ಆಸ್ತಮಾವನ್ನು ಗುಣಪಡಿಸಲಾಗದಿದ್ದರೂ, ಒಳ್ಳೆಯ ಸುದ್ದಿ ಎಂದರೆ ಇದನ್ನು ಚೆನ್ನಾಗಿ ನಿಯಂತ್ರಿಸಬಹುದಾಗಿದೆ. ಪ್ರಪಂಚದಾದ್ಯಂತ ಜನರಿಗೆ ಆಧುನಿಕ ಔಷಧಿಗಳು ಮತ್ತು ಇನ್‌ಹೇಲರ್‌ಗಳು ಸಾಧಾರಣವಾಗಿ ಬದುಕಲು, ಆರೋಗ್ಯಕರ ಜೀವನವನ್ನು ನಡೆಸಲು ಸಹಾಯ ಮಾಡಿದೆ. ಸೂಕ್ತವಾದ ಚಿಕಿತ್ಸೆಯನ್ನು ಪಡೆಯುವುದರೊಂದಿಗೆ ನೀವು ಸಹ ಪರಿಪೂರ್ಣವಾದ ಜೀವನವನ್ನು ನಡೆಸಬಹುದು.
ಆಸ್ತಮಾವನ್ನು ನಿಯಂತ್ರಿಸುವಲ್ಲಿ ನೀವು ಮಾಡಬೇಕಾದ ಮೊದಲನೆಯ ಕೆಲಸ ನಿಮ್ಮ ವೈದರನ್ನು ಭೇಟಿ ಮಾಡುವುದು ಮತ್ತು ಏನು ಮಾಡಬೇಕೆಂದು ತಿಳಿದುಕೊಳ್ಳುವುದು. ಉದಾಹರಣೆಗೆ ನಿಮ್ಮ ವೈದ್ಯರು
ಪ್ರೇರಿತಗಳ ಬಗ್ಗೆ ಸಲಹೆ ನೀಡಬಹುದು, ನಿಮ್ಮ ಶ್ವಾಸಕೋಶಗಳಲ್ಲಿರುವ ಶ್ವಾಸನಾಳಗಳಿಗೆ ತೊಂದರೆಯನ್ನುಂಟು ಮಾಡುವಂತಹ ವಸ್ತುಗಳ ಬಗ್ಗೆ ತಿಳಿಸಬಹುದು.
ನಿಮ್ಮ ಆಸ್ತಮಾವನ್ನು ನಿಯಂತ್ರಿಸಲು ನಿಮ್ಮ ವೈದ್ಯರು ಕೆಲವು ಔಷಧಿಗಳನ್ನು ಸೂಚಿಸುತ್ತಾರೆ ಆದರೆ ನಿಮ್ಮ ಚಿಕಿತ್ಸೆಯನ್ನು ಪರಿಣಾಮಕಾರಿ ಗೊಳಿಸಲು ನೀವು ವೈದ್ಯರ ಜೊತೆಗೆ ಸೇರಿ ಕೆಲಸ ಮಾಡಬೇಕು. ನಿಮ್ಮ ಆಸ್ತಮಾವನ್ನು ನಿಯಂತ್ರಿಸಲು ನಿಮ್ಮ ವೈದ್ಯರು ಸೂಚಿಸಿರುವ ಹಾಗೆ ನೀವು ಔಷಧಿಗಳನ್ನು ಸೇವಿಸಬೇಕು. ನೀವು
ತುರ್ತು ಪರಿಸ್ಥಿತಿಯಲ್ಲಿ ತ್ವರಿತವಾಗಿ ಏನು ಮಾಡಬೇಕು ಎಂಬುವುದನ್ನು ಸಹ ನಿಮ್ಮ ವೈದ್ಯರು ನಿಮಗೆ ತಿಳಿಸುತ್ತಾರೆ.
ಮಾಹಿತಿಯೊಂದಿಗೆ ನಿಮ್ಮನ್ನು ನೀವು ಸಾಮರ್ಥ್ಯ ಹೊಂದಲು ಇವುಗಳನ್ನು ಓದಿ - ಯಾವ ಪ್ರೇರಿತಗಳನ್ನು ತಡೆಯಬೇಕು, ಬೇರೆಯ ಪ್ರಕಾರದ ಔಷಧಿಗಳ ಬದಲಾಗಿ ಇನ್‌ಹೇಲರ್‌ನ ಪ್ರಯೋಜನಗಳು, ಆಸ್ತಮಾ ಆಕ್ರಮಣದ ಸಂದರ್ಭದಲ್ಲಿ ಏನು ಮಾಡಬೇಕು ಮತ್ತು ನಿಮ್ಮ ಆಸ್ತಮಾವನ್ನು ಹೇಗೆ ನಿಯಂತ್ರಣದಲ್ಲಿಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಔಷಧಿಗಳನ್ನು ಇನ್‌ಹೇಲರ್ ಮೂಲಕ ತೆಗೆದುಕೊಳ್ಳುವ ಅನುಕೂಲತೆಗಳು ಪ್ರಪಂಚಕ್ಕೆ ತಿಳಿದಿದ್ದು ನಮ್ಮ ಆಧುನಿಕ ಯುಗದಲ್ಲಿ ಅಲ್ಲ. ಸುಮಾರು 2000 ವರ್ಷಗಳ ಹಿಂದೆ, ಪ್ರಾಚೀನ ಈಜಿಪ್ಟ್, ಗ್ರೀಸ್ ಮತ್ತು ಭಾರತದಲ್ಲಿನ ಜನರು ಅವರಿಗೆ ಕಾಡುವ ಉಸಿರಾಟದ ತೊಂದರೆ ಮತ್ತು ಆಸ್ತಮಾವನ್ನು ಶಮನಗೊಳಿಸಲು ಇನ್‌ಹೇಲಿಂಗ್ ಔಷಧಿಗಳ ಮೂಲಿಕೆಗಳು ಮತ್ತು ಎಲೆಗಳಿಂದಾಗುವ ಲಾಭಗಳನ್ನು ಅರಿತುಕೊಂಡಿದ್ದರು. ಶತಮಾನಗಳ ಹಿಂದೆ, ಇನ್‌ಹೇಲರ್‌ಗಳನ್ನು ಬೆಳಕಿಗೆ ತರಲಾಯಿತು ಮತ್ತು ಇದು ತುಂಬಾ ಆಧುನಿಕವಾಗಿದೆ ಮತ್ತು ಪರಿಣಾಮಕಾರಿಯಾಗಿದೆ.
ಇಂದು ಪ್ರಪಂಚದಾದ್ಯಂತ ಆಸ್ತಮಾದಿಂದ ಬಳಲುತ್ತಿರುವವರು ಇನ್‌ಹೇಲರ್ ಸಹಾಯದಿಂದ ಅವರ ದಿನನಿತ್ಯದ ಚಟುವಟಿಕೆಗಳನ್ನು ಸಾಮಾನ್ಯವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.
ಆಸ್ತಮಾ ಇನ್‌ಹೇಲರ್‌ಗಳು ಜನರಿಗೆ ಆಸ್ತಮಾ ಇದ್ದರೂ ಪರಿಪೂರ್ಣವಾದ ಜೀವನವನ್ನು ನಡೆಸಲು ಸ್ವಾತಂತ್ರ್ಯ ಒದಗಿಸಿದೆ.
ಪ್ರಪಂಚದಾದ್ಯಂತ, ಆಸ್ತಮಾ ಇನ್‌ಹೇಲರ್‌ಗಳು ಬೇರೆ ವಿಧದ ಚಿಕಿತ್ಸೆಗಳಾದ ಗುಳಿಗೆಗಳು ಅಥವಾ ಸಿರಪ್‌ಗಳಿಗಿಂತಲೂ ಉತ್ತಮವಾದದ್ದು ಎಂದು ಸಾಬೀತು ಪಡಿಸಿವೆ. ಏಕೆ? ನೀವು ಕಣ್ಣಿನ ಸಮಸ್ಯೆಯನ್ನು ಎದುರಿಸುತ್ತಿದ್ದಾಗ, ನಿಮ್ಮ ಕಣ್ಣಿನಲ್ಲಿ ಡ್ರಾಪ್ಸ್‌ಗಳನ್ನು ಹಾಕಿಕೊಳ್ಳುವಿರಿ. ನೀವು ಚರ್ಮದ ಸಮಸ್ಯೆಯನ್ನು ಎದುರಿಸುತ್ತಿದ್ದಾಗ, ನೀವು ಅದಕ್ಕೆ ಮುಲಾಮನ್ನು ಅಥವಾ ಕ್ರೀಂ ಅನ್ನು ಹಚ್ಚಿಕೊಳ್ಳುವಿರಿ. ನೀವು ಮಾತ್ರೆಗಳನ್ನು ನುಂಗುವುದಿಲ್ಲ ಅಥವಾ ಕೆಲವು ಸಿರಪ್‌ಗಳನ್ನು ತೆಗೆದುಕೊಳ್ಳುವುದಿಲ್ಲ. ಔಷಧಿಯು ಸರಿಯಾಗಿ ಎಲ್ಲಿ ಅಗತ್ಯವಿದೆಯೊ ಅಲ್ಲಿಗೆ ನೀವು ಹಾಕುತ್ತೀರಿ. ಅದೇ ರೀತಿಯಲ್ಲಿ, ಆಸ್ತಮಾಗೆ ಇನ್‌ಹೇಲರ್ ಅನ್ನು ನಿಮ್ಮ ಬಾಯಲ್ಲಿ ಇರಿಸಿಕೊಂಡು ಇರಿಸಿಕೊಂಡು ಔಷಧಿಯನ್ನು ಇನ್‌ಹೇಲರ್ ಮೂಲಕ ನೀವು ಎಳೆದುಕೊಳ್ಳಬಹುದು ಅಥವಾ ಉಸಿರಾಡಬಹುದಾಗಿದೆ.
ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಏಕೆಂದರೆ ನಿಮ್ಮ ಶ್ವಾಸಕೋಶದಲ್ಲಿರುವ ಶ್ವಾಸನಾಳಗಳಿಗೆ ತೆಗೆದುಕೊಂಡ ಔಷಧಿಯು ನೇರವಾಗಿ ಮತ್ತು ತ್ವರಿತವಾಗಿ ಅಗತ್ಯವಿರುವ ಸ್ಥಳಕ್ಕೆ ತಲುಪುತ್ತದೆ.
ಆಸ್ತಮಾಗಾಗಿ ಇದನ್ನು ಮಾತ್ರೆಗಳು ಮತ್ತು ಸಿರಪ್‌ನೊಂದಿಗೆ ಹೋಲಿಸಿ. ನಿಮಗೆ ತಿಳಿದಿರುವಂತೆ ಅವುಗಳನ್ನು ನುಂಗಬೇಕು. ಆದರೆ ನಿಮಗೆ ತಿಳಿಯದಿರುವಂತೆ ಮಾತ್ರೆಗಳು ಅಥವಾ ಸಿರಪ್‌ಗಳು ಮೊದಲು ಹೊಟ್ಟೆಯಿಂದ ರಕ್ತದಲ್ಲಿ ಸೇರಿ, ಕೊನೆಗೆ ಶ್ವಾಸಕೋಶಗಳಿಗೆ ಸೇರಬೇಕಾಗಿರುವುದರಿಂದ ಇದಕ್ಕೆ ಪ್ರತಿಕ್ರಿಯಿಸಲು ಸಮಯ ತೆಗೆದುಕೊಳ್ಳುತ್ತದೆ. ಇದು ನಿಧಾನವಾಗಿದ್ದು ಮತ್ತು ಇದರಿಂದ ರೋಗಿಯು ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಕೆಲವು ಔಷಧಿಗಳು ಹೊಟ್ಟೆಯಲ್ಲಿಯೆ ಉಳಿದುಕೊಂಡು ದೇಹಕ್ಕೆ ಅವಶ್ಯಕವಾಗಿರದೆ ಮತ್ತು ಕೆಲವು
ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ.
ಅದಾಗ್ಯೂ, ಮಾತ್ರೆಗಳು ಅಥವಾ ಸಿರಪ್‌ಗಳ ವಿಷಯದಲ್ಲಿ, ನಿಮಗೆ ಹೆಚ್ಚಿನ ಡೋಸ್‌ಗಳು ಬೇಕಾಗಬಹುದು ಎಕೆಂದರೆ ಎಲ್ಲವೂ ಶ್ವಾಸಕೋಶಗಳಿಗೆ ತಲುಪುವುದಿಲ್ಲ. ಇದರರ್ಥ ಹೆಚ್ಚಿನ ಅಡ್ಡ ಪರಿಣಾಮಗಳು. ನೀವು ಇನ್‌ಹೇಲರ್ ಜೊತೆಗೆ ಔಷಧಿಗಳನ್ನು ತೆಗೆದುಕೊಂಡಾಗ, ನಿಮ್ಮ ಶ್ವಾಸಕೋಶಗಳಿಗೆ ಸೇರುವ ಡೋಸೆಜ್‌ಗಳು 40 ಪಟ್ಟು ಕಡಿಮೆ ಆಗಿರುತ್ತದೆ ಮತ್ತು ಇದು ಹೊಟ್ಟೆಗೆ ತಲುಪುವುದೆ ಇಲ್ಲ, ಆದ್ದರಿಂದಾಗಿ ಕನಿಷ್ಠ ಅಡ್ಡ ಪರಿಣಾಮಗಳನ್ನು ಹೊಂದಿರುತ್ತದೆ. ಈ ಪ್ರಶ್ನೆಯನ್ನು ನೀವೇ ಕೇಳಿಕೊಳ್ಳುವುದು ಬಹಳ ಮುಖ್ಯವಾಗಿದೆ: “ನನ್ನ ಶ್ವಾಸಕೋಶಗಳಿಗೆ ಮಾತ್ರ ನನಗೆ ಔಷಧಿಯ ಅಗತ್ಯವಿರುವಾಗ ನನ್ನ ದೇಹದ ಇತರೆ ಭಾಗಗಳಿಗೆ ಹೋಗುವಂತಹ ಔಷಧಿಗಳನ್ನು ನಾನು ಏಕೆ ಬಳಸಬೇಕು?”
ಅಮೇರಿಕ ಮತ್ತು ಇಂಗ್ಲೆಂಡ್‌ನಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಆಸ್ತಮಾದ ಪ್ರಾಥಮಿಕ ಚಿಕಿತ್ಸೆಯಾಗಿ ಗುಳಿಗೆಗಳು ಮತ್ತು ಸಿರಪ್‌ಗಳ ಸ್ಥಾನದಲ್ಲಿ ಇನ್‌ಹೇಲರ್‌ಗಳನ್ನು ಬಳಸಲಾಗುತ್ತಿದೆ.
ಆಸ್ತಮಾವನ್ನು ನಿಯಂತ್ರಿಸಲು ಇದು ಪರಿಣಾಮಕಾರಿ ಮತ್ತು ಸುರಕ್ಷಿತ ಮಾರ್ಗವಾಗಿದೆ.
ಸಂಪೂರ್ಣ ಕ್ಲಿನಿಕಲ್ ಅಧ್ಯಯನಗಳು ಮತ್ತು ಹೆಸರಾಂತ ವೈಜ್ಞಾನೀಕ ಮತ್ತು ವೈದ್ಯಕೀಯ ಸಂಸ್ಥೆಗಳು ನಡೆಸಿದ ಸಂಶೋಧನೆಗಳು ಇನ್‌ಹೇಲರ್ ಸುರಕ್ಷಿತ ಎಂದು ಸಾಬೀತುಪಡಿಸಿವೆ. ಅಡ್ಡ ಪರಿಣಾಮಗಳಿದ್ದರೂ, ಅವುಗಳು ಕಡಿಮೆ ಪ್ರಮಾಣದ್ದಾಗಿರುತ್ತದೆ ಹಾಗೂ ಅವುಗಳನ್ನು ಸುಲಭವಾಗಿ ಕಡಿಮೆಗೊಳಿಸಬಹುದಾಗಿರುತ್ತದೆ. ನೀವು ಸ್ವಲ್ಪ ಕಿರಿಕಿರಿಯನ್ನು ಅನುಭವಿಸಿದರೆ ಅಥವಾ ಯಾವುದೇ ಅಡ್ಡ ಪರಿಣಾಮಗಳಿದ್ದರೆ ನಿಮ್ಮ ವೈದ್ಯರಿಗೆ ತಿಳಿಸುತ್ತಿರಿ.
ಆಸ್ತಮಾ ಇನ್‌ಹೇಲರ್‌ಗಳು
ಕೈಗೆಟಕುವಂತಹದಾಗಿವೆ.ಕೆಲವೇ ರೂಪಾಯಿಗಳಿಗೆ ಪ್ರತಿದಿನ ನೀವು ಪರಿಹಾರವನ್ನು ಪಡೆಯಬಹುದು. ನೀವು ಆಕ್ರಮಣದ ಸಾಧ್ಯತೆಗಳನ್ನು ಮತ್ತು ಆಸ್ಪತ್ರೆಯ ವೆಚ್ಚವನ್ನು ಕಡಿಮೆಗೊಳಿಸಬಹುದು. ಇನ್‌ಹೇಲರ್ ತೆಗೆದುಕೊಳ್ಳುವ ಆಸ್ತಮಾ ರೋಗಿಗಳು ಕೆಲಸದಲ್ಲಿ ಮತ್ತು ಶಾಲೆಯಲ್ಲಿ ಮತ್ತು ಕಾಲೇಜುಗಳಲ್ಲಿ ಸಾಮಾನ್ಯವಾದ ಹಾಜರಾತಿಯನ್ನು ಹೊಂದಿರುವುದನ್ನು ಅಧ್ಯಯನಗಳು ಬಹಿರಂಗ ಪಡಿಸಿವೆ.
ಇನ್‌ಹೇಲರ್‌ಗಳ ಮೂಲಕ ತೆಗೆದುಕೊಳ್ಳುವ ಔಷಧಿಗಳಲ್ಲಿ 2 ವಿಧಗಳು ಇವೆ ಅವುಗಳು ನಿಯಂತ್ರಕಗಳು ಮತ್ತು ನಿವಾರಕಗಳು. ಇನ್‌ಹೆಲ್ ಮಾಡಿದ ಔಷಧಿಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಓದಿ. ಮತ್ತು ನಿಮ್ಮ ಆಸ್ತಮಾಕ್ಕೆ ಉತ್ತಮ ಚಿಕಿತ್ಸೆಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಇನ್‌ಹೇಲರ್‌ನಲ್ಲಿರುವ ಆಸ್ತಮಾ ಔಷಧಿಗಳ ವಿಧಗಳು |
ಗುಳಿಗೆಗಳು, ಸಿರಪ್‌ಗಳಿಗಿಂತಲೂ ಆಸ್ತಮಾ ನಿಯಂತ್ರಿಸುವಲ್ಲಿ ಮತ್ತು ಪರ್ಯಾಯ ಔಷಧಿಯಂತೆ ಇನ್‌ಹೇಲರ್‌ಗಳು ಸುರಕ್ಷಿತ ಮತ್ತು ಹೆಚ್ಚು ಕ್ರಿಯಾತ್ಮಕವಾಗಿದೆ ಎಂದು ಸಾಬೀತುಪಡಿಸಲಾಗಿದೆ. ಆಸ್ತಮಾಗಾಗಿ ಇರುವ ಇನ್‌ಹೇಲರ್‌ಗಳಲ್ಲಿ 2 ವಿಧದ ಔಷಧಿಗಳಿರುತ್ತವೆ:
 |
ನಿಯಂತ್ರಕಗಳು |
ಇವುಗಳು ಇನ್‌ಹೇಲರ್‌ನಲ್ಲಿ ಲಭ್ಯವಿರುವ ಔಷಧಿಗಳಾಗಿದ್ದು, ಪ್ರತಿದಿನ ಸೇವಿಸುವುದರಿಂದ ಮುಂಬರುವ ಆಕ್ರಮಣಗಳನ್ನು ತಡೆಗಟ್ಟಬಹುದಾಗಿದೆ. ಕೆಲ ಸಂದರ್ಭಗಳಲ್ಲಿ ಅವುಗಳನ್ನು ನಿವಾರಕಗಳು ಎನ್ನಬಹುದು. ಪ್ರಪಂಚದಾದ್ಯಂತ, ಕೇವಲ ನಿಯಂತ್ರಕ ಮಾತ್ರೆಗಳು ನಿಮ್ಮ ಆಸ್ತಮಾವನ್ನು ನಿಯಂತ್ರಿಸಬಹುದು ಎಂಬುದು ಸಾಬೀತಾಗಿದೆ.
ಈ ಔಷಧಿಗಳು ತ್ವರಿತವಾಗಿ ಪರಿಹಾರ ನೀಡುವುದಿಲ್ಲ ಆದರೆ ಇವುಗಳನ್ನು ದೀರ್ಘಕಾಲದವರೆಗೆ ಬಳಸಿದರೆ, ನಿಮ್ಮ ಆಸ್ತಮಾವನ್ನು ನಿಯಂತ್ರಿಸುವಲ್ಲಿ ಅವುಗಳು ಸಹಾಯ ಮಾಡುತ್ತವೆ. ಸಾರ್ವತ್ರಿಕವಾಗಿ ದೃಢೀಕರಿಸಿದ ಚಿಕಿತ್ಸೆ ಮಾರ್ಗದರ್ಶಿಗಳ ಪ್ರಕಾರ, ನಿರಂತರವಾದ ರೋಗ ಲಕ್ಷಣಗಳನ್ನು ಹೊಂದಿರುವ ಜನರು ಊತವನ್ನು ನಿಯಂತ್ರಿಸಲು ಮತ್ತು
ರೋಗ ಲಕ್ಷಣಗಳನ್ನು ಹಾಗೂ ಆಕ್ರಮಣವನ್ನು ತಡೆಯಲು ದೀರ್ಘಕಾಲದವರೆಗೆ ನಿತ್ಯವೂ ಔಷಧಿಗಳನ್ನು ಸೇವಿಸಬೇಕು.
ನೀವು ನಿಯಂತ್ರಕಗಳನ್ನು ದಿನನಿತ್ಯವೂ ಸೇವಿಸಿದರೆ ನೀವು
ಆಸ್ತಮಾ ಆಘಾತ ಹೊಂದುವುದಿಲ್ಲ. ಅದರೂ, ನೀವು ಆಘಾತಕ್ಕೊಳಗಾದರೆ ನೀವು ಬೇಗನೆ ನಿಮ್ಮ ಉಪಶಮನ ಮಾತ್ರೆಗಳನ್ನು ಸೇವಿಸಬೇಕು. ನಿಮ್ಮ ನಿಯಂತ್ರಕಗಳನ್ನು ದಿನನಿತ್ಯ ಬಳಸುವುದರಿಂದ ನೀವು ಉಪಶಮನವನ್ನು ಸೇವಿಸುವುದನ್ನು ಕಡಿಮೆ ಮಾಡಿಸುತ್ತದೆ ಮತ್ತು ನೀವು ತುಂಬಾ ಕಡಿಮೆ ಬಳಸಬಹುದು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆದರೆ ನಿಮ್ಮ ನಿಯಂತ್ರಕಗಳನ್ನು ದಿನನಿತ್ಯ ಬಳಸಬೇಕಾಗುತ್ತದೆ. ಆದ್ದರಿಂದ ಬಾಯಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯಲು ಪ್ರತಿದಿನ ನಿಮ್ಮ ಹಲ್ಲುಗಳನ್ನು ಉಜ್ಜಿಕೊಳ್ಳುವ ರೀತಿಯಲ್ಲಿ ಇದನ್ನು ಸಹ ಉತ್ತಮ ಅಭ್ಯಾಸವಾಗಿ ಬೆಳೆಸಿಕೊಳ್ಳಿ. ಅದೇ ರೀತಿ ನೀವು ಆಸ್ತಮಾ ಆಕ್ರಮಣಗಳನ್ನು ತಡೆಯಲು ನಿಯಂತ್ರಕಗಳನ್ನು ಸೇವಿಸಬೇಕು.
