Change Language
Select Langauge
English
தமிழ்
हिन्दी
ગુજરાતી
বাংলা
తెలుగు
मराठी
|
ಬ್ರೀಥ್ಫ್ರೀಯ ಬಗ್ಗೆ
|
Cipla
|
ಮಾಧ್ಯಮ ಕೊಠಡಿ
|
ಡೌನ್ಲೋಡ್
|
ಸೈನ್ ಅಪ್
|
ಹುಡುಕು
ಇದು ಕೆಮ್ಮು ಅಥವಾ
ಆಸ್ತಮಾ ಆಗಿದೆಯೆ?
ಚಿಕಿತ್ಸೆ ಮತ್ತು
ನಿಯಂತ್ರಣ
FAQ &
SUPPORT
ರಿನಿಟಿಸ್
ಎಂದರೇನು
COPD
ಮೆನು
ರೋಗಿಯ ಕಥೆಗಳು
ನಿಮ್ಮ ಆಸ್ತಮಾವನ್ನು ಅಳೆಯಿರಿ
ಮಿಥ್ಯ ಮತ್ತು ಸತ್ಯಗಳು
ಮಕ್ಕಳಲ್ಲಿ ಆಸ್ತಮಾ
ಇನ್‌ಹೇಲರ್‌ಗಳನ್ನು ಹೇಗೆ ಬಳಸುವುದು
ಘಟನೆಗಳು ಮತ್ತು ಜಾಗೃತಿ
ಕನೆಕ್ಟ್
ನೀವು ಹೇಗೆ ಸಹಾಯ ಮಾಡಬಹುದು
ಮಿಥ್ಯ ಮತ್ತು ಸತ್ಯಗಳು
ಹಲವು ರೋಗಗಳಂತೆ, ಆಸ್ತಮಾದ ಬಗ್ಗೆಯೂ ಅನೇಕ ಸಂದೇಹಗಳು, ವದಂತಿಗಳು, ಮಿಥ್ಯ ಮತ್ತು ಸತ್ಯ ಮಾಹಿತಿಯನ್ನು ಹರಡಿದೆ. ಕೆಲವರು ಆಸ್ತಮಾವನ್ನು ಸಾಂಕ್ರಾಮಿಕ ರೋಗ ಎಂದು ತಿಳಿದಿದ್ದಾರೆ. ಇನ್ನೂ ಕೆಲವರು ಆಸ್ತಮಾವನ್ನು ಮನೋವೈಜ್ಞಾನಿಕ ಕಾಯಿಲೆ ಮತ್ತು ಇದು ಕೇವಲ ಮನಸ್ಸಿನಲ್ಲಿರುತ್ತದೆ ಎಂದು ತಿಳಿದಿದ್ದಾರೆ. ಇನ್ನೂ ಕೆಲವರು ಆಸ್ತಮಾ ಗಂಭೀರವಾದ ರೋಗವಲ್ಲ ಮತ್ತು ಇದರಿಂದ ಯಾರೂ ಸಾಯುವುದಿಲ್ಲ ಎಂದು ಆಲೋಚಿಸುತ್ತಾರೆ. ಇಲ್ಲಿ ನಾವು ಆಸ್ತಮಾದ ಸುತ್ತಲೂ ಇರುವ ಸಂದೇಹಗಳನ್ನು ವೈದ್ಯಕೀಯ ಅಧ್ಯಯನ ಮತ್ತು ವೈಜ್ಞಾನಿಕ ಸಂಶೋಧನೆಗಳನ್ನು ಆಧರಿಸಿ ಬಗೆಹರಿಸಲಾಗುತ್ತದೆ.
ಮಿಥ್ಯ:
ಇನ್‌ಹೇಲರ್‌ಗಳನ್ನು ನಿಯತವಾಗಿ ಬಳಸುವುದು ಅಭ್ಯಾಸ-ವಾಗುವುದು ಮತ್ತು ಗೀಳು.
ಬಾಯಿ ಮೂಲಕ ತೆಗೆದುಕೊಳ್ಳುವ ಔಷಧಿಗಳು, ಅದು ಮಾತ್ರೆಗಳು ಮತ್ತು ಸಿರಪ್‌ಗಳು ಇನ್‌ಹಲೇಷನ್ ಥೆರಪಿಗಿಂತಲೂ ಉತ್ತಮವಾಗಿದೆ.
ಮಾತ್ರೆಗಳು/ಸಿರಪ್‌ಗಿಂತಲೂ ಇನ್‌ಹೇಲರ್‌ಗಳು ಹೆಚ್ಚು ವೆಚ್ಚದ್ದಾಗಿರುತ್ತದೆ
ಇನ್‌ಹೇಲ್ ಮಾಡಿದ ಔಷಧಿಗಳು/ ಆಸ್ತಮಾಗಾಗಿ ಬಳಸುವ ಇನ್‌ಹೇಲರ್ ಸ್ಟೀರಾಯ್ಡ್‌ಗಳನ್ನು ಹೊಂದಿರುತ್ತದೆ ಮತ್ತು ಇದು ತುಂಬಾ ಬಲಶಾಲಿಯಾಗಿದ್ದು ತೀವ್ರ ಆಸ್ತಮಾಕ್ಕೆ ಮೀಸಲಾಗಿರುತ್ತದೆ.
ಆಸ್ತಮಾ ಬರುತ್ತದೆ ಮತ್ತು ಹೋಗುತ್ತದೆ. ಇದು ಯಾವಾಗಲೂ ಇರುವುದಿಲ್ಲ.
ಆಸ್ತಮಾವನ್ನು ವಾಸಿಗೊಳಿಸಬಹುದು.
ನಿಮಗೆ ಆಸ್ತಮಾ ಇದ್ದರೆ ಸಾಮಾನ್ಯವಾದ ಜೀವನವನ್ನು ನಡೆಸಲು ಆಗುವುದಿಲ್ಲ
ಆಸ್ತಮಾ ಇದ್ದರೆ ನೀವು ವ್ಯಾಯಾಮ ಮಾಡಲು ಮತ್ತು ಆಟವಾಡಲು ಆಗುವುದಿಲ್ಲ.
ನನ್ನ ಆಸ್ತಮಾವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪೂರಕ ಮತ್ತು ಪರ್ಯಾಯ ಚಿಕಿತ್ಸೆಗಳು ನನಗೆ ಸಹಾಯ ಮಾಡುತ್ತವೆ.
ಆಸ್ತಮಾ ಬೇರೆಯ ವ್ಯಕ್ತಿಯಿಂದಲೂ ಹರಡಬಹುದು.
ಗರ್ಭವತಿ ಮಹಿಳೆಯು ಆಸ್ತಮಾದ ಇನ್‌ಹೇಲರ್ ತೆಗೆದುಕೊಳ್ಳಬಾರದು
ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) ತುಂಬಾ ದುಬಾರಿಯಾದದ್ದು ಮತ್ತು ಬಳಸಲು ಕಷ್ಟಕರವಾಗಿದೆ.
ಪೋಷಕರಲ್ಲಿ ಯಾರಾದರೊಬ್ಬರು ಆಸ್ತಮಾ ಚರಿತ್ರೆಯನ್ನು ಹೊಂದಿರದಿದ್ದರೆ ಅವರು ಸಹ ಅದನ್ನು ಪಡೆಯುವುದಿಲ್ಲ.
ಆಸ್ತಮಾ ಇಲ್ಲದೆಯೇ ನೀವು ಬೆಳೆಯಬಹುದು ಅಥವಾ ನಿಮಗೆ ವಯಸ್ಸಾದಂತೆ ಆಸ್ತಮಾವು ಸುಧಾರಣೆಯಾಗುತ್ತದೆ.
ನಿಮಗೆ ಉಸಿರಾಟದಲ್ಲಿ ತೊಂದರೆ ಆದಾಗ ಮಾತ್ರ ಆಸ್ತಮಾ ಬರುತ್ತದೆ.
ಆಸ್ತಮಾ ಬಹುಬೇಗನೆ ಆಕ್ರಮಿಸಿ ಮತ್ತು ಬೇಗನೆ ಗಂಭೀರ ಸ್ವರೂಪಕ್ಕೆ ತೆರಳುತ್ತದೆ.
ಇನ್‌ಹೇಲ್ ಮಾಡಿದ ಸ್ಟೀರಾಯ್ಡ್‌ಗಳು ಗಂಭೀರ ಸ್ವರೂಪದ ಆಸ್ತಮಾವನ್ನು ಹೊಂದಿರುವ ವಯಸ್ಕ ರೋಗಗಳಿಗೆ ಮಾತ್ರ ಹೊರತು ಇದು ಮಕ್ಕಳಿಗಾಗಿ ಅಲ್ಲ.
ಆಸ್ತಮಾದ ರೋಗ ಲಕ್ಷಣಗಳು ಎಲ್ಲರಿಗೂ ಒಂದೇ ಆಗಿರುತ್ತದೆ.
