ಗೌಪ್ಯತಾ ನೀತಿ

ಈ ವೆಬ್‌ಸೈಟ್ "www.breathefree.com" (ಇನ್ನು ಮುಂದೆ "ವೆಬ್‌ಸೈಟ್" ಎಂದು ಉಲ್ಲೇಖಿಸಲ್ಪಡುತ್ತದೆ) ಅನ್ನು  ಪ್ರವೇಶಿಸುವ ಮೊದಲು ಅಥವಾ ಬಳಸುವ ಮೊದಲು ಈ ಗೌಪ್ಯತಾ ನೀತಿ ಹೇಳಿಕೆಯನ್ನು ಎಚ್ಚರಿಕೆಯಿಂದ ಓದಬೇಕು ಮತ್ತು ಪರಿಶೀಲಿಸಬೇಕು ಎಂದು  ಸಿಪ್ಲಾ ಲಿಮಿಟೆಡ್ ಅವರು ನಿಮ್ಮನ್ನು ಕೋರುತ್ತಾರೆ. ನೀವು ಈ ವೆಬ್‌ಸೈಟ್ ಅನ್ನು ಪ್ರವೇಶಿಸಲು ಅಥವಾ ಬಳಸಲು ಮುಂದುವರೆದರೆ, ಯಾವುದೇ ವಿನಾಯಿತಿಗಳಿಲ್ಲದೆ, ನೀವು ಈ ಗೌಪ್ಯತಾ ನೀತಿ ಹೇಳಿಕೆಗೆ ಬದ್ಧರಾಗಿರಲು ಒಪ್ಪುತ್ತೀರಿ. ಈ ಗೌಪ್ಯತಾ ನೀತಿ ಹೇಳಿಕೆಗೆ ನೀವು ಒಪ್ಪುವುದಿಲ್ಲವಾದರೆ ನೀವು ಈ ವೆಬ್‌ಸೈಟ್ ಅನ್ನು ಪ್ರವೇಶಿಸಬಾರದು ಅಥವಾ ಬಳಸಬಾರದು. ಸಿಪ್ಲಾ ಲಿಮಿಟೆಡ್, ಅದರ ಅಧೀನ ಸಂಸ್ಥೆಗಳು, ಅದರ ಅಂಗಸಂಸ್ಥೆಗಳು ಮತ್ತು ಅದರ ಸಮೂಹ ಕಂಪನಿಗಳು (ಇನ್ನು ಮುಂದೆ "ಸಿಪ್ಲಾ" ಎಂದು ಉಲ್ಲೇಖಿಸಲಾಗುತ್ತದೆ) ಈ ಮಾಹಿತಿಯನ್ನು, ಯಾವುದೇ ಮುನ್ಸೂಚನೆಯಿಲ್ಲದೆ  ಯಾವುದೇ ಸಮಯದಲ್ಲಿ ಸೇರಿಸಲು, ತೆಗೆದುಹಾಕಲು ಅಥವಾ ಮಾರ್ಪಡಿಸುವ ಹಕ್ಕನ್ನು ಕಾಯ್ದಿರಿಸಿಕೊಳ್ಳುತ್ತವೆ.

ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯ ಸಂಗ್ರಹಣೆ

1. ವೆಬ್‌ಸೈಟ್ ಅನ್ನು ಅದು ತಾನಾಗಿಯೇ ಯಾವುದೇ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಸಂಗ್ರಹಣೆ ಮಾಡುವಂತೆ ಮತ್ತು/ಅಥವಾ ಸ್ವೀಕರಿಸುವಂತೆ ವಿನ್ಯಾಸಗೊಳಿಸಲಾಗಿಲ್ಲ. ನೀವು ವೆಬ್‌ಸೈಟ್ ಅನ್ನು ಪ್ರವೇಶಿಸದ ಹೊರತು ಮತ್ತು / ಅಥವಾ ಯಾವುದೇ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಒದಗಿಸದ ಹೊರತು ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸಲು ಸಿಪ್ಲಾಗೆ ಸಾಧ್ಯವಿಲ್ಲ. 

2. ಮಾಹಿತಿಯ ಸಕ್ರಿಯ ಸಂಗ್ರಹಣೆ: ಈ ವೆಬ್‌ಸೈಟ್‌ಗಳ ದತ್ತಾಂಶ ಕ್ಷೇತ್ರಗಳಲ್ಲಿ ನೀವು ನಮೂದಿಸುವ ವೈಯಕ್ತಿಕ ಮಾಹಿತಿಯನ್ನು ಸಿಪ್ಲಾವು ಸಂಗ್ರಹಿಸುತ್ತದೆ. ಉದಾಹರಣೆಗೆ, ವಿವಿಧ ವಿಷಯಗಳ ಬಗ್ಗೆ ಮಾಹಿತಿ ಸ್ವೀಕರಿಸಲು ನಿಮ್ಮ ಹೆಸರು, ಅಂಚೆ ವಿಳಾಸ, ಇಮೇಲ್ ವಿಳಾಸ, ಮತ್ತು / ಅಥವಾ ಇತರ ಮಾಹಿತಿಯನ್ನು ನೀವು ಸಲ್ಲಿಸಬಹುದು. ನಿಮ್ಮ ಗೌಪ್ಯತೆಯನ್ನು ರಕ್ಷಿಸಲು, ನಿರ್ದಿಷ್ಟವಾಗಿ ವಿನಂತಿಸಲ್ಪಡದ ಯಾವುದೇ ಮಾಹಿತಿಯನ್ನು ನೀವು ಸಿಪ್ಲಾಗೆ ನೀಡಬಾರದು.

3. ಮಾಹಿತಿಯ ಪರೋಕ್ಷ ಸಂಗ್ರಹಣೆ: ಸಿಪ್ಲಾ ವೆಬ್‌ಸೈಟ್‌ಗಳು ನೀವು ಸಿಪ್ಲಾ ವೆಬ್ ಸೈಟ್‌ಗಳಿಗೆ ಭೇಟಿಗಳನ್ನು ನೀಡುವುದರ ಕುರಿತ ಮಾಹಿತಿಯನ್ನು, ಅಂತಹ ಮಾಹಿತಿಯನ್ನು ನೀವು ಸಕ್ರಿಯವಾಗಿ ಸಲ್ಲಿಸದಿದ್ದರೂ ಸಂಗ್ರಹಿಸಬಹುದು. ಈ ಮಾಹಿತಿಯನ್ನು ಕುಕಿಗಳು, ಇಂಟರ್‌ನೆಟ್ ಟ್ಯಾಗುಗಳು, ಮತ್ತು ವೆಬ್‌ ಬೀಕನ್‌ಗಳಂಥಹ ವಿವಿಧ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಂಗ್ರಹಿಸಬಹುದು. ನೀವು ಆಗಷ್ಟೇ ಭೇಟಿ ನೀಡಿದ ವೆಬ್‌ಸೈಟ್‌ನ ಯುಆರ್‌ಎಲ್‌, ಇಂಟರ್‌ನೆಟ್‌ ಪ್ರೊಟೊಕೊಲ್  (ಐಪಿ) ವಿಳಾಸಗಳು, ಜಿಪಿಎಸ್ ಸ್ಥಳ ದತ್ತಾಂಶ, ಮೊಬೈಲ್ ಫೋನ್ ಸೇವಾ ಪೂರೈಕೆದಾರರು, ಆಪರೇಟಿಂಗ್ ಸಿಸ್ಟಮ್‌ನ ವಿವರಗಳು,  ನಿಮ್ಮ ಕಂಪ್ಯೂಟರಿನ ಬ್ರೌಸರ್ ಆವೃತ್ತಿ ಗಳಂತಹ ಈ ಮಾಹಿತಿಯ ಪೈಕಿ ಕೆಲವನ್ನು ವೆಬ್‌ಸೈಟ್  ಸೆರಿಹಿಡಿಯಬಹುದು. ಪರೋಕ್ಷ ಮಾಹಿತಿ ಸಂಗ್ರಹಣೆ ತಂತ್ರಜ್ಞಾನಗಳು, ಉತ್ತಮ ಸೇವೆ ನೀಡಲು, ಗ್ರಾಹಕರ ಆದ್ಯತೆಗಳ ಆಧಾರದ ಮೇಲೆ  ಸೈಟ್‌ಗಳನ್ನು  ಗ್ರಾಹಕೀಯಗೊಳಿಸಲು, ಅಂಕಿಅಂಶಗಳನ್ನು ಸಂಕಲನ ಮಾಡಲು, ಪ್ರವೃತ್ತಿಗಳನ್ನು ವಿಶ್ಲೇಷಿಸಲು, ಮತ್ತು ಅನ್ಯಥಾ ವೆಬ್‌ಸೈಟ್ ಅನ್ನು ನಿರ್ವಹಿಸಲು ಮತ್ತು ಸುಧಾರಿಸಲು ಸಿಪ್ಲಾಗೆ ಅನುವು ಮಾಡಿಕೊಡುವ ಮೂಲಕ, ನಿಮ್ಮ ವೆಬ್‌ಸೈಟ್ ಬಳಕೆಯನ್ನು ಸುಲಭಗೊಳಿಸಬಹುದು. ಈ ತಂತ್ರಜ್ಞಾನಗಳಿಂದ ಸಂಗ್ರಹಿಸಲಾದ ಅಂತಹ ಮಾಹಿತಿಯು, ಗುರುತಿಸಬಹುದಾದ ಹೆಚ್ಚುವರಿ ಮಾಹಿತಿಯಿಲ್ಲದೆ, ನಿಮ್ಮನ್ನು ಗುರುತಿಸುವ ಸಲುವಾಗಿ ಬಳಸಲು ಸಾಧ್ಯವಿಲ್ಲ.

ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯ ಉದ್ದೇಶಿತ ಬಳಕೆ

4. ನೀವು ವೆಬ್‌ಸೈಟ್ ಮೂಲಕ ಒದಗಿಸುವ ವೈಯಕ್ತಿಕ ಮಾಹಿತಿಯನ್ನು, ಸಿಪ್ಲಾ ಅವರು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು, ಪರಿಣಾಮಕಾರಿ ಸಂವಹನ ನಡೆಸಲು ಮತ್ತು ಸಮರ್ಥ ಗ್ರಾಹಕ ಸೇವೆಯನ್ನು ನಿಮಗೆ ಒದಗಿಸುವ ಸಲುವಾಗಿ ಬಳಸುತ್ತಾರೆ. ನೀವು ವೆಬ್‌ಸೈಟ್‌ನಲ್ಲಿನ ಫಾರ್ಮ್ ಅಥವಾ ದತ್ತಾಂಶ ಕ್ಷೇತ್ರದಲ್ಲಿ ವೈಯಕ್ತಿಕ ಮಾಹಿತಿಯನ್ನು ನಮೂದಿಸಿದ ನಂತರ, ನೀವು ಆಗಾಗ್ಗೆ ಭೇಟಿ ನೀಡುವ ವೆಬ್‌ಸೈಟ್‌ನ ವಿಭಾಗಗಳು, ಮತ್ತು ನೀವು ಆಯ್ಕೆ ಮಾಡಿದರೆ, ನಿಮ್ಮ ಬಳಕೆದಾರ ಐಡಿಗಳಂಥಹ ನಿಮ್ಮ ವೈಯಕ್ತಿಕ ಆದ್ಯತೆಗಳನ್ನು "ನೆನಪಿಟ್ಟುಕೊಳ್ಳಲು" ಆ ವೆಬ್‌ಸೈಟ್‌ಗೆ ಅನುವುಮಾಡಿಕೊಡಲು, ಸಿಪ್ಲಾ ಅವರು ಕೆಲವು ಗುರುತಿಸುವ ತಂತ್ರಜ್ಞಾನಗಳನ್ನು ಬಳಸಬಹುದು .

5. ಸಿಪ್ಲಾ ಅನ್ವಯಿಸುವ ಎಲ್ಲಾ ಕಾನೂನುಗಳಿಗೆ ಅನುಗುಣವಾಗಿ ನಿಮ್ಮ ಮಾಹಿತಿಯನ್ನು ಸಂಗ್ರಹಿಸುತ್ತದೆ, ಶೇಖರಿಸುತ್ತದೆ ಮತ್ತು ಬಳಸಿಕೊಳ್ಳುತ್ತದೆ. ವೆಬ್‌ಸೈಟ್‌ನ ಫಾರ್ಮ್‌ಗಳಲ್ಲಿ ಅಥವಾ ದತ್ತಾಂಶ ಕ್ಷೇತ್ರಗಳಲ್ಲಿ ಯಾವುದೇ ವೈಯಕ್ತಿಕ ಮಾಹಿತಿಯನ್ನು ನಮೂದಿಸದಿರಲು ಆಯ್ಕೆ ಮಾಡುವ ಮೂಲಕ, ಸಿಪ್ಲಾವು ನಿಮ್ಮ ಬಗ್ಗೆ ಸ್ವೀಕರಿಸುವ ವೈಯಕ್ತಿಕ ಮಾಹಿತಿಯ ಪ್ರಮಾಣ ಮತ್ತು ವಿಧವನ್ನು ನೀವು ಯಾವಾಗಲೂ ಮಿತಿಗೊಳಿಸಬಹುದು. ನೀವು ನಮಗೆ ಸೂಕ್ತವಾದ ವೈಯಕ್ತಿಕ ಮಾಹಿತಿಯನ್ನು ಒದಗಿಸಿದರೆ, ನಮ್ಮ ಕೆಲವು ಆನ್‌ಲೈನ್ ​​ಸೇವೆಗಳನ್ನು ಮಾತ್ರ ನಿಮಗೆ ಒದಗಿಸಬಹುದಾಗಿರುತ್ತದೆ. ನಿಮಗೆ ಆಸಕ್ತಿಯುಂಟುಮಾಡಬಹುದಾದ ಕೊಡುಗೆಗಳು, ಪ್ರಚಾರಗಳು ಮತ್ತು ಹೆಚ್ಚುವರಿ ಸೇವೆಗಳಿಗಾಗಿ ನಮ್ಮ ಸಂಪರ್ಕ ಪಟ್ಟಿಗಳಲ್ಲಿ ಸೇರುವ ಅಥವಾ ಸೇರದಿರುವ ಆಯ್ಕೆ ಮಾಡಿಕೊಳ್ಳಲು ನೀವು ಬಯಸುತ್ತೀರಾ ಎಂದು ವೆಬ್‌ಸೈಟ್‌ನ ಇತರ ಭಾಗಗಳು ಕೇಳಬಹುದು. ಹಾಗೆ ಮಾಡುವ ಆಯ್ಕೆ ಮಾಡಿದರೆ, ನಾವು ಈ ಮಾಹಿತಿಯನ್ನು ಮಾರ್ಕೆಟಿಂಗ್ ಹಾಗೂ ಪ್ರಚಾರ ಉದ್ದೇಶಕ್ಕಾಗಿ ಬಳಸಬಹುದು ಉದಾಹರಣೆಗೆ, ಅನ್ವಯವಾಗುವ ಕಾನೂನಿನ ಪ್ರಕಾರ ಮತ್ತು ನಿಮ್ಮ ಸಮ್ಮತಿಯೊಂದಿಗೆ, ಸುದ್ದಿ ಮತ್ತು ಸುದ್ದಿಪತ್ರಗಳು, ವಿಶೇಷ ಕೊಡುಗೆಗಳು ಮತ್ತು ಪ್ರಚಾರಗಳನ್ನು ನಿಮಗೆ ಕಳುಹಿಸಲು ನಿಮ್ಮ ಇಮೇಲ್ ವಿಳಾಸವನ್ನು ಮತ್ತು ನಿಮಗೆ ಆಸಕ್ತಿ ಇರಬಹುದು ಎಂದು ನಾವು ಭಾವಿಸುವ ಉತ್ಪನ್ನಗಳು ಅಥವಾ ಮಾಹಿತಿಯ ಕುರಿತು ನಿಮ್ಮನ್ನು ಸಂಪರ್ಕಿಸಲು ನಾವು ಬಳಸುತ್ತೇವೆ.