ನಿಯಂತ್ರಕಗಳನ್ನು ಬಳಸುವಾಗ ಸಲಹೆಗಳು
| • |
ನಿಮ್ಮ ನಿಯಂತ್ರಕ ಔಷಧಿಗಳನ್ನು ದಿನನಿತ್ಯವೂ ನಿಗದಿತ ಸಮಯಕ್ಕೆ ತೆಗೆದುಕೊಳ್ಳಿ. ಆದ್ದರಿಂದ ನೀವು ಇದನ್ನು ದಿನಕ್ಕೆ ಎರಡು ಬಾರಿ ಸೇವಿಸಬೇಕಿದ್ದರೆ, ನಿಮಗೆ ಸೂಕ್ತವಾದ ಸಮಯವನ್ನು ಹೊಂದಿಸಿಕೊಳ್ಳಿ. |
| • |
ನಿಮ್ಮ ನಿಯಂತ್ರಕಗಳನ್ನು ನೀವು 2 ಬೇರೆಯ ಸ್ಥಳಗಳಲ್ಲಿ ತೆಗೆದುಕೊಳ್ಳುವುದಾದರೆ, ಅಂದರೆ ಒಂದು ಬಾರಿ ಮನೆಯಲ್ಲಿ ಮತ್ತು ಒಂದು ಬಾರಿ ಕೆಲಸದ ವೇಳೆಯಲ್ಲಿ, ನೀವು ಸಹ ಒಂದು ನಿಯಂತ್ರಕವನ್ನು ಮನೆಯಲ್ಲಿ ಮತ್ತು ಒಂದನ್ನು ಕಚೇರಿಯಲ್ಲಿ ಇರಿಸಿಕೊಳ್ಳಬಹುದು. ನಿಮ್ಮ ಜೊತೆಗೆ ನಿಯಂತ್ರಕಗಳನ್ನು ಇರಿಸಿಕೊಳ್ಳುವುದಕ್ಕಿಂತ ನೀವು ಇದನ್ನು ಹೆಚ್ಚು ಅನುಕೂಲಕರವೆಂದು ತಿಳಿದುಕೊಳ್ಳುವಿರಿ. |
| • |
ರೋಗಿಯು ಯಾವಾಗಲೂ ತಮ್ಮ ಇನ್‌ಹೇಲರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರು ನೀಡುತ್ತಾರೆ. ಅನೇಕ ಬಾರಿ ರೋಗಿಯು ಇನ್‌ಹೇಲರ್‌ಗಳನ್ನು ತಪ್ಪಾಗಿ ಬಳಸುತ್ತಿರುವುದನ್ನು ವೈದ್ಯರು ಕಂಡುಕೊಂಡಿದ್ದಾರೆ. ಅದಕ್ಕಾಗಿಯೇ ನಿಮ್ಮ ವೈದ್ಯರ ಮುಂದೆಯೇ ನಿಯಂತ್ರಕಗಳನ್ನು ಬಳಸಲು ಒಂದು ಒಳ್ಳೆಯ ಉಪಾಯ ಅಥವಾ ಅವರ ಸಹಾಯಕರು ನೀವು ತಪ್ಪಾಗಿ ಬಳಸುತ್ತಿದ್ದರೆ ಅವರು ಅದನ್ನು ಗುರುತಿಸುತ್ತಾರೆ. ನಿಮ್ಮ ಆಸ್ತಮಾವನ್ನು ನಿಯಂತ್ರಿಸುವಲ್ಲಿ ನೀವು ಇನ್‌ಹೇಲರ್ ಅನ್ನು ಸರಿಯಾಗಿ ಬಳಸುವುದು ಮುಖ್ಯವಾದ ಪಾತ್ರ ವಹಿಸುತ್ತದೆ. |
 |
ಉಪಶಮನಗಳು |
ಅವುಗಳನ್ನು ತ್ವರಿತ ಪರಿಹಾರಕ್ಕಾಗಿ ಇನ್‌ಹೆಲ್ ಮಾಡಲಾಗುತ್ತದೆ ಮತ್ತು ಆಸ್ತಮಾ ಆಕ್ರಮಣ ಮಾಡಿದಾಗ ತ್ವರಿತ ಪರಿಹಾರವೂ ಆಗಿದೆ. ಈ ಅಲ್ಪಾವಧಿ ಔಷಧಿಗಳನ್ನು ಉಪಶಮನಗಳು ಅಥವಾ ರಕ್ಷಕಗಳು ಎನ್ನುತ್ತಾರೆ. ಅವುಗಳನ್ನು ತುರ್ತು ಪರಿಸ್ಥಿತಿಯಲ್ಲಿ ನೀವು SOS ಔಷಧಿಗಳು ಎಂದು ಆಲೋಚಿಸಬಹುದು. ಅವುಗಳು ನಿಮಗೆ ಆಘಾತವಾದಾಗ ಕೆಮ್ಮಿನಿಂದ ಮತ್ತು ಉಸಿರಾಟದ ತೊಂದರೆಗಳಿಂದ ಮುಕ್ತಿ ಒದಗಿಸಲು ಸಹಾಯ ಮಾಡುತ್ತವೆ. ಆದ್ದರಿಂದ ನೀವು ಉಸಿರಾಟದ ತೊಂದರೆಯನ್ನು ಅನುಭವಿಸಿದಾಗ ಅಥವಾ ಆಘಾತದ ಪ್ರಥಮ ಲಕ್ಷಣಗಳನ್ನು ತೋರಿಸಲು ಪ್ರಾರಂಭಿಸಿದಾಗ, ವೈದ್ಯರು ಶಿಫಾರಸ್ಸು ಮಾಡಿದ ಉಪಶಮನವನ್ನು ತ್ವರಿತವಾಗಿ ಕೈಗೆಟುಕುವಂತೆ ಇರಿಸಿಕೊಳ್ಳಬೇಕು. ಮತ್ತು ಕೆಲ ಪಫ್‌ಗಳನ್ನು ತೆಗೆದುಕೊಳ್ಳಿ. ಇದು ನಿಮ್ಮ ವಾಯುನಾಳದಲ್ಲಿರುವ ಮೂಳೆಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತವೆ ಮತ್ತು ಉಸಿರಾಡಲು ಸುಲಭವಾಗಿಸುತ್ತದೆ.
ಎಲ್ಲಾ ಆಸ್ತಮಾ ರೋಗಿಗಳು ಹೊರಗೆ ಹೋಗುವಾಗ, ತುರ್ತು ಪರಿಸ್ಥಿತಿಯಲ್ಲಿ ಅವರ ಉಪಶಮನಗಳನ್ನು ಜೊತೆಯಲ್ಲಿರಿಸಿಕೊಳ್ಳಬೇಕು. ಆಸ್ತಮಾ ಆಘಾತವು ಯಾವುದೇ ಸೂಚನೆಗಳಿಲ್ಲದೆ ಸಂಭವಿಸುತ್ತದೆ.
ಉಪಶಮನಗಳನ್ನು ಬಳಸುವಾಗ ಸಲಹೆಗಳು
| • |
ನಿಮ್ಮ ಉಪಶಮನವನ್ನು ಯಾವಾಗಲೂ ನಿಮ್ಮ ಜೊತೆಗೆ ಇರಿಸಿಕೊಳ್ಳಿ. ಅದಿಲ್ಲದೆ ಎಂದಿಗೂ ಇರಬೇಡಿ. ಆಸ್ತಮಾ ಆಘಾತವು ಯಾವುದೇ ಸಮಯದಲ್ಲಿ ಮತ್ತು ಎಲ್ಲಿ ಬೇಕಾದರೂ ಸಂಭವಿಸಬಹುದು. |
| • |
2 ಉಪಶಮನಗಳನ್ನು ಇರಿಸಿಕೊಳ್ಳಿ – ಒಂದು ನಿಮ್ಮ ಮನೆಯಲ್ಲಿ ಮತ್ತು ಇನ್ನೊಂದು ನಿಮ್ಮ ಕಚೇರಿಯಲ್ಲಿ. ನಿಮ್ಮ ಮಗುವು ಆಸ್ತಮಾ ಹೊಂದಿದ್ದರೆ, ಒಂದು ಉಪಶಮನವನ್ನು ಶಾಲೆಯಲ್ಲಿರಿಸಿ. |
| • |
ನೀವು ಇನ್‌ಹೇಲರ್ ಅನ್ನು ಹೇಗೆ ಬಳಸುತ್ತಿರುವಿರಿ ಎನ್ನುವುದನ್ನು ನಿಮ್ಮ ವೈದ್ಯರಿಗೆ ಅಥವಾ ಅವರ ಸಹಾಯಕರಿಗೆ ತೋರಿಸಿ ಆದ್ದರಿಂದ ನೀವು ಇನ್‌ಹೇಲರ್ ಅನ್ನು ತಪ್ಪಾಗಿ ಬಳಸುತ್ತಿದ್ದರೆ ಅವರು ಸರಿಯಾಗಿ ಬಳಸುವ ವಿಧಾನವನ್ನು ತಿಳಿಸುತ್ತಾರೆ (Link to video on usage of inhalers ) ಇದು ನಿಮಗೆ ಆಘಾತವಾದರೆ ನಿಮ್ಮ ಆಸ್ತಮಾವನ್ನು ಶಮನಗೊಳಿಸುವಲ್ಲಿ ಮುಖ್ಯವಾದ ಪಾತ್ರ ವಹಿಸುತ್ತದೆ |
| • |
ನೀವು ಮನೆಯಲ್ಲಿ ಕುಟುಂಬಕ್ಕೆ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಸ್ನೇಹಿತರಿಗೆ ಹಾಗೂ ಶಾಲೆಗಳಲ್ಲಿ ಇನ್‌ಹೇಲರ್ ಅನ್ನು ಸರಿಯಾಗಿ ಬಳಸುವುದನ್ನು ತಿಳಿಸಿಕೊಡಬೇಕು. ಆದ್ದರಿಂದ ನಿಮಗೆ ಆಘಾತವಾಗಿದ್ದಾಗ, ಅವರು ನಿಮ್ಮ ಇನ್‌ಹೇಲರ್ ಮೂಲಕ ಸಹಾಯ ಮಾಡಬಹುದು. |
| • |
ಒಂದು ವೇಳೆ ನಿಮಗೆ ಆಸ್ತಮಾ ಆಘಾತವಾದಾಗ, ಏನು ಮಾಡಬೇಕು ಎನ್ನುವುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. |
ದಯವಿಟ್ಟು ಗಮನಿಸಿ: ಯಾವ ವಿಧದ ಔಷಧಗಳನ್ನು ಮತ್ತು ಇನ್‌ಹೇಲರ್ ಅನ್ನು ಬಳಸಬೇಕೆಂದು ವೈದ್ಯರು ಶಿಫಾರಸು ಮಾಡಿರುತ್ತಾರೆಯೋ ಅದನ್ನು ಪಾಲಿಸಿ. ನಿಮ್ಮ ಇನ್‌ಹೇಲರ್ ಅನ್ನು ಹೇಗೆ ಬಳಸಬೇಕು ಮತ್ತು ಹೇಗೆ ನಿರ್ವಹಿಸಬೇಕು ಎಂದು ನಿಮ್ಮ ವೈದ್ಯರಿಗೆ ಬಳಸಿ ತೋರಿಸಲು ಕೇಳಿ ಮತ್ತು ವಿವರಿಸಲು ಹೇಳಿ. ನಿಮ್ಮ ಮೊದಲನೆಯ ಸೆಷನ್ ಒಟ್ಟಿನಲ್ಲಿ ಗಂಭೀರವಾಗಿದೆ ಮತ್ತು ನಿಮ್ಮನ್ನು ಪ್ರಾರಂಭದಿಂದಲೇ ಸರಿಪಡಿಸುವಂತೆ ನಾವು ಭರವಸೆಯನ್ನು ನೀಡುತ್ತೇವೆ. ನಿಮ್ಮ ಆಸ್ತಮಾವನ್ನು ನಿಯಂತ್ರಿಸುವ ನಿಮ್ಮ ಹೋರಾಟದಲ್ಲಿ ಇದು ಸಹಾಯ ಮಾಡುತ್ತದೆ.