ಆಸ್ತಮಾದಿಂದ ಯಾರೂ ಸಾಯುವುದಿಲ್ಲ
ಮಿಥ್ಯ:
ಇನ್‌ಹೇಲರ್‌ಗಳನ್ನು ನಿಯತವಾಗಿ ಬಳಸುವುದು ಅಭ್ಯಾಸ-ವಾಗುವುದು ಮತ್ತು ಗೀಳು.
ಸತ್ಯ:
ಇಲ್ಲ, ಇನ್‌ಹೇಲರ್‌ಗಳು ಅಭ್ಯಾಸ ಆಗುವುದಿಲ್ಲ. ಏಕೆಂದರೆ ನೀವು ನಿಮ್ಮ ಇನ್‌ಹೇಲರ್ ಔಷಧವನ್ನು ಪ್ರತಿದಿನ ತೆಗೆದುಕೊಳ್ಳುವುದು ಗೀಳು ಎಂದರ್ಥವಲ್ಲ. ನೀವು ಪ್ರತಿದಿನ ಹಲ್ಲು ಉಜ್ಜುವುದನ್ನು ಅಭ್ಯಾಸವಾಗುವುದು ಎಂದು ಪರಿಗಣಿಸುತ್ತೀರಾ? ಅಥವಾ ಹಾಲು ಕುಡಿಯುವುದನ್ನು? ಅಥವಾ ಪ್ರತಿದಿನ ಸ್ನಾನ ಮಾಡುವುದು? ಹಾಗೆಯೇ, ನಿಮ್ಮ ಆಸ್ತಮಾಗೆ ಇನ್‌ಹೇಲರ್‌ಗಳನ್ನು ಬಳಸುವುದು ಉತ್ತಮವಾದ ಅಭ್ಯಾಸ ಇದರಿಂದ ನೀವು ಆಸ್ತಮಾದ ಮೇಲೆ ಉತ್ತಮವಾದ ನಿಯಂತ್ರಣವನ್ನು ಸಾಧಿಸಲು ಸಹಾಯ ಮಾಡುತ್ತದೆ. ಈ ಮೂಲಕ ಇದನ್ನು ಚಟವಾಗಿಸಲು ಉತ್ತಮವಾದ ಅಭ್ಯಾಸವಾಗಿದೆ.
See how
Shivangi's mother
believes that Inhalation therapy has no side effects.
ಆದರೂ ಸಹ, ನೀವು ನಿಮ್ಮ ಉಪಶಮನ ಮಾಡುವ ಔಷಧಿಗಳನ್ನು ಪದೇ ಪದೇ ತೆಗೆದುಕೊಳ್ಳುತ್ತಿದ್ದರೆ, ಇದರರ್ಥ ನಿಮ್ಮ ನಿಯಂತ್ರಣ ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಅರ್ಥ. ನಿಮ್ಮ ವೈದ್ಯರನ್ನು ಭೇಟಿ ಮಾಡುವುದು ಉತ್ತಮ ಮತ್ತು ಸೂಕ್ತವಾಗಿ ಸೂಚನೆಯನ್ನು ಪಾಲಿಸಿ.
ಮಿಥ್ಯ:
ಬಾಯಿ ಮೂಲಕ ತೆಗೆದುಕೊಳ್ಳುವ ಔಷಧಿಗಳು, ಅದು ಮಾತ್ರೆಗಳು ಮತ್ತು ಸಿರಪ್‌ಗಳು ಇನ್‌ಹಲೇಷನ್ ಥೆರಪಿಗಿಂತಲೂ ಉತ್ತಮವಾಗಿದೆ.
ಸತ್ಯ:
ಇಲ್ಲ, ಬಾಯಿಯ ಮೂಲಕ ತೆಗೆದುಕೊಳ್ಳುವ ಔಷಧಿಗಳು ಇನ್‌ಹಲೇಷನ್ ಥೆರಪಿಗಿಂತಲೂ ಉತ್ತಮವಾದುದಲ್ಲ ಎಂದು ಅನೇಕ ಸಂಶೋಧನೆಗಳು ಸಾಬೀತುಪಡಿಸಿವೆ. ಬಹಳಷ್ಟು ರಾಷ್ಟ್ರಗಳಲ್ಲಿ, ಬಾಯಿ ಮೂಲಕ ತೆಗೆದುಕೊಳ್ಳುವ ಔಷಧಿಗಳನ್ನು ಇನ್‌ಹಲೇಷನ್ ಥೆರಪಿ ಸಫಲವಾಗಿದೆ ಏಕೆಂದರೆ ಇದು ತುಂಬಾ ಪರಿಣಾಮಕಾರಿ, ಆಸ್ತಮಾವನ್ನು ನಿಯಂತ್ರಿಸಲು ಅತ್ಯಂತ ಸುರಕ್ಷಿತ ಮತ್ತು ಕಡಿಮೆ ವೆಚ್ಚದ್ದಾಗಿರುತ್ತದೆ.
ಇನ್ನೂ ಸಹ ಭಾರತದಲ್ಲಿ ಅನೇಕ ರೋಗಿಗಳು ಔಷಧಿಗಳನ್ನು ಬಾಯಿಯ ಮೂಲಕ ಸೇವಿಸುವುದನ್ನು ನಂಬಿಕೊಂಡಿದ್ದಾರೆ, ಬಾಯಿಯ ಮೂಲಕ ಸೇವಿಸುವುದು ಯಾವುದೇ ರೋಗವನ್ನು ಗುಣಪಡಿಸಲು ಸೂಕ್ತವಾದ ಮಾರ್ಗವೆಂದು ಸಾಬೀತಾಗಿದೆ. ಆದರೂ ಸಹ ಆಸ್ತಮಾ ರೋಗಕ್ಕೆ ಇನ್‌ಹಲೇಷನ್ ಸರಿಯಾದ ಔಷಧಿ ಎಂದು ವೈಜ್ಞಾನಿಕ ಅಧ್ಯಯನಗಳು ತೋರಿಸುತ್ತವೆ. ಬಾಯಿಯ ಮೂಲಕ ಥೆರಪಿ ಎಂದರೆ ಮಾತ್ರೆಗಳನ್ನು ಮತ್ತು ಸಿರಪ್‌ಗಳನ್ನು ನುಂಗಬೇಕಾಗುತ್ತದೆ, ಅದು ಹೊಟ್ಟೆಯಿಂದ ಹಾದು ರಕ್ತಪರಿಚಲನೆಗೆ ಹೋಗಿ ಮತ್ತು ಕೊನೆಗೆ ಶ್ವಾಸಕೋಶಗಳಿಗೆ ತಲುಪುತ್ತದೆ, ಹಾಗಾಗಿ ಇದು ಪ್ರತಿಕ್ರಿಯಿಸಲು ಸಮಯ ತೆಗೆದುಕೊಳ್ಳುತ್ತದೆ. ಇನ್‌ಹಲೇಷನ್ ಥೆರಪಿಯು ತ್ವರಿತವಾಗಿದೆ ಏಕೆಂದರೆ ಔಷಧಿ ಯಾವ ಭಾಗಕ್ಕೆ ಅವಶ್ಯಕವಾಗಿದೆಯೋ ನೇರವಾಗಿ ಅಲ್ಲಿಗೆ ತಲುಪುತ್ತದೆ, ಅಂದರೆ ಶ್ವಾಸಕೋಶಕ್ಕೆ ತಲುಪುತ್ತದೆ.
ನಿಮ್ಮ ಕಣ್ಣಿಗೆ ಸೋಂಕು ತಗುಲಿದಾಗ ನೀವು ಕಣ್ಣಿಗೆ ಡ್ರಾಪ್ಸ್‌ಗಳನ್ನು ಹಾಕಿಕೊಳ್ಳುತ್ತೀರಿ, ಅಥವಾ ನಿಮ್ಮ ಚರ್ಮವು ಇರಿತಕ್ಕೆ ಒಳಗಾದರೆ ಅದಕ್ಕೆ ಮುಲಾಮನ್ನು ಹಚ್ಚಿಕೊಳ್ಳುತ್ತೀರಿ. ಹಾಗೆಯೇ ಇನ್‌ಹಲೇಷನ್ ಥೆರಪಿ ಸಹ ಕಿರುಹಾದಿಯಿಂದ ನೇರವಾಗಿ ನಿಮ್ಮ ಶ್ವಾಸಕೋಶಗಳಿಗೆ ತಲುಪಿ ಮತ್ತು ನಿಮ್ಮ ಸಮಸ್ಯೆಯ ಬಗ್ಗೆ ಕಾಳಜಿ ವಹಿಸುತ್ತದೆ.
