|
ಇದು ಕೆಮ್ಮು ಅಥವಾ ಆಸ್ತಮಾ ಆಗಿದೆಯೆ? |
ಕೆಮ್ಮು ಮತ್ತು ಆಸ್ತಮಾ ಎರಡು ವಿಭಿನ್ನವಾಗಿವೆ. ಆಸ್ತಮಾದಿಂದ ಬಳಲುತ್ತಿರುವ ಜನರು ಸಾಧಾರಣವಾಗಿ ಉಸಿರಾಟದಲ್ಲಿ ತೊಂದರೆ ಅನುಭವಿಸುತ್ತಿರುತ್ತಾರೆ ಮತ್ತು ಹೆಚ್ಚಾಗಿ ಕೆಮ್ಮುತ್ತಾರೆ. ನೀವು ಅಥವಾ ನಿಮ್ಮ ಮಗುವು ಕೆಮ್ಮನ್ನು ಶಮನಗೊಳಿಸಲು ನಿಯತವಾಗಿ ಕೆಮ್ಮಿನ ಔಷಧಿಯನ್ನು ತೆಗೆದುಕೂಳ್ಳುತ್ತಿದ್ದರೆ, ನಿಜವಾದ ಸಮಸ್ಯೆ ಬೇರೆಯೆ ಆಗಿರಬಹುದೆ. ನಿಜವಾಗಿ ಹೇಳುವುದಾದರೆ, ಮರುಕಳಿಸುವ ಕೆಮ್ಮು ಆಸ್ತಮಾದ ಸಂಕೇತವಾಗಿರುತ್ತದೆ. ನೀವು ಅಥವಾ ನೀವು ಪ್ರೀತಿಸುವವರು ಆಸ್ತಮಾದಿಂದ ಬಳಲುತ್ತಿದ್ದರೆ, ಇದು ಜಗತ್ತಿನ ಅಂತ್ಯವಲ್ಲ, ಏಕೆಂದರೆ ಇದನ್ನು ನಿಯಂತ್ರಿಸಬಹುದು ಮತ್ತು ಆಸ್ತಮಾ ಹೊಂದಿರುವ ಲಕ್ಷಾನುಗಟ್ಟಲೆ ಜನರು ಚುರುಕಾಗಿ ಜೀವನ ನಡೆಸುತ್ತಿದ್ದಾರೆ ನೀವು ಸಹ ಅವರಂತೆ ಜೀವನ ನಡೆಸಬಹುದಾಗಿದೆ.
ನಿಮ್ಮ ಜೀವನದಲ್ಲಿ ನೀವು ಕೆಲವು ಸಮಯ ಅಥವಾ ಯಾವಾಗಲಾದರೂ ಕೆಮ್ಮಿನಿಂದ ಬಳಲುತ್ತಿರಬಹುದು. ಆದರೆ ನೀವು ಏಕೆ ಕೆಮ್ಮುತ್ತಿರುವಿರಿ ಮತ್ತು ಏನಾಗಿದೆ ಎಂದು ನಿಮಗೆ ನಿಖರವಾಗಿ ತಿಳಿದಿರುವುದಿಲ್ಲ. ಸರಳವಾಗಿ ಹೇಳುವುದಾದರೆ, ಕೆಮ್ಮು ನಿಮ್ಮ ದೇಹದ ನೈಸರ್ಗಿಕ ಪ್ರತಿಕ್ರಿಯೆಯಾಗಿದೆ ಇದು ನಿಮ್ಮ ಶ್ವಾಸಕೋಶದಿಂದ ಅಪಾಯಕಾರಿ ಕಣಗಳನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ. ಈ ಕಣಗಳು ಸಾಮಾನ್ಯವಾಗಿ ಧೂಳು, ವೈರಸ್‌ಗಳು, ಬ್ಯಾಕ್ಟೀರಿಯಾ ಅಥವಾ ಸ್ರಾವಗಳು.
ನಿಮ್ಮ ಕೆಮ್ಮು ಹೆಚ್ಚಾಗಿದ್ದರೆ ಮತ್ತು ನಿರಂತರವಾಗಿದ್ದರೆ, ಇದು ನಿಮ್ಮ ಶ್ವಾಸಕೋಶಗಳಲ್ಲಿ ಸಮಸ್ಯೆ ಇರುವುದನ್ನು ಸೂಚಿಸುತ್ತದೆ.
ನಿಮ್ಮ ಕೆಮ್ಮಿಗೆ ನೀವು ಕೆಮ್ಮಿನ ಸಿರಪ್ ಅನ್ನು ತೆಗೆದುಕೊಳ್ಳುತ್ತಿದ್ದರೆ, ದಯವಿಟ್ಟು ನೆನಪಿನಲ್ಲಿಡಿ ಹೆಚ್ಚಿನ ಕೆಮ್ಮಿನ ಸಿರಪ್ ಒಳಗೊಂಡಿರುವಂತಹ ಅಪಾಯಕಾರಿ ಉತ್ತೇಜಕಗಳು ನಿಮಗೆ ಕೆಮ್ಮಿನಿಂದ ತಾತ್ಕಾಲಿಕವಾಗಿ ಪರಿಹಾರ ಒದಗಿಸಿ ಮತ್ತು ಶ್ವಾಸಕೋಶದ ತೊಂದರೆಯನ್ನು ಮರೆಮಾಚುತ್ತವೆ. ಆದ್ದರಿಂದ ನಿಮಗೆ ಕೆಮ್ಮು ನಿರಂತರವಾಗಿದ್ದರೆ, ದಯವಿಟ್ಟು ನಿಮ್ಮ ವೈದ್ಯರನ್ನು ಭೇಟಿ ಮಾಡಲು ತಡಮಾಡಬೇಡಿ.
ಆಸ್ತಮಾ ಇದು ನಿಮ್ಮ ಶ್ವಾಸಕೋಶದ ವಾಯುನಾಳದ ಮೇಲೆ ಪರಿಣಾಮ ಬೀರುತ್ತದೆ, ಅಂದರೆ ಗಾಳಿಯನ್ನು ನಿಮ್ಮ ಶ್ವಾಸಕೋಶದ ಒಳಗೆ ಮತ್ತು ಹೊರಗೆ ಸಾಗಿಸುವ ಟ್ಯೂಬ್‌ಗಳು. [Watch video] ಆಸ್ತಮಾ ಇದ್ದಾಗ, ವಾಯುನಾಳದ ಸುತ್ತಲಿರುವ ಮೂಳೆಗಳು ಬಿಗಿದುಕೊಳ್ಳುತ್ತದೆ ಮತ್ತು ಸಂಕುಚಿತವಾಗುತ್ತದೆ. ಇದು ಉಸಿರಾಡಲು ತೊಂದರೆ ಮಾಡುತ್ತದೆ. ನಿಮ್ಮ ವಾಯುನಾಳದ ಒಳಪದರಿನಲ್ಲಿ ಊದಿಕೊಳ್ಳುತ್ತದೆ, ಮತ್ತು ಕೆಲವು ಸಂದರ್ಭಗಳಲ್ಲಿ, ಅಂಟಾಗಿರುವ ಸಿಂಬಳ ಅಥವಾ ಕಫವು ಹೆಚ್ಚಾಗಿ ತಡೆಯೊಡ್ಡುವುದರಿಂದ ಉಸಿರಾಡಲು ತೊಂದರೆಯನ್ನುಂಟು ಮಾಡುತ್ತವೆ. ಅನೇಕ ಬಾರಿ ವ್ಹೀಜಿಂಗ್ ಶಬ್ದ ಕೇಳಿ ಬರುತ್ತದೆ. ಆಸ್ತಮಾದಲ್ಲಿ, ನಿಮ್ಮ ವಾಯುನಾಳಗಳು ತುಂಬಾ ಸೂಕ್ಷ್ಮವಾಗಿದ್ದು ಮತ್ತು ಅನೇಕ ಪ್ರೇರಿತ ಉದ್ರೇಕಗಳಿಗೆ ಪ್ರತಿಕ್ರಿಯಿಸುತ್ತದೆ,, ಸಿಗರೇಟು ಸೇದುವುದು, ಹೂವಿನ ಪರಾಗ ಅಥವಾ ತಂಪಾದ ಗಾಳಿ.
ಈಗ ನಿಮಗೇನಾದರೂ ಆಸ್ತಮಾ ಇದ್ದರೆ ಅಥವಾ ಅಸ್ತಮಾ ಇದ್ದವರ ಬಗ್ಗೆ ತಿಳಿದರೆ, ನೀವು ಮಾಡಬೇಕಾದ ಮೊದಲನೆಯ ಕೆಲಸ: ಆತಂಕ ಪಡಬೇಡಿ. ನೀವು ಒಬ್ಬರೇ ಇಲ್ಲ. ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ ಪ್ರಸ್ತುತ 300 ಮಿಲಿಯನ್ ಜನರು ಆಸ್ತಮಾದಿಂದ ಬಳಲುತ್ತಿದ್ದಾರೆ. ಇದು ಮಕ್ಕಳಲ್ಲಿ ಸಾಧಾರಣವಾದ ದೀರ್ಘಕಾಲದ (ಹೆಚ್ಚಿನ ಅವಧಿ) ರೋಗವಾಗಿದೆ. WHO ವರದಿಗಳು ಹೇಳುವಂತೆ ಭಾರತದಲ್ಲಿ ಮಾತ್ರ 25-30 ಮಿಲಿಯನ್ ಜನರಿಗೆ ಆಸ್ತಮಾ ಇದೆ.
