ್ ಖಾತರಿ ನೀಡುವುದಿಲ್ಲ. ಸಿಪ್ಲಾ ಲಿಮಿಟೆಡ್ ಪ್ರಸ್ತುತ ಸೈಟ್‌ನಲ್ಲಿ ಮಾಹಿತಿಯನ್ನು ಉಳಿಸಿಕೊಳ್ಳಲು ಪ್ರತಿ ಪ್ರಯತ್ನವನ್ನೂ ಮಾಡಲು ಉದ್ದೇಶಿಸಿತ್ತಾದರೂ, ಸೈಟ್ ಮಾಲೀಕರು ಮತ್ತು ಕೊಡುಗೆದಾರರು ಸೈಟ್ನಲ್ಲಿ ಒಳಗೊಂಡಿರುವ ಮಾಹಿತಿಯ ನಿಖರತೆ, ಪರಿಪೂರ್ಣತೆ ಅಥವಾ ಸಮರ್ಪಕತೆಯ ಬಗ್ಗೆಕ್ಲೇಮ್‌ಗಳನ್ನು ಮಾಡುವುದಿಲ್ಲ, ಭರವಸೆಗಳನ್ನು ಅಥವಾ ಖಾತರಿಗಳನ್ನು ನೀಡುವುದಿಲ್ಲ. ಪ್ರತಿಯೊಂದು ಪ್ರಕರಣದ ನಿರ್ದಿಷ್ಟ ಸಂದರ್ಭಗಳಿಗೆ ಸಲಹೆಯನ್ನು ಅನುಗುಣವಾಗಿರಿಸಬೇಕಾಗಿರುವುದರಿಂದ, ಸೈಟ್ನಲ್ಲಿರುವ ಏನನ್ನೂ ಅರ್ಹ ವೈದ್ಯಕೀಯ ಪ್ರಾಕ್ಟೀಷನರ್ ಸಲಹೆಯ ಬದಲಿಯಾಗಿ ಬಳಸಕೂಡದು. ಬಳಕೆದಾರರು ಅವನ/ಅವಳ ಆರೋಗ್ಯದ ಬಗ್ಗೆ ಯಾವುದೇ ಪ್ರಶ್ನೆಗಳಿಗೆ, ಯಾವುದೇ ನಿರ್ದಿಷ್ಟ ವೈದ್ಯಕೀಯ ಸಮಸ್ಯೆ / ತೊಂದರೆ ಅಥವಾ ಯಾವುದೇ ಚಿಕಿತ್ಸೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು, ಯಾವಾಗಲೂ ವೈದ್ಯರನ್ನು ಅಥವಾ ಇತರ ಅರ್ಹ ಆರೋಗ್ಯ ರೈಕೆ ವೃತ್ತಿಪರರನ್ನು ಸಂಪರ್ಕಿಸಬೇಕು.

  1. ಬಳಕೆದಾರರ ಮಾಹಿತಿಎಲೆಕ್ಟ್ರಾನಿಕ್ ಮೇಲ್ ಅಥವಾ ಅನ್ಯ ರೀತಿಯಲ್ಲಿ ಸೈಟ್ನಲ್ಲಿ ಬಳಕೆದಾರರು ರವಾನಿಸುವ ಅಥವಾ ಪ್ರಕಟಿಸುವ ಯಾವುದೇ ಸಂವಹನ ಅಥವಾ ವಸ್ತುವು, ಯಾವುದೇ ದತ್ತಾಂಶ, ಪ್ರಶ್ನೆಗಳು, ಅಭಿಪ್ರಾಯಗಳು, ಸಲಹೆಗಳು ಸೇರಿದಂತೆ ("ಬಳಕೆದಾರರ ಮಾಹಿತಿ "), ಗೌಪ್ಯವಲ್ಲದ ಮತ್ತು ಸ್ವಾಮ್ಯವಲ್ಲದ ಮಾಹಿತಿಯಾಗಿರುತ್ತದೆ ಮತ್ತು ಹಾಗೆ ನಿರ್ವಹಿಸಲಾಗುವುದು ಮತ್ತು ಸಿಪ್ಲಾ ಲಿಮಿಟೆಡ್ಅವರ ಆಸ್ತಿಯಾಗುತ್ತದೆ. ಸಿಪ್ಲಾ ಲಿಮಿಟೆಡ್ ಅಥವಾ ಅದರ ಯಾವುದೇ ಅಂಗಸಂಸ್ಥೆಗಳು ಬಳಕೆದಾರರಿಗೆ ಯಾವುದೇ ಪರಿಹಾರವಿಲ್ಲದೆಯೇ, ಯಾವುದೇ ಉದ್ದೇಶಕ್ಕಾಗಿ, ಮರು ತ್ಪಾದನೆ, ಬಹಿರಂಗಪಡಿಸುವಿಕೆ, ಪ್ರಸರಣ, ಪ್ರಕಟಣೆ, ಪ್ರಸಾರ ಅಥವಾ ಹೆಚ್ಚಿನ ಪ್ರಕಟಣೆ ಸೇರಿದಂತೆ, ಆದರೆ ಸೀಮಿತವಲ್ಲದ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸಬಹುದು ಅಥವಾ ಬಳಸಿಕೊಳ್ಳಬಹುದು. ಸಿಪ್ಲಾ ಲಿಮಿಟೆಡ್, ಅಥವಾ ಅದರ ಯಾವುದೇ ಅಂಗಸಂಸ್ಥೆಗಳು, ಯಾವುದೇ ಬಳಕೆದಾರರ ಮಾಹಿತಿಯಲ್ಲಿ ಒಳಗೊಂಡಿರುವ ಯಾವುದೇ ಕಲ್ಪನೆಗಳು, ಪರಿಕಲ್ಪನೆಗಳು, ಜ್ಞಾನ ಅಥವಾ ತಂತ್ರಗಳನ್ನು, ಉತ್ಪನ್ನಗಳ ಅಭಿವೃದ್ಧಿ, ತಯಾರಿಕೆ ಮತ್ತು ಮಾರಾಟವನ್ನು ಒಳಗೊಂಡು ಆದರೆ ಸೀಮಿತವಲ್ಲದ ಬಳಕೆದಾರರಿಗೆ ಯಾವುದೇ ಪರಿಹಾರವಿಲ್ಲದೆ, ಯಾವುದೇ ಉದ್ದೇಶಕ್ಕಾಗಿ ಶೇಖರಿಸಿಡಲು, ಬಳಸಲು ಸ್ವತಂತ್ರರು ಎಂದು ಬಳಕೆದಾರರು ಕೂಡಾ ಸ್ಪಷ್ಟವಾಗಿ ಒಪ್ಪಿಕೊಳ್ಳುತ್ತಾರೆ. ಸಿಪ್ಲಾ ಲಿಮಿಟೆಡ್ ನಿಯಂತ್ರಣದಲ್ಲಿನ ಬದಲಾವಣೆಯಾದ ಸಂದರ್ಭದಲ್ಲಿ, ಬಳಕೆದಾರರ ಮಾಹಿತಿಯನ್ನು ಹೊಸ ಪಕ್ಷಕ್ಕೆ ವರ್ಗಾಯಿಸುವ ಹಕ್ಕನ್ನು ಸಿಪ್ಲಾ ಲಿಮಿಟೆಡ್ ಕಾಯ್ದಿರಿಸಿಕೊಂಡಿದೆಮೇಲೆ ಹೇಳಿದ್ದರೂ ಸಹ, ಸೈಟ್ ಅನ್ನು ಬದಲಿಸುವುದರಿಂದ ಅಥವಾ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುವ, ನಾಗರಿಕ ಹೊಣೆಗಾರಿಕೆನ್ನು ಹೆಚ್ಚಿಸಬಹುದಾದ ಅಥವಾ ಅನ್ಯಥಾ ಯಾವುದೇ ಕಾನೂನನ್ನು ಉಲ್ಲಂಘಿಸುವ, ಯಾವುದೇ ಕಾನೂನುಬಾಹಿರ, ಬೆದರಿಕೆಯ, ಅಪಮಾನಕರ, ಮಾನನಷ್ಟದ, ಅಶ್ಲೀಲ, ನಾಚಿಕೆಗೇಡಿನ, ಕೆರಳಿಸುವ, ಅಗೌರವದ ವಿಷಯವನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದರಿಂದ ಬಳಕೆದಾರರನ್ನು ನಿಷೇಧಿಸಲಾಗಿದೆ. ಅಂತಹ ಮಾಹಿತಿ ಅಥವಾ ವಸ್ತುಗಳನ್ನು ಪ್ರಕಟಿಸುವವರ ಗುರುತನ್ನು ಬಹಿರಂಗಪಡಿಸಬೇಕು ಎಂದು ಸಿಪ್ಲಾ ಲಿಮಿಟೆಡ್ಗೆ ವಿನಂತಿಸುವ ಯಾವುದೇ ಕಾನೂನು ಜಾರಿಮಾಡುವ ಪ್ರಾಧಿಕಾರಗಳೊಂದಿಗೆ ಅಥವಾ ನ್ಯಾಯಾಲಯದ ಆದೇಶದೊಂದಿಗೆ ಸಿಪ್ಲಾ ಲಿಮಿಟೆಡ್ಸಹಕರಿಸುತ್ತದೆ. ಸಿಪ್ಲಾ ಲಿಮಿಟೆಡ್ಮೇಲೆ ಬಳಕೆದಾರರ ನಡವಳಿಕೆಯದಿಂದ ಅಥವಾ ಅದರ ಪರಿಣಾಮವಾಗಿ ಉಂಟಾಗುವ, ಸೂಕ್ತವಾದ ವಕೀಲ ಶುಲ್ಕಗಳು ಸೇರಿದಂತೆ, ಯಾವುದೇ ಕ್ಲೇಮ್, ಬೇಡಿಕೆ ಅಥವಾ ಹಾನಿಯಿಂದ ಸಿಪ್ಲಾ ಲಿಮಿಟೆಡ್, ಅದರ ಅಂಗಸಂಸ್ಥೆಗಳು, ನಿರ್ದೇಶಕರು, ಉದ್ಯೋಗಿಗಳು, ಸಲಹೆಗಾರರನ್ನು ನಿರ್ಬಾಧಿತಗೊಳಿಸಲು ಹಾಗೂ ಹಾನಿಯಿಂದ ರಕ್ಷಿಸಲು ಬಳಕೆದಾರರು ಒಪ್ಪಿಕೊಳ್ಳುತ್ತಾರೆ.

  1. ಲಿಂಕ್ಗಳು ಸೈಟ್ ಮೂರನೇ ಪಕ್ಷದ ವೆಬ್ಸೈಟ್ಗಳಿಗೆ ಲಿಂಕ್ಗಳನ್ನು ಹೊಂದಿರಬಹುದಾಗಿದ್ದು, ಅವುಗಳನ್ನು ಬಳಕೆದಾರರ ಅನುಕೂಲಕ್ಕೆ ನೀಡಲಾಗುತ್ತದೆ. ಉಪಕರಣಗಳು ವೃತ್ತಿಪರ ಸಲಹೆಯನ್ನು ನೀಡುವುದಿಲ್ಲ ಅಥವಾ ನಿರ್ದಿಷ್ಟ ಉತ್ಪನ್ನಗಳನ್ನು ಶಿಫಾರಸು ಮಾಡುವುದಿಲ್ಲ. ಫಿಜೀಶಿಯನ್ನರು ಮತ್ತು ಇತರ ಆರೋಗ್ಯ ರೈಕೆ ವೃತ್ತಿಪರರು ಅವರು ಒದಗಿಸುವ ಮಾಹಿತಿಯ ಪ್ರಕಾರ ತಮ್ಮದೇ ಸ್ವಂತ ವೈದ್ಯಕೀಯ ನಿರ್ಣಯಗಳನ್ನು ಅಭ್ಯಾಸ ಮಾಡಲೇಬೇಕು. ಬಳಕೆದಾರರು ತಮ್ಮ ಸ್ವಂತ ಅಪಾಯದ ಮೇಲೆ ಹಾಗೆ ಮಾಡುತ್ತಾರೆ. ಲಿಂಕ್ಗಳು ಸಿಪ್ಲಾ ಲಿಮಿಟೆಡ್ ನಿಯಂತ್ರಣದಡಿಯಲ್ಲಿರುವುದಿಲ್ಲ, ಮತ್ತು ಯಾವುದೇ ಲಿಂಕ್ ಅನ್ನು ಸೇರಿಸುವುದು ಸಿಪ್ಲಾ ಲಿಮಿಟೆಡ್ನಿಂದ ಅಂತಹ ವೆಬ್ಸೈಟ್ ಅನುಮೋದನೆಯನ್ನು ಸೂಚಿಸುವುದಿಲ್ಲ. ಸಿಪ್ಲಾ ಲಿಮಿಟೆಡ್ ಅಥವಾ ಅದರ ಯಾವುದೇ ಅಂಗಸಂಸ್ಥೆಗಳು, ನಿರ್ದೇಶಕರು, ಉದ್ಯೋಗಿಗಳು, ಅಧಿಕಾರಿಗಳು, ಸಲಹೆಗಾರರು ಕ್ಲೈಮ್ ಮಾಡುವುದಿಲ್ಲ, ಮತ್ತು ಅಂತಹ-ಮೂರನೇ ಪಕ್ಷದ ವೆಬ್ಸೈಟ್ಗಳಲ್ಲಿ ಕಂಡುಬರುವ ಯಾವುದೇ ಮಾಹಿತಿಗೆ ಜವಾಬ್ದಾರರಾಗಿರುವುದಿಲ್ಲ.

