ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) ಸರಳವಾದ, ಕೊಂಡುಕೊಳ್ಳಬಹುದಾದ, ಉಸಿರಾಟದ ತೊಂದರೆಗಳನ್ನು ಮತ್ತು ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಬರುವ ಆಸ್ತಮಾವನ್ನು ಪರೀಕ್ಷಿಸಲು ಸಾಧನ ಸಹಾಯ ಮಾಡುತ್ತದೆ. ನೀವು ಆಸ್ತಮಾದ ಚಿಕಿತ್ಸೆಯಲ್ಲಿ ಒಳಪಟ್ಟಾಗ ನಿಮ್ಮ ಸುಧಾರಣೆಯನ್ನು ಗಮನಿಸಲು ಬಳಸುವಂತಹ ಸಾಧನವಾಗಿದೆ.
ನೀವು ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಲು BP ಓದುವ ಯಂತ್ರದಂತೆ ಮತ್ತು ಸಕ್ಕರೆ ಕಾಯಿಲೆ ಇರುವವರಿಗೆ ಗ್ಲುಕೋಮೀಟರ್ ಇರುವಂತೆಯೆ, ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) ಆಸ್ತಮಾಗೆ ಥರ್ಮಾಮೀಟರ್‌ನಂತೆ ಆಗಿರುತ್ತದೆ. ರೋಗಿಯಾಗಿ, ನೀವು ಸಾಧನದ ಮೌಥ್‌ಪೀಸ್‌ನಲ್ಲಿ ಊದುವಂತೆ ಹೇಳಲಾಗುತ್ತದೆ ಮತ್ತು ಶ್ವಾಸಕೋಶದ ಶಕ್ತಿಯನ್ನು ಪರಿಶೀಲಿಸಲು ರೀಡಿಂಗ್ ಅನ್ನು ತೆಗೆದುಕೊಳ್ಳಲಾಗುತ್ತದೆ. ಬಹಳಷ್ಟು ವೈದ್ಯರು ಅವರ ಕ್ಲಿನಿಕ್‌ಗಳಲ್ಲಿ ಹೊಂದಿರುತ್ತಾರೆ ಆದರೆ ನಿಮ್ಮ ಆಸ್ತಮಾವನ್ನು ನಿರಂತರವಾಗಿ ಪರೀಕ್ಷಿಸಬೇಕಾದರೆ ಪ್ರಮುಖ ಔಷಧಿ ಅಂಗಡಿಗಳಲ್ಲಿಯೂ ಇದು ಲಭ್ಯವಿರುತ್ತದೆ.
 |
 |
ನಿಮಗೆ ಆಸ್ತಮಾ ಇದ್ದರೆ ನೀವು ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) ಅನ್ನು ನೀವು ಸುಧಾರಿಸುತ್ತಿದ್ದಿರಾ ಅಥವಾ ಸುಧಾರಣೆಗಳು ಮಾಡುತ್ತಿಲ್ಲ ಎಂದು ಅಳೆಯುತ್ತದೆ. ನಿಮ್ಮ ವೈದ್ಯರು ನಿಮಗೆ ಪೀಕ್ ಫ್ಲೋ ಮೀಟರ್‌ನಲ್ಲಿ (ಬ್ರೀಥೋ ಮೀಟರ್) ಯಾವ ಸಂಖ್ಯೆ ಅಥವಾ ರೀಡಿಂಗ್ ಬಂದಿದೆ ಎಂದು ನಿಮ್ಮ ವಯಸ್ಸು ಮತ್ತು ಎತ್ತರಕ್ಕೆ ಅನುಗುಣವಾಗಿ ನಿಮಗೆ ಉತ್ತಮ ಅಥವಾ ಸಾಮಾನ್ಯ ಎಂದು ತಿಳಿಸುತ್ತದೆ. ನಿಮ್ಮ ರೀಡಿಂಗ್‌ನಲ್ಲಿ ಇಳಿಮುಖ ಕಂಡುಬಂದರೆ, ನಿಮ್ಮ ಆಸ್ತಮಾವು ನಿಯಂತ್ರಣದಲ್ಲಿಲ್ಲ ಎಂದರ್ಥ ಮತ್ತು ನಿಮಗೆ ಕೆಲವೇ ದಿನಗಳಲ್ಲಿ ಆಘಾತವಾಗಬಹುದು ಎಂದು ಸೂಚಿಸುತ್ತದೆ. ಇದು ನಿಮಗೆ ಡೋಸೆಜ್‌ಗಳನ್ನು ಹೆಚ್ಚಿಸಲು ಮುನ್ಸೂಚನೆ ಆಗಿರುತ್ತದೆ ಅಥವಾ ನೀವು ಎಷ್ಟು ಬಾರಿ ಔಷಧಿಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಸಂಖ್ಯೆಯು ಹಿಂದಿನ ರೀಡಿಂಗ್‌ಗಿಂತಲೂ ಹೆಚ್ಚಿಗೆ ಬಂದಿದ್ದರೆ, ನಿಮ್ಮ ಆಸ್ತಮಾವು ಉತ್ತಮವಾಗಿ ನಿಯಂತ್ರಣವಾಗಿದೆ ಮತ್ತು ನೀವು ಸುಧಾರಿಸುತ್ತಿದ್ದೀರಿ ಎಂದರ್ಥ. ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) ಪ್ರಮಾಣ ಸಾಮಾನ್ಯವಾಗಿದ್ದಾಗ, (ನಿಮ್ಮ ವೈದ್ಯರು ಸೂಕ್ತವಾದ ಚಿತ್ರಣವನ್ನು ಹೇಳುತ್ತಾರೆ), ಇದು
ನಿಮ್ಮ ಆಸ್ತಮಾವು ನಿಯಂತ್ರಣದಲ್ಲಿದೆ ಎಂದು ತಿಳಿಸುತ್ತದೆ.