ಪೂರ್ವಕಾಲದಲ್ಲಿ ಆಸ್ತಮಾ ಎಂದರೆ ಎಲ್ಲರೂ ಭಯ ಪಡುತ್ತಿದ್ದರು. ಇಂದು, ರೋಗ ಮತ್ತು ಆಧುನಿಕ ಔಷಧಗಳ ಕುರಿತು ಹೆಚ್ಚಿನ ಮಾಹಿತಿಗೆ ಧನ್ಯವಾದಗಳು, ನಿಮಗೆ ಆಸ್ತಮಾ ಇದ್ದರೂ ಸಹ ಸಾಧಾರಣವಾದ ಮತ್ತು ಸಕ್ರಿಯ ಜೀವನವನ್ನು ನಡೆಸಬಹುದು. ಸಿನಿಮಾ ತಾರೆಯರಿಗೆ, ಕ್ರಿಕೆಟ್ ಆಟಗಾರರಿಗೆ, ಪ್ರಮುಖ ವ್ಯಾಪಾರಸ್ಥರಿಗೂ ಆಸ್ತಮಾ ಇದೆ ಮತ್ತು ಇದನ್ನು ಅವರು ತಮ್ಮ ಸಫಲತೆಯ ಮಧ್ಯೆ ಬರಲು ಅವಕಾಶ ನೀಡುತ್ತಿಲ್ಲ. ನೀವು ಅಥವಾ ನೀವು ಪ್ರೀತಿಸುವವರು ಜೀವನವನ್ನು ಸಂಪೂರ್ಣವಾಗಿ ಆನಂದಿಸಲು ಇಚ್ಚಿಸಿದರೆ ಆಸ್ತಮಾ ಅಡ್ಡಿಪಡಿಸುವ ಕಾರಣವೇ ಇಲ್ಲ.
ಆಸ್ತಮಾದ ಸಾಮಾನ್ಯ ಲಕ್ಷಣಗಳೆಂದರೆ:
 |
ಎದೆಯಲ್ಲಿ ಬಿಗಿತ: ಎದೆಯಲ್ಲಿ ಹಿಸುಕಿದಂತೆ ಅನುಭವವಾಗುತ್ತದೆ, ಯಾರೋ ಒಬ್ಬರು ಹಿಂಡಿದಂತೆ ಅಥವಾ ಅದರ ಮೇಲೆ ಕುಳಿತ ಹಾಗೆ ಅನ್ನಿಸುತ್ತದೆ. |
 |
ಉಸಿರಾಟದ ಕೊರತೆ: ಉಸಿರಾಟದ ತೊಂದರೆ ಅಂದರೆ ನಿಮ್ಮ ಶ್ವಾಸಕೋಶಕ್ಕೆ ಸಾಕಾಗುವಷ್ಟು ಒಳಗೆ ಅಥವಾ ಹೊರಗೆ ಗಾಳಿ ಸಿಗುತ್ತಿಲ್ಲದಿರುವುದು. ವಿಶೇಷವಾಗಿ ಹೊರಗೆ ಉಸಿರಾಡುವುದು ನಿಜಕ್ಕೂ ಕಠಿಣ. |
 |
ಎಡಬಿಡದ ಅಥವಾ ನಿರಂತರ ಕೆಮ್ಮು: ವಾಸಿಯಾಗದ ಕೆಮ್ಮು. ಕೆಮ್ಮು ಹೆಚ್ಚಾಗಿ ರಾತ್ರಿ ಅಥವಾ ವ್ಯಾಯಾಮದ ನಂತರ ಕಾಣಿಸಿಕೊಳ್ಳುತ್ತದೆ. |
 |
ವ್ಹೀಜಿಂಗ್: ಸಾಧಾರಣವಾಗಿ ಹೊರಗೆ ಉಸಿರನ್ನು ಬಿಡುವಾಗ ಸೀಟಿ ಊದಿದ ಶಬ್ದ ಕೇಳಿಸುತ್ತದೆ. |
ಇತರೆ ರೋಗ ಲಕ್ಷಣಗಳು:
 |
ರಾತ್ರಿ ವೇಳೆ ಕೆಮ್ಮಿನಿಂದಾಗಿ ನಿದ್ರೆಯಲ್ಲಿ ತೊಂದರೆ ಆಗುತ್ತದೆ |
 |
ವ್ಯಾಯಾಮ ಮಾಡುತ್ತಿರುವಾಗ ಉಸಿರಾಟದ ತೊಂದರೆ ಆಗುತ್ತದೆ |
ದಯವಿಟ್ಟು ಗಮನಿಸಿ: ವ್ಯಕ್ತಿಯಿಂದ ವ್ಯಕ್ತಿಗೆ ಆಸ್ತಮಾ ಲಕ್ಷಣಗಳು ಬೇರೆ ಆಗಿರುತ್ತವೆ. ಯಾರೋ ಒಬ್ಬರು ಎಲ್ಲಾ ಲಕ್ಷಣಗಳನ್ನು ಹೊಂದಿರುತ್ತಾರೆ ಕೆಲವರು ಕೇವಲ ಕೆಮ್ಮು ಅಥವಾ ವ್ಹೀಜಿಂಗ್ ಅನ್ನು ಹೊಂದಿರುತ್ತಾರೆ. ನಿಮ್ಮ ರೋಗ ಲಕ್ಷಣಗಳ ಮೇಲೆ ತೀವ್ರ ನಿಗಾ ಇರಿಸಿ ಮತ್ತು ಅವುಗಳನ್ನು ನಿಮ್ಮ ವೈದ್ಯರೊಂದಿಗೆ ಚರ್ಚಿಸಿ ನಿಮ್ಮನ್ನು ಪರೀಕ್ಷಿಸಲು ನಿಮ್ಮ ಪರಿಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮತ್ತು ಇದನ್ನು ನೆನಪಿಡಿ ನೀವು ಸಮರ್ಪಕವಾದ ಚಿಕಿತ್ಸೆಯಿಂದ ನಿಮ್ಮ ಆಸ್ತಮಾ ಲಕ್ಷಣಗಳನ್ನು ನಿಯಂತ್ರಿಸಿಕೊಳ್ಳಬಹುದು.
ಆಸ್ತಮಾವನ್ನು ಹೇಗೆ ಗುಣಪಡಿಸಬಹುದು?
ನೀವು ಅಥವಾ ನಿಮ್ಮ ಪ್ರೀತಿಪಾತ್ರರಿಗೆ ಆಸ್ತಮಾ ಪತ್ತೆಯಾದರೆ, ಅದರಲ್ಲಿ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ನೀವು ಭಯಪಡುವ ಅವಶ್ಯಕತೆ ಇಲ್ಲ, ಅಥವಾ ನಿಮ್ಮ ಉದ್ಯೋಗ ಅಥವಾ ನಿಮ್ಮ ನಗರವನ್ನು ಬದಲಾಯಿಸಬೇಕಾಗಿಲ್ಲ. ಒಲಂಪಿಕ್ ಅಥ್ಲೆಟ್‌ಗಳು, ಪ್ರಮುಖ ಕ್ರಿಕೆಟ್ ಆಟಗಾರರಿಗೆ, ಚಿತ್ರ ನಟರಿಗೆ, ರಾಜಕಾರಿಣಿಗಳಿಗೆ ಆಸ್ತಮಾ ಇದ್ದರೂ ಸಹ ಅದನ್ನು ಅವರ ಸಾಮಾನ್ಯ ಜೀವನದ ಮಧ್ಯೆ ಪ್ರವೇಶಿಸಲು ಬಿಡುವುದಿಲ್ಲ.
ನಿಮ್ಮ ಆಸ್ತಮಾವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನೀವು ಮೊದಲು ನಿಮ್ಮ ಪ್ರೇರಿತಗಳನ್ನು ಅರಿತುಕೊಳ್ಳಬೇಕಾಗಿದೆ,, ನಿಮ್ಮ ರೋಗ ಲಕ್ಷಣಗಳನ್ನು ಗಮನಿಸಿ, ಮತ್ತು ನಿಮ್ಮ ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳಿ. ಆದರೆ ಮೊದಲು ಇದು ಸರಿಯಾಗಿ ಪರೀಕ್ಷೆಯಾಗಲಿ.
ಭಾರತದಲ್ಲಿ, ಅನೇಕ ಪೋಷಕರು ತಮ್ಮ ಮಕ್ಕಳಿಗೆ ಆಸ್ತಮಾ ಇದೆ ಎಂದು ಒಪ್ಪುವುದಿಲ್ಲ. ಅವರು ನನ್ನ ಮಗುವಿಗೆ ‘ಆಸ್ತಮಾ’ ಇದೆ ಎಂದು ಹೇಳುವ ಬದಲು ಮಗುವಿಗೆ ‘ವ್ಹೀಜಿಂಗ್ ಬ್ರಾಂಕೈಟಿಸ್’ ಅಥವಾ ‘ಅಲರ್ಜಿಕ್ ಬ್ರಾಂಕೈಟಿಸ್’ ಇದೆ ಎಂದು ಹೇಳುತ್ತಾರೆ. ಅವರು ವೈದ್ಯರಿಂದ ವೈದ್ಯರಲ್ಲಿಗೆ ಹೋಗುತ್ತಾರೆ ಈ ಮೂಲಕ ಮಗುವಿಗೆ ತುಂಬಾ ಕಷ್ಟಕರವಾಗುತ್ತದೆ ಮತ್ತು ಪೋಷಕರಿಗೆ ಒತ್ತಡವಾಗಿರುತ್ತದೆ. ಆಸ್ತಮಾವನ್ನು ಬೇಗನೆ ಪತ್ತೆ ಹಚ್ಚಿ ಬೇಗನೆ ಚಿಕಿತ್ಸೆ ನೀಡುವುದರ ಮೂಲಕ ಗುಣಪಡಿಸಿದರೆ, ನಿಮ್ಮ ಮಗುವು ಬಹುಬೇಗನೆ ಸಾಧಾರಣವಾದ ಬದುಕನ್ನು ನಡೆಸಬಹುದು. ಮಕ್ಕಳು ಮಕ್ಕಳಾಗೆ ಇರುತ್ತಾರೆ ಮತ್ತು ಆಸ್ತಮಾದಿಂದ ಬಳಲುತ್ತಿರುವ ಮಕ್ಕಳು ಉತ್ತಮ ಚಿಕಿತ್ಸೆಯನ್ನು ಪಡೆದುಕೊಂಡರೆ ಸಾಮಾನ್ಯ ಮಕ್ಕಳಂತೆ ಅವರು ಪ್ರತಿದಿನ ಶಾಲೆಗೆ ಹೋಗಬಹುದು, ಆಟ ಆಡಬಹುದು ಮತ್ತು ಹೌದು ಐಸ್‌ಕ್ರೀಂ ಅನ್ನು ತಿನ್ನಬಹುದು!.