ನಿಮ್ಮ ವೈದ್ಯರು ನಿಮಗೆ 2 ಇನ್‌ಹೇಲರ್‌ಗಳನ್ನು ಶಿಫಾರಸು ಮಾಡಿದರೆ, ಒಂದು ನಿಮ್ಮ ನಿಯಂತ್ರಕ ಮತ್ತು ಇನ್ನೊಂದು ನಿಮ್ಮ ಉಪಶಮನವಾಗಿರುತ್ತದೆ. ಯಾವುದು ನಿಮ್ಮ ನಿಯಂತ್ರಕ ಮತ್ತು ಯಾವುದು ನಿಮ್ಮ ಉಪಶಮನವೆಂದು ಅವರಿಗೆ ಕೇಳಿ ಖಚಿತ ಪಡಿಸಿಕೊಳ್ಳಿ. ನೀವು ಸಹ “ನಿಯಂತ್ರಕ” ಮತ್ತು “ಉಪಶಮನ” ಎಂದು ನಿಮ್ಮ ನೆನಪಿಗಾಗಿ ಪ್ಯಾಕ್‌ಗಳ ಮೇಲೆ ಬರೆದಿಟ್ಟುಕೊಳ್ಳಿ.
ಇನ್‌ಹೇಲರ್‌ಗಳನ್ನು ಹೇಗೆ ಬಳಸುವುದು |
ಪ್ರಪಂಚದಾದ್ಯಂತ ಇನ್‌ಹಲೇಷನ್ ಆಸ್ತಮಾವನ್ನು ನಿಯಂತ್ರಿಸಲು ಮತ್ತು ಉತ್ತಮ ಜೀವನ ಶೈಲಿಯನ್ನು ಆನಂದಿಸಲು ಸರಳವಾದ, ಸುರಕ್ಷಿತ ಮತ್ತು ಪರಿಣಾಮಕಾರಿ ಮಾರ್ಗವೆಂದು ಸಾಬೀತಾಗಿದೆ. ಇನ್‌ಹಲೇಷನ್‌ನಲ್ಲಿ, ಇನ್‌ಹೇಲರ್ ಎಂಬ ಚಿಕ್ಕ ಸಾಧನವನ್ನು ಬಳಸಿ ನೀವು ಬಾಯಿಯ ಮೂಲಕ ಔಷಧಿಯನ್ನು ಸೇವಿಸುತ್ತೀರಿ. ವಯಸ್ಸು, ಅನುಕೂಲತೆ ಅಥವಾ ರೋಗಿಗಳಲ್ಲಿರುವ ಆಸ್ತಮಾದ ಪ್ರಮಾಣದ ಪ್ರಕಾರವಾಗಿ ಸರಿಹೊಂದುವ ಮತ್ತು ಆಸ್ತಮಾ ರೋಗಿಗಳಿಗೆ ಅವಶ್ಯಕತೆಯ ಆಧಾರಿತವಾಗಿ ಬೇರೆ ಬೇರೆ ವಿಧಗಳ ಇನ್‌ಹೇಲರ್‌ಗಳು ಲಭ್ಯ.
ಇನ್‌ಹೇಲರ್‌ನಲ್ಲಿರುವ 2 ಪ್ರಮುಖ ವಿಧಗಳೆಂದರೆ ಮೀಟರ್ಡ್ ಡೋಸ್ ಇನ್‌ಹೇಲರ್‌ಗಳು (MDIs) ಮತ್ತು ಡ್ರೈ ಪೌಡರ್ ಇನ್‌ಹೇಲರ್ (DPIs)ಗಳು.
ಮೀಟರ್ಡ್ ಡೋಸ್ ಇನ್‌ಹೇಲರ್ (MDI) ಇದನ್ನು ಸಾಮಾನ್ಯವಾಗಿ ಸ್ಪ್ರೇ ಇನ್‌ಹೇಲರ್ ಎನ್ನುತ್ತಾರೆ ಏಕೆಂದರೆ ಅದು ಹಾಗೆ ಕೆಲಸ ಮಾಡುತ್ತದೆ. ಕೆಲವರು ಇದನ್ನು‘ಪಂಪ್’ ಎನ್ನುತ್ತಾರೆ ಏಕೆಂದರೆ ಇನ್‌ಹೇಲರ್ ಬಳಸುವಾಗ ಪಂಪಿಂಗ್ ಕಾರ್ಯಕ್ಕಾಗಿ ಹೀಗೆ ಕರೆಯುತ್ತಾರೆ.
ಹಲವಾರು ವೈದ್ಯರು ಅವರ ರೋಗಿಗಳಿಗೆ ಡ್ರೈ ಪೌಡರ್ ಇನ್‌ಹೇಲರ್‌ಗಳು (DPIs) ಅನ್ನು ಶಿಫಾರಸು ಮಾಡುತ್ತಾರೆ.
ನಿಮ್ಮ ಇನ್‌ಹೇಲರ್ ಅನ್ನು ಸರಿಯಾಗಿ ಬಳಸುವುದು ಹೇಗೆ ಎಂದು ತಿಳಿದುಕೊಳ್ಳಿ.
ಆಸ್ತಮಾವನ್ನು ಹೇಗೆ ನಿಯಂತ್ರಣದಲ್ಲಿಡಬೇಕು |
ಆಸ್ತಮಾವು ದೀರ್ಘಕಾಲಿಕ ಪರಿಸ್ಥಿತಿಯಾಗಿದ್ದು ಅದು ನಿಯತವಾಗಿ ನಿರ್ವಹಣೆ ಮತ್ತು ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ನೀವು ಆಸ್ತಮಾದ ಜೊತೆಗೆ ಹೋರಾಡಬಹುದು ಮತ್ತು ಅದನ್ನು ನಿಯಂತ್ರಿಸಬಹುದೆಂದು ನಿಮಗೆ ಅರಿವಾಗಬೇಕು. ಆದ್ದರಿಂದ ನಿಮಗೆ ಇನ್ನೊಂದು ಬಾರಿ ಆಗುವುದು ವಿರಳ, ಮತ್ತು ನೀವು ಆರೋಗ್ಯಕರವಾಗಿ ಮತ್ತು ಪರಿಪೂರ್ಣತೆಯಿಂದ ಜೀವನವನ್ನು ನಡೆಸಲು ಸಾಧ್ಯವಾಗಬಹುದು.
ನಿಮ್ಮ ಆಸ್ತಮಾವನ್ನು ನಿಯಂತ್ರಣದಲ್ಲಿಡಲು ಈ ಕೆಳಗಿನ 4 ಹಂತಗಳನ್ನು ಪಾಲಿಸಿರಿ.
 |
ನಿಮ್ಮ ಪ್ರೇರಿತಗಳನ್ನು ದೂರವಿಡಿ. |
 |
ನಿಮ್ಮ ನಿಯಂತ್ರಕ ಔಷಧಿಗಳನ್ನು ದಿನನಿತ್ಯ ತೆಗೆದುಕೊಳ್ಳಿ. |
 |
ಪೀಕ್ ಫ್ಲೋ ಮೀಟರ್/ ಪೀಕ್ ಫ್ಲೋ ಮಾಸ್ಟರ್ ಅನ್ನು ಬಳಸಿ ದಿನನಿತ್ಯ ನಿಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಿ. |
 |
ನಿಮ್ಮ ವೈದ್ಯರನ್ನು ಪ್ರತಿದಿನ ಭೇಟಿ ಮಾಡಿ. |
ನೀವು ಈ 4 ಹಂತಗಳ ಮೇಲೆ ಗಮನವಿಟ್ಟರೆ ನೀವು ನಿಮ್ಮ ಆಸ್ತಮಾವನ್ನು ನಿಯಂತ್ರಿಸುವ ಮಾರ್ಗದಲ್ಲಿದ್ದಿರಿ ಎಂದು ಅರ್ಥ.
 |
ನಿಮ್ಮ ಪ್ರೇರಿತಗಳನ್ನು ಗಮನಿಸಿರಿ |
ಆಸ್ತಮಾವು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಭಿನ್ನವಾಗಿರುತ್ತದೆ. ವಯಸ್ಕರಿಂದ ವಯಸ್ಕರಿಗೆ. ಮತ್ತು ಮಕ್ಕಳಿಂದ ಮಕ್ಕಳಿಗೆ. ಆದ್ದರಿಂದ ನಿಮ್ಮ ಆಸ್ತಮಾವು ಸ್ವಂತ ವಿಧವಾಗಿದ್ದು ಮತ್ತು ನಿಮ್ಮದೇ ಸ್ವಂತ
ಪ್ರೇರಿತಗಳು ಹಾಗೂ ರೋಗ ಲಕ್ಷಣಗಳು ಎನ್ನುವುದನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ.
ಆಸ್ತಮಾ ಲಕ್ಷಣಗಳು ಯಥಾಪ್ರಕಾರ ಕಾರಣವಾಗಿರುತ್ತವೆ ಅಥವಾ ಕೆಲವು ವಸ್ತುಗಳಿಂದ ಪ್ರೇರಿತವಾಗಬಹುದು, ಅವುಗಳಿಗೆ ನಿಮ್ಮ ಆಸ್ತಮಾವನ್ನು ಅವುಗಳ ಕಡೆಗೆ ಬಿಡದಂತೆ ನಿಯಂತ್ರಿಸಿಕೊಳ್ಳಬೇಕು. ಕೆಲವು ಸಾಮಾನ್ಯ ಪ್ರೇರಿತಗಳೆಂದರೆ ಸಿಗರೇಟಿನ ಹೊಗೆ, ವಾಯು ಮಾಲಿನ್ಯ, ಧೂಳಿನ ಕಣಗಳು, ದೈಹಿಕ ಪರಿಶ್ರಮ ಮತ್ತು ವ್ಯಾಯಾಮ, ಪರಾಗ, ತುಪ್ಪಳ ಅಥವಾ ರೆಕ್ಕೆಗಳು. ಶೀತ, ಕೆಮ್ಮು ಮತ್ತು ವೈರಸ್‌ಗಳಂತಹ ಅನಾರೋಗ್ಯಗಳು, ಗಟ್ಟಿಯಾದ ಭಾವನೆಗಳಾದಂತಹ ಭಯ, ಅಳುವುದು, ನಗುವುದು. ಮತ್ತು ನೋವು ನಿವಾರಕಗಳ ವಿರುದ್ಧವಾದ ಔಷಧಿಗಳು ಸೇರಿದಂತೆ ಕೆಲವು ಔಷಧಿಗಳು.