ಅದಾಗ್ಯೂ, ಬಾಯಿಯ ಥೆರಪಿಯಲ್ಲಿ, ನಿಮಗೆ ಮಿಲಿಗ್ರಾಂಗಳಲ್ಲಿ ದೊಡ್ಡ ಡೋಸ್ ಬೇಕಾಗುತ್ತದೆ (ಇನ್‌ಹಲೇಷನ್ ಥೆರಪಿಗಿಂತಲೂ 40 ಪಟ್ಟು ಹೆಚ್ಚಾಗಿರುತ್ತದೆ) ಅಂದರೆ ಹೆಚ್ಚಿನ ಅಡ್ಡಪರಿಣಾಮಗಳು ಎಂದರ್ಥ. ಇನ್‌ಹಲೇಷನ್ ಥೆರಪಿಯಲ್ಲಿ, ಔಷಧವು ಮೈಕ್ರೋಗ್ರಾಂಗಳಲ್ಲಿ ಇರುತ್ತದೆ ಮತ್ತು ಔಷಧವು ಬೇರೆ ಭಾಗಗಳಿಗೆ ಹೋಗುವ ಅವಕಾಶಗಳು ಕಡಿಮೆ ಇದ್ದು, ನಿಮಗೆ ಕಡಿಮೆ ಅಡ್ಡಪರಿಣಾಮಗಳಾಗುತ್ತದೆ.
ಮಿಥ್ಯ:
ಮಾತ್ರೆಗಳು/ಸಿರಪ್‌ಗಿಂತಲೂ ಇನ್‌ಹೇಲರ್‌ಗಳು ಹೆಚ್ಚು ವೆಚ್ಚದ್ದಾಗಿರುತ್ತದೆ
ಸತ್ಯ:
ಇಲ್ಲ, ಇನ್‌ಹಲೇಷನ್ ಥೆರಪಿಯು ಮಾತ್ರೆಗಳು ಮತ್ತು ಸಿರಪ್‌ಗಳಿಗಿಂತಲೂ ಹೆಚ್ಚು ವೆಚ್ಚದ್ದಾಗಿಲ್ಲ. ಪ್ರತಿದಿನದ ಇನ್‌ಹೇಲರ್ ವೆಚ್ಚವು ಮಾತ್ರೆಗಳು/ಸಿರಪ್‌ಗಳಿಗಿಂತ ದುಬಾರಿಯಾಗಿವೆ. ಭಾರತದಲ್ಲಿ, ಇನ್‌ಹೇಲರ್‌ಗಳ ಬೆಲೆ ವಿಶೇಷವಾಗಿ ಎಲ್ಲರಿಗೂ ಎಟುಕುವಂತದ್ದು ಮತ್ತು ಕೆಲವೇ ರೂಪಾಯಿಗಳು ಮಾತ್ರ. ಇನ್‌ಹೇಲರ್‌ಗಿಂತಲೂ ಕೆಲವು ಬಾಯಿಯಿಂದ ತೆಗೆದುಕೊಳ್ಳುವ ಔಷಧಿಗಳು ದುಬಾರಿಯಾಗಿವೆ. ಅದಾಗ್ಯೂ, ದೀರ್ಘಕಾಲದಲ್ಲಿ ಮಾತ್ರೆಗಳನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಹಾನಿಯನ್ನುಂಟು ಮಾಡುತ್ತವೆ.
ಮಿಥ್ಯ:
ಇನ್‌ಹೇಲ್ ಮಾಡಿದ ಔಷಧಿಗಳು/ ಆಸ್ತಮಾಗಾಗಿ ಬಳಸುವ ಇನ್‌ಹೇಲರ್ ಸ್ಟೀರಾಯ್ಡ್‌ಗಳನ್ನು ಹೊಂದಿರುತ್ತದೆ ಮತ್ತು ಇದು ತುಂಬಾ ಬಲಶಾಲಿಯಾಗಿದ್ದು ತೀವ್ರ ಆಸ್ತಮಾಕ್ಕೆ ಮೀಸಲಾಗಿರುತ್ತದೆ.
ಸತ್ಯ:
ಇನ್‌ಹೇಲ್ ಮಾಡಿದ ಔಷಧಿಯು ಕೇವಲ ಗಂಭೀರ ಸ್ವರೂಪದ ಆಸ್ತಮಾಗೆ ಮಾತ್ರ ಸೀಮಿತವಾಗಿಲ್ಲ. ಆಸ್ತಮಾ ಎಂದರೆ ಶ್ವಾಸಕೋಶದ ಉರಿಯೂತ (ಊತವಾಗುವುದು). ಶ್ವಾಸಕೋಶದ ಉರಿಯೂತಕ್ಕಾಗಿ ಸ್ಟೀರಾಯ್ಡ್‌ಗಳನ್ನು ತೆಗೆದುಕೊಳ್ಳುವುದು ಉತ್ತಮ ಚಿಕಿತ್ಸೆಯಾಗಿದೆ, ಮತ್ತು ಇನ್‌ಹಲೇಷನ್ ಥೆರಪಿ ಮೂಲಕ ತೆಗೆದುಕೊಳ್ಳುವುದು ಪರಿಣಾಮಕಾರಿಯಾದ ಮಾರ್ಗವಾಗಿದೆ. ನೀವು ಇನ್‌ಹಲೇಷನ್ ಥೆರಪಿ ತೆಗೆದುಕೊಳ್ಳುವಾಗ, ಸ್ಟೀರಾಯ್ಡ್ ಔಷಧಿಗಳು ನೇರವಾಗಿ ಶ್ವಾಸಕೋಶಗಳಿಗೆ ತಲುಪುತ್ತದೆ ಮತ್ತು ಇದು
ಕಡಿಮೆ ಅಡ್ಡ ಪರಿಣಾಮಗಳನ್ನು ಹೊಂದಿರುತ್ತದೆ.
ಗಂಭೀರವಾದ ಆಸ್ತಮಾ ಇದ್ದವರಿಗೆ ಮಾತ್ರ ಇನ್‌ಹೇಲರ್ ತೆಗೆದುಕೊಳ್ಳಬೇಕೆಂದಿಲ್ಲ. ಮಧ್ಯಮ ಆಸ್ತಮಾ ಇದ್ದವರಿಗೆ ಮಾತ್ರ ಇದನ್ನು ಶಿಫಾರಸು ಮಾಡಲಾಗುತ್ತದೆ.
See how parents are convinced that inhalation has minimum side effects.
ಸ್ಟೀರಾಯ್ಡ್ ಅನ್ನು ಮಾತ್ರೆಗಳ ರೂಪದಲ್ಲಿ ತೆಗೆದುಕೊಂಡರೆ ಡೋಸ್ ಹೆಚ್ಚಾಗಿರುತ್ತದೆ (ಒಂದು ಸ್ಟೀರಾಯ್ಡ್ ಮಾತ್ರೆ 40 ಪಟ್ಟು ಹೆಚ್ಚಿಗೆ ಡೋಸ್ ನೀಡುತ್ತದೆ ಇದನ್ನು ಸ್ಟೀರಾಯ್ಡ್ ಇನ್‌ಹೇಲರ್‌ನಿಂದ ಒಂದು ಬಾರಿ ಗಾಳಿಯನ್ನು ತೆಗೆದುಕೊಂಡಷ್ಟು ಆಗುತ್ತದೆ) ಮತ್ತು ಇದು ನಿಮ್ಮ ಶ್ವಾಸಕೋಶಗಳಿಗಲ್ಲದೆ ದೇಹದಲ್ಲಿ ಪೂರ್ತಿಯಾಗಿ ಹರಡುತ್ತದೆ. ಸ್ಟೀರಾಯ್ಡ್ ಮಾತ್ರೆಗಳು ದೀರ್ಘಕಾಲದವರೆಗೆ ದಿನನಿತ್ಯ ತೆಗೆದುಕೊಂಡರೆ ಮೂಳೆಗಳು ಸುಲಭವಾಗಿ ಒಡೆದುಹೋಗುವುದು (ಅಸ್ಥಿ ರಂಧ್ರತೆ), ತೂಕ ಹೆಚ್ಚಾಗುವುದು, ಅದುಮುಗಾಯವಾಗುವುದು, ಮಧುಮೇಹ, ಕಣ್ಣಿಗೆ ಪೊರೆ ಬರುವುದು, ಎದೆಯುರಿ ಮತ್ತು ಅಜೀರ್ಣದಂತಹ ಅಡ್ಡ ಪರಿಣಾಮಗಳು ಆಗುತ್ತವೆ. ಇದು ನಿಮ್ಮನ್ನು ಖಿನ್ನರನ್ನಾಗಿಸುತ್ತದೆ, ಅಥವಾ ಮೂಡ್ ಏರುಪೇರಾಗುವುದು ಅಥವಾ ಮುಖ ಊದಿಕೊಳ್ಳುತ್ತದೆ (ಚಂದ್ರದಂತಹ ಮುಖ).