ಆಸ್ತಮಾವನ್ನು ಪತ್ತೆ ಹಚ್ಚುವುದು ಸುಲಭ ಆದರೆ ಕೆಲವು ಸಂದರ್ಭಗಳಲ್ಲಿ ಇದು ನಿರಂತರ ಕೆಮ್ಮು ಎಂದು ತಪ್ಪಾಗಿ ಗ್ರಹಿಸಿ ಮತ್ತು ಗಂಭೀರವಾಗಿ ಪರಿಗಣಿಸದೆ ಅಥವಾ ಸಮಯಕ್ಕೆ ಸರಿಯಾಗಿ ಕೆಮ್ಮಿನ ಔಷಧಿಯನ್ನು ನೀಡುವುದರ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತದೆ. ಯಾವಾಗಲೂ, ಕುಟುಂಬದಲ್ಲಿ ಆಸ್ತಮಾವು ಸುತ್ತುತ್ತಿರುತ್ತದೆ. ನಿಮ್ಮ ಆಸ್ತಮಾವನ್ನು ಪರೀಕ್ಷಿಸಲು ನಿಮ್ಮ ವೈದ್ಯರಿಗೆ ಸಹಾಯ ಮಾಡಲು ಅಥವಾ ನಿಮ್ಮ ಮಗುವಿನ ಆಸ್ತಮಾ, ನಿಮ್ಮ ವೈದ್ಯರು ಕೇಳುವ ಪ್ರಶ್ನೆಗಳಿಗೆ ನೀವು ಸರಿಯಾಗಿ ಉತ್ತರ ನೀಡಿ. ಪ್ರಶ್ನೆಗಳು ನಿಮ್ಮ ರೋಗ ಲಕ್ಷಣಗಳ ಬಗ್ಗೆ, ನಿಮ್ಮ ಕುಟುಂಬದ ಚರಿತ್ರೆಯ ಬಗ್ಗೆ, ನೀವು ಸೇವಿಸುತ್ತಿರುವ ಮಾತ್ರೆಗಳ ಬಗ್ಗೆ, ನಿಮಗಿರುವ ಅಲರ್ಜಿಗಳ ಬಗ್ಗೆ ಕೇಳಲಾಗುತ್ತದೆ. ಇದನ್ನು ವೈದ್ಯಕೀಯ ಚರಿತ್ರೆ ಎನ್ನುತ್ತಾರೆ. ಅನೇಕ ಪರೀಕ್ಷೆಗಳು ವೈದ್ಯಕೀಯ ಚರಿತ್ರೆಯ ಮೇಲೆ ಅವಲಂಬಿತವಾಗಿರುತ್ತದೆ. ವೈದ್ಯರು ದೈಹಿಕ ಪರೀಕ್ಷೆಯನ್ನು ಏರ್ಪಡಿಸುತ್ತಾರೆ ಮತ್ತು ನಿಮಗೆ ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) ಮತ್ತು ಸ್ಪೈರೋಮೆಟ್ರಿಯಂತಹ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಶಿಫಾರಸು ಮಾಡುತ್ತಾರೆ.
ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್)
ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) ಸರಳವಾದ, ಕೊಂಡುಕೊಳ್ಳಬಹುದಾದ, ಉಸಿರಾಟದ ತೊಂದರೆಗಳನ್ನು ಮತ್ತು ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಬರುವ ಆಸ್ತಮಾವನ್ನು ಪರೀಕ್ಷಿಸಲು ಸಾಧನ ಸಹಾಯ ಮಾಡುತ್ತದೆ. ನೀವು ಆಸ್ತಮಾದ ಚಿಕಿತ್ಸೆಯಲ್ಲಿ ಒಳಪಟ್ಟಾಗ ನಿಮ್ಮ ಸುಧಾರಣೆಯನ್ನು ಗಮನಿಸಲು ಬಳಸುವಂತಹ ಸಾಧನವಾಗಿದೆ.
ನೀವು ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಲು BP ಓದುವ ಯಂತ್ರದಂತೆ ಮತ್ತು ಸಕ್ಕರೆ ಕಾಯಿಲೆ ಇರುವವರಿಗೆ ಗ್ಲುಕೋಮೀಟರ್ ಇರುವಂತೆಯೆ, ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) ಆಸ್ತಮಾಗೆ ಥರ್ಮಾಮೀಟರ್‌ನಂತೆ ಆಗಿರುತ್ತದೆ. ರೋಗಿಯಾಗಿ, ನೀವು ಸಾಧನದ ಮೌಥ್‌ಪೀಸ್‌ನಲ್ಲಿ ಊದುವಂತೆ ಹೇಳಲಾಗುತ್ತದೆ ಮತ್ತು ಶ್ವಾಸಕೋಶದ ಶಕ್ತಿಯನ್ನು ಪರಿಶೀಲಿಸಲು ರೀಡಿಂಗ್ ಅನ್ನು ತೆಗೆದುಕೊಳ್ಳಲಾಗುತ್ತದೆ. ಬಹಳಷ್ಟು ವೈದ್ಯರು ಅವರ ಕ್ಲಿನಿಕ್‌ಗಳಲ್ಲಿ ಹೊಂದಿರುತ್ತಾರೆ ಆದರೆ ನಿಮ್ಮ ಆಸ್ತಮಾವನ್ನು ನಿರಂತರವಾಗಿ ಪರೀಕ್ಷಿಸಬೇಕಾದರೆ ಪ್ರಮುಖ ಔಷಧಿ ಅಂಗಡಿಗಳಲ್ಲಿಯೂ ಇದು ಲಭ್ಯವಿರುತ್ತದೆ.
ನಿಮಗೆ ಆಸ್ತಮಾ ಇದ್ದರೆ ನೀವು ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) ಅನ್ನು ನೀವು ಸುಧಾರಿಸುತ್ತಿದ್ದಿರಾ ಅಥವಾ ಸುಧಾರಣೆಗಳು ಮಾಡುತ್ತಿಲ್ಲ ಎಂದು ಅಳೆಯುತ್ತದೆ. ನಿಮ್ಮ ವೈದ್ಯರು ನಿಮಗೆ ಪೀಕ್ ಫ್ಲೋ ಮೀಟರ್‌ನಲ್ಲಿ (ಬ್ರೀಥೋ ಮೀಟರ್) ಯಾವ ಸಂಖ್ಯೆ ಅಥವಾ ರೀಡಿಂಗ್ ಬಂದಿದೆ ಎಂದು ನಿಮ್ಮ ವಯಸ್ಸು ಮತ್ತು ಎತ್ತರಕ್ಕೆ ಅನುಗುಣವಾಗಿ ನಿಮಗೆ ಉತ್ತಮ ಅಥವಾ ಸಾಮಾನ್ಯ ಎಂದು ತಿಳಿಸುತ್ತದೆ. ನಿಮ್ಮ ರೀಡಿಂಗ್‌ನಲ್ಲಿ ಇಳಿಮುಖ ಕಂಡುಬಂದರೆ, ನಿಮ್ಮ ಆಸ್ತಮಾವು ನಿಯಂತ್ರಣದಲ್ಲಿಲ್ಲ ಎಂದರ್ಥ ಮತ್ತು ನಿಮಗೆ ಕೆಲವೇ ದಿನಗಳಲ್ಲಿ ಆಘಾತವಾಗಬಹುದು ಎಂದು ಸೂಚಿಸುತ್ತದೆ. ಇದು ನಿಮಗೆ ಡೋಸೆಜ್‌ಗಳನ್ನು ಹೆಚ್ಚಿಸಲು ಮುನ್ಸೂಚನೆ ಆಗಿರುತ್ತದೆ ಅಥವಾ ನೀವು ಎಷ್ಟು ಬಾರಿ ಔಷಧಿಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಸಂಖ್ಯೆಯು ಹಿಂದಿನ ರೀಡಿಂಗ್‌ಗಿಂತಲೂ ಹೆಚ್ಚಿಗೆ ಬಂದಿದ್ದರೆ, ನಿಮ್ಮ ಆಸ್ತಮಾವು ಉತ್ತಮವಾಗಿ ನಿಯಂತ್ರಣವಾಗಿದೆ ಮತ್ತು ನೀವು ಸುಧಾರಿಸುತ್ತಿದ್ದೀರಿ ಎಂದರ್ಥ. ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) ಪ್ರಮಾಣ ಸಾಮಾನ್ಯವಾಗಿದ್ದಾಗ, (ನಿಮ್ಮ ವೈದ್ಯರು ಸೂಕ್ತವಾದ ಚಿತ್ರಣವನ್ನು ಹೇಳುತ್ತಾರೆ), ಇದು ನಿಮ್ಮ ಆಸ್ತಮಾವು ನಿಯಂತ್ರಣದಲ್ಲಿದೆ ಎಂದು ತಿಳಿಸುತ್ತದೆ.