ನಿಮ್ಮ ನಿರ್ದಿಷ್ಟವಾದ ಪ್ರೇರಿತಗಳನ್ನು ಪತ್ತೆಹಚ್ಚಿದರೆ, ಅವುಗಳನ್ನು ತಡೆಯುವಲ್ಲಿ ಪ್ರಯತ್ನಿಸಿ. ಅದಾಗ್ಯೂ, ದಿನನಿತ್ಯ ತೆಗೆದುಕೊಳ್ಳುವ ಇನ್‌ಹಲೇಷನ್ ಥಿರಫಿಯು ನಿಮ್ಮ ಆಸ್ತಮಾವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
 |
ನಿಮ್ಮ ನಿಯಂತ್ರಕ ಔಷಧಗಳನ್ನು ದಿನನಿತ್ಯ ತೆಗೆದುಕೊಳ್ಳಿ |
ಯಾವ ಮಾತ್ರೆಗಳನ್ನು ಸೇವಿಸಬೇಕು ಮತ್ತು ಯಾವಾಗ ಸೇವಿಸಬೇಕು ಎನ್ನುವುದು ನಿಮ್ಮ ಆಸ್ತಮಾ ರೋಗ ಲಕ್ಷಣಗಳನ್ನು ನಿಯಂತ್ರಿಸುವಲ್ಲಿ ಮುಖ್ಯವಾದ ಪಾತ್ರ ವಹಿಸುತ್ತದೆ. ಆದ್ದರಿಂದ ವೈದ್ಯರು ಶಿಫಾರಸು ಮಾಡಿದಂತಹ ನಿಮ್ಮ ನಿಯಂತ್ರಕ ಇನ್‌ಹೇಲರ್ ಅನ್ನು ದಿನನಿತ್ಯ ಬಳಸಿರಿ. ನೀವು ಪ್ರೇರಿತಗಳೊಡನೆ ಸಂಪರ್ಕದಲ್ಲಿ ಬಂದಾಗಲೂ ಇದು ನಿಮಗೆ ಆಸ್ತಮಾ ಆಘಾತವಾಗುವುದನ್ನು ಕಡಿಮೆ ಮಾಡುತ್ತದೆ. ಮತ್ತು ನೀವು ಚೆನ್ನಾಗಿರುವಾಗಲೂ, ದಯವಿಟ್ಟು ನಿಮ್ಮ ನಿಯಂತ್ರಕಗಳನ್ನು ನಿಲ್ಲಿಸುವ ತಪ್ಪನ್ನು ಮಾಡಬೇಡಿ ಏಕೆ? BP ರೋಗಿಯು ಇದಕ್ಕಿದ್ದಂತೆ ತನ್ನ BP ಔಷಧಿಗಳನ್ನು ನಿಲ್ಲಿಸಿದರೆ ಅವರ BP ಹೆಚ್ಚಿಗೆ ಆಗಬಹುದು. ಇದೇ ರೀತಿ ನೀವು ನಿಯಂತ್ರಕಗಳನ್ನು ನಿಲ್ಲಿಸಿದರೆ ಇನ್ನೊಂದು
ಆಸ್ತಮಾ ಆಘಾತ ಸಂಭವಿಸಬಹುದು.
ನಿಮ್ಮ ವೈದ್ಯರನ್ನು ಭೇಟಿ ಮಾಡದೆ ನೀವು ಆಸ್ತಮಾ ಔಷಧಗಳನ್ನು ನಿಲ್ಲಿಸಬಾರದು ಎನ್ನುವುದನ್ನು ನೆನಪಿನಲ್ಲಿಡುವುದು ಅತೀ ಮುಖ್ಯವಾಗಿದೆ. ನೆನಪಿಡಿ, ನಿಮ್ಮ ರೋಗ ನಿಯಂತ್ರಣದಲ್ಲಿದ್ದು ಮತ್ತು ಸದೃಢವಾಗಿ ಕಂಡರೆ ವೈದ್ಯರು ನಿಮ್ಮ ಡೋಸ್ ಅನ್ನು ನಿಧಾನವಾಗಿ ಕಡಿಮೆ ಮಾಡುತ್ತಾರೆ.
ನಿಮಗೆ ತ್ವರಿತ ಪರಿಹಾರ ಬೇಕಾದರೆ, ನಿಮ್ಮ ಉಪಶಮನ ಔಷಧಿಯನ್ನು ತುರ್ತಾಗಿ ಬಳಸಿ. ನೀವು ಪ್ರತಿದಿನ ಇದನ್ನೆಲ್ಲಾ ತಪ್ಪದೆ ಪಾಲಿಸಿದರೆ, ನಿಮ್ಮ ಆಸ್ತಮಾವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
 |
ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) ಬಳಸಿ ಪ್ರತಿದಿನ ನಿಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಿ |
ನಿಮ್ಮ BP ಅನ್ನು ರಕ್ತದೊತ್ತಡ ಯಂತ್ರದಿಂದ ಅಥವಾ ನಿಮ್ಮ ಉಷ್ಣಾಂಶವನ್ನು ಅಳೆಯಲು ಥರ್ಮಾಮೀಟರ್‌ಬಳಸುವ ರೀತಿಯಲ್ಲಿ ನಿಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಪರೀಕ್ಷಿಸಲು ಪೀಕ್ ಫ್ಲೊ ಮೀಟರ್ (ಬ್ರೀಥೋಮೀಟರ್) ಅನ್ನು ಬಳಸಲಾಗುತ್ತದೆ. ಪೀಕ್ ಫ್ಲೋ ಮೀಟರ್(ಬ್ರೀಥೋಮೀಟರ್) ನಿಂದ ನಿಮ್ಮ ಆಸ್ತಮಾವನ್ನು ಗಮಸಿಸುವುದು ಸುಲಭವಾಗುತ್ತದೆ. ಈ ಸರಳವಾದ ಯಂತ್ರವು ನೀವು ಎಷ್ಟು ಉತ್ತಮವಾಗಿ ಶ್ವಾಸಕೋಶದ ಹೊರಗೆ ಗಾಳಿಯನ್ನು ಊದುವಿರಿ ಎನ್ನುವುದನ್ನು ಅಳತೆ ಮಾಡುತ್ತದೆ. ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) ಅನ್ನು ಬಳಸುವುದು ಎಷ್ಟು ಸುಲಭ ಎನ್ನುವುದನ್ನು ನೀವೆ ನೋಡಿ.
ನೀವು ಚಿಕಿತ್ಸೆಯನ್ನು ಪ್ರಾರಂಭಿಸಿದಾಗ ಮತ್ತು ನಿಮ್ಮ ನಿಯಂತ್ರಕ ಔಷಧಿಗಳನ್ನು ದಿನನಿತ್ಯ ಸೇವಿಸುವುದರಿಂದ, ನಿಮ್ಮ ಉಸಿರಾಟದ ಪರೀಕ್ಷೆಯ ಫಲಿತಾಂಶ ಸುಧಾರಣೆಯಾಗಿದೆಯೆ ಎಂದು ತಿಳಿಯಲು ನೀವು ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) ಅನ್ನು ಬಳಸಬಹುದು. ಈ ನಿಟ್ಟಿನಲ್ಲಿ ನಿಮ್ಮ ಆಸ್ತಮಾವನ್ನು ನಿಯಂತ್ರಣವನ್ನು ಊಹಿಸಲು ಸಹ ಆಗುವುದಿಲ್ಲ.
ನಿಮ್ಮ ವೈದ್ಯರೊಡನೆ ಗುರಿಯನ್ನು ಇಟ್ಟುಕೊಂಡು ಮತ್ತು ನಿಮ್ಮ ಸುಧಾರಣೆಯನ್ನು ಅಳೆಯಬಹುದು. ಇದು ನಿಮಗೆ ಸದೃಢವಾಗಿರಲು ಸಹಾಯ ಮಾಡುತ್ತದೆ, ಪ್ರತಿ ಹಂತದಲ್ಲಿಯೂ ನಿಮ್ಮ ಆಸ್ತಮಾವನ್ನು ಅರಿತುಕೊಳ್ಳಿ ಮತ್ತು ನಿಯಂತ್ರಣದಲ್ಲಿಡಿ. ಇದರ ಉತ್ತಮವಾದ ಭಾಗವೆಂದರೆ ಒಮ್ಮೆ ನಿಮ್ಮ ಗುರಿಯನ್ನು ತಲುಪಿದರೆ, ವೈದ್ಯರು ನಿಮ್ಮ ಡೋಸೆಜ್‌ಗಳನ್ನು ಕಡಿಮೆಮಾಡುತ್ತಾರೆ... ನೀವು ಹಾಗೆಯೇ ಪ್ರತಿದಿನದ ಚಿಕಿತ್ಸೆಗೆ ಬದ್ಧರಾಗಿರಬೇಕು.
ನಿಮ್ಮ ಆಸ್ತಮಾವನ್ನು ನಿಯಂತ್ರಣದಲ್ಲಿಡಲು ನಿಮ್ಮ ವೈದ್ಯರು ಶಿಫಾರಸು ಮಾಡಿದಂತೆ ನಿಯತವಾಗಿ ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) ಅನ್ನು ಬಳಸಬಹುದು. ಮತ್ತು ಈ ಪ್ರತಿದಿನದ ಪರೀಕ್ಷೆಗಳು ನಿಮಗೆ ಕೆಲವು ಸಮಯದವರೆಗೆ ಆಘಾತ ಸಂಭವಿಸದೆ ಇದ್ದರೂ ಅನಿವಾರ್ಯವಾಗಿರುತ್ತವೆ ಎನ್ನುವುದನ್ನು ನೆನಪಿಡಿ.
ಆದ್ದರಿಂದ ನೀವು ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) ಪರೀಕ್ಷೆಯನ್ನು ಎಲ್ಲಿ ಪಡೆಯಬಹುದು? ನಿಮ್ಮ ವೈದ್ಯರನ್ನು ಭೇಟಿ ಮಾಡಲು ಕ್ಲಿನಿಕ್‌ಗೆ ಹೋದಾಗ ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) ಪರೀಕ್ಷೆ ಮಾಡುವಂತೆ ಕೇಳಿ. ನಿಮ್ಮ ವೈದ್ಯರನ್ನು ಭೇಟಿ ಮಾಡಿದಾಗ ನಿಮ್ಮ ವೈಯಕ್ತಿಕವಾಗಿ ಉತ್ತಮವಾದದನ್ನು ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) ನಲ್ಲಿ ಬರೆದುಕೊಳ್ಳಿ. ಔಷಧಿ ಅಂಗಡಿಯಿಂದ ನಿಮ್ಮದೇ ಆದ ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) ಅನ್ನು ಖರೀದಿಸುವಲ್ಲಿ ನೀವು ಪರಿಗಣಿಸಬಹುದು.
 |
ನಿಮ್ಮ ವೈದ್ಯರನ್ನು ನಿಯತವಾಗಿ ಭೇಟಿ ಮಾಡಿ |
| • |
ಆಸ್ತಮಾದ ವಿರುದ್ಧ ಹೋರಾಡುವಲ್ಲಿ ನಿಮ್ಮ ಹಾಗೂ ನಿಮ್ಮ ವೈದ್ಯರ 50:50 ಪಾಲು ಇರಲಿ. ನೀವು ಆರೋಗ್ಯದಿಂದಿರುವಾಗಲೂ, ಅವರನ್ನು ನಿಯತವಾಗಿ ಭೇಟಿ ಮಾಡಿ. ನಿಮ್ಮ ಇನ್‌ಹೇಲರ್ ಅನುಕೂಲತೆಗಳ ಬಗ್ಗೆ ಅವರನ್ನು ಕೇಳಲು ಹಿಂಜರಿಯಬೇಡಿ. ಅವರ ಸಹಾಯದಿಂದ ನಿಮ್ಮ ಇನ್‌ಹೇಲರ್ ಅನ್ನು ಬಳಸುವುದು ಮತ್ತು ನಿರ್ವಹಿಸುವುದು ಹೇಗೆ ಎಂದು ತಿಳಿದುಕೊಳ್ಳಿ. ನೀವಾಗಿಯೆ ಔಷಧಿಗಳನ್ನು ನಿಲ್ಲಿಸಬಾರದು. ನಿಮ್ಮ ವೈದ್ಯರು ಶಿಫಾರಸು ಮಾಡಿದ ಔಷಧಿಗಳ ಪ್ರಕಾರವಾಗಿ ಮಾತ್ರೆಗಳನ್ನು ತೆಗೆದುಕೊಳ್ಳಿ.