  1. ವರ್ಗಾವಣೆ ಮಾಡಲಾಗುವುದಿಲ್ಲ: ಸೈಟ್ಅನ್ನು ಮತ್ತು ಸಂಬಂಧಿತ ವೆಬ್ಸೈಟ್ಗಳನ್ನು ಪ್ರವೇಶಿಸುವ ಬಳಕೆದಾರರ ಹಕ್ಕನ್ನು ಖಚಿತವಾಗಿಯೂ ವರ್ಗಾವಣೆ ಮಾಡಲಾಗುವುದಿಲ್ಲ. ಮಾಹಿತಿ ಅಥವಾ ದಾಖಲೆಗಳನ್ನು ಪಡೆಯಲು ಬಳಕೆದಾರರಿಗೆ ನೀಡಲ್ಪಟ್ಟಿರುವ ಯಾವುದೇ ಪಾಸ್ವರ್ಡ್, ಹಕ್ಕು ಅಥವಾ ಪ್ರವೇಶಾವಕಾಶವನ್ನು ವರ್ಗಾವಣೆ ಮಾಡಲಾಗುವುದಿಲ್ಲ ಮತ್ತು ಅವು ಸಿಪ್ಲಾ ಲಿಮಿಟೆಡ್ ಮೀಸಲಾದ ಆಸ್ತಿಯಾಗಿ ಉಳಿಯುತ್ತವೆ.

  1. ಸಲಹೆ ಇಲ್ಲಸೈಟ್ ಅನ್ನು ಸಾಮಾನ್ಯ ಮಾಹಿತಿಯನ್ನು ನೀಡುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಸಿಪ್ಲಾ ಲಿಮಿಟೆಡ್ನಲ್ಲಿ (ಅಥವಾ ಅದರ ಯಾವುದೇ ಅಂಗಸಂಸ್ಥೆಗಳಲ್ಲಿ) ಅಥವಾ ವೈದ್ಯಕೀಯ ಸಲಹೆಯಲ್ಲಿ ಹೂಡಿಕೆ ಮಾಡಲು ಒಂದು ಆಹ್ವಾನವನ್ನು ನೀಡಲು ಸೈಟ್ ಉದ್ದೇಶಿಸುವುದಿಲ್ಲ, ಅಥವಾ ಉತ್ಪನ್ನಗಳ ಸೂಕ್ತವಾದ ಬಳಕೆಗೆ ಸೂಚನೆಗಳನ್ನು ನೀಡುವುದಿಲ್ಲ.

  1. ಬಾಧ್ಯತೆಯ ಮಿತಿ : ಸಿಪ್ಲಾ ಲಿಮಿಟೆಡ್ ಸೈಟ್ನಲ್ಲಿ ಒದಗಿಸಿದ ಮಾಹಿತಿಯ ನಿಖರತೆ, ಪರಿಪೂರ್ಣತೆ, ಅಸ್ತಿತ್ವತೆ ಅಥವಾ ಉಲ್ಲಂಘನೆ ಇಲ್ಲದಿರುವಿಕೆಯ ಸಮರ್ಥನೆಯನ್ನು ನೀಡುವುದಿಲ್ಲ. ಮತ್ತು (ಬಿ) ವ್ಯಕ್ತಪಡಿಸುವ ಸೂಚಿಸಿದ ವಾರಂಟಿಗನ್ನು ಅಥವಾ ವ್ಯಾಪಾರೀಕರಣದ ನಿಯಮಗಳನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ಫಿಟ್‌ನೆಸ್‌ ಮತ್ತು ಉಲ್ಲಂಘನೆ ಇಲ್ಲದಿರುವಿಕೆನ್ನು ಒಳಗೊಂಡು ಸೂಚಿಸುವ ಅಥವಾ ಶಾಸನಬಾದ್ಯಧ ಎಲ್ಲಾ ವಾರಂಟಿಗನ್ನು ಮತ್ತು ನಿಯಮಗನ್ನು ಸ್ಪಷ್ಟವಾಗಿ ಮಿತಿಯಿಲ್ಲದೆ ಸ್ಪಷ್ಟವಾಗಿ ನಿರಾಕರಿಸುತ್ತದೆ. ಮಾಹಿತಿಯನ್ನು ವಿಶ್ವಾಸಾರ್ಹವೆಂದು ನಂಬಲಾದ ಮೂಲಗಳಿಂದ ಪಡೆಯಲಾಗಿದೆಯಾದರೂ, ಸಿಪ್ಲಾ ಲಿಮಿಟೆಡ್ ಾಗಲಿ ಅಥವಾ ಸಿಪ್ಲಾ ಲಿಮಿಟೆಡ್ ವಿಷಯ ಪೂರೈಕೆದಾರರೇ ಆಗಲಿ ಮಾಹಿತಿಯ ನಿಖರತೆಗೆ ಖಾತರಿ ನೀಡುವುದಿಲ್ಲ. ಯಾವುದೇ ಮಾಹಿತಿಯನ್ನು ಅವಲಂಬಿಸುವ ಮೊದಲು ಬಳಕೆದಾರರು ತಜ್ಞರ ಸಲಹೆಯನ್ನು ಪಡೆಯತಕ್ಕದ್ದು. ಸೈಟ್ ಬಳಕೆಗೆ ಬಳಕೆದಾರರು ಸ್ವತಃ ಹೊಣೆಗಾರರು. ನೇರವಾಗಿ ಅಥವಾ ಪರೋಕ್ಷವಾಗಿ, ನಿರೀಕ್ಷಿತ ಅಥವಾ ಅನಿರೀಕ್ಷಿತ, ; ಅಥವಾ ಬಳಕೆದಾರರಿಗೆ ಮುಂಚಿತವಾಗಿ ಸಾಧ್ಯತೆಯನ್ನು ತಿಳಿಸಲಾಗಿರುವ, ಅಥವಾ ಸೈಟ್ ಸೃಷ್ಟಿ ಅಥವಾ ಬಳಕೆ ಅಥವಾ ಅವಲಂಬನೆಗೆ ಸಂಬಂಧಿಸಿ, ಯಾವುದೇ ಇತರ ಮೂರನೇ-ಪಕ್ಷದ ಸೈಟ್, ಯಾವುದೇ ಸೈಟ್ನಲ್ಲಿ ಒಳಗೊಂಡಿರುವ ಲಿಂಕ್ಗಳು ​​ಅಥವಾ ಸೈಟ್ ಬಳಸಲು ಅಸಮರ್ಥತೆಯ ಪರಿಣಾಮವಾಗಿನ ಯಾವುದೇ ರೀತಿಯ ಅಥವಾ ಸ್ವರೂಪದ ಯಾವುದೇ ಹಾನಿಗಳನ್ನು ಒಳಗೊಂಡು, ಮಿತಿಯಿಲ್ಲದೆ, ನೇರ, ಪರೋಕ್ಷ, ಪ್ರಾಸಂಗಿಕ, ಪರಿಣಾಮಕಾರಿ, ಅಥವಾ ಯಾವುದೇ ಕ್ಲೇಮ್‌ಗಳು ಅಥವಾ ನಷ್ಟಗಳಿಗೆ,ಯಾವುದೇ ಸಂದರ್ಭಗಳಲ್ಲಿ ಸಿಪ್ಲಾ ಲಿಮಿಟೆಡ್ ಅಥವಾ ಅದರ ಯಾವುದೇ ಅಂಗಸಂಸ್ಥೆಗಳು, ನಿರ್ದೇಶಕರು, ನೌಕರರು, ಅಧಿಕಾರಿಗಳು, ಸಲಹೆಗಾರರು ಹೊಣೆಗಾರರಲ್ಲ ಮಿತಿಯು ನಿಮ್ಮ ಕಂಪ್ಯೂಟರ್ ಉಪಕರಣಗಳಿಗೆ ಹಾನಿ ಅಥವಾ ನಿಮ್ಮ ಕಂಪ್ಯೂಟರ್ ಉಪಕರಣಗಳನ್ನು ಸೋಂಕಿಸುವ ಯಾವುದೇ ವೈರಸ್ಸುಗಳನ್ನು ಒಳಗೊಂಡಿದೆ. ಸೈಟ್ನಲ್ಲಿನ ಪ್ರಕಟಣೆಗಳ ಪರಸ್ಪರ ಸಂವೇದನಾತ್ಮಕ ಸ್ವರೂಪದ ಕಾರಣ ಬಳಕೆದಾರರಿಂದ ಪ್ರಕಟಿತ ಯಾವುದೇ ವಸ್ತುಗಳ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿಪ್ಲಾ ಲಿಮಿಟೆಡ್ ಸಾಧ್ಯವಿಲ್ಲ. ಬಳಕೆದಾರರು ಮಾಡಿದ ಆಲೋಚನೆಗಳು, ಸಲಹೆಗಳು, ಅಭಿಪ್ರಾಯಗಳು, ಹೇಳಿಕೆಗಳು ಮತ್ತು ವೀಕ್ಷಣೆಗಳು, ಮತ್ತು ಬಳಕೆದಾರರಿಂದ ಒದಗಿಸಲ್ಪಟ್ಟ ಯಾವುದೇ ಪಠ್ಯ, ದತ್ತಾಂಶ, ಛಾಯಾಚಿತ್ರಗಳು, ವೀಡಿಯೊ, ಸಂಗೀತ, ಧ್ವನಿ, ಚಾಟ್, ಸಂದೇಶಗಳು, ಕಡತಗಳು ಅಥವಾ ಇತರ ಸಾಮಗ್ರಿಗಳನ್ನು ("ಬಳಕೆದಾರರ ಸಲ್ಲಿಕೆಗಳು") ಸಿಪ್ಲಾ ಲಿಮಿಟೆಡ್ ಅನುಮೋದಿಸುವುದಿಲ್ಲ, ಮತ್ತು ಸೈಟ್ನಲ್ಲಿ ಪ್ರಕಟಿಸಿದ ಯಾವುದೇ ಬಳಕೆದಾರರ ಸಲ್ಲಿಕೆಯ ವಿಶ್ವಾಸಾರ್ಹತೆ, ನಿಖರತೆ, ಅಥವಾ ಗುಣಮಟ್ಟಕ್ಕೆ ಸಿಪ್ಲಾ ಲಿಮಿಟೆಡ್ ಗ್ಯಾರಂಟಿ ನೀಡುವುದಿಲ್ಲ. ಯಾವುದೇ ಬಳಕೆದಾರರ ಸಲ್ಲಿಕೆಯನ್ನು, ಅಂತಹ ಬಳಕೆದಾರ ಸಲ್ಲಿಕೆಯ ನಿಖರತೆ, ಪರಿಪೂರ್ಣತೆ ಅಥವಾ ಉಪಯುಕ್ತತೆಯ ಮೇಲೆ ಯಾವುದೇ ಅವಲಂಬನೆಯು ಒಳಗೊಂಡು, ಬಳಕೆದಾರರು ಮೌಲ್ಯಮಾಪನ ಮಾಡುತ್ತಾರೆ ಮತ್ತು ಬಳಕೆಗೆ ಸಂಬಂಧಿಸಿದ ಯಾವುದೇ ಅಪಾಯಗಳಿಗೆ ಜವಾಬ್ದಾರರಾಗಿರುತ್ತಾರೆ, ಸೈಟ್ನಲ್ಲಿ ಸಲ್ಲಿಸಿದ ಎಲ್ಲಾ ಬಳಕೆದಾರ ಸಲ್ಲಿಕೆಗಳಿಗೆ ಬಳಕೆದಾರ ಸಲ್ಲಿಕೆಗಳನ್ನು ಮೂಲತಃ ಪ್ರಕಟಿಸಿದ ವ್ಯಕ್ತಿಯು ಕೈ ಜವಾಬ್ದಾರರಾಗಿರುತ್ತಾರೆ, ಮತ್ತು ಅಂತಹ ಬಳಕೆದಾರ ಸಲ್ಲಿಕೆಗಳ ಪರಿಣಾಮವಾಗಿ ಯಾವುದೇ ಹಾನಿ, ನಷ್ಟ,ಕ್ಲೇಮ್‌, ಕ್ರಮ ಅಥವಾ ಬಾಧ್ಯತೆಗೆ ಬಳಕೆದಾರರ ಏಕೈಕ ಉಪಾಯವು ವೈಯಕ್ತಿಕ ಬಳಕೆದಾರರ ವಿರುದ್ಧವಾಗಿರುತ್ತದೆ . ಬಳಕೆದಾರರು ತಮ್ಮ ಸ್ವಂತ ಬಳಕೆದಾರ ಸಲ್ಲಿಕೆಗಳಿಗೆ ಮತ್ತು ಅವುಗಳನ್ನು ಪ್ರಕಟಣೆ ಮಾಡುವ ಅಥವಾ ಪ್ರಕಟಿಸುವ ಪರಿಣಾಮಗಳಿಗೆ ಏಕೈಕವಾಗಿ ಜವಾಬ್ದಾರರಾಗಿರುತ್ತಾರೆ. ಬಳಕೆದಾರರು ತಮ್ಮ ಆಯಾಯ ಬಳಕೆದಾರ ಸಲ್ಲಿಕೆಗಳ ಎಲ್ಲಾ ಮಾಲೀಕತ್ವ ಹಕ್ಕುಗಳನ್ನು ಉಳಿಸಿಕೊಳ್ಳುವರು. ಆದರೂ, ಸೈಟ್ನಲ್ಲಿ ಬಳಕೆದಾರ ಸಲ್ಲಿಕೆಗಳನ್ನು ಸಲ್ಲಿಸುವ ಮೂಲಕ, ಬಳಕೆದಾರರು ಸಿಪ್ಲಾ ಲಿಮಿಟೆಡ್ಗೆ ಸಾರ್ವಕಾಲಿಕ, ವಿಶ್ವವ್ಯಾಪಿ, ಮೀಸಲಾಗಿಲ್ಲದ, ರಾಯಧನ-ಮುಕ್ತ, ಉಪಪರವಾನಗಿ-ಸಾಧ್ಯದ, ವರ್ಗಾವಣೆ ಮಾಡುವ ಹಕ್ಕು ಮತ್ತು ಬಳಕೆ, ನಕಲು ಮಾಡಲು, ವಿತರಿಸಲು ಮತ್ತು ವ್ಯುತ್ಪನ್ನ ಕೃತಿಗಳನ್ನು ತಯಾರಿಸಲು, ಪ್ರದರ್ಶಿಸಲು ಮತ್ತು ಸೈಟ್ ಮತ್ತು ಸಿಪ್ಲಾ ಲಿಮಿಟೆಡ್ ವ್ಯವಹಾರಕ್ಕೆ ಸಂಬಂಧಿಸಿದಂತೆ, ಪ್ರಸ್ತುತ ತಿಳಿದಿರುವ ಅಥವಾ ಭವಿಷ್ಯದಲ್ಲಿ ಅಭಿವೃದ್ಧಿಪಡಿಸಲಾಗುವ ಯಾವುದೇ ಮಾಧ್ಯಮದಲ್ಲಿ ಸೈಟ್ ಭಾಗಶಃ ಅಥವಾ ಎಲ್ಲವನ್ನೂ (ಮತ್ತು ಅದರ ವ್ಯುತ್ಪನ್ನ ಕೃತಿಗಳು) ಯಾವುದೇ ಮಿತಿಯಿಲ್ಲದೆ ಪ್ರೋತ್ಸಾಹಿಸಲು ಮತ್ತು ಪುನರ್ವಿತರಣೆ ಮಾಡುವುದನ್ನು ಒಳಗೊಂಡು ಬಳಕೆದಾರ ಸಲ್ಲಿಕೆಗಳನ್ನು ನಿರ್ವಹಿಸಲು ಪರವಾನಗಿ ನೀಡುತ್ತಾರೆ. ಬಳಕೆದಾರರು ನೀಡಿದ ಸದರಿ ಪರವಾನಗಿಯು ಸೈಟ್ನಿಂದ ಬಳಕೆದಾರರ ಸಲ್ಲಿಕೆಯ ತೆಗೆದುಹಾಕುವಿಕೆ ಅಥವಾ ಅಳಿಸುವಿಕೆಯ ನಂತರ ಸ್ವಯಂಚಾಲಿತವಾಗಿ ಮುಕ್ತಾಯಗೊಳ್ಳುತ್ತದೆ. ಬಳಕೆದಾರರು ಸೈಟ್ನಲ್ಲಿ ಬಳಕೆದಾರ ಸಲ್ಲಿಕೆಗಳನ್ನು ಪ್ರಕಟ ಮಾಡಲು ಆಯ್ಕೆ ಮಾಡಿದರೆ, ಬಳಕೆದಾರರ ಅಂತಹ ಬಳಕೆದಾರ ಸಲ್ಲಿಕೆಯು ಅನ್ವಯಿಸುವ ಕಾನೂನುಗಳಿಗೆ, ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ನಡವಳಿಕೆಯ ನಿಯಮಗಳು ಮತ್ತು ನಡತೆಯ ಮಾನದಂಡಗಳಿಗೆ, ಅನುಗುಣವಾಗಿರುವುದನ್ನು ಪ್ರತಿನಿಧಿಸುತ್ತದೆ. ಬಳಕೆದಾರರ ಸೈಟ್ ಬಳಕೆಯು ಸಿಪ್ಲಾ ಲಿಮಿಟೆಡ್ನೊಂದಿಗೆ ಸಂಬಂಧಿಸಿದ ಬಳಕೆದಾರರ ಕಾನೂನು ಹಕ್ಕುಗಳ ಬಗ್ಗೆ ತಮ್ಮ ಗೌರವವನ್ನು ಸೂಚಿಸುತ್ತದೆ. ಯಾವುದೇ ಬಳಕೆದಾರ ಸಲ್ಲಿಕೆಗೆ ಸಂಬಂಧಿಸಿದಂತೆ ಸಿಪ್ಲಾ ಲಿಮಿಟೆಡ್ ಯಾವುದೇ ಗೌಪ್ಯತೆಯನ್ನು ಖಾತರಿಪಡಿಸುವುದಿಲ್ಲ ಮತ್ತು ವಿಷಯದಲ್ಲಿ ಯಾವುದೇ ಹೊಣೆಗಾರಿಕೆಯಿಂದ ಸಿಪ್ಲಾ ಲಿಮಿಟೆಡ್ ಅನ್ನು ನಿರ್ದಿಷ್ಟವಾಗಿ ಬಿಡುಗಡೆ ಮಾಡಲಾಗುತ್ತದೆ ಎಂಬುದನ್ನು ಬಳಕೆದಾರರು ಅರ್ಥಮಾಡಿಕೊಳ್ಳುತ್ತಾರೆ. ಬಳಕೆದಾರರ ಸಲ್ಲಿಕೆಗಳೊಂದಿಗೆ ಸಂಬಂಧಿಸಿದಂತೆ ಯಾವುದೇ ಮತ್ತು ಎಲ್ಲಾ ಬಾಧ್ಯತೆಯನ್ನೂ ಸಿಪ್ಲಾ ಲಿಮಿಟೆಡ್ ಸ್ಪಷ್ಟವಾಗಿ ನಿರಾಕರಿಸುತ್ತದೆ. ವಿಷಯ ಮತ್ತು ಬಳಕೆದಾರ ಸಲ್ಲಿಕೆಗಳನ್ನು ತನ್ನ ಸ್ವಂತ ವಿವೇಚನೆಯಿಂದ ಮತ್ತು ಮುನ್ಸೂಚನೆ ಇಲ್ಲದೆ ತೆಗೆದುಹಾಕುವ ಹಕ್ಕನ್ನು ಸಿಪ್ಲಾ ಲಿಮಿಟೆಡ್ ಕಾಯ್ದಿರಿಸಿಕೊಂಡಿದೆ. ಸಿಪ್ಲಾ ಲಿಮಿಟೆಡ್ ಬಳಕೆದಾರರಿಗೆ ಯಾವುದೇ ಸಮಯದಲ್ಲಿ ತನ್ನದೇ ಸ್ವಂತ ವಿವೇಚನೆಯನುಸಾರ ಮತ್ತು ಮುನ್ಸೂಚನೆಯಿಲ್ಲದೆ ಪ್ರವೇಶವನ್ನು ಅಂತ್ಯಗೊಳಿಸುವ ಹಕ್ಕನ್ನು ಸಹ ಕಾಯ್ದಿರಿಸಿಕೊಂಡಿದೆ. ಸೈಟ್ನಲ್ಲಿರುವ ಮಾಹಿತಿಯ ಬಳಕೆಯಿಂದ ಬಳಕೆದಾರರಿಗೆ ಉಂಟಾಗುವ ಯಾವುದೇ ನಷ್ಟ, ಹಾನಿ, ಘಾಸಿಗೆ, ವೈದ್ಯಕೀಯ ಬೇಜವಾಬ್ದಾರಿ ಅಥವಾ ಸೇವೆ ಒದಗಿಸುವವರ ವೃತ್ತಿಪರ ದುರ್ವರ್ತನೆ ಅಥವಾ ಲೋಪಗಳು / ವರ್ತನೆಯಂತಹ ಇತರ ಮೂರನೇ ಪಕ್ಷದ ವರ್ತನೆಯಿಂದಾಗಿ ಉಂಟಾಗುವ ಕಾನೂನು ಕ್ರಮ ಒಳಗೊಂಡು, ಸಿಪ್ಲಾ ಲಿಮಿಟೆಡ್ ಅಥವಾ ಅದರ ನಿರ್ದೇಶಕರು, ಉದ್ಯೋಗಿಗಳು ಅಥವಾ ಏಜೆಂಟುಗಳು, ಜವಾಬ್ದಾರರಾಗಿರುವುದಿಲ್ಲ / ಬಾಧ್ಯರಾಗಿರುವುದಿಲ್ಲ. ಅಲ್ಲದೆ, ಬಳಕೆದಾರರು ಮಾಡಿದ ಯಾವುದೇ ಕ್ಲೇಮ್ನ ಪರಿಣಾಮದಿಂದ ಸೇವಾ ದಾತರಿಗೆ ಉಂಟಾದ ಯಾವುದೇ ನಷ್ಟ ಅಥವಾ ಹಾನಿಗಾಗಿ, ವೃತ್ತಿಪರ ದುಷ್ಕೃತ್ಯ ಅಥವಾ ಸೇವಾದಾತರ ವೃತ್ತಿಯನ್ನು ನಿಯಂತ್ರಿಸುವ ಅನ್ವಯಿಸುವ ಕಾನೂನುಗಳ ಉಲ್ಲಂಘನೆಯಿಂದ ಉಂಟಾಗುವ ಯಾವುದೇ ಕಾನೂನು ಕ್ರಮವನ್ನು ಒಳಗೊಂಡು, ಸಿಪ್ಲಾ ಲಿಮಿಟೆಡ್ ಅಥವಾ ಅದರ ನಿರ್ದೇಶಕರು, ಉದ್ಯೋಗಿಗಳು ಅಥವಾ ಏಜೆಂಟುಗಳು ಜವಾಬ್ದಾರರಾಗಿರುವುದಿಲ್ಲ / ಬಾಧ್ಯರಾಗಿರುವುದಿಲ್ಲ. ಸಿಪ್ಲಾ ಲಿಮಿಟೆಡ್ ಹೊಣೆಗಾರಿಕೆಯ ಅನುಪಸ್ಥಿತಿಗೆ ಸಂಬಂಧಿಸಿರುವ ನಿಬಂಧನೆಯು ಯಾವುದೇ ಕಾರಣಕ್ಕಾಗಿ ನಿಯಮಗಳ ಮತ್ತು ಬಳಕೆಯ ಅಂತ್ಯ ಅಥವಾ ಮುಕ್ತಾಯದ ನಂತರವೂ ಸಿಂಧುವಾಗಿರುತ್ತದೆ. ಸಿಪ್ಲಾ ಲಿಮಿಟೆಡ್ ತನ್ನ ಗುಣಮಟ್ಟದ, ಲಭ್ಯತೆ ಅಥವಾ ನಿಖರತೆಯನ್ನು ಒಳಗೊಂಡಂತೆ ಸೈಟ್ ಮಾಹಿತಿಯನ್ನು ಬಳಸುವುದಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತ ಅಥವಾ ಸೂಚಿತ ವಾರಂಟಿಗಳನ್ನು ನಿರಾಕರಿಸುತ್ತದೆ.