ನಿಮ್ಮ ನಿಯಂತ್ರಕಗಳಲ್ಲಿರುವ ಸ್ಟೀರಾಯ್ಡ್ ಕಾರ್ಟೀಕೋಸ್ಟೀರಾಯ್ಡ್ ಅನ್ನು ಹೊಂದಿರುತ್ತದೆ, ಇದು ಸುರಕ್ಷಿತವಾಗಿರುತ್ತದೆ. ಕಾರ್ಟೀಕೋಸ್ಟೀರಾಯ್ಡ್‌ಗಳು ಸ್ಟೀರಾಯ್ಡ್‌ಗಳ ನಕಲಾಗಿದ್ದು ನೈಸರ್ಗಿಕವಾಗಿ ನಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಈ ಮೂಲಕ ಇದು ಆಸ್ತಮಾಕ್ಕೆ ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಕೆಲವು ಅಥ್ಲೀಟ್‌ಗಳು ಮತ್ತು ದೇಹದಾಢ್ಯರಿಂದ ದುರ್ಬಳಕೆಯಾಗುವ ಸ್ಟೀರಾಯ್ಡ್‌ಗಳು ಇದು ಒಂದೇ ಅಲ್ಲ ಎಂದು ನೀವು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಆದಾಗ್ಯೂ, ಎಲ್ಲಾ ಇನ್‌ಹೇಲರ್‌ಗಳು ಸ್ಟೀರಾಯ್ಡ್ ಅನ್ನು ಹೊಂದಿರುವುದಿಲ್ಲ, ಕೆಲವು ತ್ವರಿತ ಪರಿಹಾರ ಒದಗಿಸುವ ಔಷಧಿಗಳನ್ನು ಹೊಂದಿರುತ್ತವೆ.
ನಿಮ್ಮ ಪರಿಸ್ಥಿತಿಗೆ ಅನುಗುಣವಾಗಿ, ನಿಮ್ಮ ವೈದ್ಯರು ಯಾವಾಗಲಾದರೂ ಸ್ಟೀರಾಯ್ಡ್ ಇರುವ ಮಾತ್ರೆಗಳನ್ನು ಸೂಚಿಸಬಹುದು. ಕಡಿಮೆ ಅವಧಿಗೆ ತೆಗೆದುಕೊಂಡರೆ, ಇದು ಅಂತಹ ಹಾನಿಕಾರಕ ಪರಿಣಾಮಗಳನ್ನು ಬೀರುವುದಿಲ್ಲ.
ಮಿಥ್ಯ:
ಆಸ್ತಮಾ ಬರುತ್ತದೆ ಮತ್ತು ಹೋಗುತ್ತದೆ. ಇದು ಯಾವಾಗಲೂ ಇರುವುದಿಲ್ಲ.
ಸತ್ಯ:
ಆಸ್ತಮಾದ ರೋಗ ಲಕ್ಷಣಗಳು ಎದೆಯ ಬಿಗಿತ, ಉಸಿರಾಟದಲ್ಲಿ ತೊಂದರೆ, ಕೆಮ್ಮುವುದು ಮತ್ತು ವ್ಹೀಜಿಂಗ್ ಬಂದು ಹೋಗಬಹುದು ಆದರೆ ಆಸ್ತಮಾ ಯಾವಾಗಲೂ ಇರುತ್ತದೆ. ಆಸ್ತಮಾವು ಬಂದು ಹೋಗುತ್ತದೆ ಎಂಬುದು ಸಾಮಾನ್ಯವಾದ ಭ್ರಮೆ, ಮತ್ತು ರೋಗ ಲಕ್ಷಣಗಳು ಕಂಡುಬಂದಲ್ಲಿ ಮಾತ್ರ ಔಷಧಿಗಳನ್ನು ಬಳಸಬೇಕು.
ಆಸ್ತಮಾವು ದೀರ್ಘಕಾಲಿಕ (ದೀರ್ಘಾವಧಿ) ರೋಗವಾಗಿದ್ದರಿಂದ, ಈ ರೋಗಕ್ಕೆ ಔಷಧಿಯನ್ನು ಲಕ್ಷಣಗಳು ಕಂಡು ಬರದಿದ್ದರೂ ಸಹ ರೋಗಿಯು ನಿರಂತರವಾಗಿ ತೆಗೆದುಕೊಳ್ಳಬೇಕು.
ಶ್ವಾಸಕೋಶದ ವಾಯುನಾಳಗಳಲ್ಲಿ ಊದಿಕೊಳ್ಳುವುದು ಆಸ್ತಮಾ ಬರುವುದಕ್ಕೆ ಕಾರಣವಾಗಿದೆ, ನಿಮ್ಮ ರೋಗ ಲಕ್ಷಣಗಳು ಕಾಣುತ್ತಿಲ್ಲ ಎಂದು ತಿಳಿದು ಔಷಧಿಗಳನ್ನು ಸೇವಿಸುವುದನ್ನು ನಿಲ್ಲಿಸಿದರೆ, ಅದು ನಿಮಗೆ ನೀವೆ ಮಾಡಿಕೊಳ್ಳುತ್ತಿರುವ ಕೇಡು, ಮತ್ತು ಆಕ್ರಮಣ ಮಾಡಿದಾಗ ನೀವು ಚೇತರಿಸಿಕೊಳ್ಳಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ.
ಮಿಥ್ಯ:
ಆಸ್ತಮಾವನ್ನು ವಾಸಿಗೊಳಿಸಬಹುದು.
ಸತ್ಯ:
ವೈದ್ಯಕೀಯ ವಿಜ್ಞಾನವು ಬೆಳೆಯುತ್ತಿದ್ದಂತೆ, ದುರದೃಷ್ಟವಶಾತ್ ಆಸ್ತಮಾವನ್ನು ವಾಸಿಮಾಡಲು ಪರಿಹಾರ ಇಲ್ಲದಂತಾಗುತ್ತಿದೆ. ಹೋಮಿಯೋಪತಿ ಅಥವಾ ಆರ್ಯುವೇದ ಅಥವಾ ಮೀನಿನ ಥೆರಪಿ ಅಥವಾ ಯೋಗ ಈ ಯಾವುದರಿಂದಲೂ ಆಸ್ತಮಾವನ್ನು ಗುಣಪಡಿಸಲು ಆಗುವುದಿಲ್ಲ.
See how
mothers around India
moved to inhalation after trying out various alternative medicines.
ಆದರೂ ಸಹ ಅಲೋಪತಿಯಲ್ಲಿ ಚಿಕಿತ್ಸೆ ನೀಡಲಾಯಿತು ಅದಕ್ಕೆ ಉತ್ತಮ ನಿಯಂತ್ರಣದಲ್ಲಿದೆ. ಚಿತ್ರ ತಾರೆಯರು, ಕ್ರೀಡಾಪಟುಗಳು ಮತ್ತು ವೃತ್ತಿಪರರಂತೆ ಅನೇಕ ಯಶಸ್ವಿ ಜನರು ಆಸ್ತಮಾ ಇದ್ದರೂ ಸಹ ಅವರ ಯಶಸ್ವಿಗೆ ಅಡ್ಡಿಯಾಗಲು ಬಿಡದೆ ಅವರ ಗುರಿಯನ್ನು ತಲುಪಿದ್ದಾರೆ. ಆದ್ದರಿಂದ ನೀವು ಆಸ್ತಮಾದಿಂದ ಬಳಲುತ್ತಿದ್ದರೆ, ಅದು ನಿಮ್ಮನ್ನು ತಡೆಯದಂತೆ ನೋಡಿಕೊಳ್ಳಿ. ನಿಯತವಾದ ಚಿಕಿತ್ಸೆಯಿಂದ ಆಸ್ತಮಾವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು. ನೀವು ಆಸ್ತಮಾದ ಹೆಚ್ಚಿನ ರೋಗ ಲಕ್ಷಣಗಳನ್ನು ಹೊಂದಿಲ್ಲದೆ ಇದ್ದರೆ ನಿಮಗೆ ಆಸ್ತಮಾ ವಾಸಿಯಾಗಿದೆ ಎಂದು ತಿಳಿದುಕೊಳ್ಳಬೇಡಿ ಎನ್ನುವುದನ್ನು ನೆನಪಿನಲ್ಲಿಡಿ.