ಸ್ಪೈರೋಮೀಟರಿ ಪರೀಕ್ಷೆ
ಸ್ಪೈರೋಮೀಟರಿ ಪರೀಕ್ಷೆಯು ಹೆಚ್ಚು ಸೂಕ್ಷ್ಮತೆಯ ಮತ್ತು ಅತ್ಯಾಧುನಿಕ ಪರೀಕ್ಷೆಯಾಗಿರುತ್ತದೆ ಇದು ಮುಂಚಿನ ಆಸ್ತಮಾದ ಚಿಹ್ನೆಗಳನ್ನು ಕಂಡುಹಿಡಿಯುತ್ತದೆ. ನಿಮ್ಮ ಶ್ವಾಸಕೋಶವು ಎಷ್ಟರ ಮಟ್ಟಿಗೆ ಗಾಳಿಯನ್ನು ಇರಿಸಿಕೊಳ್ಳಬಹುದು ಮತ್ತು ಎಷ್ಟು ದಕ್ಷತೆಯಿಂದ ಗಾಳಿಯನ್ನು ಹೊರಹಾಕಬಲ್ಲದು ಎಂಬುದನ್ನು ಅಳತೆ ಮಾಡಲು ಸ್ಪೈರೊಮೀಟರ್ ಅನ್ನು ಬಳಸಲಾಗುತ್ತದೆ. ಮತ್ತೊಂದು ವಿಧದಲ್ಲಿ, ಇದು ನಿಮ್ಮ ಶ್ವಾಸಕೋಶದ ಸಾಮರ್ಥ್ಯದ ಕುರಿತು ಸೂಚನೆ ನೀಡುತ್ತದೆ ಮತ್ತು ನಿಮ್ಮ ಮಗುವಿನ ಉಸಿರಾಟದ ಸಾಮರ್ಥ್ಯದ ಬಗ್ಗೆ ಸೂಕ್ತವಾದ ವಿವರಗಳನ್ನು ನೀಡುತ್ತದೆ. ಪರೀಕ್ಷೆ ನಡೆಸುವ ಲ್ಯಾಬ್ ಅಥವಾ ವೈದ್ಯರು ನಿಮ್ಮ ECG ಪರೀಕ್ಷೆಗೆ ನೀಡುವ ಗ್ರ್ಯಾಫ್‌ನಂತೆ ನಿಮ್ಮ ಪ್ರಮಾಣದ ಮುದ್ರಿತ ಗ್ರ್ಯಾಫ್ ಅನ್ನು ನೀಡುತ್ತಾರೆ.
ಆಸ್ತಮಾವನ್ನು ಪರೀಕ್ಷಿಸಲು ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) ಮತ್ತು ಸ್ಪೈರೋಮೀಟರ್ ಪರೀಕ್ಷೆ ಎರಡನ್ನೂ ಮಾಡಲಾಗುತ್ತದೆ ಹಾಗೂ ಆಸ್ತಮಾ ನಿಯಂತ್ರಣದಲ್ಲಿರುವಾಗ ನಿಮ್ಮ ಪ್ರಗತಿಯನ್ನು ಅಳತೆ ಮಾಡಲು ಸಹಾಯವಾಗುತ್ತದೆ.
ಅದಾಗ್ಯೂ, ಈ ಪರೀಕ್ಷೆಗಳನ್ನು ಆರು ವರ್ಷಕ್ಕಿಂತಲೂ ಕಡಿಮೆ ಇರುವ ಮಕ್ಕಳಿಗೆ ಶಿಫಾರಸು ಮಾಡುವುದಿಲ್ಲ, ನಿಮ್ಮ ಮಗುವಿನ ಆಸ್ತಮಾವನ್ನು ತ್ವರಿತವಾಗಿ ಮತ್ತು ಸರಿಯಾಗಿ ಗುಣಪಡಿಸಲು ಪೋಷಕರಂತೆ ನಿಮ್ಮ ಕುಟುಂಬ ಚರಿತ್ರೆ ಮತ್ತು ಪ್ರೇರಿತಗಳಿಗೆ ಗಮನಹರಿಸುವ ಮೂಲಕ ನಿಮ್ಮ ಮಕ್ಕಳ ವೈದ್ಯರ ಜೊತೆಗೆ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಮಗುವಿನ ಬೆಳವಣಿಗೆಯನ್ನು ಗಮನಿಸಲು ನೀವು ಮತ್ತು ನಿಮ್ಮ ವೈದ್ಯರು ಸೇರಿ ಕೆಲಸ ಮಾಡಬೇಕಾಗುತ್ತದೆ ಅದಕ್ಕಾಗಿ ನಿಯತವಾಗಿ ಭೇಟಿ ಮಾಡಬೇಕಾಗುತ್ತದೆ.
ಆಸ್ತಮಾ ಪ್ರೇರಿತವಾಗಿದೆ ಅದರಿಂದ ಹೇಗೆ ದೂರವಿರುವುದು |
ಪ್ರೇರಕಗಳೆಂದರೆ ಶ್ವಾಸಕೋಶದ ವಾಯುನಾಳಗಳನ್ನು ಪ್ರಚೋದಿಸುವಂತವು ಮತ್ತು ಆಸ್ತಮಾದ ಲಕ್ಷಣಗಳಿಗೆ ಕಾರಣವಾಗುತ್ತದೆ. ಪ್ರತಿಯೊಬ್ಬರ ಆಸ್ತಮಾ ವಿಭಿನ್ನವಾಗಿರುತ್ತದೆ ಮತ್ತು ನಿಮಗೆ ಆಸ್ತಮಾ ಬರಲು ಒಂದಕ್ಕಿಂತ ಹೆಚ್ಚು ಪ್ರೇರಕಗಳಿರುತ್ತವೆ. ನಿಮ್ಮ ಪ್ರೇರಿತವು ಧೂಳಿನ ಕಣಗಳು ಮತ್ತು ಸಾಕುಪ್ರಾಣಿಗಳಿಂದ ಹಿಡಿದು ಮಾಲಿನ್ಯ ಮತ್ತು ಪರಾಗದಿಂದಲೂ ಸಹ ಆಗಿರಬಹುದು. ನಿಮ್ಮ ಪ್ರೇರಿತಗಳನ್ನು ಅರಿತುಕೊಳ್ಳಲು ಮತ್ತು ನೀವು ಅವುಗಳನ್ನು ತಡೆಯಲು ನಿಮ್ಮ ಸಾಮರ್ಥ್ಯವನ್ನು ಬಳಸುವುದು ಅತ್ಯಂತ ಮುಖ್ಯವಾಗಿದೆ. ಏಕೆಂದರೆ ಆಸ್ತಮಾವನ್ನು ನಿಯಂತ್ರಿಸಬಹುದು ಮತ್ತು ನೀವು ಸಾಮಾನ್ಯವಾದ ಜೀವನವನ್ನು ನಡೆಸಬಹುದು.
ನಿಮ್ಮ ಪ್ರೇರಿತವನ್ನು ನಿರ್ದಿಷ್ಟವಾಗಿ ಗುರುತಿಸುವುದು ಕಷ್ಟವಾಗಬಹುದು ಆದರೆ ಕೆಲವು ಸಂದರ್ಭಗಳಲ್ಲಿ ಸುಳಿವುಗಳು ಸ್ಪಷ್ಟವಾಗಿರುತ್ತವೆ. ಉದಾಹರಣೆಗಾಗಿ: ನಿಮ್ಮ ರೋಗ ಲಕ್ಷಣಗಳು ಬೆಕ್ಕು, ಅಥವಾ ನಾಯಿ ಅಥವಾ ಪಕ್ಷಿಯೊಂದಿಗೆ ಸ್ವಲ್ಪ ಸಂಪರ್ಕ ಹೊಂದಿದರೆ ಆರಂಭವಾಗುತ್ತವೆಯೋ. ಅಥವಾ ಸಿಡಿಮದ್ದುಗಳ ಹೊಗೆಯಿಂದ ಕಲುಷಿತಗೊಂಡ ಗಾಳಿಯಿಂದಲೂ ನಿಮ್ಮ ರೋಗ ಲಕ್ಷಣಗಳು ಆರಂಭವಾಗುತ್ತವೆ. ನೀವು ಖಚಿತವಾಗಿ ಗಾಳಿಯಲ್ಲಿರುವ ಕೆಲವು ಅಂಶಗಳು ಅಲರ್ಜಿಯನ್ನು ಹೊಂದಿರಬಹುದು ಇವು ನಿಮ್ಮ ವಾಯುನಾಳವನ್ನು ಕಿರಿಕಿರಿಗೊಳಿಸಬಹುದು ಮತ್ತು ಆಘಾತವನ್ನು ತರಬಹುದಾಗಿದೆ.
ಆಸ್ತಮಾ ಬರಲು ಅತೀ ಸಾಮಾನ್ಯವಾದ ಕಾರಣ ವಾತವರಣದಲ್ಲಿ ಕೆಲವು ಪದಾರ್ಥಗಳಿಂದ ಅಂದರೆ ಮನೆ ದೂಳು, ತಂಬಾಕು ಹೊಗೆ, ಕೆಲಸ ಮಾಡುವ ಸ್ಥಳದಲ್ಲಿರುವ ರಾಸಾಯನಿಕಗಳ ಕಿರಿಕಿರಿಗಳು ವಾಯುನಾಳಕ್ಕೆ ತೊಂದರೆಯನ್ನುಂಟು ಮಾಡುತ್ತವೆ. (ಕೈಗಾರಿಕೆಗಳಲ್ಲಿರುವ ಕಲ್ಲಿದ್ದಲು, ಸಿಮೆಂಟ್, ಪೇಂಟ್, ಆಸ್ಬೆಸ್ಟಾಸ್, ಗಣಿ, ಸಕ್ಕರೆ, ಕೀಟನಾಶಕಗಳು) ಹೀಗೆ ಅನೇಕ ಸ್ಥಳಗಳಲ್ಲಿ ಗಾಳಿ ಕಲುಷಿತವಾಗಿ ಮತ್ತು ಹೊರಗಡೆ ಇರುವ ಅಲರ್ಜಿಗಳಾದ ಹೂಪರಾಗಗಳಿಂದ ಕಲುಷಿತವಾಗುತ್ತದೆ. ಇಕ್ಕಟ್ಟಾದ ಪ್ರದೇಶಗಳಲ್ಲಿ ವಾಸಿಸುವವರಿಗೆ ರೋಗ ಬರುವ ಹೆಚ್ಚಿನ ಸಾಧ್ಯತೆಗಳಿವೆ, ಇವರು ತಡೆಗೋಡೆಗಳು ಮತ್ತು ಕಟ್ಟಿಗೆ ದಹನದ ಹೊಗೆಯಿಂದ ಆಸ್ತಮಾ ಬರುವ ಸಾಧ್ಯತೆಗಳು ಹೆಚ್ಚಾಗಿದೆ.
