Cipla ವು ತನ್ನ 75ನೇ ವರ್ಷದ ಮುಕ್ತಾಯಗೊಳಿಸಿದ ಪ್ರಯುಕ್ತ ಬ್ರೀಥ್‌ಫ್ರೀ ಯು Cipla ಪ್ರಾರಂಭಿಸಿದ ಸಾರ್ವಜನಿಕ ಸೇವೆಯಾಗಿದೆ. ಇದನ್ನು ಆಸ್ತಮಾದಿಂದ ಬಳಲುತ್ತಿರುವ ನಿಮಗೆ ಅಥವಾ ನಿಮಗೆ ಹತ್ತಿರದಲ್ಲಿರುವವರಿಗೆ ಸಹಾಯವಾಗಲೆಂದು ರಚಿಸಲಾಗಿದೆ. ಶ್ವಾಸನಾಳಗಳ ತೊಂದರೆಗಳೊಡನೆ ಹೋರಾಡುವಲ್ಲಿ ಹೆಚ್ಚು ಸಾಮರ್ಥ್ಯವನ್ನು ಹೊಂದಿರುವ ಭಾರತದಲ್ಲಿಯೇ ಮುಂಚೂಣಿಯಲ್ಲಿರುವ ಫಾರ್ಮಾ ಕಂಪನಿಯಾಗಿರುವುದರಿಂದ Cipla ವು ಬ್ರೀಥ್‌ಫ್ರೀಯನ್ನು ಪ್ರಾರಂಭಿಸುವಲ್ಲಿ ಉತ್ತಮ ಹಿನ್ನಲೆಯನ್ನು ಹೊಂದಿದೆ.
ಬ್ರೀಥ್‌ಫ್ರೀ ಶಿಬಿರಗಳು, ಬ್ರೀಥ್‌ಫ್ರೀ ಕ್ಲಿನಿಕ್‌ಗಳು, ಬ್ರೀಥ್‌ಫ್ರೀ ಜಾಗೃತಿ ಮೂಡಿಸುವ ವಿಷಯ ಮತ್ತು ನೀವು ಈಗ ನಮೂದಿಸಿದ breathefree.com ನಂತಹ ಅನೇಕ ಚಾಲ್ತಿಯಲ್ಲಿರುವ ಜಾಗೃತಿ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಬ್ರೀಥ್‌ಫ್ರೀಯು ಹೊಂದಿದೆ. ಹಲವಾರು ಬ್ರೀಥ್‌ಫ್ರೀ ಪ್ರಾರಂಭಗಳಿದ್ದರೂ, ಅವುಗೆಲ್ಲವೂ ಒಂದೇ ಕಾರಣಕ್ಕಾಗಿ ಬದ್ಧವಾಗಿವೆ. ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಅವರ ಆಸ್ತಮಾವನ್ನು ನಿಯಂತ್ರಣದಲ್ಲಿರಸಿಕೊಳ್ಳಲು ಜನರಿಗೆ ಸಹಾಯಮಾಡುತ್ತದೆ. ಇದರಿಂದ ಅವರು ಕಾರ್ಯನಿರ್ವಹಿಸಬಹುದು, ವ್ಯಾಯಾಮಮಾಡಬಹುದು, ಪಾರ್ಟಿ, ರಜಾದಿನಗಳು.... ಮತ್ತು ಸಂಪೂರ್ಣವಾಗಿ ಆನಂದಿಸಬಹುದು ಮತ್ತು ಕ್ರಿಯಾತ್ಮಕವಾದ ಜೀವನಸಾಗಿಸಬಹುದು.
breathefree.com ಗೆ ಸ್ವಾಗತ
ನಿಮಗೆ ಅಥವಾ ನಿಮ್ಮ ಮಗುವಿಗೆ ಆಸ್ತಮಾ ಇದೆ ಎಂದು ಪತ್ತೆಯಾದಲ್ಲಿ, ನೀವು ಭಯಪಡುವ ಅಥವಾ ಚಿಂತೆ ಮಾಡುವ ಅಗತ್ಯವಿಲ್ಲ ಎಂಬುದನ್ನು ನೀವು ಮೊದಲು ನೆನಪಿಡತಕ್ಕದ್ದು. ಆಸ್ತಮಾದಿಂದ ಬಳಲುತ್ತಿರುವ ಜನರು ತಮ್ಮ ಜೀವನ ಶೈಲಿಯೊಂದಿಗೆ ರಾಜಿಯಾಗದೆ ಸಾಧಾರಣ ಜೀವನವನ್ನು ನಡೆಸಬಹುದಾಗಿದೆ.