ಮಿಥ್ಯ:
ನಿಮಗೆ ಆಸ್ತಮಾ ಇದ್ದರೆ ಸಾಮಾನ್ಯವಾದ ಜೀವನವನ್ನು ನಡೆಸಲು ಆಗುವುದಿಲ್ಲ
ಸತ್ಯ:
ನಿಮಗೆ ಆಸ್ತಮಾ ಇದ್ದರೂ ಸಹ ಕ್ರಿಯಾತ್ಮಕವಾದ ಮತ್ತು ಆರೋಗ್ಯಕರ ಜೀವನವನ್ನು ನಡೆಸಬಹುದು. ನೀವು ಅಥವಾ ನಿಮ್ಮ ಮಗುವಿಗೆ ಆಸ್ತಮಾ ಇದ್ದರೆ, ನೀವು ಸಾಮಾನ್ಯವಾದ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ನಿಶ್ಚಲವಾಗಿ ನಂಬಿ. ನೀವು ಮತ್ತು ನಿಮ್ಮ ಮಗುವು ವೈದ್ಯರ ಸಲಹೆಗಳನ್ನು ಪಾಲಿಸುತ್ತಾ ಇದ್ದರೆ, ಆಸ್ತಮಾದ ಬಗ್ಗೆ ನಿಮ್ಮನ್ನು ಶಿಕ್ಷಿತರನ್ನಾಗಿಸಿಕೊಳ್ಳಿ, ವೈದ್ಯರ ಸಲಹೆಯಂತೆ ನಿಮ್ಮ ಇನ್‌ಹೇಲ್ ಮಾಡಿದ
ಔಷಧಿಗಳನ್ನು ಸರಿಯಾಗಿ
ತೆಗೆದುಕೊಳ್ಳಿ ಮತ್ತು ನಿಮ್ಮ ಪ್ರೇರಿತಗಳನ್ನು ದೂರವಿಡಿ, ನಿಮ್ಮ ಜೀವನದ ಮತ್ತು ನಿಮ್ಮ ಕನಸುಗಳ ಮಧ್ಯೆ ಆಸ್ತಮಾ ಬರುವುದಕ್ಕೆ ಕಾರಣವೆ ಇರುವುದಿಲ್ಲ. ಅನೇಕ ಯಶಸ್ವಿ ಪುರುಷರು ಮತ್ತು ಮಹಿಳೆಯರು ಇದ್ದಾರೆ - ಚಿತ್ರ ತಾರೆಯರು, ರಾಜಕಾರಿಣಿಗಳು, ವ್ಯಾಪಾರಸ್ಥರು, ವೈದ್ಯರು, ಕ್ರಿಕೆಟ್ ಆಟಗಾರರು, ಒಲಂಪಿಕ್ ಚಿನ್ನ ಪದಕ ವಿಜೇತರು ಆಸ್ತಮಾ ಇದ್ದರೂ ಸಾಮಾನ್ಯವಾದ ಮತ್ತು ಕ್ರಿಯಾತ್ಮಕ ಜೀವನವನ್ನು ಸಾಗಿಸುತ್ತಿದ್ದಾರೆ.
ಮಿಥ್ಯ:
ಆಸ್ತಮಾ ಇದ್ದರೆ ನೀವು ವ್ಯಾಯಾಮ ಮಾಡಲು ಮತ್ತು ಆಟವಾಡಲು ಆಗುವುದಿಲ್ಲ.
ಸತ್ಯ:
ನಿಮಗೆ ಆಸ್ತಮಾ ಇದ್ದರೂ ಸಹ ವ್ಯಾಯಾಮ ಮಾಡಬಹುದು ಮತ್ತು ಆಟವನ್ನು ಆಡಬಹುದು, ಆದರೆ ನೀವು ನಿಯತವಾಗಿ ತಪ್ಪದೆ ಔಷಧಿಗಳನ್ನು ತೆಗೆದುಕೊಳ್ಳಬೇಕು. ಈಜುವುದು ಆಸ್ತಮಾಕ್ಕೆ ಒಳ್ಳೆಯದು. ಇನ್ನೊಂದೆಡೆ, ಬಿಸಿಲಿನಲ್ಲಿ, ತಂಪುಗಾಳಿಯಲ್ಲಿ ವ್ಯಾಯಾಮ ಮಾಡುವುದು ಕೆಲವು ಜನರಿಗೆ ಪ್ರೇರಿತವಾಗಬಹುದು. ನಿಮ್ಮ ವೈದ್ಯರು ಸೂಚಿಸಿರುವ ನಿಯಂತ್ರಕ ಔಷಧಿಗಳನ್ನು ನಿಯತವಾಗಿ ತೆಗೆದುಕೊಳ್ಳುವುದು ಅತೀ ಅವಶ್ಯಕವಾಗಿದೆ. ಕೆಲವು ಆಸ್ತಮಾ ರೋಗಿಗಳು ವ್ಯಾಯಾಮ ಮಾಡುವುದಕ್ಕಿಂತ ಮುಂಚಿತವಾಗಿ ಉಪಶಮನವನ್ನು ಬಳಸಿ ವ್ಯಾಯಾಮ ಮಾಡುತ್ತಾರೆ ಆದ್ದರಿಂದ ನಿಮ್ಮ ಉಪಶಮನವನ್ನು ಜೊತೆಯಲ್ಲಿರಿಸಿಕೊಳ್ಳಿ. ಕೆಲವು ಸಂದರ್ಭಗಳಲ್ಲಿ ಹೆಚ್ಚಿನ ಔಷಧಿಗಳನ್ನು ಜೊತೆಯಲ್ಲಿರಿಸಿಕೊಳ್ಳುವುದು ಮರೆಯಬೇಡಿ. ಒಂದು ವೇಳೆ ನೀವು
ಆಘಾತ
ಕ್ಕೊಳಗಾದರೆ ಅವರು ಏನು ಮಾಡಬೇಕೆಂದು ನಿಮ್ಮ ತಂಡದ ಸದಸ್ಯರಿಗೆ, ನಿಮ್ಮ ಸ್ನೇಹಿತರಿಗೆ, ನಿಮ್ಮ ಜಿಮ್ ಬೋಧಕರಿಗೆ ಅಥವಾ ನಿಮ್ಮ ತರಬೇತುದಾರರಿಗೆ ತಿಳಿಸಿರಿ.
ಯೋಗ ಮಾಡುವುದು ಆಸ್ತಮಾಗೆ ಒಳ್ಳೆಯ ವ್ಯಾಯಾಮ, ಮತ್ತು ಈಜುವುದು, ಹಾಕಿ, ಫುಟ್‌ಬಾಲ್, ಕ್ರಿಕೆಟ್‌ನಂತಹ ಕ್ರೀಡೆಗಳನ್ನು ಆಡುವುದು, ನಿರಂತರವಾಗಿ ಓಡುವ ಅಗತ್ಯವಿಲ್ಲ ಮತ್ತು ನಿಮಗೆ ಮಧ್ಯೆ ವಿಶ್ರಾಂತಿ ಸಹ ದೊರೆಯುತ್ತದೆ. ನೀವು ವ್ಯಾಯಾಮದ ಮತ್ತು ಕ್ರೀಡೆಯ ಬಗ್ಗೆ ಗಂಭೀರವಾಗಿದ್ದರೆ, ದಯವಿಟ್ಟು ನಿಮ್ಮ ವೈದ್ಯರನ್ನು ನಿಯತವಾಗಿ ಭೇಟಿ ಮಾಡಿ.
ನಿಮ್ಮ ಕನಸಿನ ಮಧ್ಯೆ ಆಸ್ತಮಾ ಪ್ರವೇಶಿಸಲು ಬಿಡಬೇಡಿ. ಕ್ರೀಡೆಯಲ್ಲಿ ಅಥವಾ ನಿಮ್ಮ ಜೀವನದಲ್ಲಿ ನೀವು ವಿಜಯಶಾಲಿಯಾಗಲು ಇದು ತಡೆ ಆಗಬಾರದು. ಪ್ರಸಿದ್ಧ ಕ್ರಿಕೆಟ್ ಆಟಗಾರರಿಗೆ ಆಸ್ತಮಾ ಇದೆ, ಈಜುಗಾರರಿಗೆ ಆಸ್ತಮಾ ಇದೆ, ಮತ್ತು ಅನೇಕ ಒಲಂಪಿಕ್ ಚಿನ್ನ ಪದಕಗಳ ವಿಜೇತರಿಗೂ ಆಸ್ತಮಾ ಇರುವುದನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು.
ಮಿಥ್ಯ:
ನನ್ನ ಆಸ್ತಮಾವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪೂರಕ ಮತ್ತು ಪರ್ಯಾಯ ಚಿಕಿತ್ಸೆಗಳು ನನಗೆ ಸಹಾಯ ಮಾಡುತ್ತವೆ.