ಆಸ್ತಮಾವನ್ನು ಪ್ರೇರಿತಗಳಿಂದ ದೂರವಿರಲು ಇಲ್ಲಿ ಕೆಲವು ಸಾಮಾನ್ಯವಾದ ಸಲಹೆಗಳಿವೆ.
 |
ಮನೆಯಲ್ಲಿರುವ ಧೂಳಿನ ಕಣಗಳು:
ಧೂಳಿನ ಕಣಗಳು ಅತೀ ಸಾಮಾನ್ಯವಾದ ಪ್ರೇರಿತಗಳು. ಅವು ಸಣ್ಣ ಜೀವಿಗಳಾಗಿದ್ದು ಕಾರ್ಪೆಟ್‌ನಲ್ಲಿರುವ ಧೂಳಿನಲ್ಲಿ, ಮ್ಯಾಟ್ರೆಸ್‌ಗಳಲ್ಲಿ, ಸೋಫಾಗಳಲ್ಲಿ, ಪರದೆಯಲ್ಲಿ ಮತ್ತು ಗೊಂಬೆಗಳ ಮೇಲೆಯೂ ಧೂಳು ಜೀವಿಸುತ್ತವೆ.
ಉಪಯೋಗಕಾರಿ ಸಲಹೆಗಳು: ನೀವು ಪ್ರತಿದಿನ ಕಾರ್ಪೆಟ್‌ಗಳನ್ನು ಶುಭ್ರಗೊಳಿಸದೆ ಇದ್ದರೆ ಕಾರ್ಪೆಟ್‌ಗಳಿಂದ ದೂರವಿರಿ. ನಿಮಗೆ ಆಸ್ತಮಾ ಇದ್ದರೆ, ಬೇರೆಯವರಿಗೆ ಶುಭ್ರಗೊಳಿಸಲು ಹೇಳಿ ಅಥವಾ ನೀವು ಮನೆಯಲ್ಲಿ ಇಲ್ಲದಿರುವಾಗ ಶುಭ್ರಗೊಳಿಸಿ. ನಿಮ್ಮ ಮಗುವಿಗೆ ಆಸ್ತಮಾ ಇದ್ದರೆ, ಅವರು ಶಾಲೆಗೆ ಹೋದಾಗ ಮನೆಯನ್ನು ಶುಭ್ರಗೊಳಿಸಿ.
ನಿಮ್ಮ ಹಾಸಿಗೆಯಿಂದ ಎಲ್ಲಾ ಗೊಂಬೆಗಳನ್ನು ತೆಗೆದುಹಾಕಿ.
2 ವಾರಕೊಮ್ಮೆ ಗೊಂಬೆಗಳನ್ನು ತೊಳೆದು ಸೂರ್ಯನ ಬಿಸಿಲಿಗೆ ಚೆನ್ನಾಗಿ ಒಣಗಿಸಿ.
|
 |
ಸಾಕು ಪ್ರಾಣಿಗಳು:
ಆಸ್ತಮಾ ರೋಗ ಲಕ್ಷಣಗಳು ಬರುವುದಕ್ಕೆ ಸಾಕು ಪ್ರಾಣಿಗಳು ಸಾಮಾನ್ಯವಾದ ಪ್ರೇರಿತಗಳು. ಅವುಗಳ ರೆಕ್ಕೆಗಳು, ಜೊಲ್ಲು, ಅರೆಚರ್ಮ ಅಥವಾ ಮೂತ್ರ ಇವುಗಳಿಂದ ಆಸ್ತಮಾ ಬರುತ್ತದೆ.
ಉಪಯೋಗಕಾರಿ ಸಲಹೆಗಳು: ತುಪ್ಪುಳ ಇರುವ ಮತ್ತು ರೆಕ್ಕೆ ಇರುವ ಸಾಕುಪ್ರಾಣಿಗಳನ್ನು ದೂರವಿರಿಸಿ. ಅವುಗಳನ್ನು ನಿಮ್ಮ ಮನೆಯ ಮುಖ್ಯ ಸ್ಥಳ ಮತ್ತು ಮಲಗುವ ಪ್ರದೇಶದಿಂದ ದೂರವಿಡಿ.
ನೀವು ಸಾಕುಪ್ರಾಣಿಯನ್ನು ಇರಿಸಿಕೊಳ್ಳಲೇಬೇಕೆಂದಿದ್ದರೆ, ಮೀನನ್ನು ಇರಿಸಿಕೊಳ್ಳಿ.
|
 |
ಧೂಮಪಾನ ಮತ್ತು ವಾಯು ಮಾಲಿನ್ಯ:
ಹೆಚ್ಚಿನ ವೇಳೆಯಲ್ಲಿ, ನಾವು ಕಲುಷಿತ ಗಾಳಿಯನ್ನು ಉಸಿರಾಡುತ್ತೇವೆ ಇದು ಆಸ್ತಮಾ ರೋಗ ಲಕ್ಷಣಗಳನ್ನು ಪ್ರೇರೇಪಿಸಬಹುದು. ಸಿಗರೇಟಿನ ಹೊಗೆ, ಕಾರಿನಿಂದ ಹೊರಹೋಗುವ ಹೊಗೆ, ಸಿಡಿಮದ್ದುಗಳ ಹೊಗೆ, ಕಟ್ಟಿಗೆ ಒಲೆಯಿಂದ ಬರುವ ಹೊಗೆ...ಶ್ವಾಸನಾಳಗಳನ್ನು ಕೆರಳಿಸುವಂತಹ ಅನೇಕ ಬೇರೆ ಬೇರೆ ರೀತಿಯ ಕಣಗಳನ್ನು ಹೊಂದಿರುತ್ತದೆ.
ಉಪಯೋಗಕಾರಿ ಸಲಹೆಗಳು: ನಿಮಗೆ ಆಸ್ತಮಾ ಇದ್ದರೆ, ಧೂಮಪಾನವನ್ನು ನಿಲ್ಲಿಸಿ. ಇದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ.
ಧೂಮಪಾನ ಮಾಡುವವರಿಗೆ ಕಳಕಳಿಯ ವಿನಂತಿ ಎಂದರೆ ಧೂಮಪಾನವನ್ನು ನಿಲ್ಲಿಸಿ ಅಲ್ಲದೆ ಧೂಮಪಾನ ಮಾಡುವವರ ಜೊತೆಗೆ ನಿಲ್ಲುವುದು ಸಹ ಹಾನಿಕಾರಕ.
ನಿಮ್ಮ ಕುಟುಂಬದ ಸದಸ್ಯರು ಧೂಮಪಾನ ಮಾಡುತ್ತಿದ್ದರೆ, ಅವರಿಗೆ ಹೊರಗಡೆ ಹೋಗಿ ಧೂಮಪಾನ ಮಾಡಲು ವಿನಂತಿಸಿ, ಸಿಗರೇಟಿನ ಹೊಗೆಯು ಪರದೆಗಳಲ್ಲಿ, ಕಾರ್ಪೆಟ್‌ಗಳಲ್ಲಿ ಬಹುಕಾಲದವರೆಗೆ ಹುದುಗಿರುತ್ತದೆ ಮತ್ತು ಬಹುಕಾಲದವರೆಗೆ ಅಡಗಿರುತ್ತದೆ.
ಮಾಲಿನ್ಯವು ಹೆಚ್ಚಾಗಿರುವಂತಹ ಸಮಯದಲ್ಲಿ ಪ್ರಯಾಣಿಸುವುದನ್ನು ತಪ್ಪಿಸಿ.
|
 |
ನಿಮ್ಮ ಉದ್ಯೋಗ/ಕೆಲಸದ ಸ್ಥಳ:
ಕೆಲವು ಸಂದರ್ಭಗಳಲ್ಲಿ ನಿಮ್ಮ ಉದ್ಯೋಗ ಅಥವಾ ಕೆಲಸದ ಸ್ಥಳವು ಪ್ರೇರಿತಗಳಾಗಬಹುದು. ಆಭರಣ ವ್ಯಾಪಾರ, ಪೇಯಿಂಟಿಂಗ್, ಕ್ರೀಮಿನಾಶಕ, ಕಲ್ಲುಗಣಿ, ಪೇಂಟಿಂಗ್ ಮತ್ತು ಪ್ಲಾಸ್ಟಿಕ್ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು, ಅಡುಗೆ ಭಟ್ಟರು ಮತ್ತು ಬೇಕರ್ಸ್, ಬೆಸುಗೆ ಹಾಕುವವನು ಮತ್ತು ಲೋಹಲೇಪಗಾರರು, ಫೋಮ್ ಕೆಲಸಗಾರರು ಮತ್ತು ಸ್ಪ್ರೇ ಪೆಂಟರ್‌ಗಳು, ಕ್ಷೌರಿಕರು, ಮರಗೆಲಸ ಮಾಡುವವರು ಇವರೆಲ್ಲರು ಆಸ್ತಮಾಕ್ಕೆ ಗುರಿಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಬಹುಶಃ ಇದು ಕೆಲವು ರಾಸಾಯನಿಕಗಳ ವಾಸನೆ ಅಥವಾ ಬೇರೆ ಬೇರೆ ಆಗಿರುವ ಕಣಗಳ ರೂಪವು ಸಹ ಶ್ವಾಸಕೋಶದಲ್ಲಿ ಕಿರಿಕಿರಿ ಉಂಟು ಮಾಡುತ್ತವೆ.
