|
ಒಬ್ಬ ಪೋಷಕರಂತೆ ನಿಮ್ಮ ಮಗುವು ಸಂತೋಷ, ಆರೋಗ್ಯಕರ ಮತ್ತು ಕ್ರಿಯಾತ್ಮಕ ಬಾಲ್ಯಜೀವನವನ್ನು ನಡೆಸಬೇಕೆಂದು ಬಯಸುತ್ತೀರಿ. ನಿಮ್ಮ ಮಗುವು ಆಸ್ತಮಾ ಹೊಂದಿದ್ದರೆ, ನೀವು ಸಹ ಆ ನಂಬಿಕೆಯನ್ನು ಪಡೆಯಬಹುದಾಗಿದೆ. ಏಕೆಂದರೆ ಆಸ್ತಮಾವನ್ನು ಸೂಕ್ತ ಚಿಕಿತ್ಸೆಯೊಂದಿಗೆ ಸಂಪೂರ್ಣವಾಗಿ ನಿಯಂತ್ರಿಸಬಹುದಾಗಿದೆ. ಆದ್ದರಿಂದ ನಿಮ್ಮ ಮಗುವು ಆಸ್ತಮಾ ಹೊಂದಿದ್ದರೆ ಚಿಂತಿಸಬೇಡಿ. ನಮ್ಮ ಚಿತ್ರ “ಆಸ್ತಮಾ ಪಾರ್ ವಿಜಯ್” ಅನ್ನು ಕ್ಲಿಕ್ ಮಾಡಿ. ಆಸ್ತಮಾ ಇರುವ ಮಕ್ಕಳು ಸಾಮಾನ್ಯ ಮಕ್ಕಳಂತೆ ಎಲ್ಲವನ್ನು ಹೇಗೆ ಮಾಡುತ್ತಾರೆ ಎಂಬುದನ್ನು ವೀಕ್ಷಿಸಿ. ನಿಮ್ಮ ಮಗುವೂ ಎಲ್ಲವನ್ನೂ ಮಾಡಬಹುದು ಎಂಬುದನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ. ಹೌದು, ಶಾಲೆಗೆ ಎಲ್ಲರಂತೆ ಸಾಮಾನ್ಯವಾಗಿ ಹಾಜರಾಗಬಹುದು, ಐಸ್ ಕ್ರೀಮ್ ತಿನ್ನಬಹುದು ಅಲ್ಲದೆ ಸಕ್ರಿಯ ಆಟಗಳನ್ನು ಆಡಬಹುದಾಗಿದೆ.
ಮಕ್ಕಳಲ್ಲಿನ ಆಸ್ತಮಾವು ವಯಸ್ಕರಲ್ಲಿರುವುದಕ್ಕಿಂತ ಭಿನ್ನವಾಗಿದೆ. ಮಕ್ಕಳಲ್ಲಿ ಆಸ್ತಮಾದ ಗಂಭೀರವಾದ ಲಕ್ಷಣಗಳು ಕಾಣಿಸದೆ ಇರಬಹುದು – ಉಸಿರಾಟ ಸಮಸ್ಯೆ, ವ್ಹೀಜಿಂಗ್, ಕೆಮ್ಮುವುದು ಮತ್ತು ಎದೆ ಬಿಗಿತ. ಅಲ್ಲದೆ ಪ್ರತಿಯೊಬ್ಬ ಮಗುವಿನ ಆಸ್ತಮಾವು ವಿಭಿನ್ನವಾಗಿರುತ್ತದೆ. ಕೆಲವು ಮಕ್ಕಳು ಸೌಮ್ಯವಾದ ಆಸ್ತಮಾ ಹೊಂದಿರಬಹುದು ಕೆಲವರು ತೀಕ್ಷ್ಣವಾದ ಆಸ್ತಮಾ ಹೊಂದಿರಬಹುದು. ಕೆಲವು ಮಕ್ಕಳು ಹೆಚ್ಚಿನ ಕೆಮ್ಮು ಮತ್ತು ಕೆಲವು ರೀತಿಯ ಅಲರ್ಜಿಗಳನ್ನು ಪಡೆಯಬಹುದು.