ಸತ್ಯ:
ಇಲ್ಲ! ಹೋಮಿಯೊಪತಿ, ಆರ್ಯುವೇದ, ಹರ್ಬಲ್ ಥೆರಪಿ, ಆಕ್ಯುಪಂಚರ್ ಮತ್ತು ಮೀನಿನ ಥೆರಪಿಗಳಂತಹ ಪೂರಕ/ಪರ್ಯಾಯ ಚಿಕಿತ್ಸೆಗಳಾಗಿವೆ ಇವುಗಳನ್ನು ಹೊರತುಪಡಿಸಿ ಯಾವುದೂ ನಿಮ್ಮ ಆಸ್ತಮಾವನ್ನು ನಿಯಂತ್ರಿಸುವುದಿಲ್ಲ. ಅವುಗಳ ಪರಿಣಾಮಕಾರಿತ್ವವನ್ನು ಸಾಬೀತುಪಡಿಸುವಲ್ಲಿ ಯಾವುದೇ ದಾಖಲೆಗಳಿಲ್ಲ. ಈ ಚಿಕಿತ್ಸೆಗಳು ಆಸ್ತಮಾವನ್ನು ನಿಯಂತ್ರಿಸುವಲ್ಲಿ ಏನನ್ನೂ ಸಾಬೀತುಪಡಿಸಿಲ್ಲ ಎಂದು ಸಂಶೋಧನೆಗಳು ತೋರಿಸುತ್ತವೆ. ಹಾಗಾಗಿಯೂ, ಅಡ್ಡ ಪರಿಣಾಮಗಳ ಬಗ್ಗೆ ರೋಗಿಗಳಿಗಿರುವ ಅಸುರಕ್ಷಿತ ಭಾವನೆಯ ಕುರಿತು ಮಾಹಿತಿಯ ಕೊರತೆ ಇದೆ.
ದಯವಿಟ್ಟು ಗಮನಿಸಿ ಆಸ್ತಮಾ ದಾಳಿಯಲ್ಲಿ ಪೂರಕ ಔಷಧಿಗಳು ಸಹಾಯ ಮಾಡುವುದಿಲ್ಲ. ಅವು ನಿಮ್ಮ ಇನ್‌ಹಲೇಷನ್ ಚಿಕಿತ್ಸೆಯ ಸ್ಥಾನವನ್ನು ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ನೀವು ಇದರಲ್ಲಿ ಯಾವುದೇ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಾಗಲೂ, ಯಾವಾಗಲೂ ನಿಮ್ಮ ಪ್ರಮುಖ ಔಷಧಿಗಳನ್ನು ತೊರೆಯಬೇಡಿ. ಮೊದಲಿಗೆ ನಿಮ್ಮ ವೈದ್ಯರೊಂದಿಗೆ ಪೂರಕ ಚಿಕಿತ್ಸೆಯ ಬಗ್ಗೆ ಚರ್ಚಿಸಿ ಮತ್ತು ಅದನ್ನು ಪಡೆಯುವುದಕ್ಕೂ ಮೊದಲು ಇವರ ಸಲಹೆಯನ್ನು ತೆಗೆದುಕೊಳ್ಳಿ.
ಆಸ್ತಮಾದಿಂದ ಬಳಲುತ್ತಿರುವ ಪೋಷಕರು ಪರ್ಯಾಯ ಔಷಧಿಗಳನ್ನು ಪ್ರಯತ್ನಿಸಿದ ನಂತರ ಹೇಗೆ ಇನ್‌ಹಲೇಷನ್ ಪಡೆದರು ಎನ್ನುವುದನ್ನು ನೋಡಿ.
ಮಿಥ್ಯ:
ಆಸ್ತಮಾ ಬೇರೆಯ ವ್ಯಕ್ತಿಯಿಂದಲೂ ಹರಡಬಹುದು.
ಸತ್ಯ:
ಇಲ್ಲ, ಆಸ್ತಮಾದಿಂದ ಸೋಂಕು ಕಾಯಿಲೆಯಲ್ಲ. ನಿಮಗೆ ಬೇರೊಬ್ಬರಿಂದ ಆಸ್ತಮಾ ಬರುವುದಿಲ್ಲ, ಮತ್ತು ಇದರಿಂದ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಯಾರಿಗೂ ಸೋಂಕು ತಗಲುವುದಿಲ್ಲ.
ಮಿಥ್ಯ:
ಗರ್ಭವತಿ ಮಹಿಳೆಯು ಆಸ್ತಮಾದ ಇನ್‌ಹೇಲರ್ ತೆಗೆದುಕೊಳ್ಳಬಾರದು
ಸತ್ಯ:
ಮಗು ಆಸ್ತಮಾದ ಇನ್‌ಹೇಲರ್‌ನ್ನು ಬಳಸಿದರೆ, ಗರ್ಭವತಿ ಮಹಿಳೆಯು ಸಹ ಬಳಸಬಹುದು. ಗರ್ಭವತಿ ಮಹಿಳೆಯು ನಿಯತವಾಗಿ ಆಸ್ತಮಾ ಇನ್‌ಹೇಲರ್ ಅನ್ನು ಬಳಸಿದರೆ ಆಕೆಯು ಆರೋಗ್ಯವಂತ ಮಗುವಿಗೆ ಜನ್ಮ ನೀಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇಂದು ಇನ್‌ಹೇಲರ್‌ಗಳು ತುಂಬಾ ಸುರಕ್ಷಿತ, ಮೊಲೆಹಾಲುಣಿಸುವ ತಾಯಂದಿರು ಸಹ ಮಕ್ಕಳಿಗೆ ಯಾವುದೇ ಹಾನಿಯಾಗದಂತೆ ಇನ್‌ಹೇಲರ್‌ಗಳನ್ನು ಬಳಸಬಹುದು. ಇನ್‌ಹೇಲ್ ಮಾಡುವ ಔಷಧಿಯ ಡೋಸ್ ಮಾತ್ರೆಗಳಿಗಿಂತಲೂ ಸುಮಾರು 40 ಪಟ್ಟು ಕಡಿಮೆ ಆಗಿರುತ್ತದೆ.
ಮಿಥ್ಯ:
ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) ತುಂಬಾ ದುಬಾರಿಯಾದದ್ದು ಮತ್ತು ಬಳಸಲು ಕಷ್ಟಕರವಾಗಿದೆ.
ಸತ್ಯ:
ನೀವು ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಲು BP ಓದುವ ಯಂತ್ರದಂತೆ ಮತ್ತು ಸಕ್ಕರೆ ಕಾಯಿಲೆ ಇರುವವರಿಗೆ ಗ್ಲುಕೋಮೀಟರ್, ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) ಆಸ್ತಮಾಕ್ಕೆ ಥರ್ಮಾಮೀಟರ್ ಹಾಗೆ ಕೆಲಸ ಮಾಡುತ್ತದೆ. ಅದು ತುಂಬಾ ಚಿಕ್ಕ ಗಾತ್ರವನ್ನು ಹೊಂದಿದ್ದು, ಕೊಂಡುಕೊಳ್ಳಬಹುದು, ಬಳಕೆದಾರ ಸ್ನೇಹಿ, ಕಾಪಾಡುವುದು ಮತ್ತು ಬಳಸುವುದು ಸುಲಭ. ನಿಮ್ಮ ಆಸ್ತಮಾವನ್ನು ನಿಯಂತ್ರಣದಲ್ಲಿಡಲು ಮತ್ತು ಇದರ ದಾಳಿಗಳನ್ನು ತಪ್ಪಿಸಲು ವಾರಕ್ಕೆ ಸುಮಾರು ಎರಡು ಬಾರಿ ಇದನ್ನು ಬಳಸಿರಿ. ನಿಮಗೆ ಆಸ್ತಮಾ ಇದ್ದು ಮತ್ತು ಅದರಲ್ಲಿ ಶ್ವಾಸಕೋಶಗಳ ಕಾರ್ಯವನ್ನು ಪೀಕ್ ಫ್ಲೋ ಮೀಟರ್‌ನೊಂದಿಗೆ (ಬ್ರೀಥೋಮೀಟರ್) ಪರೀಕ್ಷಿಸಲು ಮತ್ತು ನೀವು ಇದರಲ್ಲಿ ಇಳಿಮುಖ ಕಂಡರೆ ನಿಮ್ಮ ಆಸ್ತಮಾವು ನಿಯಂತ್ರಣದಲ್ಲಿಲ್ಲ ಮತ್ತು ಕೆಲವೇ ದಿನಗಳಲ್ಲಿ ಅಥವಾ ಸದ್ಯದಲ್ಲಿಯೇ ನಿಮಗೆ ಆಸ್ತಮಾ ಆಕ್ರಮಣವಾಗಲಿದೆ ಎಂದರ್ಥ. ಇದು ನಿಮಗೆ ಡೋಸೆಜ್‌ಗಳನ್ನು ಅಥವಾ ನೀವು ಔಷಧಿಯನ್ನು ತೆಗೆದುಕೊಳ್ಳಬೇಕಾದ ಸಂಖ್ಯೆಯನ್ನು ಹೆಚ್ಚಿಸುವಂತೆ ಸೂಚನೆಯಾಗಿದೆ. ಪೀಕ್ ಫ್ಲೋ ಮೀಟರ್ (ಬ್ರೀಥೋಮೀಟರ್) ಪ್ರಮಾಣ ಸಾಧಾರಣವಾಗಿದ್ದಾಗ, ನಿಮ್ಮ ಆಸ್ತಮಾವು ನಿಯಂತ್ರಣದಲ್ಲಿದೆ ಎಂದು ಅರ್ಥ.