ಉಪಯೋಗಕಾರಿ ಸಲಹೆಗಳು: ಸರಿಯಾದ ಮುಂಜಾಗ್ರತೆ ಕ್ರಮವನ್ನು ತೆಗೆದುಕೊಳ್ಳಿ, ನಿಮ್ಮ ನಿಯಂತ್ರಣವನ್ನು ಸರಿಯಾಗಿ ಮತ್ತು ನಿಯಮಿತವಾಗಿ, ಮತ್ತು ನಿಮಗೆ ಸಲಹೆ ನೀಡುವಂತಹ ವೈದ್ಯರನ್ನು ಭೇಟಿ ಮಾಡಿ.
|
 |
ಶೀತ ಮತ್ತು ವೈರಸ್‌ಗಳು:
ಶೀತ ಮತ್ತು ವೈರಸ್ ಸೋಂಕುಗಳು ಆಸ್ತಮಾದ ಅತೀ ಸಾಮಾನ್ಯವಾದ ಪ್ರೇರಿತಗಳು. ಕೆಲವು ಸಂದರ್ಭಗಳಲ್ಲಿ ಎಲ್ಲರಿಗೂ ಅಥವಾ ಬೇರೆಯವರು ಶೀತದಿಂದ ಬಳಲುತ್ತಿದ್ದರೆ, ಇವುಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಆಗುವುದಿಲ್ಲ.
ಉಪಯೋಗಕಾರಿ ಸಲಹೆಗಳು: ಆರೋಗ್ಯಕಾರಿ ಆಹಾರವನ್ನು ಸೇವಿಸಿ, ಸದೃಡವಾಗಿರಿ. ಸಾಧ್ಯವಾದಷ್ಟೂ ಬಾರಿ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ. ನಿಮ್ಮ ಬೆರಳುಗಳಿಂದ ನಿಮ್ಮ ಮುಖವನ್ನು ಮುಟ್ಟಿಕೊಳ್ಳುವುದನ್ನು ತಪ್ಪಿಸಿ.
|
 |
ಉದ್ವೇಗ:
ಬಲವಾದ ಉದ್ವೇಗ, ಒತ್ತಡ ಅಥವಾ ಅತೀಯಾಗಿ ನಗುವುದರಿಂದಲೂ ಸಹ ಆಸ್ತಮಾ ಪ್ರೇರಿಪಿತವಾಗುವುದು.
ಉಪಯೋಗಕಾರಿ ಸಲಹೆಗಳು: ನಿಮ್ಮ ಒತ್ತಡದ ಬಗ್ಗೆ ಕಾಳಜಿ ತೆಗೆದುಕೊಳ್ಳಿ ಮತ್ತು ಜೀವನದಲ್ಲಿ ಸಮತೋಲನ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳಿ.
|
 |
ವ್ಯಾಯಾಮ:
ಆಸ್ತಮಾ ಇರುವವರಿಗೂ ಮತ್ತು ಎಲ್ಲರಿಗೂ ವ್ಯಾಯಾಮ ಒಳ್ಳೆಯದು. ಕೆಲವು ಜನರು ವ್ಯಾಯಾಮ ಮಾಡುವಾಗ ಅಥವಾ ನಂತರ ಬೇರೆಯವರಿಗಿಂತಲೂ ಹೆಚ್ಚಿನ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಾರೆ. ನಿಮ್ಮ ಆಸ್ತಮಾ ನಿಯಂತ್ರಣದಲ್ಲಿದ್ದರೆ, ವ್ಯಾಯಾಮ ಮಾಡುವುದಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೂ ರೋಗ ಲಕ್ಷಣಗಳು ಗಂಭೀರವಾದಲ್ಲಿ, ದಯವಿಟ್ಟು ವೈದ್ಯರನ್ನು ಭೇಟಿ ಮಾಡಿ.
ಉಪಯೋಗಕಾರಿ ಸಲಹೆಗಳು: ಯೋಗ ಮಾಡುವುದು ಆಸ್ತಮಾಗೆ ಒಳ್ಳೆಯ ವ್ಯಾಯಾಮ, ಮತ್ತು ಈಜುವುದು, ಹಾಕಿ, ಫುಟ್‌ಬಾಲ್, ಕ್ರಿಕೆಟ್‌ನಂತಹ ಕ್ರೀಡೆಗಳನ್ನು ಆಡುವುದು, ನಿರಂತರವಾಗಿ ಓಡುವ ಅಗತ್ಯವಿಲ್ಲ ಮತ್ತು ನಿಮಗೆ ಮಧ್ಯೆ ವಿಶ್ರಾಂತಿ ಸಹ ನೀಡುತ್ತದೆ.
ನೀವು ವ್ಯಾಯಾಮ ಅಥವಾ ಜಿಮ್ ಸೇರುವ ಮೊದಲು ನಿಮ್ಮ ಕುಟುಂಬ ವೈದ್ಯರೊಂದಿಗೆ ಸಮಾಲೋಚಿಸಿ. ನಿಮ್ಮ ಜಿಮ್ ಬೋಧಕರಿಗೆ ತಿಳಿಸಿ, ಅಥವಾ ನಿಮ್ಮ ಶಾಲೆಯಲ್ಲಿನ ಕ್ರೀಡೆ ತರಬೇತುದಾರರಿಗೆ ನಿಮಗೆ ಆಸ್ತಮಾ ಇರುವುದರ ಬಗ್ಗೆ ಹೇಳಿ ಮತ್ತು ಅವರಿಗೆ ನಿಮ್ಮ ಉಪಶಮನ ಮಾಡುವ ಅಥವಾ ಕಾಪಾಡುವ ಔಷಧಿಗಳ ಬಗ್ಗೆ ತಿಳಿಸಿ. ಯಾವಾಗಲೂ ನಿಮ್ಮ ಔಷಧಿಗಳನ್ನು ಇರಿಸಿಕೊಳ್ಳಿ ನಿಮ್ಮ ಜೊತೆಗೆ ಬರವಣಿಗೆ ಸೂಚನೆಗಳನ್ನು ಇರಿಸಿಕೊಳ್ಳಿ ಮತ್ತು ಹೆಚ್ಚುವರಿ ನಿವಾರಕಗಳು/ರಕ್ಷಕ ಔಷಧಿಗಳನ್ನು ಇರಿಸಿಕೊಳ್ಳಬೇಕು.
|
 |
ಆಹಾರ:
ಆಸ್ತಮಾದಿಂದ ಬಳಲುತ್ತಿರುವ ಬಹಳಷ್ಟು ಜನರು ಕಟ್ಟುನಿಟ್ಟಾದ ಆಹಾರ ಕ್ರಮವನ್ನು ಪಾಲಿಸುವುದಿಲ್ಲ ಆದರೆ ಕೆಲವು ಜನರಿಗೆ ಬೀಜಗಳು, ಮೊಟ್ಟೆಗಳು, ಮೀನು, ಹಸುವಿನಹಾಲು, ಶೆಲ್ ಮೀನು, ಕಿಣ್ವ ಪದಾರ್ಥಗಳು, ಕೆಲವು ಆಹಾರ ಪದಾರ್ಥಗಳ ಬಣ್ಣ ಮತ್ತು ಸಂಗ್ರಹಿಸಿದ್ದು, ಮದ್ಯ, ಮದ ಏರಿಸುವ ಮದ್ಯ, ತಯಾರಿಸಿದ ಆಹಾರವನ್ನು ಕಂಡರೆ ಅಲರ್ಜಿ ಆಗುತ್ತದೆ. Click here to see how parents have no fear that asthma might harm their children
ಉಪಯೋಗಕಾರಿ ಸಲಹೆಗಳು: ಸಂಗ್ರಹಿಸಿದ ಮತ್ತು ಪ್ಯಾಕ್ ಮಾಡಿದ ಕೃತಕ ಆಹಾರಗಳಿಂದ ದೂರವಿರಿ. ಹಾಗೆಯೇ ನಿಮ್ಮ ಅಲರ್ಜಿಯು ಬೀಜಗಳು, ಮೊಟ್ಟೆಗಳು, ಹಸುವಿನಹಾಲು, ಶೆಲ್ ಮೀನು ಮತ್ತು ಕಿಣ್ವ ಪದಾರ್ಥಗಳು ಆಗಿವೆಯೇ ಎಂದು ಪರೀಕ್ಷಿಸಿ. ಪ್ಯಾಕ್ ಮಾಡಿದ ಆಹಾರ ಮೇಲಿನ ಮುದ್ರಣವನ್ನು ಜಾಗೃತೆಯಿಂದ ಓದಿ.
ಅಲರ್ಜಿ ಪರೀಕ್ಷೆ ಮಾಡಿಸಿಕೊಳ್ಳಲು ನಿಮ್ಮ ವೈದ್ಯರನ್ನು ಭೇಟಿ ಮಾಡಿ.
|
 |
ಹಾರ್ಮೋನುಗಳು:
ಹೌದು, ನಿರ್ದಿಷ್ಟವಾಗಿ ಮಹಿಳೆಯರಲ್ಲಿ ಹಾರ್ಮೋನುಗಳು ಆಸ್ತಮಾದ ಪ್ರೇರಿತಗಳಾಗಬಹುದು. ಕೆಲವರು ಆಸ್ತಮಾ ರೋಗ ಲಕ್ಷಣಗಳನ್ನು ಯೌವನದ ಸಮಯದಲ್ಲಿ, ಅವರ ಮುಟ್ಟಿನ ಮೊದಲು, ಗರ್ಭಾವಸ್ಥೆಯ ಸಮಯದಲ್ಲಿ, ಮತ್ತು ರಜೋ ನಿವೃತ್ತಿ ಸಮಯದಲ್ಲಿ ಅನುಭವಿಸುತ್ತಾರೆ.
ಉಪಯೋಗಕಾರಿ ಸಲಹೆಗಳು: ಹಾರ್ಮೋನುಗಳು ನಿಮ್ಮ ರೋಗ ಲಕ್ಷಣಗಳನ್ನು ಪ್ರೇರೇಪಿಸುತ್ತಿವೆ ಎಂದು ನೀವು ಭಾವಿಸಿದರೆ, ನಿಮ್ಮ ವೈದ್ಯರನ್ನು ಭೇಟಿ ಮಾಡಿ.
|
 |
ಔಷಧಿಗಳು:
ಕೆಲವು ಔಷಧಿಗಳು ನಿಮ್ಮ ರೋಗ ಲಕ್ಷಣಗಳನ್ನು ಪ್ರೇರಿಪಿಸಬಹುದು. ಇದು ಫ್ಲೂ, ಹೃದಯ ಸಂಬಂಧಿ ಸಮಸ್ಯೆಗಳು, ಗ್ಲಾಕೋಮಗಳಿಗೆ ಔಷಧಿಯನ್ನು ಹೊಂದಿದೆ.
ಉಪಯೋಗಕಾರಿ ಸಲಹೆಗಳು: ನಿಮ್ಮ ವೈದ್ಯರನ್ನು ಭೇಟಿ ಮಾಡಿ ಮತ್ತು ನೀವು ಯಾವಾಗಲೂ ತೆಗೆದುಕೊಳ್ಳುತ್ತಿರುವ ಔಷಧಿಗಳನ್ನು ತಿಳಿಸಿ.
|
 |
ಮೊಲ್ಡ್‌ಗಳು, ಫಂಗಸ್ ಮತ್ತು ಪೋಲನ್:
ಹೂ ಬೀಡುವ ಸಸ್ಯಗಳಿಂದ ಬಿಡುಗಡೆಯಾಗುವ ಪೋಲನ್ ಸಹ ರೋಗ ಲಕ್ಷಣಗಳನ್ನು ಪ್ರೇರಿಪಿಸುತ್ತದೆ. ನೀವು ತೇವ ಗೋಡೆಯ ಮೇಲೆ ಬೆಳೆದಿರುವ ಫಂಗಸ್‌ಗಳನ್ನು, ತೇವ ಬಟ್ಟೆಗಳು, ಒದ್ದೆ ಶೌಚಾಲಯಗಳು ಮತ್ತು ಉದ್ಯಾನವನದಲ್ಲಿರುವ ಕೊಳೆತ ಎಲೆಗಳ ರಾಶಿಯ ಬಗ್ಗೆ ಗಮನ ಹರಿಸಬೇಕು.
ಉಪಯೋಗಕಾರಿ ಸಲಹೆಗಳು: ನಿಮ್ಮ ಮನೆಯನ್ನು ಗಾಳಿ ಬರುವಂತೆ ಇರಿಸಿ. ನಿಮ್ಮ ಮನೆಯಲ್ಲಿರುವ ಗೋಡೆಗಳು ತೇವವಿಲ್ಲದಿರುವುದನ್ನು ಖಚಿತ ಪಡಿಸಿಕೊಳ್ಳಿ.
|
 |
ವಾತಾವರಣ:
ಉಷ್ಣಾಂಶದಲ್ಲಿ ಹಠಾತ್ತನೆ ಬದಲಾವಣೆ ಆದರೆ, ಬಿರುಗಾಳಿಯ ದಿನಗಳು, ತೇವದ ದಿನಗಳು ಸಹ ಕೆಲವು ಸಲ ಪ್ರೇರಿತಗಳಾಗಿ ವರ್ತಿಸಬಹುದು.
ಉಪಯೋಗಕಾರಿ ಸಲಹೆಗಳು: ಮಂಜಿನಲ್ಲಿ ಮುಂಜಾನೆ ವಿಹಾರಕ್ಕೆ ಹೋಗುವುದನ್ನು ನಿಲ್ಲಿಸಿ. ಗಾಳಿ ಬೀಸುತ್ತಿರುವ ಸಮಯದಲ್ಲಿ ನಿಮ್ಮ ಮುಖದ ಮೇಲೆ ಸ್ಕಾರ್ಫ್ ಅನ್ನು ಧರಿಸಿರಿ. ಹೆಚ್ಚಿನ ಉಷ್ಣಾಂಶವಿರುವ ಹೊರ ಮತ್ತು ಒಳ ಪ್ರದೇಶಗಳಿಗೆ ಹೋಗಬೇಡಿ... ತಂಪಾದ ಕೊಠಡಿಯಿಂದ ಹೊರಗಡೆಯ ತೇವವಾದ ಉಷ್ಣಾಂಶದ ಕಡೆಗೆ.
|
 |
ಸೊಳ್ಳೆ ಬತ್ತಿಗಳು, ರೂಮ್ ಫ್ರೆಶ್‌ನರ್‌ಗಳು, ಶುಚಿಗೊಳಿಸುವ ಉತ್ಪನ್ನಗಳು:
ಕೆಲವು ಜನರಿಗೆ ಈ ಉತ್ಪನ್ನಗಳಲ್ಲಿರುವ ರಾಸಾಯನಿಕಗಳು ಸಹ ಪ್ರೇರಿತಗಳಾಗಬಹುದು. ಪ್ರಾಯಶಃ, ಭಾರತದ ಪುಣೆಯಲ್ಲಿರುವ ಚೆಸ್ಟ್ ಸಂಶೋಧನಾ ಪ್ರತಿಷ್ಠಾನ ನಡೆಸಿದ ಸ್ವತಂತ್ರ ಸಂಶೋಧನೆಯ ಪ್ರಕಾರ ಒಂದು ಸೊಳ್ಳೆಬತ್ತಿಯನ್ನು ಸುಟ್ಟರೆ ಉತ್ಪತ್ತಿಯಾಗುವ ಕಣಗಳಿಂದಾಗುವ ವಾಯು ಮಾಲಿನ್ಯವು 75 ರಿಂದ 137 ಸಿಗರೇಟುಗಳನ್ನು ಸುಡುವುದಕ್ಕೆ ಸಮವಾಗುತ್ತದೆ!
ಉಪಯೋಗಕಾರಿ ಸಲಹೆಗಳು: ಸೊಳ್ಳೆಗಳನ್ನು ದೂರವಿಡಲು ನಿಮ್ಮ ಕಿಟಕಿಯಲ್ಲಿ ವೈರ್ ಮೆಶ್‌ನ ಸೊಳ್ಳೆ ಪರದೆಯನ್ನು ಹಾಕಿಸಿ. ಕೃತಕವಾಗಿ ರೂಮ್ ಫ್ರೆಶ್‌ನರ್ ಅನ್ನು ಬಳಸುವ ಬದಲು ನಿಮ್ಮ ಕೊಠಡಿಯನ್ನು ಗಾಳಿ ಬರುವಂತೆ ಇರಿಸಿ ಬಲವಾದ ವಾಸನೆ ಇರುವ ಶುಚಿಗೊಳಿಸುವ ಉತ್ಪನ್ನಗಳನ್ನು ಬಳಸಬೇಡಿ.
|
ದಯವಿಟ್ಟು ಗಮನಿಸಿ: ಹಳೆಯ ಗಾದೆ ಮಾತಿನಲ್ಲಿ ಸತ್ಯ ಇದೆ, ‘ತಡೆಗಟ್ಟುವುದು ಉತ್ತಮ…’. ನಿಮಗೆ ಆಸ್ತಮಾ ಇದ್ದರೆ, ನಿಮ್ಮ ಪ್ರೇರಿತಗಳ ಮೇಲೆ ತೀವ್ರ ನಿಗಾ ಇರಿಸಿ ಮತ್ತು ಅವುಗಳನ್ನು ತಡೆಗಟ್ಟಿ. ನಿಮ್ಮ ಪ್ರೇರಿತಗಳ ಬಗ್ಗೆ, ನಿಮ್ಮ ರೋಗ ಲಕ್ಷಣಗಳು ಮತ್ತು ಚಿಕಿತ್ಸೆಯ ಬಗ್ಗೆ ನಿಮಗೇನಾದರೂ ಸಂದೇಹಗಳಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಭೇಟಿ ಮಾಡಿ.
ಕೆಮ್ಮಿನ ಬಗ್ಗೆ ಇನ್ನಷ್ಟು ತಿಳಿಯಿರಿ |
ನೀವು ಕೆಮ್ಮಿದಾಗ, ನಿಮ್ಮ ಶ್ವಾಸಕೋಶದಿಂದ ಕಣಗಳು ಮತ್ತು ಸ್ರಾವಗಳು ತೆರವುಗೊಳಿಸಲಾಗುವುದು. ಕೆಮ್ಮು ನಿಮ್ಮ ಶ್ವಾಸಕೋಶದಲ್ಲಿರುವ ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡಲು ದೇಹದ ನೈಸರ್ಗಿಕವಾದ ಮಾರ್ಗವಾಗಿದೆ.
ಆದಾಗ್ಯೂ ಕೆಮ್ಮು ಕೆಲವು ಸಂದರ್ಭಗಳಲ್ಲಿ ಕಿರಿಕಿರಿಯನ್ನುಂಟು ಮಾಡುತ್ತದೆ. ಕೆಮ್ಮು ನಿಮ್ಮನ್ನು ಆಯಾಸಗೊಳಿಸಬಹುದು ಮತ್ತು ಅಲ್ಲದೆ ನಿಮ್ಮ ನಿದ್ರೆಯನ್ನು ಭಂಗ ಮಾಡುತ್ತದೆ. ನಿಮ್ಮ ಕೆಮ್ಮು ಹೆಚ್ಚಾಗಿದ್ದರೆ ಮತ್ತು ನಿರಂತರವಾಗಿದ್ದರೆ, ಇದು ನಿಮ್ಮ ಶ್ವಾಸಕೋಶಗಳಲ್ಲಿ ಸಮಸ್ಯೆ ಇರುವುದನ್ನು ಸೂಚಿಸುತ್ತದೆ.