ನಿಮ್ಮ ವೈದ್ಯರು ನಿಮಗೆ ಸೂಚಿಸುವ ಚಿಕಿತ್ಸೆಗಳನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಚಿಕಿತ್ಸೆಯನ್ನು ಪ್ರಾಮಾಣಿಕವಾಗಿ ಪಾಲಿಸುತ್ತಿರುವಿರಾ ಎಂದು ಖಚಿತಪಡಿಸಿಕೊಳ್ಳಿ.
|
| • |
ನಿಮ್ಮ ವೈದ್ಯಕೀಯ ಫೈಲ್‌ನ್ನು ಜಾಗೃತೆಯಿಂದ ಇರಿಸಿಕೊಳ್ಳಿ ಮತ್ತು ಅದನ್ನು ಪ್ರತಿ ಬಾರಿಯೂ ವೈದ್ಯರನ್ನು ಭೇಟಿಯಾಗಲು ಹೋದಾಗ ಜೊತೆಯಲ್ಲಿ ತೆಗೆದುಕೊಂಡು ಹೋಗಿ. ಅದರಿಂದ ನಿಮ್ಮ ವೈದ್ಯರು ನಿಮ್ಮ ವೈದ್ಯಕೀಯ ಚರಿತ್ರೆಯನ್ನು ವೀಕ್ಷಿಸಬಹುದು. ಇದು ಪ್ರತಿಯಾಗಿ ನಿಮ್ಮ ವೈದ್ಯರಿಗೆ ನಿಮ್ಮ ಆಸ್ತಮಾವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. |
| • |
ನೀವು ತೆಗೆದುಕೊಳ್ಳುತ್ತಿರುವ ಯಾವುದೇ ಮಾತ್ರೆಗಳಿರಲಿ ಅದನ್ನು ನಿಮ್ಮ ವೈದ್ಯರಿಗೆ ತಿಳಿಸುವುದನ್ನು ಮರೆಯಬೇಡಿ. ಕೆಲವು ನೋವು ನಿವಾರಕಗಳು ಸಹ ಆಸ್ತಮಾ ರೋಗಲಕ್ಷಣಗಳಿಗೆ ಕಾರಣವಾಗುತ್ತವೆ. ಆದ್ದರಿಂದ ನೀವು ಅನಾರೋಗ್ಯದಿಂದ ಬಳಲುತ್ತಿರುವಾಗ – ಅದು ನಿಮ್ಮ ಬೆನ್ನು ನೋವು ಅಥವಾ ಶೀತ ಅಥವಾ ಯಾವುದೇ ಆಗಿರಲಿ, ಮತ್ತು ನಿಮ್ಮ ಕಣ್ಣಿನ ಸಲುವಾಗಿ ಸೇವಿಸುತ್ತಿರುವ ಔಷಧಿಗಳು ಆಗಿರಬಹುದು ದಯವಿಟ್ಟು ಔಷಧಿಗಳ ಬಗ್ಗೆ ನಿಮ್ಮ ವೈದ್ಯರಿಗೆ ತಿಳಿಸಿ. |
ಆಸ್ತಮಾ ಮತ್ತು ನಿಮ್ಮ ಜೀವನ ಶೈಲಿ
 |
ನೀವು ವಿಶೇಷವಾದ ಆರೋಗ್ಯ ಕ್ರಮವನ್ನು ಪಾಲಿಸಬೇಕೆಂದಿಲ್ಲ ಮತ್ತು ಐಸ್‌ಕ್ರೀಮ್, ಚಾಕೊಲೇಟ್ ಮತ್ತು ನಿಮಗೆ ಇಷ್ಟವಾದ ತಿನಿಸುಗಳನ್ನು ತ್ಯಜಿಸಬೇಕಿಲ್ಲ. ನೀವು ಹೆಚ್ಚಿಗೆ ಸೇವಿಸುವವರೆಗೆ... ಆಸ್ತಮಾವು ನೀವು ಹೆಚ್ಚು ಇಷ್ಟಪಟ್ಟು ತಿನ್ನುವ ಆಹಾರವನ್ನು ನಿಲ್ಲಿಸಬಾರದು. ಅಲರ್ಜಿಯನ್ನು ಪ್ರೇರಿತಗೊಳಿಸುವಂತಹ ಆಹಾರವನ್ನು ತಪ್ಪಿಸುವುದನ್ನು ನೆನಪಿನಲ್ಲಿಡಿ, ಅಂದರೆ ಬೀಜಗಳು ಅಥವಾ ಸೇರ್ಪಡೆಗಳು ಮತ್ತು ಸಂರಕ್ಷಕಗಳನ್ನು ಸಂಪೂರ್ಣವಾಗಿ ಹೊಂದಿರುವಂತಹ ಕ್ಯಾನ್, ಬಾಟಲ್ ಮತ್ತು ಪ್ಯಾಕ್ ಮಾಡಿದ ಆಹಾರಗಳು. ನಿಮಗೆ ಆಹಾರ ಅಲರ್ಜಿ ಇದೆ ಎಂದು ನೀವು ಭಾವಿಸಿದರೆ, ಮಾರ್ಗದರ್ಶನಕ್ಕಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ. |
 |
ಎಲ್ಲರಿಗೂ ತಮ್ಮ ಒತ್ತಡದ ಮಟ್ಟವನ್ನು ಕಡಿಮೆಗೊಳಿಸಲು ಸಮಯ ಬೇಕಾಗುತ್ತದೆ. ನೀವು ಒತ್ತಡದಿಂದ ಹೊರ ಬರಲು ಇನ್ನಷ್ಟು ವಿಶ್ರಾಂತಿ ಅವಶ್ಯಕವಾಗಿದೆ ಏಕೆಂದರೆ ಒತ್ತಡವು ಆಸ್ತಮಾದ ಸಾಮಾನ್ಯ ಪ್ರೇರಿತವಾಗಿದೆ.ಆದ್ದರಿಂದ ಕೆಲವು ಸರಳವಾದ ವಿಶ್ರಾಂತಿ ತಂತ್ರಗಳನ್ನು ತಿಳಿದುಕೊಳ್ಳಿ ಮತ್ತು ಅವುಗಳನ್ನು ನಿಮ್ಮ ಬದುಕಿನ ಭಾಗವನ್ನಾಗಿಸಿಕೊಳ್ಳಿ. ಒಳ್ಳೆಯ ಶಿಕ್ಷಕರಡಿಯಲ್ಲಿ ಯೋಗವನ್ನು ಪ್ರಾರಂಭಿಸಿ. ಒಳ್ಳೆಯ ವಿಶ್ರಾಂತಿ ಸಿಗುವಂತಹ ಹವ್ಯಾಸವನ್ನು ಬೆಳೆಸಿಕೊಳ್ಳಿ. ಉದ್ಯಾನವನದಲ್ಲಿ ಸ್ವಲ್ಪ ಸುತ್ತಾಡಿ, ನಿಮ್ಮ ನೆಚ್ಚಿನ ಚಿತ್ರವನ್ನು ವೀಕ್ಷಿಸಿ.... ನೀವು ನಿಜವಾಗಿಯೂ ಆನಂದಿಸುವಂತದ್ದನ್ನು ಮಾಡಿ ಮತ್ತು ನಿಮ್ಮ ಕೆಲಸದಿಂದ ಹಾಗೂ ನಿಮಗೆ ಒತ್ತಡ ನೀಡುವಂತಹ ವಸ್ತುಗಳಿಂದ ಬಿಡುವು ಮಾಡಿಕೊಳ್ಳಲು ಸಹಾಯವಾಗುತ್ತದೆ. |
 |
ನಿಮಗೆ ದಿನನಿತ್ಯದ ವ್ಯಾಯಾಮ ಒಳ್ಳೆಯದು. ನೀವು ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಲು ಮತ್ತು ನೀವು ಆನಂದಿಸುವ ವ್ಯಾಯಾಮವನ್ನು ಮಾಡುವಲ್ಲಿ ನಿಮ್ಮ ಆಸ್ತಮಾವು ತಡೆಯಲು ಬಿಡಬೇಡಿ. ನೀವು ಹೀಗೆ ಮಾಡುವುದನ್ನು ಇಷ್ಟ ಪಡುತ್ತಿದ್ದರೆ ನಿಮ್ಮ ಜೀವನದ ಭಾಗವನ್ನಾಗಿಸಿಕೊಳ್ಳಿ. ಮತ್ತು ಇದು ನಿಮ್ಮ ಸಾಮಾನ್ಯ ಆರೋಗ್ಯಕ್ಕೆ ಮತ್ತು ನಿಮ್ಮ ಒಳಿತಿಗಾಗಿ ಅದ್ಭುತವನ್ನುಂಟು ಮಾಡುತ್ತದೆ. ಆದ್ದರಿಂದ ಮುನ್ನುಗ್ಗಿ ಮತ್ತು ಚುರುಕಾಗಿರಿ! ನೀವು ಮಾಡಲು ಯೋಜನೆ ಮಾಡಿಕೊಂಡ ವ್ಯಾಯಾಮಗಳನ್ನು ನಿಮ್ಮ ವೈದ್ಯರಿಗೆ ತಿಳಿಸಿ ಮತ್ತು ಅವರ ಸಲಹೆಯನ್ನು ಪಾಲಿಸಿರಿ. |
ಆಸ್ತಮಾ ಆಘಾತವಾದಾಗ ಏನು ಮಾಡಬೇಕು |
ನೀವು ನಿಮ್ಮ ಉಪಶಮನ ಔಷಧಿಗಳನ್ನು ನಿಯತವಾಗಿ ಸೇವಿಸಿದರೆ ಮತ್ತು ಪ್ರೇರಿತಗಳನ್ನು ದೂರವಿಟ್ಟರೆ, ನಿಮಗೆ ಆಸ್ತಮಾ ಆಘಾತದ ಸಂಭವನೀಯತೆ ಕಡಿಮೆ ಇರುತ್ತದೆ. ಆದರೆ ತುರ್ತು ಪರಿಸ್ಥಿತಿಗಳಲ್ಲಿ ಈ ಹಂತಗಳನ್ನು ಪಾಲಿಸಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಿ:
 |
ನೀವು ನೇರವಾಗಿ ಕುಳಿತುಕೊಳ್ಳಬೇಕು ಮತ್ತು ಮಲಗಬೇಡಿ. ನಿಮ್ಮ ಬಟ್ಟೆಗಳು ಸಡಿಲವಾಗಿರಲಿ. ನೀವು ಪ್ರಶಾಂತವಾಗಿರಲು ಮತ್ತು ವಿರಮಿಸಿಕೊಳ್ಳಲು ಪ್ರಯತ್ನಿಸಿ. ಯಾವುದೇ ಸಮಯದಲ್ಲಿಯೂ ನಿಮ್ಮ ಹತ್ತಿರವಿರುವ ಸಂಬಂಧಿಕರು ಅಥವಾ ಸ್ನೇಹಿತರು ಸಹಾಯ ಮಾಡಬೇಕು ಮತ್ತು ಧನಾತ್ಮಕ ಭರವಸೆಗಳನ್ನು ನೀಡಬೇಕು. |
 |
ತಡಮಾಡದೆ, ನಿಮ್ಮ ವೈದ್ಯರು ಶಿಫಾರಸು ಮಾಡುವ ಡೋಸೆಜ್‌ನಲ್ಲಿರುವ ಉಪಶಮನ ಔಷಧಿಗಳನ್ನು ತೆಗೆದುಕೊಳ್ಳಿ. |
 |
ನಂತರ 5 ನಿಮಿಷಗಳ ಕಾಲ ನಿರೀಕ್ಷಿಸಿ. ಯಾವುದೇ ಬೆಳವಣಿಗೆ ಇಲ್ಲದಿದ್ದರೆ, ವೈದ್ಯರು ಸೂಚಿಸಿದ ನಿವಾರಕ ಔಷಧಿಯ ಹೆಚ್ಚುವರಿ ಡೋಸ್ ತೆಗೆದುಕೊಳ್ಳಿ. |
 |
ನೀವು ಇನ್ನೂ ನೆಮ್ಮದಿ ಪಡೆಯದೆ ಇದ್ದರೆ, ವೈದ್ಯರನ್ನು ಕೂಡಲೇ ಸಂಪರ್ಕಿಸಿ. ನಿಮ್ಮ ವೈದ್ಯರ ಅನುಮತಿ ಇಲ್ಲದೆ ನಿಮ್ಮ ಉಪಶಮನ ಔಷಧಗಳ ಡೋಸ್ ಅನ್ನು ಹೆಚ್ಚಿಗೆ ಮಾಡಬಾರದು ಎನ್ನುವುದನ್ನು ಮುಖ್ಯವಾಗಿ ನೆನಪಿನಲ್ಲಿಡಿ. |
 |
ನಿಮ್ಮ ವೈದ್ಯರು ತ್ವರಿತವಾಗಿ ನಿಮ್ಮನ್ನು ತಲುಪಲು ಆಗದಿದ್ದರೆ ನೀವು ಹತ್ತಿರದ ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ದಾಖಲಾಗಿ. |
ವಿಶೇಷ ಸಂದರ್ಭಗಳಲ್ಲಿ ಆಸ್ತಮಾ |
ನೀವು ಆಸ್ತಮಾವನ್ನು ಹೊಂದಿದ್ದರೆ, ಅದು ಜಗತ್ತಿನ ಅಂತ್ಯವಲ್ಲ. ಆಸ್ತಮಾವನ್ನು ನಿಯಂತ್ರಿಸಿ ಮತ್ತು ನೀವು ಸಾಮಾನ್ಯರಂತೆ ಬದುಕಬಹುದು ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಕೆಳಗಿನ ವಿಭಾಗವು ವಿಶೇಷ ಸಂದರ್ಭಗಳಲ್ಲಿ ಆಸ್ತಮಾವನ್ನು ವಿವರಿಸಲು ಪ್ರಯತ್ನಿಸುತ್ತದೆ. ನಾವು ತೆಗೆದುಕೊಳ್ಳಲಿರುವ ಕೆಲವು ವಿಷಯಗಳು: ಗರ್ಭಾವಸ್ಥೆಯಲ್ಲಿ ಆಸ್ತಮಾ, ಆಸ್ತಮಾ ಮತ್ತು ಹಾಲುಣಿಸುವ ತಾಯಂದಿರು, ಆಸ್ತಮಾ ಮತ್ತು ನಿಮ್ಮ ಕೆಲಸ, ಆಸ್ತಮಾ ಮತ್ತು ಪ್ರಯಾಣ, ಆಸ್ತಮಾ ಮತ್ತು ಕ್ರೀಡೆಗಳು, ಆಸ್ತಮಾ ಮತ್ತು ಧೂಮಪಾನ, ಆಸ್ತಮಾ ಮತ್ತು ಪೂರಕ ಔಷಧಿಗಳು, ಆಸ್ತಮಾ ಮತ್ತು ಅಲರ್ಜಿಕ್ ರೈನೈಟಿಸ್ ಮತ್ತು ಇನ್ನಿತರೆ.