ಪ್ರಪಂಚದಾದ್ಯಂತ ಸುಮಾರು 300 ಮಿಲಿಯನ್ ಮತ್ತು ಭಾರತದಲ್ಲಿ 30 ಮಿಲಿಯನ್ ಜನರು ಆಸ್ತಮಾದಿಂದ ಬಳಲುತ್ತಿದ್ದಾರೆ. ಆದ್ದರಿಂದಾಗಿ ನೀವು ಒಬ್ಬರೆ ಅಲ್ಲ. ಅನೇಕ ಯಶಸ್ವಿ ಜನರಿಗೂ ಸಹ ಆಸ್ತಮಾ ಇದೆ. ಅದರಲ್ಲಿ ಕೆಲವರು ವ್ಯಾಪಾರ ಮುಖಂಡರು, ಚಿತ್ರ ತಾರೆಯರು ಮತ್ತು ಕ್ರೀಡಾ ಪಟುಗಳು ಸಹ ಇದ್ದಾರೆ. ಅವರಂತೆಯೆ
ನೀವೂ ಸಹ ಆಸ್ತಮಾವನ್ನು ನಿಯಂತ್ರಣದಲ್ಲಿಟ್ಟುಕೊಂಡು ಜೀವನವನ್ನು ಆನಂದಿಸಬಹುದು.
breathefree.com ನಿಮಗೆ ಇದು ಹೇಗೆ ಸಾಧ್ಯ ಎನ್ನುವುದನ್ನು ತೋರಿಸುತ್ತದೆ. ಇದನ್ನು ಆಸ್ತಮಾದಿಂದ ಬಳಲುತ್ತಿರುವ ಜನರಿಗೆ ಮಾಹಿತಿ ಮತ್ತು ಆತ್ಮವಿಶ್ವಾಸ ನೀಡುವುದರೊಂದಿಗೆ ಪರಿಪೂರ್ಣವಾಗಿ ಜೀವನವನ್ನು ನಡೆಸಲು ಸಹಾಯ ಮಾಡಲು ರಚಿಸಲಾಗಿದೆ.
ಇದು ಈ ಬಹುಕಾಲದ (ದೀರ್ಘಕಾಲದ) ರೋಗವನ್ನು ನಿಯಂತ್ರಿಸಲು ಅವಶ್ಯಕವಾಗಿದೆ.
ಅದಕ್ಕಾಗಿ ನೀವು ಅಥವಾ ನಿಮ್ಮ ಮಗುವಿಗೆ ನಿರಂತರವಾದ ಅಥವಾ ದೀರ್ಘಕಾಲದ ಕೆಮ್ಮು ಇದ್ದರೆ, ಅಲರ್ಜಿ, ಉಸಿರಾಟದ ತೊಂದರೆ, ತೀವ್ರ ಕಟ್ಟಿರುವಿಕೆ, ಎದೆ ಸೋಂಕು ಅಥವಾ ಕೆಲವು ಶ್ವಾಸನಾಳಗಳ ತೊಂದರೆ ಅಥವಾ ಎದೆ ಬೇನೆಯ ರೋಗ ಲಕ್ಷಣಗಳು ಕಂಡುಬಂದರೆ ನೀವು ಸೂಕ್ತವಾದ ಸ್ಥಳಕ್ಕೆ ಬಂದಿರುವಿರಿ ಎಂದರ್ಥ. breathefree.com ನಲ್ಲಿ ಆಸ್ತಮಾಗೆ ಸಂಬಂಧಿಸಿರುವ ಎಲ್ಲವೂ ನಿಮಗೆ ದೊರೆಯುತ್ತದೆ. ಜನರು ಆಸ್ತಮಾವನ್ನು ಹೇಗೆ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಮತ್ತು ಇದರೊಂದಿಗೆ ಸಾಧಾರಣ ಜೀವನವನ್ನು ಹೇಗೆ ನಡೆಸಬಹುದು. ಮತ್ತು
ನೀವು ಆಸ್ತಮಾದೊಂದಿಗೆ ಹೇಗೆ ಜೀವನವನ್ನು ಆನಂದಿಸುತ್ತೀರಿ.