Home
  Breathe Free
ಇದು ಕೆಮ್ಮು ಅಥವಾ
ಆಸ್ತಮಾ ಆಗಿದೆಯೆ?
ಚಿಕಿತ್ಸೆ ಮತ್ತು
ನಿಯಂತ್ರಣ
FAQ &
SUPPORT
ರಿನಿಟಿಸ್
ಎಂದರೇನು
COPD

ಘಟನೆಗಳು ಮತ್ತು ಜಾಗೃತಿ

ದಿ ಟೈಮ್ಸ್ ಆಫ್ ಇಂಡಿಯಾ ಶ್ವಾಸಕೋಶ ಪರೀಕ್ಷೆ ಶಿಬಿರ

 
ಆಸ್ತಮಾ ಕುರಿತು ಜಾಗೃತಿ ಮೂಡಿಸುವ ಒಂದು ಉದ್ದೇಶದೊಂದಿಗೆ, ಮುಂಬಯಿನ ದಿ ಟೈಮ್ಸ್ ಆಫ್ ಇಂಡಿಯಾದ ಉದ್ಯೋಗಿಗಳಿಗೆ ' ಶ್ವಾಸಕೋಶ ಆರೋಗ್ಯ ಪರೀಕ್ಷೆ ಶಿಬಿರ' ಅನ್ನು 24ನೇ ಮತ್ತು 25ನೇ ಫೆಬ್ರವರಿ 2010 ರಂದು ಆಯೋಜಿಸಲಾಗಿತ್ತು. ಶ್ವಾಸಕೋಶದ ಆರೋಗ್ಯದ ಪ್ರಾಮುಖ್ಯತೆಯನ್ನು ಎದ್ದುಗಾಣಿಸುವ ಇಮೇಲ್ ಅನ್ನು ಉದ್ಯೋಗಿಗಳಿಗೆ ಕಳುಹಿಸಲಾಗಿತ್ತು.

ಕ್ಯಾಂಪ್‌ಗೆ ಸುಮಾರು 230 ಆನ್‌ಲೈನ್ ನೋಂದಣಿಗಳೊಂದಿಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಕ್ರಿಯೆ ಬಂದವು. ಘಟನೆಯ 2 ದಿನಗಳಿಗೂ ಮೊದಲು ಟೈಮ್ಸ್‌ನ ಆವರಣದಲ್ಲಿ ಬ್ರೀಥ್ ಫ್ರೀಯ ಜಾಹೀರಾತುಗಳು ಮತ್ತು ಪೋಸ್ಟರ್‌ಗಳನ್ನು ಹಾಕಲಾಯಿತು.

ಜನರ ಪಾಲ್ಗೊಳ್ಳುವಿಕೆಗೆ ಸ್ಪಂದಿಸುತ್ತಾ ನಾವು 4 ತಪಾಸಣೆಯ ಡೆಸ್ಕ್‌ಗಳನ್ನು ಆಯೋಜಿಸಿದ್ದೆವು, ಅಲ್ಲಿ ಬರುವವರಿಗೆ ಪರೀಕ್ಷೆ ತೆಗೆದುಕೊಳ್ಳಲು ಸಹಾಯ ಮಾಡಲು ಮತ್ತು ಅವರ ಶ್ವಾಸಕೋಶದ ರೀಡಿಂಗ್ ಅನ್ನು ತಿಳಿದುಕೊಳ್ಳಲು ಪ್ರತಿಯೊಂದನ್ನು ಪೀಕ್-ಫ್ಲೋ ಮೀಟರ್ ಮತ್ತು ನಮ್ಮ ಪ್ರತಿನಿಧಿಯೊಂದಿಗೆ ಸುಸಜ್ಜಿತಗೊಳಿಸಿದ್ದೆವು. ಉದ್ಯೋಗಿಗಳಿಗೆ ನಿರೀಕ್ಷಣಾ ಕೊಠಡಿಯೊಂದಿಗೆ 2 ವೈದ್ಯರಿಗಾಗಿ ಪ್ರತ್ಯೇಕ ಕೊಠಡಿಯನ್ನು ಆಯೋಜಿಸಲಾಗಿತ್ತು. ಸಾಧನ ಡೆಮೊಗಳು ಮತ್ತು ಸ್ಪೈರೊಮೀಟರಿಗಾಗಿಯೂ ಸಹ ಕೌಂಟರ್‌ಗಳು ಲಭ್ಯವಿದ್ದವು.