 |
ಗರ್ಭಾವಸ್ಥೆಯಲ್ಲಿ ಆಸ್ತಮಾ: |
ಮೊದಲನೆಯದಾಗಿ, ನೀವು ಕುಟುಂಬವನ್ನು ಪ್ರಾರಂಭಿಸಬೇಕಾದರೆ, ಆಸ್ತಮಾವು ನೀವು ಗರ್ಭ ಧರಿಸಲು ತಡೆಯಬಾರದು. ಎರಡನೆಯದಾಗಿ, ನೀವು ಗರ್ಭವತಿ ಆಗಿದ್ದಲ್ಲಿ ಮತ್ತು ಆಸ್ತಮಾವನ್ನು ಹೊಂದಿದ್ದರೆ, ನೀವು ಸಾಮಾನ್ಯವಾದ ಸುರಕ್ಷಿತ ಪ್ರಸವವನ್ನು ಪಡೆಯಬಹುದು. ನಿಮ್ಮ ಆಸ್ತಮಾವು ನಿಯತವಾದ ಔಷಧಗಳಿಂದ ನಿಯಂತ್ರಣದಲ್ಲಿದ್ದರೆ ಮತ್ತು ನೀವು ಸಾಮಾನ್ಯ ಗರ್ಭ ಧರಿಸಿದ ತಾಯಿಯಂತೆ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬಹುದು ಮುಖ್ಯವಾಗುತ್ತದೆ – ನಿಮ್ಮ ವೈದ್ಯರು ಉತ್ತಮವಾಗಿ ಮಾರ್ಗದರ್ಶನ ಮಾಡಬಹುದು. ಇನ್ನೂ ಕೆಲವು ಸಂದರ್ಭಗಳಲ್ಲಿ, ಮತ್ತು ನೀವು ಔಷಧಿಗಳನ್ನು ನಿಯತವಾಗಿ ಸೇವಿಸದಿದ್ದರೆ, ಆಸ್ತಮಾ ರೋಗ ಲಕ್ಷಣಗಳು ಇನ್ನೂ ಉಲ್ಭಣಗೊಳ್ಳುತ್ತವೆ. ಇನ್‌ಹೇಲ್ ಮಾಡಿದ ಔಷಧಿಗಳು ನಿಮ್ಮ ಭ್ರೂಣದ ಮೇಲೆ ಯಾವುದೇ ಸಮಸ್ಯೆಯನ್ನುಂಟು ಮಾಡುವುದಿಲ್ಲ ಎಂದು ಸಾಬೀತಾಗಿದೆ.
 |
ಹಾಲುಣಿಸುವ ತಾಯಂದಿರಲ್ಲಿ ಆಸ್ತಮಾ |
ನಿಮಗೆ ಆಸ್ತಮಾ ಇದ್ದರೆ ಮತ್ತು ನೀವು ನಿಮ್ಮ ಮಗುವಿಗೆ ಹಾಲುಣಿಸಬೇಕೆಂದುಕೊಂಡರೆ, ದಯವಿಟ್ಟು ಮಾಡಿ. ಆಸ್ತಮಾವು ಹರಡುವ ರೋಗವಲ್ಲ. ನೀವು ಈಗಾಗಲೇ ಇನ್‌ಹಲೇಶನ್ ಥೆರಪಿಯನ್ನು ತೆಗೆದುಕೊಳ್ಳುತ್ತಿದ್ದರೆ, ಕೇವಲ ಕಡಿಮೆ ಪ್ರಮಾಣದ ಆಸ್ತಮಾದ ಔಷಧಿಯು ಮೊಲೆ ಹಾಲಿನಲ್ಲಿ ಹೋಗುತ್ತದೆ. ಪ್ರಪಂಚದಾದ್ಯಂತ ಇನ್‌ಹಲೇಷನ್ ಥೆರಪಿಯನ್ನು ತೆಗೆದುಕೊಳ್ಳುತ್ತಿರುವ ಹಾಲುಣಿಸುವ ತಾಯಂದಿರು ತಮ್ಮ ಮಗುವಿಗೆ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಹಾಲುಣಿಸುತ್ತಿದ್ದಾರೆ. ಮತ್ತೊಂದು ಗಮನಿಸಬೇಕಾದ ವಿಷಯವೆಂದರೆ ಇನ್‌ಹೆಲ್ ಮಾಡಿದ ಔಷಧಗಳು ಇಂದು ತುಂಬಾ ಸುರಕ್ಷಿತವಾಗಿವೆ, ಇದನ್ನು ಗರ್ಭಾವಸ್ಥೆಯಲ್ಲಿ ಸುರಕ್ಷಿತವಾಗಿ ಬಳಸಬಹುದು.
 |
ಆಸ್ತಮಾ ಮತ್ತು ನಿಮ್ಮ ಕೆಲಸ: |
ನಿಮ್ಮ ಆಸ್ತಮಾವು ಉತ್ತಮವಾಗಿ ನಿಯಂತ್ರಣದಲ್ಲಿದ್ದರೆ, ನೀವು ಕೆಲಸವನ್ನು ತಪ್ಪಿಸಬೇಕಿಲ್ಲ, ಅಥವಾ ಸಂಬಳ ಕಡಿತದ ಬಗ್ಗೆ ಚಿಂತಿಸಬೇಕಿಲ್ಲ. ಅದಾಗ್ಯೂ, ಆಭರಣ ವ್ಯಾಪಾರ, ಪ್ರಿಂಟಿಂಗ್, ಕ್ರಿಮಿನಾಶಕ, ಕಲ್ಲುಗಣಿ, ಪೇಂಟಿಂಗ್ ಮತ್ತು ಪ್ಲಾಸ್ಟಿಕ್ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು, ಅಡುಗೆ ಭಟ್ಟರು ಮತ್ತು ಬೇಕರ್ಸ್, ಬೆಸುಗೆ ಹಾಕುವವರು ಮತ್ತು ಲೋಹಲೇಪಗಾರರು, ಫೋಮ್ ಕೆಲಸಗಾರರು ಮತ್ತು ಸ್ಪ್ರೇ ಪೇಂಟರ್‌ಗಳು, ಕ್ಷೌರಿಕರು, ಮರಗೆಲಸ ಮಾಡುವವರು ಇವರೆಲ್ಲರು ಆಸ್ತಮಾಕ್ಕೆ ಗುರಿಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಬಹುಶಃ ಇದು ಕೆಲವು ರಾಸಾಯನಿಕಗಳ ವಾಸನೆ ಅಥವಾ ಬೇರೆ ಬೇರೆ ಆಗಿರುವ ಕಣಗಳ ರೂಪವು ಸಹ ಶ್ವಾಸಕೋಶದಲ್ಲಿ ಕಿರಿಕಿರಿ ಉಂಟು ಮಾಡುತ್ತವೆ. ಇವುಗಳನ್ನು
ಪ್ರೇರಿತಗಳು ಎಂದು ಕರೆಯಲಾಗುತ್ತದೆ.
ನಿಮ್ಮ ಪ್ರೇರಿತಗಳನ್ನು ಅರಿತುಕೊಳ್ಳಲು, ಸೂಕ್ತವಾದ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲು ನಿಮ್ಮ ನಿಯಂತ್ರಕಗಳನ್ನು ಸರಿಯಾಗಿ ನಿಯತವಾಗಿ ತೆಗೆದುಕೊಳ್ಳುವುದು ಮುಖ್ಯವಾಗಿದೆ, ಮತ್ತು ನಿಮಗೆ ಉತ್ತಮವಾಗಿ ಸಲಹೆ ನೀಡುವ ವೈದ್ಯರನ್ನು ಭೇಟಿ ಮಾಡಿ.
 |
ಆಸ್ತಮಾ ಮತ್ತು ಪ್ರಯಾಣ: |
ಆಸ್ತಮಾವು ನಿಮ್ಮ ಕೆಲಸ ಅಥವಾ ನಿಮ್ಮ ಪ್ರಯಾಣಕ್ಕೆ ಅಡ್ಡಿಯಾಗುವುದಿಲ್ಲ. ನೀವು ನಿರಂತರವಾಗಿ ಪ್ರಯಾಣ ಮಾಡುವವರಾದರೆ, ಯಾವಾಗಲೂ ನಿಮ್ಮೊಂದಿಗೆ ವೈದ್ಯರ ಲಿಖಿತ ಸೂಚಿಯ ಒಂದು ನಕಲನ್ನು, ಲಿಖಿತ ಸೂಚನೆಗಳು ಮತ್ತು ನಿಮ್ಮ ತುರ್ತು ಪರಿಸ್ಥಿತಿಯ ದೂರವಾಣಿ ಸಂಖ್ಯೆಗಳನ್ನು ಇರಿಸಿಕೊಳ್ಳಿ. ಮತ್ತು ತುಂಬಾ ಮುಖ್ಯವಾಗಿ, ನಿಮ್ಮ ನಿಯಂತ್ರಕಗಳು ಮತ್ತು ಉಪಶಮನಗಳನ್ನು ತೆಗೆದುಕೊಳ್ಳದೆ ನೀವು ಪ್ರಯಾಣ ಮಾಡಬೇಡಿ. ನಿಮಗೆ ತಿಳಿದಿರುವಂತೆ, ನಿಮ್ಮ ನಿಯಂತ್ರಕಗಳನ್ನು ನಿಯತವಾಗಿ ತೆಗೆದುಕೊಳ್ಳಿ. ನಿಮ್ಮ ಕೈಯಲ್ಲಿ ಬದಲಿ ಉಪಶಮನವನ್ನು ಇರಿಸಿಕೊಳ್ಳಬೇಕು ಎಂದು ನಾವು ಸಲಹೆ ನೀಡುತ್ತೇವೆ. ನೀವು ಪ್ರಯಾಣ ಮಾಡುವ ಮೊದಲೆ ಹವಾಮಾನವನ್ನು ಸಹ ತಿಳಿದುಕೊಳ್ಳಿ ಮತ್ತು ಹವಾಮಾನ ಬದಲಾವಣೆಗೆ ಸೂಕ್ತವಾದ ಬಟ್ಟೆಗಳನ್ನು ತೆಗೆದುಕೊಂಡು ಸಿದ್ಧರಾಗಿರಿ.