  1. ಕೃತಿಸ್ವಾಮ್ಯ ಅಧಿಸೂಚನೆ ಸೈಟ್ ಮತ್ತು ಅದರಲ್ಲಿರುವ ಸಂಪೂರ್ಣ ವಿಷಯವು ಕೃತಿಸ್ವಾಮ್ಯ ರಕ್ಷಣೆಗೆ ಒಳಪಟ್ಟಿರುತ್ತದೆ. ಸಿಪ್ಲಾ ಲಿಮಿಟೆಡ್ ಮುಂಚಿನ ಸ್ಪಷ್ಟವಾದ ಸಮ್ಮತಿಯಿಲ್ಲದೆ ಸೈಟ್ ವಿಷಯಗಳನ್ನು ಯಾವುದೇ ಸಂದರ್ಭಗಳಲ್ಲಿ ಪ್ರತಿ ಮಾಡಬಾರದು. ಸ್ಪಷ್ಟವಾಗಿ ಇಲ್ಲಿ ಅಧಿಕಾರ ನೀಡಿದ ಹೊರತು, ಸಿಪ್ಲಾ ಲಿಮಿಟೆಡ್ ಸ್ಪಷ್ಟವಾದ ಪೂರ್ವ ಲಿಖಿತ ಸಮ್ಮತಿಯಿಲ್ಲದೇ, ಸೈಟ್ನಲ್ಲಿ ಒಳಗೊಂಡಿರುವ ಯಾವುದೇ ಮಾಹಿತಿ, ಪಠ್ಯ, ಚಿತ್ರಗಳು, ದಸ್ತಾವೇಜುಗಳನ್ನು ಬಳಕೆದಾರರು ಪ್ರದರ್ಶನ, ಡೌನ್ಲೋಡ್, ವಿತರಣೆ, ನಕಲು, ಮರುಪ್ರಕಟಣೆ ಅಥವಾ ರವಾನೆ ಮಾಡಬಾರದು. ಆದಾಗ್ಯೂ, ಬಳಕೆದಾರರು ಬಳಕೆದಾರರ ಹೆಸರು ಮತ್ತು ಪಾಸ್ವರ್ಡ್ ಮೂಲಕ ಪ್ರವೇಶಿಸಬಹುದಾದ ಸೈಟ್ "ಡೌನ್ಲೋಡ್" ವಿಭಾಗದಲ್ಲಿ ಒಳಗೊಂಡಿರುವ ಜ್ಞಾನ ಡೇಟಾಬೇಸ್ನಿಂದ ಯಾವುದೇ ವಿಷಯಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಅಂತಹ ಡೌನ್ ಲೋಡ್ನಿಂದ ಬರುವ ಎಲ್ಲಾ ವಿಷಯಗಳನ್ನು ಯಾವಾಗಲೂ ಸಿಪ್ಲಾ ಲಿಮಿಟೆಡ್ನಿಂದ ಬಂದಿದೆಯೆಂದು ಅಂಗೀಕರಿಸಬೇಕು ಮತ್ತು ಹಾಗೆ ಸೂಚಿಸಬೇಕು. ಸೈಟ್ನಿಂದ ಯಾವುದೇ ವಿಷಯದ, ಸೂಕ್ತವಾದ ಉಲ್ಲೇಖವಿಲ್ಲದ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಮತ್ತು, ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಮತ್ತು ಕೃತಿಸ್ವಾಮ್ಯ ಉಲ್ಲಂಘನೆಗಾಗಿ ಸಂಭಾವ್ಯ ವಿತ್ತೀಯ ಹಾನಿಗಳು ಸೇರಿದಂತೆ ಬಳಕೆದಾರರಿಗೆ ಸಿವಿಲ್ ಮತ್ತು ಕ್ರಿಮಿನಲ್ ದಂಡಗಳಿಗೆ ಒಳಪಟ್ಟಿರುತ್ತದೆ. ಸೈಟ್ನಲ್ಲಿ ಕಾಣಬಹುದಾದ, ಸಿಪ್ಲಾ ಲಿಮಿಟೆಡ್ ಆಸ್ತಿಯಾಗಿರದ ಯಾವುದೇ ವಿಷಯ, ಟ್ರೇಡ್ಮಾರ್ಕ್(ಗಳು), ಅಥವಾ ಇತರ ವಸ್ತುವು ಅನುಕ್ರಮವಾದ ಮಾಲೀಕನ() ಕೃತಿಸ್ವಾಮ್ಯವಾಗಿ ಉಳಿಯುತ್ತವೆ. ಯಾವುದೇ ರೀತಿಯಲ್ಲಿ ಸಿಪ್ಲಾ ಲಿಮಿಟೆಡ್ ಅಂತಹ ವಸ್ತುಗಳ ಮಾಲೀಕತ್ವವನ್ನು ಮಾಡುವುದಿಲ್ಲ ಅಥವಾ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ, ಮತ್ತು ಅಂತಹ ವಸ್ತುಗಳ ಯಾವುದೇ ಬಳಕೆಗೆ ನೀವು ಅವುಗಳ ಮಾಲೀಕರಿಂದ ಕಾನೂನು