11.00 ಗಂಟೆ ಆದಂತೆ, ಉದ್ಯೋಗಿಗಳು ಕೌಂಟರ್‌ಗಳತ್ತ ದೌಡಾಯಿಸಿದರು. ಅವರೆಲ್ಲರೂ ಪೀಕ್-ಫ್ಲೋ ಮೀಟರ್ ಪರೀಕ್ಷೆಯನ್ನು ತೆಗೆದುಕೊಂಡರು ಮತ್ತು ಕೆಲವರನ್ನು ವೈದ್ಯರತ್ತ ಕಳುಹಿಸಬೇಕಾಯಿತು ವೈದ್ಯರು ಮುಂದುವರೆದು ಕೆಲವರಿಗೆ ಸ್ಪೈರೊಮೀಟರ್ ಪರೀಕ್ಷೆಯನ್ನು ಶಿಫಾರಸು ಮಾಡಿದರು. ಪ್ರತಿಯೊಬ್ಬ ವ್ಯಕ್ತಿಗೂ ಅವರ ಶ್ವಾಸಕೋಶದ ಸ್ಥಿತಿಯನ್ನು ಅವಲಂಬಿಸಿ ಸೂಕ್ತವಾದ ರೀತಿಯಲ್ಲಿ ಗಮನಹರಿಸಲಾಯಿತೆ ಮತ್ತು ಸಮಯ ನೀಡಲಾಯಿತೆ ಎಂದು ನಾವು ಖಚಿತಪಡಿಸಿಕೊಂಡೆವು. ವೈದ್ಯರು ರೋಗಪತ್ತೆ ಮಾಡಿದರು, ವಿಚಾರ ವಿನಿಮಯ ಮಾಡಿಕೊಂಡರು ಅಲ್ಲದೆ ಅಗತ್ಯವಿರುವಂತೆ ಉದ್ಯೋಗಿಗಳಿಗೆ ಚಿಕಿತ್ಸೆಯನ್ನು ಶಿಫಾರಸು ಮಾಡಿದರು.

ಎರಡು ದಿನಗಳ ಶಿಬಿರ ಸುಮಾರು 500 ಉದ್ಯೋಗಿಗಳನ್ನು ಸ್ವೀಕರಿಸಿತ್ತು.

ನಮ್ಮ ಬ್ರೀಥ್‌ಫ್ರೀ ಚಳುವಳಿಯನ್ನು ಬೆಂಬಲಿಸಲು ಮುಂದೆ ಬಂದ ಕೆಳಗೆ ತಿಳಿಸಲಾದ ವೈದ್ಯರ ಸಹಾಯದೊಂದಿಗೆ ಶಿಬಿರ ಯಶಸ್ವಿಯಾಯಿತು. ಬ್ರೀಥ್‌ಫ್ರೀಯಲ್ಲಿ ಭರವಸೆ ಹೊಂದಿದ್ದಕ್ಕಾಗಿ ಮತ್ತು ಜಾಗೃತಿ ಮೂಡಿಸುವುದರಲ್ಲಿ ನಮ್ಮೊಂದಿಗೆ ಭಾಗಿಯಾಗಿದ್ದಕ್ಕಾಗಿ ಅವರಿಗೆ ನಾವು ಹೃತ್ಪೂರ್ವಕವಾಗಿ ವಂದಿಸುತ್ತೇವೆ.

ಮೊದಲ ದಿನ ಅಂದರೆ 24 ಫೆಬ್ರವರಿ, 2010
• ಡಾ. ರಾಜ್‌ರತನ್ ಸದಾವಾರ್ತೆ - ಚೆಸ್ಟ್ ವೈದ್ಯರು, ಮಲಾಡ್
• ಡಾ. ರೋಹಿತ್ ಹೆಗ್ಡೆ (ಚೆಸ್ಟ್ PG-GT HOSP)
• ಡಾ. ಆನಂದ್ ಕುಮಾರ್ - ಚೆಸ್ಟ್ ವೈದ್ಯರು, ಮುಲುಂಡ್

ಎರಡನೆಯ ದಿನ ಅಂದರೆ 25 ಫೆಬ್ರವರಿ, 2010
• ಡಾ. ವಿವೇಕ್ ಸಿಂಗ್ - ಚೆಸ್ಟ್ ವೈದ್ಯರು, ವಶಿ
• ಡಾ. ವಿದ್ಯಾ ದೋಶಿ – ಚೆಸ್ಟ್ ವೈದ್ಯರು, ಭಾಟಿಯಾ ಆಸ್ಪತ್ರೆ

ಅಲ್ಲದೆ ದಿ ಟೈಮ್ಸ್ ಆಫ್ ಇಂಡಿಯಾದ ಶ್ರೀ ಚಂದ್ರಶೇಖರ್ ಮುಖರ್ಜಿ, ಶ್ರೀ ಸುಜೊಯ್ ಮಜುಮ್ದಾರ್ ಮತ್ತು ಶ್ರೀ ದೀಪಕ್ ಕುಮಾರ್ ಅವರು ತಮ್ಮ ಉದ್ಯೋಗಿಗಳಿಗೆ ತಲುಪಿಸುವಲ್ಲಿ ಒಂದು ವೇದಿಕೆಯನ್ನು ಒದಗಿಸಿದ್ದಕ್ಕಾಗಿ ನಾವು ಅವರಿಗೂ ಸಹ ಕೃತಜ್ಞರಾಗಿದ್ದೇವೆ.

ಯಾವುದೇ ಕಾರ್ಪೊರೇಟ್, ಶಾಲೆ, ಸಮಾಜ ಅಥವಾ ಸಮುದಾಯ ಕೇಂದ್ರವು ಆ ರೀತಿಯ ‘ಶ್ವಾಸಕೋಶ ಪರೀಕ್ಷೆ ಶಿಬಿರ’ ಅನ್ನು ತಮ್ಮ ಆವರಣದಲ್ಲಿ ಆಯೋಜಿಸಬೇಕೆಂದು ಬಯಸುತ್ತಿದ್ದಾರೆ ಎಂದು ತಿಳಿದುಬಂದಲ್ಲಿ, ದಯವಿಟ್ಟು INFO@BREATHEFREE.COM ಗೆ ನಮಗೆ ಬರೆಯಿರಿ
 
 

  ಪಿಕ್ಚರ್ ಗ್ಯಾಲರಿ