ಮಿಥ್ಯ:
ಪೋಷಕರಲ್ಲಿ ಯಾರಾದರೊಬ್ಬರು ಆಸ್ತಮಾ ಚರಿತ್ರೆಯನ್ನು ಹೊಂದಿರದಿದ್ದರೆ ಅವರು ಸಹ ಅದನ್ನು ಪಡೆಯುವುದಿಲ್ಲ.
ಸತ್ಯ:
ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಅಲರ್ಜಿ ಹೊಂದಿರುವ ಚರಿತ್ರೆಯನ್ನು ಹೊಂದಿದ್ದರೆ ನಿಮಗೆ ಆಸ್ತಮಾ ಬರಬಹುದು, ಅಂದರೆ ಪೋಷಕರು ಅಷ್ಟೇ ಅಲ್ಲದೆ ಒಡಹುಟ್ಟಿದವರು, ಪ್ರಧಾನ ಪೋಷಕರು, ನಿಕಟ ಕುಟುಂಬವರ್ಗದವರಾದ ಚಿಕ್ಕಪ್ಪ ಮತ್ತು ಚಿಕ್ಕಮ್ಮಂದಿರು ಆಗಿರಬಹುದು. ಪ್ರೇರಿತಗಳು ಸಹ ನಿಮ್ಮ ಆಸ್ತಮಾ ಆಘಾತಕ್ಕೆ ಕಾರಣವಾಗಬಹುದು.
ಮಿಥ್ಯ:
ಆಸ್ತಮಾ ಇಲ್ಲದೆಯೇ ನೀವು ಬೆಳೆಯಬಹುದು ಅಥವಾ ನಿಮಗೆ ವಯಸ್ಸಾದಂತೆ ಆಸ್ತಮಾವು ಸುಧಾರಣೆಯಾಗುತ್ತದೆ.
ಸತ್ಯ:
ಆಸ್ತಮಾವು ಜೀವನ ಪರ್ಯಂತ ಪರಿಸ್ಥಿತಿ. ಮಕ್ಕಳಲ್ಲಿ ಆಸ್ತಮಾವು ಕಂಡು ಬಂದರೆ ಗುಣವಾಗುತ್ತದೆ ಅಥವಾ ಸಮಯಕ್ಕೆ ತಕ್ಕಂತೆ ಹೆಚ್ಚಾಗುತ್ತದೆ ಮತ್ತು ಯುವಕರಲ್ಲಿ ಆಸ್ತಮಾವು ಕಾಣಿಸಿಕೊಂಡರೆ (ಮತ್ತು ಅವರ ಶ್ವಾಸಕೋಶಗಳು) ಬೆಳೆಯುತ್ತಿದ್ದಂತೆ ಸುಧಾರಣೆ ಕಾಣಬಹುದು, ಆದರೆ ಕೆಲವರಲ್ಲಿ ಆಸ್ತಮಾವು ಜೀವನಪರ್ಯಂತ ಇರುತ್ತದೆ.
ಮಿಥ್ಯ:
ನಿಮಗೆ ಉಸಿರಾಟದಲ್ಲಿ ತೊಂದರೆ ಆದಾಗ ಮಾತ್ರ ಆಸ್ತಮಾ ಬರುತ್ತದೆ.
ಸತ್ಯ:
ಆಸ್ತಮಾದಿಂದ ಬಳಲುತ್ತಿರುವ ಜನರಿಗೆ ಇದು ಯಾವಾಗಲೂ ಇರುತ್ತದೆ. ಇದು ದೀರ್ಘಕಾಲಿಕ ( ಹೆಚ್ಚಿನ ಅವಧಿವರೆಗೆ) ಪರಿಸ್ಥಿತಿ ಮತ್ತು ವಾಯುನಾಳಗಳ ಉರಿಯೂತ (ಊದುಕೊಳ್ಳುವುದು) ಸಹ ಯಾವಾಗಲೂ ಇರುತ್ತದೆ, ಹೌದು, ನಿಮಗೆ ಹೆಚ್ಚಿನ ರೋಗ ಲಕ್ಷಣಗಳು ಇಲ್ಲದಿರುವಾಗ ಸಹ ಇರುತ್ತದೆ. ಇದಲ್ಲದೆ, ನೀವು ಚಿಕಿತ್ಸೆ ಪಡೆಯದೆ ಇದ್ದರೆ, ಶ್ವಾಸನಾಳಗಳಲ್ಲಿರುವ ಊತವು ದೀರ್ಘಕಾಲದವರೆಗೆ ನಿಮ್ಮ ಶ್ವಾಸಕೋಶಗಳ ಸಾಮರ್ಥ್ಯವನ್ನು ಕಡಿಮೆಗೊಳಿಸುತ್ತದೆ ಎಂದು ಸಾಬೀತು ಪಡಿಸುವ ವೈದ್ಯಕೀಯ ಪುರಾವೆಗಳು ಹೆಚ್ಚಾಗುತ್ತಿವೆ. ನಿಮ್ಮ ಆಸ್ತಮಾವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನಿಮ್ಮ ಉಪಶಮನ ಔಷಧಿಗಳನ್ನು ಪ್ರತಿದಿನ ತೆಗೆದುಕೊಳ್ಳುವುದು ಮತ್ತು
ಆಸ್ತಮಾ ಪ್ರೇರಿತಗಳನ್ನು
ದೂರವಿಡುವುದು ಪ್ರಮುಖವಾಗಿದೆ.
ಮಿಥ್ಯ:
ಆಸ್ತಮಾ ಬಹುಬೇಗನೆ ಆಕ್ರಮಿಸಿ ಮತ್ತು ಬೇಗನೆ ಗಂಭೀರ ಸ್ವರೂಪಕ್ಕೆ ತೆರಳುತ್ತದೆ.
ಸತ್ಯ:
ಹೆಚ್ಚಿನ ಆಸ್ತಮಾ ದಾಳಿಗಳು ನಿಧಾನವಾಗಿ ಬೆಳೆಯುತ್ತದೆ – ಅಸ್ವಸ್ಥವಾಗಲು ಸಾಧಾರಣವಾಗಿ ಒಂದು ದಿನ ಅಥವಾ ಹೆಚ್ಚು ದಿನಗಳನ್ನು ತೆಗೆದುಕೊಳ್ಳುತ್ತದೆ, ಉದಾಹರಣೆಗಾಗಿ ಸ್ವಲ್ಪ ಉಸಿರಾಟದಲ್ಲಿ ತೊಂದರೆ ಅಥವಾ ದಾಳಿ ಮಾಡುವ ಮುಂಚೆ ವ್ಹೀಜಿಂಗ್ ಆಗುವುದು. ಆದ್ದರಿಂದಾಗಿ ನಿಮ್ಮ ಎದೆಯಲ್ಲಿ ಆಗುವ ಸಂವೇದನೆಗಳ ಬಗ್ಗೆ ನಿಗಾ ವಹಿಸಿ, ನಿಮ್ಮ ರೋಗ ಲಕ್ಷಣಗಳನ್ನು ಪತ್ತೆಹಚ್ಚಲು ತಿಳಿದುಕೊಳ್ಳಿ (ಎದೆಯಲ್ಲಿ ಬಿಗಿತ, ಉಸಿರಾಟದಲ್ಲಿ ತೊಂದರೆ, ಕೆಮ್ಮುವುದು ಮತ್ತು ವ್ಹೀಜಿಂಗ್) ಅವಶ್ಯಕವಿದ್ದರೆ ನಿಮ್ಮ ಆಸ್ತಮಾದ ಬಗ್ಗೆ ಡೈರಿಯನ್ನು ಇರಿಸಿಕೊಳ್ಳಿ, ಮತ್ತು ನಿಮ್ಮ ಪ್ರೇರಿತಗಳಿಂದ ದೂರವಿರಿಸಿಕೊಳ್ಳಿ.
ನಿಮಗೆ ಆಸ್ತಮಾವನ್ನು ಊಹಿಸಲು ಮತ್ತು ಆಸ್ತಮಾ ದಾಳಿಯನ್ನು ತಡೆಯಲು ನೀವು ಸಾಧಾರಣವಾಗಿ ಹಿಡಿದುಕೊಳ್ಳುವ ಪೀಕ್ ಫ್ಲೋ ಮೀಟರ್ (ಬ್ರೀಥೋ ಮೀಟರ್) ಅನ್ನು ಬಳಸುವುದು ಸಹ ಮಹತ್ವದ್ದಾಗಿರುತ್ತದೆ. ದಯವಿಟ್ಟು ನೀವು ಆಸ್ತಮಾದ ಹೆಚ್ಚಿನ ರೋಗ ಲಕ್ಷಣಗಳನ್ನು ಹೊಂದಿರದೇ ಇದ್ದರೆ ನಿಮಗೆ ಆಸ್ತಮಾ ವಾಸಿಯಾಗಿದೆ ಎಂದು ತಿಳಿದುಕೊಳ್ಳಬೇಡಿ ಎನ್ನುವುದನ್ನು ನೆನಪಿನಲ್ಲಿರಿಸಿಕೊಳ್ಳಿ.