ಇನ್ನಷ್ಟು ತಿಳಿಯಿರಿ…
 |
ಆಸ್ತಮಾ ಮತ್ತು ಕ್ರೀಡೆಗಳು: |
ಕ್ರೀಡೆಯಲ್ಲಿ ಅಥವಾ ನಿಮ್ಮ ಜೀವನದಲ್ಲಿ ನೀವು ಜಯಶಾಲಿಯಾಗಲು ಇದು ತಡೆ ಆಗಬಾರದು. ಉನ್ನತ ಕ್ರಿಕೆಟ್ ಆಟಗಾರರು ಆಸ್ತಮಾವನ್ನು ಹೊಂದಿದ್ದಾರೆ, ಬ್ಯಾಸ್ಕೆಟ್‌ಬಾಲ್ ಆಟಗಾರರು ಆಸ್ತಮಾವನ್ನು ಹೊಂದಿದ್ದಾರೆ, ಈಜುಗಾರರು ಮತ್ತು ಓಟಗಾರರು ಸಹ ಆಸ್ತಮಾವನ್ನು ಹೊಂದಿದ್ದಾರೆ ಮತ್ತು ಅವರು ಒಲಂಪಿಕ್ ಚಿನ್ನವನ್ನು ಜಯಗಳಿಸುವತ್ತ ತೆರಳಿದ್ದಾರೆ.
ನೀವು ಆಸ್ತಮಾವನ್ನು ಹೊಂದಿದ್ದರೆ ಮತ್ತು ಇದು ಉತ್ತಮವಾಗಿ ನಿಯಂತ್ರಣದಲ್ಲಿದ್ದರೆ ನೀವು ವ್ಯಾಯಾಮ ಮಾಡಬಹುದು ಮತ್ತು ಚುರುಕಾಗಿ ಆಟವನ್ನು ಆಡಬಹುದು. ಇದು ಅದಾಗ್ಯೂ ನಿಮ್ಮ ವೈದ್ಯರು ಸೂಚಿಸಿರುವ ನಿಯಂತ್ರಕ ಔಷಧಿಗಳನ್ನು ನಿಯತವಾಗಿ ತೆಗೆದುಕೊಳ್ಳುವುದು ಅತೀ ಮುಖ್ಯವಾಗಿದೆ. ಕೆಲವು ಆಸ್ತಮಾ ರೋಗಿಗಳು ವ್ಯಾಯಾಮದ ಮೊದಲು ಉಪಶಮನಕಾರಿ/ತಡೆಗಟ್ಟುವುದನ್ನು ಬಳಸುವ ಮೂಲಕ ಲಾಭ ಪಡೆಯುತ್ತಾರೆ. ಆದ್ದರಿಂದ ಯಾವಾಗಲೂ ನಿಮ್ಮ ಉಪಶಮನವನ್ನು ಕೈಯಲ್ಲಿರಿಸಿಕೊಳ್ಳಿ. ಕೆಲವು ಸಂದರ್ಭಗಳಲ್ಲಿ ಹೆಚ್ಚಿನ ಔಷಧಿಗಳನ್ನು ಜೊತೆಯಲ್ಲಿರಿಸಿಕೊಳ್ಳುವುದನ್ನು ಮರೆಯಬೇಡಿ. ಒಂದು ವೇಳೆ ನೀವು ಆಕ್ರಮಣಕ್ಕೊಳಗಾದರೆ ಅವರು ಏನು ಮಾಡಬೇಕೆಂದು ನಿಮ್ಮ ತಂಡದ ಸದಸ್ಯರಿಗೆ, ನಿಮ್ಮ ಸ್ನೇಹಿತರಿಗೆ, ನಿಮ್ಮ ಜಿಮ್ ಬೋಧಕರಿಗೆ ಅಥವಾ ನಿಮ್ಮ ತರಬೇತುದಾರರಿಗೆ ತಿಳಿಸಿರಿ.
ಯೋಗ ಮಾಡುವುದು ಆಸ್ತಮಾಗೆ ಒಳ್ಳೆಯ ವ್ಯಾಯಾಮ, ಮತ್ತು ಈಜುವುದು, ಹಾಕಿ, ಫುಟ್‌ಬಾಲ್, ಕ್ರಿಕೆಟ್ ನಂತಹ ಕ್ರೀಡೆಗಳನ್ನು ಆಡುವುದು, ನಿರಂತರವಾಗಿ ಓಡುವ ಅಗತ್ಯವಿಲ್ಲ ಮತ್ತು ನಿಮಗೆ ಮಧ್ಯೆ ವಿಶ್ರಾಂತಿ ಸಹ ದೊರೆಯುತ್ತದೆ. ನೀವು ವ್ಯಾಯಾಮದ ಮತ್ತು ಕ್ರೀಡೆಯ ಬಗ್ಗೆ ಗಂಭೀರವಾಗಿದ್ದರೆ, ದಯವಿಟ್ಟು ನಿಮ್ಮ ವೈದ್ಯರನ್ನು ಪ್ರತಿ ದಿನ ಭೇಟಿ ಮಾಡಿ.
 |
ಆಸ್ತಮಾ ಮತ್ತು ಅಲರ್ಜಿಕ್ ರೈನೈಟಿಸ್: |
ಇಲ್ಲಿ ಆಸ್ತಮಾ ಮತ್ತು ಅಲರ್ಜಿಕ್ ರೈನೈಟಿಸ್‌ನ ನಡುವೆ ಬಲವಾದ ಸಾಮ್ಯತೆ ಇದೆ (ಮೂಗಿನ ಅಲರ್ಜಿ). ಅಲರ್ಜಿಕ್ ರೈನೈಟಿಸ್‌ನಿಂದ ಬಳಲುತ್ತಿರುವ ಜನರು ಯಾವಾಗಲೂ ಸೀನುವುದು ಮತ್ತು ಮೂಗಿನಿಂದ ಸುರಿಯುವುದರ ಜೊತೆಗೆ ಪದೇ ಪದೇ ಬರುವ ಶೀತದ ಬಗ್ಗೆ ದೂರನ್ನು ಹೇಳುತ್ತಾರೆ. ಮೂಗು ಶ್ವಾಸನಾಳದ ವಿಸ್ತರಿತ ಭಾಗವಾಗಿರುವುದರಿಂದ ಆಸ್ತಮಾ ಇರುವ ಸುಮಾರು 70% ರೋಗಿಗಳು ರೈನೈಟಿಸ್ ಅಲರ್ಜಿಯನ್ನು ಸಹ ಹೊಂದಿರುತ್ತಾರೆ. ಸಾಮಾನ್ಯವಾಗಿ, ಮೊದಲಿಗೆ ಮೂಗಿಗೆ ಮತ್ತು ನಂತರ ಶ್ವಾಸಕೋಶಗಳಿಗೆ ಪರಿಣಾಮವಾಗುತ್ತದೆ. ಆಸ್ತಮಾವನ್ನು ಉತ್ತಮವಾಗಿ ನಿಯಂತ್ರಿಸಬೇಕಾದರೆ ಅಲರ್ಜಿಕ್ ರೈನೈಟಿಸ್ ಅನ್ನು ತಪಾಸಣೆ ಮಾಡಿ ಚಿಕಿತ್ಸೆ ಪಡೆಯುವುದು ಅತೀ ಮುಖ್ಯವಾಗಿರುತ್ತದೆ.
ಅಲರ್ಜಿಯ ರೈನೈಟಿಸ್ ಎಂಬುದು ರೋಗಲಕ್ಷಣಗಳ ಸಂಗ್ರಹವಾಗಿದೆ, ದೂಳು, ಸಾಕುಪ್ರಾಣಿಗಳು, ಅಥವಾ ಹೂವಿನ ಪರಾಗದಂತಹವುಗಳನ್ನು ಅಲರ್ಜಿ ಹೊಂದಿರುವವರು ಉಸಿರಾಡಿದಾಗ ಇದು ಸಂಭವಿಸುತ್ತದೆ.
ರೋಗ ಲಕ್ಷಣಗಳು:
• ಮೂಗಿನಲ್ಲಿ ಸುರಿಯುವುದು (ಮೂಗಿನಿಂದ ನಿರಂತರವಾಗಿ ಸುರಿಯುತ್ತಿರುವುದು)
• ಸೀನುವುದು
• ಮೂಗಿನಲ್ಲಿ ತಡೆಯುವಿಕೆ
• ಮೂಗಿನಲ್ಲಿ ತುರಿಕೆ (ಮೂಗಿನಲ್ಲಿ, ಕಣ್ಣಿನಲ್ಲಿ ಅಥವಾ ಬಾಯಿಯ ಮೇಲ್ಭಾಗದಲ್ಲಿ ತುರಿಕೆ ಆಗುತ್ತದೆ)
ಈ ರೋಗ ಲಕ್ಷಣಗಳು ವರ್ಷದ ನಿರ್ದಿಷ್ಟವಾದ ತಿಂಗಳಲ್ಲಿ ಸಹ ಕಾಣಿಸಿಕೊಳ್ಳಬಹುದು. ಇದನ್ನು ಸೀಸನಲ್ ಅಲರ್ಜಿಕ್ ರೈನೈಟಿಸ್ (SAR) ಎಂದು ಕರೆಯುತ್ತಾರೆ. ಇದು ವರ್ಷದಾದ್ಯಂತ ಆವರಿಸಿದರೆ, ಇದನ್ನು ಪೆರಿನಿಯಲ್ ಅಲರ್ಜಿಕ್ ರೈನೈಟಿಸ್ (PAR) ಎಂದು ಹೇಳಲಾಗುತ್ತದೆ.
ನಿಮ್ಮ ಅಲರ್ಜಿಕ್ ರೈನೈಟಿಸ್ ಅನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಮುಖ್ಯ ಏಕೆಂದರೆ ಇದನ್ನು ಗುಣ ಪಡಿಸದಿದ್ದರೆ ಆಸ್ತಮಾ ಇನ್ನೂ ಉಲ್ಭಣಗೊಂಡು ಮತ್ತು ಇದು ಬೇರೆಯ ತೊಡಕಾಗುವ ಸಮಸ್ಯೆಗಳಾದ ಕಿವಿಯ ಸೊಂಕು, ಸೈನಸೈಟಿಸ್ ಬರಬಹುದು....ಸೂಕ್ತವಾದ ಚಿಕಿತ್ಸೆಯನ್ನು ಪಡೆಯಲು ನಿಮ್ಮ ವೈದ್ಯರನ್ನು ಭೇಟಿ ಮಾಡಿ.