ಸ್ಪ್ಯಾಮಿಂಗ್

6. ಸಿಪ್ಲಾ ಅವರು "ಸ್ಪ್ಯಾಮಿಂಗ್" ಅನ್ನು ಬೆಂಬಲಿಸುವುದಿಲ್ಲ. ಸ್ಪ್ಯಾಮಿಂಗ್ ಅನ್ನು ಸಾಮಾನ್ಯವಾಗಿ ವಾಣಿಜ್ಯ ಸ್ವರೂಪದ, ಅಪೇಕ್ಷಿಸದ ಇಮೇಲ್‌ಗಳನ್ನು ಕಳುಹಿಸುವವರಿಗೆ ಹಿಂದಿನ ಸಂಪರ್ಕವಿಲ್ಲದ ವ್ಯಕ್ತಿಗಳಿಗೆ ಅಥವಾ ಅಂತಹ ಸಂವಹನಗಳನ್ನು ಪಡೆಯಲು ನಿರಾಕರಿಸಿದವರಿಗೆ ದೊಡ್ಡ ಸಂಖ್ಯೆಯಲ್ಲಿ ಮತ್ತು ಪುನರಾವರ್ತಿತವಾಗಿ ಕಳುಹಿಸುವುದೆಂದು  ವ್ಯಾಖ್ಯಾನಿಸಲಾಗಿದೆ. ಇದಕ್ಕೆ ತದ್ವಿರುದ್ಧವಾಗಿ, ಭೇಟಿ ನೀಡುವವರು ವ್ಯಕ್ತಪಡಿಸಿದ ಆಸಕ್ತಿಯ ವಿಷಯಕ್ಕನುಗನುಗುಣವಾಗಿ ಸಿಪ್ಲಾ ಆವರ್ತಕ ಇಮೇಲ್‌ಗಳನ್ನು ಕಳುಹಿಸಬಹುದಾದರೂ, ಅಂತಹ ಸೇವೆಯಿಂದ ಹೊರಬರುವ ಆಯ್ಕೆಯನ್ನು ನಿರ್ಧರಿಸುವುದನ್ನು ನಿಮಗೆ ನೀಡುತ್ತದೆ.

ಮಾಹಿತಿಯ ಬಹಿರಂಗಪಡಿಸದಿರುವಿಕೆ

7.  ವೆಬ್‌ಸೈಟ್‌ನಲ್ಲಿರುವ ವೈಯಕ್ತಿಕ ಮಾಹಿತಿಗೆ ಸಿಪ್ಲಾ, ಸಿಪ್ಲಾ ಜಂಟಿ ಕಾರ್ಯಕ್ರಮಗಳನ್ನು ನಡೆಸಬಹುದಾದ ಕೆಲವು ಕಂಪನಿಗಳೂ, ಮತ್ತು ಸಿಪ್ಲಾಗಾಗಿ  ವ್ಯವಹಾರ ಚಟುವಟಿಕೆಗಳನ್ನು ಕೈಗೊಳ್ಳಲು ಸಿಪ್ಲಾವು ಒಪ್ಪಂದ ಮಾಡಿಕೊಂಡಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ಪ್ರವೇಶಾವಕಾಶ ಪಡೆಯೆಬಹುದು. 

8. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಿಪ್ಲಾ ಬೇರೆ ಯಾರಿಗೂ ಮಾರಾಟ ಮಾಡುವುದಿಲ್ಲ ಅಥವಾ ಬಾಡಿಗೆಗೆ ನೀಡುವುದಿಲ್ಲ.

9. ಸಿಪ್ಲಾ ತನ್ನ ವ್ಯವಹಾರಕ್ಕೆ ಮತ್ತಷ್ಟು ಸಂಸ್ಕರೆಣೆಗೆ ಅಥವಾ ಸಂಬಂಧಿಸಿದಂತೆ ಅಗತ್ಯವಾದರೆ, ಮೂರನೇ ಪಕ್ಷದೊಂದಿಗೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಹುದು. ಈ ಸಮಯದಲ್ಲಿ ಮೂರನೇ ಪಕ್ಷದೊಂದಿಗಿನ ಗೌಪ್ಯತಾ ಒಪ್ಪಂದದ ಪ್ರಕಾರ ಹಂಚಿಕೊಳ್ಳಲಾಗುವ ಮಾಹಿತಿಯು ಮತ್ತು ಮೂಲತ: ಉದ್ವೇಶಿತ ಉದ್ದೇಶಕ್ಕಾಗಿ ಮಾಹಿತಿಯನ್ನು ಸಂಗ್ರಹಿಸಲಾಯಿತೋ ಅದಕ್ಕೆ ಅನ್ವಯಿಸುವ ಕಾನೂನಿಗೆ ಅನುಗುಣವಾಗಿರುತ್ತದೆ ಮತ್ತು ಅಂತಹ ಎಲ್ಲಾ ಮೂರನೇ ಪಕ್ಷಗಳು ಸಿಪ್ಲಾನ ಗೌಪ್ಯತಾ ನೀತಿಗೆ ಬದ್ದರಾಗಿರುತ್ತಾರೆ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ.

10. ಅನ್ವಯವಾಗುವ ಕಾನೂನಿಗೆ ಅನುಗುಣವಾಗಿ ಬಿಡುಗಡೆ ಮಾಡಬೇಕಾದ ಅಗತ್ಯವಿದೆಯೆಂದು ನಾವು ಭಾವಿಸಿದಾಗ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಬಿಡುಗಡೆ ಮಾಡಬಹುದು. ಕಾನೂನಿನಿಂದ ಅಥವಾ ನಿಬಂಧನೆಗಳ ಆದೇಶದ ಮೇರೆಗೆ ಬಿಡುಗಡೆ ಮಾಡಲ್ಪಡಬೇಕಾದರೆ, ನಾವು ವೈಯಕ್ತಿಕ ಆರೋಗ್ಯ ಮಾಹಿತಿಯನ್ನು, ವಿಮರ್ಶೆಯ ನಂತರ ನಮ್ಮ ಅಭಿಪ್ರಾಯದಲ್ಲಿ, ಬಿಡುಗಡೆ ಮಾಡಬಹುದು.

ವೈಯಕ್ತಿಕ ಮಾಹಿತಿಯ ರಕ್ಷಣೆ

11. ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ರಕ್ಷಿಸಲು ಸಿಪ್ಲಾ ಸಾಕಷ್ಟು ತಾಂತ್ರಿಕ ಮತ್ತು ಸಾಂಸ್ಥಿಕ ಭದ್ರತಾ ಕ್ರಮಗಳನ್ನು ನಿರ್ವಹಿಸುತ್ತದೆ.

12. ಒಂದು ನೀತಿಯಂತೆ, ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ಪ್ರತಿ ವೆಬ್ ಪುಟವನ್ನು ಸಿಪ್ಲಾ ಸುಭದ್ರವಾಗಿರಿಸುತ್ತದೆ; ಆದಾಗ್ಯೂ, ಇಂಟರ್‌ನೆಟ್‌ ಮೂಲಕ ಪ್ರಸಾರವಾಗುವ ವೈಯಕ್ತಿಕ ಮಾಹಿತಿಯ ಗೌಪ್ಯತೆಗೆ ಖಾತರಿ ನೀಡಲಾಗುವುದಿಲ್ಲ. ಇಂಟರ್‌ನೆಟ್‌ನಲ್ಲಿ ವೈಯಕ್ತಿಕ ಮಾಹಿತಿಯನ್ನು ಕಳುಹಿಸುವಾಗ ಎಚ್ಚರಿಕೆಯಿಂದಿರಲು ನಾವು ನಿಮ್ಮನ್ನು ವಿನಂತಿಸುತ್ತೇವೆ.