ಮಿಥ್ಯ:
ಇನ್‌ಹೇಲ್ ಮಾಡಿದ ಸ್ಟೀರಾಯ್ಡ್‌ಗಳು ಗಂಭೀರ ಸ್ವರೂಪದ ಆಸ್ತಮಾವನ್ನು ಹೊಂದಿರುವ ವಯಸ್ಕ ರೋಗಗಳಿಗೆ ಮಾತ್ರ ಹೊರತು ಇದು ಮಕ್ಕಳಿಗಾಗಿ ಅಲ್ಲ.
ಸತ್ಯ:
ನಿರಂತರವಾದ ಆಸ್ತಮಾದಿಂದ ಬಳಲುತ್ತಿರುವ ವಯಸ್ಕರು ಮತ್ತು ಮಕ್ಕಳಿಗೆ ಇನ್‌ಹೇಲ್ ಮಾಡಿದ ಸ್ಟೀರಾಯ್ಡ್‌ಗಳನ್ನು ಶಿಫಾರಸು ಮಾಡಲಾಗುತ್ತದೆ. ಇನ್‌ಹೇಲ್ ಮಾಡಿದ ಸ್ಟೀರಾಯ್ಡ್‌ಗಳನ್ನು ಮಕ್ಕಳಲ್ಲಿರುವ ಮಧ್ಯಮ ಆಸ್ತಮಾಕ್ಕೆ ಮತ್ತು ಗಂಭೀರ ಸ್ವರೂಪದ ನಿರಂತರ ಆಸ್ತಮಾಕ್ಕೆ ಬಳಸಲಾಗುತ್ತದೆ, ಆದರೆ ಕಡಿಮೆ ಡೋಸ್‌ಗಳಲ್ಲಿ ನೀಡಲಾಗುತ್ತದೆ. ಇದಲ್ಲದೆ, ಇನ್‌ಹೇಲ್ ಮಾಡಿದಾಗ, ನೀವು ಮಾತ್ರೆಗಳು ಮತ್ತು ಸಿರಪ್‌ಗಳನ್ನು ತೆಗೆದುಕೊಳ್ಳುವುದಕ್ಕಿಂತಲೂ ಡೋಸ್ 40 ಪಟ್ಟು ಕಡಿಮೆ ಇರುತ್ತದೆ. ಮತ್ತು ಇದು ಯಾವ ಭಾಗಕ್ಕೆ ಸೇರಬೇಕೊ ಆ ಭಾಗಕ್ಕೆ ಸೇರುತ್ತದೆ, ಅಂದರೆ ಶ್ವಾಸಕೋಶಗಳು, ಅಡ್ಡ ಪರಿಣಾಮಗಳು ಕಡಿಮೆ ಮತ್ತು ಹಾನಿಯಾಗುವುದಿಲ್ಲ.
ಮಿಥ್ಯ:
ಆಸ್ತಮಾದ ರೋಗ ಲಕ್ಷಣಗಳು ಎಲ್ಲರಿಗೂ ಒಂದೇ ಆಗಿರುತ್ತದೆ.
ಸತ್ಯ:
ಆಸ್ತಮಾವು ಪ್ರತಿಯೊಬ್ಬರಲ್ಲೂ ಬೇರೆ ರೀತಿಯ ಪರಿಣಾಮಗಳನ್ನು ಬೀರುತ್ತದೆ. ಒಬ್ಬ ಮನುಷ್ಯ ವ್ಹೀಜಿಂಗ್, ಎದೆ ಬಿಗಿತ, ಮತ್ತು ಸುಸ್ತಾಗುವುದು ಹೆಚ್ಚಿನ ಲಕ್ಷಣಗಳನ್ನು ತೋರಿಸಬಹುದು, ಇನ್ನೊಬ್ಬನು ಬರೀ ಕೆಮ್ಮನ್ನು ಮಾತ್ರ ಹೊಂದಿರಬಹುದು. ನಿಮಗಿರುವ ರೋಗ ಲಕ್ಷಣಗಳ ಬಗ್ಗೆ ನಿಮಗೆ ತಿಳಿದಿರುತ್ತದೆ ಆದ್ದರಿಂದ ನೀವು ಬೇಗನೆ ಸಹಾಯ ಪಡೆಯಬಹುದು.
ಮಿಥ್ಯ:
ಆಸ್ತಮಾದಿಂದ ಯಾರೂ ಸಾಯುವುದಿಲ್ಲ
ಸತ್ಯ:
ದುರದೃಷ್ಟವಶಾತ್, ಹೌದು, ಆಸ್ತಮಾದಿಂದ ಸಾಯಲೂಬಹುದು. WHO ನವೀಕರಣದ ಪ್ರಕಾರ, ಪ್ರಪಂಚದಾದ್ಯಂತ ವರ್ಷಕ್ಕೆ ಆಸ್ತಮಾದಿಂದ ಸಾವನ್ನಪ್ಪುವವರ ಸಂಖ್ಯೆ 2,50,000 ಆಗಿದೆ.
ಆಸ್ತಮಾವನ್ನು ಮೊದಲನೆಯ ಘಟ್ಟದಲ್ಲಿಯೆ ಸರಿಯಾದ ಚಿಕಿತ್ಸೆ ನೀಡಿ ಗುಣಪಡಿಸದೆ ಹೋದರೆ ಸಾವು ಖಂಡಿತ. ಅಥವಾ ರೋಗಿಗೆ ಆಘಾತವಾದಾಗ ಉಪಶಮನವು ಹತ್ತಿರದಲ್ಲಿ ಇಲ್ಲದೆ ಹೋದರೆ ಸಾವು ನಿಶ್ಚಿತ.
ರೋಗಿಯು ಸಾವಿನ ದವಡೆಯಲ್ಲಿದೆ ಎಂದು ತಿಳಿದುಕೊಳ್ಳಲು ಉತ್ತಮ ಮಾರ್ಗ ಎಂದರೆ ಯಾರು ಹೆಚ್ಚಾಗಿ ಬ್ರಾಂಕೊಡಿಲೇಟರ್ ಇನ್‌ಹೇಲರ್ ಅನ್ನು ಬಳಸುತ್ತಿದ್ದರೆ (ಪ್ರತಿ ದಿನಕ್ಕೆ 10 ಬಾರಿ ಔಷಧಿಯನ್ನು ಒಳಗೆ ಎಳೆದುಕೊಳ್ಳುತ್ತಾರೆ, ಅಥವಾ ಪ್ರತಿ ತಿಂಗಳಿಗೆ ಒಂದರಿಂದ ಎರಡು ಬಾರಿ ಮಾತ್ರ ಬಳಸುತ್ತಿದ್ದರೆ) ಅವರ ಆಸ್ತಮಾವು ನಿಯಂತ್ರಣದಲ್ಲಿಲ್ಲ ಎಂದು ತೋರಿಸುತ್ತದೆ. ಯಾರಾದರೂ ಆಸ್ಪತ್ರೆಗೆ ಪದೇ ಪದೇ ನೆಬ್ಯೂಲೈಜೇಷನ್ ಮಾಡಿಸಲು ಭೇಟಿ ನೀಡುವುದು ಸಹ ಹಾನಿಕಾರಕವಾಗಿದೆ.
ಆಸ್ತಮಾವು ಎಲ್ಲಾ ವಯೋಮಾನದವರಲ್ಲಿಯೂ ಕಾಣಿಸಿಕೊಳ್ಳುತ್ತದೆ ಮತ್ತು ಸಮಾಜದ ಎಲ್ಲಾ ಸ್ತರಗಳಲ್ಲಿ, ಮತ್ತು ಇದು ವಿಧಿಯಾಗಿದ್ದು, ಅನೇಕ ಸಂದರ್ಭಗಳಲ್ಲಿ ನಿಯಂತ್ರಿಸಬಹುದು. ಆಸ್ತಮಾದಿಂದ ಬರುವಂತಹ ಸಾವುಗಳನ್ನು ತಡೆಗಟ್ಟಬಹುದಾಗಿದೆ. ಆದ್ದರಿಂದ ದಯವಿಟ್ಟು ನಿಮ್ಮ ಆಸ್ತಮಾದ ನಿರ್ವಹಣೆಯನ್ನು ತೆಗೆದುಕೊಳ್ಳಿ ಅಥವಾ ನಿಮ್ಮ ಮಗುವಿನ ಆಸ್ತಮಾವನ್ನು ಗಂಭೀರವಾಗಿ ಪರಿಗಣಿಸಿ.
©2010 Breathe Free,ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
ಹಕ್ಕುನಿರಾಕರಣೆ
|
ಸೈಟ್ ಮ್ಯಾಪ್
|
ನಮ್ಮನ್ನು ಸಂಪರ್ಕಿಸಿ