ಸಮ್ಮತಿಯನ್ನು ಪಡೆಯಬೇಕು. ಬಳಕೆದಾರರು ಯಾವುದೇ ಮಾಹಿತಿಯನ್ನು ಬಳಸಲು ಉದ್ದೇಶಿಸಿದರೆ ಅಥವಾ ಮಾಹಿತಿಯ ಭಾಗಗಳನ್ನು ವಿಭಿನ್ನ ವೆಬ್ಸೈಟ್ನಲ್ಲಿ ಸೇರಿಸಲು ಬಯಸಿದರೆ, ಸಿಪ್ಲಾ ಲಿಮಿಟೆಡ್‌‌ನಿಂದ ಮೊದಲು ಪೂರ್ವ ಲಿಖಿತ ಅನುಮತಿಯನ್ನು ಬಳಕೆದಾರರು ಪಡೆಯಬೇಕು. ಬಳಕೆದಾರರು ಅಕ್ರಮ, ಅಶ್ಲೀಲ ಅಥವಾ ಆಕ್ರಮಣಕಾರಿ ವಿಷಯದ ಪ್ರಕಟಣೆ ಅಥವಾ ಪ್ರಚಾರದಲ್ಲಿ ತೊಡಗಿದ್ದರೆ ಅಥವಾ ಸಿಪ್ಲಾ ಲಿಮಿಟೆಡ್ ಖ್ಯಾತಿಯ ಮೇಲೆ ಯಾವುದೇ ರೀತಿಯಲ್ಲಿ ಲಿಂಕ್‌ ನಕಾರಾತ್ಮಕವಾಗಿ ಪರಿಣಾಮ ಬೀರುತ್ತಿದ್ದರೆ, ಸಿಪ್ಲಾ ಲಿಮಿಟೆಡ್ ಸೈಟ್ಗೆ ಲಿಂಕ್ ಮಾಡಲು ಬಳಕೆದಾರರಿಗೆ ಅನುವು ಮಾಡುವುದಿಲ್ಲ.

  1. ಇತರೆ: ಒಂದು ಕಾನೂನುಬದ್ಧ ವ್ಯಾಪ್ತಿಯ ನ್ಯಾಯಾಲಯವು ನಿಯಮಗಳು ಮತ್ತು ಷರತ್ತುಗಳ ಯಾವುದೇ ನಿಬಂಧನೆಯು ಕಾನೂನುಬಾಹಿರ, ಅಮಾನ್ಯ ಅಥವಾ ನಿರರ್ಥಕ ಎಂದು ತೀರ್ಪು ನೀಡಿದರೆ, ನಿಯಮಗಳು ಮತ್ತು ಷರತ್ತುಗಳ ಉಳಿದ ನಿಬಂಧನೆಗಳು ಪೂರ್ಣವಾಗಿ ಸಿಂಧುವಾಗಿರುತ್ತವೆ ಮತ್ತು ಜಾರಿಯಲ್ಲಿರುತ್ತವೆ.

  1. ಆಡಳಿತ ಕಾನೂನು: ಮುಂಬೈ (ಭಾರತ) ನಲ್ಲಿರುವ ಸಿಪ್ಲಾ ಲಿಮಿಟೆಡ್ನಿಂದ ಸೈಟ್ ರಚಿಸಲ್ಪಟ್ಟಿದೆ ಮತ್ತು ನಿಯಂತ್ರಿಸಲ್ಪಡುತ್ತದೆ; ಹಾಗಾಗಿ ಭಾರತದ ಕಾನೂನುಗಳು ಅನ್ವಯವಾಗುತ್ತವೆ; ಮುಂಬೈನಲ್ಲಿರುವ ನ್ಯಾಯಾಲಯಗಳು ಮಾತ್ರ ನಿಯಮಗಳು ಮತ್ತು ಷರತ್ತುಗಳಿಗೆ ಸಂಬಂಧಿಸಿದಂತೆ ನ್ಯಾ ವ್ಯಾಪ್ತಿಯನ್ನು ಹೊಂದಿರುತ್ತವೆ. ಸಿಪ್ಲಾ ಲಿಮಿಟೆಡ್ ಕಾಲಕಾಲಕ್ಕೆ ಅಗತ್ಯವಿರುವಂತೆ ಸೂಚನೆ ನೀಡದೆ ಸೈಟ್ ಬಳಕೆಯ ಮತ್ತು ಮಾಹಿತಿಯ ನಿಯಮಗಳನ್ನು ಏಕಪಕ್ಷೀಯವಾಗಿ ಬದಲಿಸುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ. ಬಳಕೆದಾರರು ಪ್ರತಿ ಬಾರಿ ಸೈಟ್ಗೆ ಭೇಟಿ ನೀಡುವಾಗ ನಿಯತ ನವೀಕರಣಗಳಿಗಾಗಿ ನಿಯಮಗಳನ್ನು ಓದಬೇಕೆಂದು ಸಲಹೆ ನೀಡಲಾಗುತ್ತದೆ. ಸೈಟ್ನಲ್ಲಿ ಒಳಗೊಂಡಿರುವ ಯಾವುದೇ ಮಾಹಿತಿಯನ್ನು ಸೂಚನೆ ನೀಡದೆ ಯಾವುದೇ ಕಾರಣಕ್ಕಾಗಿ ಅಳಿಸಿಹಾಕುವ ಹಕ್ಕನ್ನು ಸಿಪ್ಲಾ ಲಿಮಿಟೆಡ್ ಕಾಯ್ದಿರಿಸಿಕೊಳ್ಳುತ್ತದೆ.

Please Select Your Preferred Language