13. ಸಿಪ್ಲಾ ನಿಮ್ಮ ಮಾಹಿತಿಯನ್ನು, ಯಾವ ಉದ್ದೇಶಿತ ಉದ್ದೇಶಕ್ಕಾಗಿ ಅಂತಹ ಮಾಹಿತಿಯು ಸಂಗ್ರಹಿಸಲ್ಪಟ್ಟಿತೋ ಅಥವಾ ಸಲ್ಲಿಸಲ್ಪಟ್ಟಿತೋ ಆ ಅವಧಿಯನ್ನು ಮೀರುವ ಅವಧಿಯವರೆಗೆ ಶೇಖರಿಸಿಡಲು ಬದ್ಧರಲ್ಲ.

ಇತರ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳು

14. ಈ ಗೌಪ್ಯತಾ ನೀತಿಯು ಸಿಪ್ಲಾದ ವೆಬ್‌ಸೈಟ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ನಿಮಗೆ ಆಸಕ್ತಿಯಿರಬಹುದೆಂದು ನಾವು ನಂಬುವ ಇತರ ವೆಬ್‌ಸೈಟ್‌ಗಳಿಗೆ ಸಿಪ್ಲಾ ಲಿಂಕ್‌ಗಳನ್ನು ಒದಗಿಸಬಹುದು.  ಅಂತಹ ವೆಬ್‌ಸೈಟ್‌ನಲ್ಲಿರುವ ವಿಷಯ, ಅಂತಹ ವೆಬ್‌ಸೈಟ್‌ಗಳ ಅಂಕ್‌ಗಳಿಗೆ ನಿಮ್ಮ ಪ್ರವೇಶಾವಕಾಶ, ನೀವು ಒದಗಿಸುವ ವೈಯಕ್ತಿಕ ಮಾಹಿತಿಯ ಸುರಕ್ಷಿತತೆ ಅಥವಾ ಆ ವೆಬ್‌ಸೈಟ್‌ನಿಂದ ಸಂಗ್ರಹಿಸಲ್ಪಡುವ ಯಾವುದೇ ಮಾಹಿತಿಗೆ ಸಿಪ್ಲಾ ಜವಾಬ್ದಾರಿಯಲ್ಲ. ಅಂತಹ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಅಪಾಯವು ಸಂಪೂರ್ಣವಾಗಿ ನಿಮ್ಮದು.

ನೀವು ಇನ್ನೊಂದು ಬಾಹ್ಯ ವೆಬ್‌ಸೈಟ್‌ನ ಹೈಪರ್‌ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ನೀವು ಆ ಹೊಸ ಬಾಹ್ಯ ವೆಬ್‌ಸೈಟ್‌ನ ಗೌಪ್ಯತಾ ನೀತಿಗೆ ಒಳಪಡುತ್ತೀರಿ. ಈ ಹೊಸ ಬಾಹ್ಯ ವೆಬ್‌ಸೈಟ್‌ ಮೂಲಕ ನೀವು ಬ್ರೌಸ್ ಮಾಡಿದಾಗ, ಸಿಪ್ಲಾ ಲಿಮಿಟೆಡ್ ಅಥವಾ ಅದರ ಯಾವುದೇ ನಿರ್ದೇಶಕರು, ಏಜೆನ್ಸಿಗಳು, ಅಧಿಕಾರಿಗಳು ಅಥವಾ ನೌಕರರು ಆ ಬಾಹ್ಯ ಸೈಟ್‌ನಲ್ಲಿ ಪ್ರಕಟಿತ ಯಾವುದೇ ಮಾಹಿತಿಯ ನಿಖರತೆ, ವಿಶ್ವಾಸಾರ್ಹತೆ ಅಥವಾ ಸಮಯೋಚಿತತೆಯನ್ನು ಖಾತರಿಪಡಿಸುವುದಿಲ್ಲ, ಅಥವಾ ಅಲ್ಲಿರುವ ಯಾವುದೇ ವಿಷಯ, ದೃಷ್ಟಿಕೋನಗಳು, ಉತ್ಪನ್ನಗಳು, ಅಥವಾ ಲಿಂಕ್ ಮಾಡಲಾಗಿರುವ ಸೇವೆಗಳನ್ನು ಅನುಮೋದಿಸುವುದಿಲ್ಲ  ಮತ್ತು ಅಲ್ಲಿ ಒದಗಿಸಲಾಗಿರುವ ಮಾಹಿತಿಯ ನಿಖರತೆ, ವಿಶ್ವಾಸಾರ್ಹತೆ ಅಥವಾ ಸಮಯೋಚಿತತೆಯ ಮೇಲೆ ಅವಲಂಬಿತವಾಗಿರುವುದರಿಂದ ಉಂಟಾಗುವ ಯಾವುದೇ ನಷ್ಟಗಳಿಗೆ ಹೊಣೆ ಮಾಡುವಂತಿಲ್ಲ.