ಆಸ್ತಮಾ ಮಕ್ಕಳಲ್ಲಿ ಸಾಧಾರಣವಾದ ದೀರ್ಘಕಾಲದ (ಹೆಚ್ಚಿನ ಅವಧಿ) ರೋಗವಾಗಿದೆ. ಯುಕೆ ಯಲ್ಲಿನ 11 ರಲ್ಲಿನ 1 ಮಗುವು ಆಸ್ತಮಾ ಹೊಂದಿರುತ್ತದೆ. ಅಮೆರಿಕದಲ್ಲಿ, 7 ಲಕ್ಷ ಮಕ್ಕಳು ಆಸ್ತಮಾ ಹೊಂದಿದ್ದಾರೆ. ಭಾರತದಲ್ಲಿ, ಪ್ರತಿ 12 ಮಕ್ಕಳಲ್ಲಿ 1 ಮಗುವು ಆಸ್ತಮಾ ಹೊಂದಿರುತ್ತದೆ. ಆದ್ದರಿಂದ ನಿಮ್ಮ ಮಗುವಿಗೆ ಆಸ್ತಮಾ ಇದೆ ಎಂದು ಕಂಡುಬಂದಲ್ಲಿ, ಚಿಂತಿಸಬೇಡಿ. ನೀವು ಒಬ್ಬರೇ ಇಲ್ಲ.
ಆದಾಗ್ಯೂ, ಆಸ್ತಮಾ ಎಂಬುದು ಸಾಮಾಜಿಕ ವೈಲಕ್ಷಣವಾಗಿದ್ದು ಅದರಿಂದ ಮಗುವಿನ ಭವಿಷ್ಯದ ಮೇಲೆ ಪರಿಣಾಮಬೀರುತ್ತದೆ ಎಂದು ಹೆಚ್ಚಾಗಿ ಪೋಷಕರು ಚಿಂತಿಸುತ್ತಾರೆ. ಆದ್ದರಿಂದ ಆಲೋಪಥಿಯ ವೈದ್ಯರು ನಿಮ್ಮ ಮಗುವು ಆಸ್ತಮಾ ಹೊಂದಿದೆ ಎಂದು ನಿರ್ಣಯಿಸಿದರೆ, ಅವರು ಮತ್ತೊಂದು ಅಭಿಪ್ರಾಯವನ್ನು ತೆಗೆದುಕೊಳ್ಳಬೇಕೆಂದು ಅವರು ಆದ್ಯತೆ ವಹಿಸುತ್ತಾರೆ, ಮತ್ತು ಅಲೋಪಥಿಯು ಪಾರ್ಶ್ವ ಪರಿಣಾಮಗಳನ್ನು ಹೊಂದಿರುತ್ತವೆ ಮತ್ತು ದೀರ್ಘ ಕಾಲದ ಚಿಕಿತ್ಸೆ ಎಂದು ಭಾವಿಸಿ ಒಂದು ಚಿಕಿತ್ಸೆಯಿಂದ ಮತ್ತೊಂದು ಚಿಕಿತ್ಸೆಗೆ ಹೋಗುತ್ತಾರೆ. ಆದರೆ ಇದೆಲ್ಲಾ ಆಸ್ತಮಾ ಕುರಿತಾದ ಸಂದೇಹಗಳಾಗಿರುತ್ತವೆ. ನೀವು ಓದಿದಂತೆ, ನಿಮ್ಮ ಸಂದೇಹಗಳಿಗೆ ನಿಮಗೆ ಉತ್ತರ ದೊರಕುತ್ತದೆ ಅಲ್ಲದೆ ನಿಮ್ಮ ಮಗುವಿನ ಆಸ್ತಮಾ ನಿಯಂತ್ರಿಸುವುದು ಹೇಗೆ ಎಂದು ತಿಳಿದುಕೊಳ್ಳುತ್ತೀರಿ. |
|