ಕೆಮ್ಮನ್ನು ಸಾಮಾನ್ಯವಾಗಿ ಅದರ ಕಾಲಾವಧಿಯ ಮೇಲೆ ವಿಂಗಡಿಸಲಾಗುತ್ತದೆ. ನಿಮ್ಮ ಕೆಮ್ಮು 3 ವಾರಗಳವರೆಗೆ ಇದ್ದರೆ ಅದನ್ನು ಉಲ್ಬಣಗೊಂಡ ಕೆಮ್ಮು ಎನ್ನಲಾಗುತ್ತದೆ. ನಿಮ್ಮ ಕೆಮ್ಮು 8 ವಾರಗಳವರೆಗೆ ಇದ್ದರೆ, ಅಂತಹ ಕೆಮ್ಮನ್ನು ದೀರ್ಘಕಾಲದ ಕೆಮ್ಮು ಎಂದು ಕರೆಯಬಹುದು.
ಕೆಮ್ಮು ಉಲ್ಬಣಗೊಳ್ಳಲು ಕಾರಣ:
 |
ಶ್ವಾಸನಾಳದ ಮೇಲ್ಭಾಗದ ವೈರಸ್ ಸೋಂಕು (ಶೀತ, ಫ್ಲೂ) |
 |
ಶ್ವಾಸನಾಳದಲ್ಲಿ ಹೊರಗಿನ ವಸ್ತು |
ದೀರ್ಘಕಾಲದ ಕೆಮ್ಮು ಅಥವಾ ನಿರಂತರ ಕೆಮ್ಮಿಗೆ ಕಾರಣಗಳು:
 |
ಆಸ್ತಮಾ
ಮಕ್ಕಳಲ್ಲಿ ದೀರ್ಘಕಾಲದ ಕೆಮ್ಮು ಆಸ್ತಮಾ ಬರಲು ಕಾರಣವಾಗುತ್ತದೆ. ಆಸ್ತಮಾ-ಸಂಬಂಧಿತ ಕೆಮ್ಮು ನಿರಂತರ, ಎಡೆಬಿಡದ ಅಥವಾ ಸಕಾಲಿಕವಾಗಿರಬಹುದು. ಇದು ಶ್ವಾಸನಾಳದ ಮೇಲ್ಭಾಗದಲ್ಲಿ ಸೋಂಕು ಆಗಬಹುದು ಅಥವಾ ಅನೇಕ ಪ್ರೇರಿತಗಳಾದ ಧೂಳು, ಸಾಕು ಪ್ರಾಣಿಗಳು, ಧೂಮಪಾನ ಮತ್ತು ವಾಯು ಮಾಲಿನ್ಯಕಾರಕಗಳು, ಒದ್ದೆಯಾಗುವಿಕೆ ಇತರೆಡೆಗೆ ಹೋಗುವುದರಿಂದ ಬರುತ್ತದೆ. Click here to know more about asthma.
|
 |
ಅಲರ್ಜಿಯ ರೈನೈಟಿಸ್ (ಮೂಗಿನ ಅಲರ್ಜಿ)
ಮೂಗು ಶ್ವಾಸನಾಳದ ಮುಂದುವರಿದ ಭಾಗ ಆಗಿರುವುದರಿಂದ ಅನೇಕ ಆಸ್ತಮಾ ಇರುವ ರೋಗಿಗಳಿಗೆ ಅಲರ್ಜಿಯ ರೈನೈಟಿಸ್ ಸಹ ಇರುತ್ತದೆ. ಸಾಮಾನ್ಯವಾಗಿ, ಮೊದಲಿಗೆ ಮೂಗಿಗೆ ಮತ್ತು ನಂತರ ಶ್ವಾಸಕೋಶಗಳಿಗೆ ಪರಿಣಾಮ ಬೀರುತ್ತದೆ. ಅಲರ್ಜಿಯ ರೈನೈಟಿಸ್ ರೋಗ ಲಕ್ಷಣಗಳ ಸಂಗ್ರಹ ಎನ್ನಬಹುದು ಇದರಲ್ಲಿ ಒಬ್ಬರು ಏನನ್ನೊ ಉಸಿರಾಡಿದರೆ ಇನ್ನೊಬ್ಬರಿಗೆ ಅದರಿಂದ ಅಲರ್ಜಿಯಾಗುತ್ತದೆ. ಉದಾಹರಣೆಗಾಗಿ ಧೂಳು, ಅಲೆದಾಡುವಿಕೆ ಅಥವಾ ಪೋಲನ್. ರೋಗ ಲಕ್ಷಣಗಳು ಕಾಲಿಕವಾಗಿರಬಹುದು ಅಥವಾ ವರ್ಷದ ಪೂರ್ತಿಯಾಗಬಹುದು.
ರೋಗ ಲಕ್ಷಣಗಳು:
• ಮೂಗಿನಲ್ಲಿ ಸುರಿಯುವುದು (ಮೂಗಿನಿಂದ ನಿರಂತರವಾಗಿ ಸುರಿಯುತ್ತಿರುವುದು)
• ಸೀನುವುದು
• ಮೂಗಿನಲ್ಲಿ ತಡೆಯುವಿಕೆ
• ಮೂಗಿನಲ್ಲಿ ತುರಿಕೆ (ಮೂಗು, ಕಣ್ಣಿನಲ್ಲಿ ತುರಿಕೆಯಾಗುವುದು, ಅಥವಾ ಬಾಯಿಯ ಮೇಲ್ಬಾಗದಲ್ಲಿ)
ಮೂಗಿನಿಂದ ಸುರಿದ ನಂತರ ( ಅಂದರೆ ಮೂಗಿನಿಂದ ಸುರಿದು ಗಂಟಲಿಗೆ ಹೋಗುತ್ತದೆ) ಕಿರಿಕಿರಿಯನ್ನುಂಟು ಮಾಡಿ ಕೆಮ್ಮನ್ನುಂಟು ಮಾಡುತ್ತದೆ.
|
 |
ರಿಫ್ಲಕ್ಸ್ ರೋಗ
ಆಸಿಡ್ ರಿಫ್ಲಕ್ಸ್ ಅಂದರೆ ಯಾವಾಗ ಆಸಿಡ್ ಹೊಟ್ಟೆಯಿಂದ ಹಿಮ್ಮುಖವಾಗಿ ಹರಿದು (ರಿಫ್ಲಕ್ಸ್‌ಗಳು) ಆಹಾರನಾಳದಲ್ಲಿ ಹೋಗುತ್ತದೆ (ಆಸ್ಪರಾಗಸ್). ಇದು ಪ್ರೇರಿತಗಳಾಗಿ ಕೆಲಸ ಮಾಡುತ್ತದೆ ಮತ್ತು ದೀರ್ಘಕಾಲದ ಕಿರಿಕಿರಿಯನ್ನುಂಟು ಮಾಡುತ್ತದೆ ಮತ್ತು ಕೆಮ್ಮು ಬರುತ್ತದೆ. |
 |
ಸೋಂಕುಗಳು
ದೀರ್ಘಕಾಲದ ಕೆಮ್ಮು ಶ್ವಾಸಕೋಶದ ಸೋಂಕುಗಳಿಗೆ ಸಂಬಂಧಿಸಿದ್ದಾಗಿರುತ್ತದೆ ಕ್ಷಯರೋಗ ಮತ್ತು ದೀರ್ಘಕಾಲದ ಶ್ವಾಸಕೋಶದ ರೋಗಗಳು ಇದನ್ನು ಎದೆ ನೋವಿನ ಜೊತೆಗೆ ಹೊಂದಿಸಲಾಗುತ್ತದೆ, ನಿದ್ರೆಯಲ್ಲಿ ಭಂಗ, ಕೆಲವೊಮ್ಮೆ ವಿಚಿತ್ರ ಶಬ್ದ, ವಾಂತಿ ಮಾಡಿಕೊಳ್ಳುವುದು ಮತ್ತು ಪಿತ್ತಕೋಶವನ್ನು ನಿಯಂತ್ರಿಸಿಕೊಳ್ಳುವುದು ಆಗುವುದಿಲ್ಲ. |
ಸೂಚನೆ: ಕೆಲವು ಕೆಮ್ಮಿನ ಸಿರಪ್‌ಗಳು ಹಾನಿಕಾರಕ ಉದ್ದೀಪನಗಳನ್ನು ಹೊಂದಿದ್ದು ನಿಮಗೆ ತಾತ್ಕಾಲಿಕ ಉಪಶಮನ ನೀಡಬಹುದು ಹಾಗೂ ಶ್ವಾಸಕೋಶದ ತೊಂದರೆಯನ್ನು ಮರೆಮಾಚಬಹುದು ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಿ. ಆದ್ದರಿಂದ ನೀವು 3 ವಾರಗಳವರೆಗೆ ಕೆಮ್ಮಿನಿಂದ ಬಳಲುತ್ತಿದ್ದರೆ, ಸರಿಯಾದ ಚಿಕಿತ್ಸೆ ಮತ್ತು ರೋಗದ ಸ್ವರೂಪವನ್ನು ತಿಳಿದುಕೊಳ್ಳಲು ವೈದ್ಯರನ್ನು ಭೇಟಿ ಮಾಡಿ.
|
|
|
|
| ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) |
|
| ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) ಸರಳವಾದ, ಕೊಂಡುಕೊಳ್ಳಬಹುದಾದ, |
| |
|
|
|
|
| ಸ್ಪೈರೋಮೀಟರಿ ಪರೀಕ್ಷೆಯು ಹೆಚ್ಚು ಸೂಕ್ಷ್ಮತೆಯ ಮತ್ತು ಅತ್ಯಾಧುನಿಕ ಪರೀಕ್ಷೆಯಾಗಿರುತ್ತದೆ ಇದು ಮುಂಚಿನ ಆಸ್ತಮಾದ |
| |
|
|
|
|
|