ಮಕ್ಕಳಿಂದ ನಮ್ಮ ವೆಬ್‌ಸೈಟ್‌ಗಳ ಬಳಕೆ

15.  ಸಿಪ್ಲಾವು ವೆಬ್‌ಸೈಟ್‌ನಲ್ಲಿ ಉದ್ದೇಶಪೂರ್ವಕವಾಗಿ ಮಕ್ಕಳಿಂದ ಯಾವುದೇ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಅಥವಾ ಬಳಸುವುದಿಲ್ಲ (ನಾವು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರನ್ನು ‘‘ಮಕ್ಕಳು’’ ಎಂದು ವ್ಯಾಖ್ಯಾನಿಸುತ್ತೇವೆ). ನಾವು ಉದ್ದೇಶಪೂರ್ವಕವಾಗಿ ಮಕ್ಕಳನ್ನು ನಮ್ಮೊಂದಿಗೆ ಸಂಪರ್ಕಿಸಲು , ಅಥವಾ ನಮ್ಮ ಯಾವುದೇ ಆನ್‌ಲೈನ್ ​​ಸೇವೆಗಳನ್ನು ಬಳಸಲು ಅನುಮತಿಸುವುದಿಲ್ಲ. ನೀವು ಪೋಷಕರಾಗಿದ್ದರೆ ಮತ್ತು ನಿಮ್ಮ ಮಗುವು ನಮಗೆ ಮಾಹಿತಿಯನ್ನು ಒದಗಿಸಿದೆ ಎಂದು ನಿಮ್ಮ ಗಮನಕ್ಕೆ ಬಂದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ ಮತ್ತು ಈ ಸಮಸ್ಯೆಯನ್ನು ಪರಿಹರಿಸಲು ನಾವು ನಿಮ್ಮೊಂದಿಗೆ ಕಾರ್ಯನಿರ್ವಹಿಸುತ್ತೇವೆ.

ವೆಬ್‌ಸೈಟ್‌ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೋಡುವ ಹಕ್ಕು

16. ವೆಬ್‌ಸೈಟ್‌ನಲ್ಲಿ ನೀವು ನಿಮ್ಮ ಇಚ್ಚೆಯಿಂದ ನಮೂದಿಸಿದ ವೈಯಕ್ತಿಕ ಮಾಹಿತಿಯನ್ನು ಪರಿಶೀಲಿಸಲು, ಬದಲಿಸಲು, ಸೇರಿಸಲು ಅಥವಾ ತೆಗೆದುಹಾಕಲು ನೀವು ಬಯಸಿದರೆ, ನಿಮ್ಮ ಪ್ರೊಫೈಲ್‌ಗೆ ಲಭ್ಯವಿರುವ "ಎಡಿಟ್‌" ಆಯ್ಕೆಯನ್ನು ಬಳಸಿ ನೀವು ಹಾಗೆ ಮಾಡಬಹುದು. ಯಾವುದೇ ಸಮಸ್ಯೆ ಇದ್ದ ಪಕ್ಷದಲ್ಲಿ, ಅದರ ಬಗ್ಗೆ ನೀವು ನಮ್ಮನ್ನು ಸಂಪರ್ಕಿಸಬಹುದು

17. ನೀವು ನಮಗೆ ಒದಗಿಸಿದ ವೈಯಕ್ತಿಕ ಮಾಹಿತಿಯ ಬಳಕೆ, ತಿದ್ದುಪಡಿ ಅಥವಾ ಅಳಿಸುವಿಕೆ ಬಗ್ಗೆ ನೀವು ಪ್ರಶ್ನೆಗಳನ್ನು ಹೊಂದಿದ್ದರೆ ಅಥವಾ ಸಿಪ್ಲಾ ವ್ಯವಹಾರದಿಂದ ಅಥವಾ ನಿರ್ದಿಷ್ಟ ಸಿಪ್ಲಾ ಕಾರ್ಯಕ್ರಮದ ಭವಿಷ್ಯದ ಸಂವಹನಗಳಿಂದ ಹೊರ ಹೋಗಲು ನೀವು ಬಯಸಿದರೆ, ದಯವಿಟ್ಟು ನೀವು ಭೇಟಿ ನೀಡುವ ವೆಬ್‌ಸೈಟ್‌ನಲ್ಲಿ "ನಮ್ಮನ್ನು ಸಂಪರ್ಕಿಸಿ" ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಅಥವಾ privacy@cipla.comಗೆ ಇಮೇಲ್ ಮಾಡುವ ಮೂಲಕ ನಮ್ಮನ್ನು ಸಂಪರ್ಕಿಸಿ. ಪರ್ಯಾಯವಾಗಿ, ನೀವು ಇಲ್ಲಿಗೆ ಒಂದು ಪತ್ರವನ್ನು ಕಳುಹಿಸಬಹುದು

