ಶಾಲೆಗಳಲ್ಲಿ ಅಸ್ತಮಾ ತುರ್ತುಪರಿಸ್ಥಿತಿಗಳನ್ನು ನಿರ್ವಹಣೆ ಮಾಡಲು ಶಿಕ್ಷಕರು ಮತ್ತು ಶಾಲಾ ಅಧಿಕಾರಿಗಳಿಗೆ ಶಕ್ತರನ್ನಾಗಿ ಮಾಡುವ ಅಂಗವಾಗಿ, ಕೊಲ್ಕತ್ತಾದ ಶಾಲೆಗಳಲ್ಲಿ ‘ಅಸ್ತಮಾ ಅಲರ್ಟ್ಸ್ ಸ್ಕೂಲ್ಸ್” ಎಂಬ ಅಭಿಯಾನವನ್ನು Cipla ದ ಸಾರ್ವಜನಿಕ ಸೇವಾ ವಿಭಾಗವಾದ ಬ್ರೀತ್‌ಫ್ರೀ 2010 ರ ಸೆಪ್ಟೆಂಬರ್ 17 ರಂದು ಪ್ರಾರಂಭಿಸಿತು. ಇದು ಭಾರತದಲ್ಲಿ ಇಂತಹ ಮೊಟ್ಟಮೊದಲ ಕಾರ್ಯಕ್ರಮವಾಗಿದ್ದು, ಇದರಲ್ಲಿ ಶಿಕ್ಷಕರಿಗೆ ಅಸ್ತಮಾ ಆಕ್ರಮಣದ ಸಂದರ್ಭದಲ್ಲಿ ಪ್ರಥಮ-ಚಿಕಿತ್ಸೆ ಔಷಧಿಯನ್ನು ನೀಡಲು ತರಬೇತಿಯನ್ನು ನೀಡಲಾಗುತ್ತದೆ ಮತ್ತು ಮಗುವಿನಲ್ಲಿ ಅಸ್ತಮಾದ ರೋಗಲಕ್ಷಣಗಳನ್ನು ಗುರುತಿಸಲು ಮತ್ತು ಅದನ್ನು ಪರಿಣಾಮಕಾರಿಯಾಗಿ ಪೋಷಕರಿಗೆ ತಿಳಿಸಲು ಮಾರ್ಗದರ್ಶನವನ್ನು ನೀಡಲಾಗುತ್ತದೆ.
ಕೊಲಂಬಿಯಾ ಏಷ್ಯಾ ಆಸ್ಪತ್ರೆ ಮತ್ತು ಶಿಶು ಸಂಜೀವಿನಿ ಆಸ್ಪತ್ರೆ, ಸಾಲ್ಟ್ ಲೇಕ್‌ನ ಸಲಹಾ ಮಕ್ಕಳ ತಜ್ಞರಾದ ಡಾ. ಸುಭಾಷಿಷ್ ರಾಯ್ ಮತ್ತು ಕೊಲಂಬಿಯಾ ಏಷ್ಯಾ ಆಸ್ಪತ್ರೆ ಮತ್ತು ಎಎಮ್ಆರ್‌ಐ ಆಸ್ಪತ್ರೆ, ಸಾಲ್ಟ್ ಲೇಕ್‌ನ ಸಲಹಾ ಮಕ್ಕಳ ತಜ್ಞರಾದ ಡಾ.ಪಲ್ಲಬ್ ಚಟರ್ಜಿ ಅವರುಗಳು ಭಾರತದಲ್ಲಿ ‘ಅಸ್ತಮಾ ಅಲರ್ಟ್ ಸ್ಕೂಲ್ಸ್’ ಅನ್ನು ಸಾಕಾರಗೊಳಿಸುವ ಅಗತ್ಯತೆಯ ಕುರಿತಾಗಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಲು ಮುಂದೆ ಬಂದ ಮತ್ತು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಸ್ತಮಾದೊಂದಿಗಿನ ಮಕ್ಕಳನ್ನು ನಿರ್ವಹಣೆ ಮಾಡಲು ಈ ಕಾರ್ಯಕ್ರಮವು ಹೇಗೆ ಪ್ರಯೋಜನವನ್ನುಂಟುಮಾಡುತ್ತದೆ ಎಂಬ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಟಾಲಿಗಂಜ್‌ನ ಅಸೆಂಬ್ಲಿ ಆಫ್ ಗಾಡ್ ಚರ್ಚ್‌ನ ಗೌರವ ಪ್ರಾಂಶುಪಾಲರಾದ ಶ್ರೀಮತಿ ಎಮ್. ನಾರ್ಮನ್ ಮತ್ತು ಆಂಧ್ರ ಅಸೋಸಿಯೇಷನ್ ಸ್ಕೂಲ್‌ನ ಗೌರವ ಪ್ರಾಂಶುಪಾಲರಾದ ಶ್ರೀಮತಿ ಲೀನಾ ಹರಾಥಿಯವರಿಗೆ ನಾವು ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇವೆ.
ಸುಮಾರು 40 ಕ್ಕೂ ಹೆಚ್ಚು ಶಾಲೆಗಳಿಂದು 185 ಶಿಕ್ಷಕರು ಭಾಗವಹಿಸುವುದರೊಂದಿಗೆ ಕಾರ್ಯಾಗಾರವು ಅಭೂತಪೂರ್ವ ಪ್ರತಿಕ್ರಿಯೆಯನ್ನು ಪಡೆಯಿತು. “ಅಸ್ತಮಾ ಅಲರ್ಟ್ ಸ್ಕೂಲ್ಸ್’ ಅಭಿಯಾನದ ಮೊದಲ ಕಾರ್ಯಾಗಾರವು ವೈದ್ಯರಿಂದ ಅಸ್ತಮಾದ ಬಗ್ಗೆ ತಿಳಿದುಕೊಳ್ಳಲು ಶಿಕ್ಷಕರಿಗೆ ಒಂದು ಉತ್ತಮ ವೇದಿಕೆಯಾಗಿತ್ತು.
ಕೊಲ್ಕತ್ತದಾದ್ಯಂತ ಹಲವು ಶಾಲೆಗಳನ್ನು ತಲುಪಲು ಈ ಕಾರ್ಯಕ್ಕೆ ಬೆಂಬಲವನ್ನು ಸೂಚಿಸಿದ ಪ್ರಕಟಣೆಗಳು ಮತ್ತು ಟಿವಿ ಚಾನೆಲ್‌ನವರಿಗೆ ನಾವು ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇವೆ.
ನಿಮ್ಮ ಶಾಲೆಯು ‘ಅಸ್ತಮಾ ಅಲರ್ಟ್ ಸ್ಕೂಲ್ಸ್’ ನಲ್ಲಿ ಒಂದಾಗಲು ಬಯಸಿದರೆ, ನೀವು ನಮಗೆ ವಿನಂತಿಯನ್ನು
http://www.breathefree.com/Asthma_Alert_Schools.html ನಲ್ಲಿ ಕಳುಹಿಸಬಹುದು.