ವಿಳಾಸ:
ಗಮನಕ್ಕೆ: ಲೀಗಲ್ ಡಿಪಾರ್ಟ್‌ಮೆಂಟ್
ಸಿಪ್ಲಾ ಲಿಮಿಟೆಡ್, ಟವರ್ ಎ, 1ಸ್ಟ್ ಫ್ಲೋರ್, ಮೆನಿನ್ಸುಲ ಬಿಸಿನೆಸ್ ಪಾರ್ಕ್,
ಗನಪತ್ ರಾವ್ ಕದಂ ಮಾರ್ಗ್, ಲೋವರ್ ಪರೇಲ್, ಮುಂಬೈ- 400 013, ಭಾರತ

18. ಸಿಪ್ಲಾಗೆ ಎಲ್ಲಾ ಸಂವಹನಗಳಲ್ಲಿ, ದಯವಿಟ್ಟು ನೋಂದಣಿಗಾಗಿ ಬಳಸಿದ ಇಮೇಲ್ ವಿಳಾಸವನ್ನು (ಅನ್ವಯಿಸಿದರೆ), ವೆಬ್‌ಸೈಟ್‌ ವಿಳಾಸ ಮತ್ತು ನಿಮ್ಮ ವಿನಂತಿಯ ಒಂದು ವಿವರವಾದ ವಿವರಣೆಯನ್ನು ಸೇರಿಸಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅಳಿಸಲು ಅಥವಾ ತಿದ್ದುಪಡಿ ಮಾಡಲು ನೀವು ಬಯಸಿದರೆ ಮತ್ತು ಇಮೇಲ್ ಮೂಲಕ ನಮ್ಮನ್ನು ಸಂಪರ್ಕಿಸುತ್ತಿದ್ದರೆ, ದಯವಿಟ್ಟು ಇಮೇಲ್ ವಿಷಯದ ಸಾಲಿನಲ್ಲಿ, ಅನ್ವಯವಾಗುವಂತೆ, "ಅಳಿಸುವಿಕೆ ವಿನಂತಿ" ಅಥವಾ "ತಿದ್ದುಪಡಿಯ ವಿನಂತಿ" ಎಂದು ನಮೂದಿಸಿ. ಎಲ್ಲಾ ಸಮಂಜಸವಾದ ವಿನಂತಿಗಳಿಗೆ ಸಮಯೋಚಿತವಾಗಿ ಪ್ರತಿಕ್ರಿಯೆ ನೀಡಲು ನಾವು ನಮ್ಮ ಅತ್ಯುತ್ತಮವಾದದ್ದನ್ನು ಮಾಡುತ್ತೇವೆ.

ನೀತಿಯಲ್ಲಿ ಬದಲಾವಣೆ

19. ತಂತ್ರಜ್ಞಾನ ಪ್ರಗತಿಗಳು, ಕಾನೂನು ಮತ್ತು ನಿಯಂತ್ರಕ ಬದಲಾವಣೆಗಳು ಮತ್ತು ಉತ್ತಮ ವ್ಯವಹಾರದ ಅಭ್ಯಾಸಗಳನ್ನು ಪ್ರತಿಬಿಂಬಿಸುವ ಸಲುವಾಗಿ, ಮುನ್ಸೂಚನೆಯಿಲ್ಲದೆ ಈ ಗೌಪ್ಯತಾ ನೀತಿಯನ್ನು ತಿದ್ದುಪಡಿ ಮಾಡುವ ಹಕ್ಕು ಸಿಪ್ಲಾ ಕಾಯ್ದಿರಿಸಿಕೊಂಡಿದೆ. ಸಿಪ್ಲಾ ತನ್ನ ಗೌಪ್ಯತೆ ಅಭ್ಯಾಸಗಳನ್ನು ಬದಲಾಯಿಸಿದಲ್ಲಿ, ಒಂದು ಹೊಸ ಗೌಪ್ಯತಾ ನೀತಿಯು ಅಂತಹ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ಪರಿಷ್ಕೃತ ಗೌಪ್ಯತಾ ನೀತಿಯ ಪರಿಣಾಮಕಾರಿ ದಿನಾಂಕವನ್ನು ಈ ಪ್ಯಾರಾಗ್ರಾಫನಲ್ಲಿ ನಿಗದಿಪಡಿಸಲಾಗುತ್ತದೆ. 

20. ಈ ಗೌಪ್ಯತಾ ನೀತಿಯನ್ನು ಕಳೆದ 1ನೇ ಅಕ್ಟೋಬರ್ 2017ರಂದು ನವೀಕರಿಸಲಾಗಿದೆ ಮತ್ತು ಆ ದಿನಾಂಕದಿಂದ ಜಾರಿಯಲ್ಲಿದೆ.

Please Select Your Preferred Language